ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜನವರಿ 6ರ ಸೋಮವಾರ ಉದ್ಯಮದ ಪಾಲುದಾರರೊಂದಿಗೆ ಮತ್ತು ಟ್ರೇಡ್ ಯೂನಿಯನ್‌ಗಳ ಪ್ರತಿನಿಧಿಗಳೊಂದಿಗೆ ಎಂಟನೇ ಬಜೆಟ್ ಪೂರ್ವ ಸಮಾಲೋಚನಾ ಸಭೆ ನಡೆಸಿದ್ದಾರೆ. ಅಂದಹಾಗೆ 2025-26 ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1 ರ ಶನಿವಾರ ಸಂಸತ್ತಿನಲ್ಲಿ ವಿತ್ತ ಸಚಿವೆ ಮಂಡಿಸಲಿದ್ದು ಅದಕ್ಕೂ ಮುನ್ನ ಸಲಹೆಗಳು ಮತ್ತು ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಸರಣಿಯಾಗಿ ಬಜೆಟ್ ಪೂರ್ವ ಸಭೆಗಳನ್ನು ನಡೆಸುತ್ತಿದ್ದಾರೆ.
ಅಂದಹಾಗೆ ಷೇರು ವಿನಿಮಯ ಕೇಂದ್ರಗಳು ಬಜೆಟ್ ಹಿನ್ನಲೆ ಫೆಬ್ರವರಿ 1ರ ಶನಿವಾರವೂ ತೆರೆದಿರುತ್ತದೆ. ಎರಡೂ ವಿನಿಮಯ ಕೇಂದ್ರಗಳು (ಬಿಎಸ್ಇ ಮತ್ತು ಎನ್‌ಎಸ್‌ಇ) ಎಂದಿನಂತೆ ಅಂದು ಬೆಳಿಗ್ಗೆ 9:15 ರಿಂದ ಮಧ್ಯಾಹ್ನ 3:30 ರವರೆಗೆ ಸಾಮಾನ್ಯ ವ್ಯಾಪಾರಕ್ಕಾಗಿ ತೆರೆದಿರುತ್ತವೆ.

ಮುಂಬರುವ ಬಜೆಟ್‌ಗಾಗಿ ಅವರ ನಿರೀಕ್ಷೆಗಳು ಮತ್ತು ಸಲಹೆಗಳಿಗಾಗಿ ಸರ್ಕಾರವು ಪ್ರತಿ ವರ್ಷವೂ ವಿಮೆ, ತೆರಿಗೆ, ರೈಲ್ವೇ, ಬಂಡವಾಳ ಮಾರುಕಟ್ಟೆಗಳು ಹೀಗೆ ವಿವಿಧ ಕ್ಷೇತ್ರಗಳೊಂದಿಗೆ ಸಮಾಲೋಚನೆ ನಡೆಸುವುದು ಸರ್ಕಾರದ ಪರಂಪರೆಯ ಭಾಗವಾಗಿದೆ. ಈ ಸಮಾಲೋಚನೆಯು ಉದ್ದೇಶ ಸಮಗ್ರ ಮತ್ತು ಪರಿಣಾಮಕಾರಿ ನೀತಿ ರಚನೆಯಾಗಿದೆ.
ಇಂದು ಬೆಳಗ್ಗೆ, ಸೀತಾರಾಮನ್ ಅವರು ಸ್ಟೇಕ್ ಹೋಲ್ಡರ್ಸ್ ಮತ್ತು ಟ್ರೇಡ್ ಯೂನಿಯನ್ ಪ್ರತಿನಿಧಿಗಳೊಂದಿಗೆ ಎಂಟನೇ ಪೂರ್ವ-ಬಜೆಟ್ ಸಮಾಲೋಚನೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯು ಮುಂಬರುವ ಬಜೆಟ್ ಮತ್ತು ಅದರ ನೀತಿ ಆದ್ಯತೆಗಳ ಕುರಿತು ಕಾರ್ಮಿಕ ಸಂಘಗಳ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವ ಮೇಲೆ ಕೇಂದ್ರೀಕರಿಸಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಹಣಕಾಸು ಕಾರ್ಯದರ್ಶಿ, ಮುಖ್ಯ ಆರ್ಥಿಕ ಸಲಹೆಗಾರರು ಮತ್ತು ಕಾರ್ಮಿಕ ಸಚಿವಾಲಯದ ಪ್ರತಿನಿಧಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು
ಈ ಸರಣಿ ಸಭೆಗಳ ಕುರಿತು ಹಣಕಾಸು ಸಚಿವಾಲಯವು ಸಾಮಾಜಿಕ ಮಾಧ್ಯಮದಲ್ಲಿ ಸಭೆಯ ವಿವರಗಳನ್ನು ಹಂಚಿಕೊಂಡಿದ್ದು, "ಮುಂಬರುವ 2025-26,ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಸ್ಟೇಕ್ ಹೋಲ್ಡರ್ಸ್ ಮತ್ತು ಕಾರ್ಮಿಕ ಸಂಘಗಳ ಪ್ರತಿನಿಧಿಗಳೊಂದಿಗೆ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಕೇಂದ್ರ ಸಚಿವ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಎಂಟನೇ ಪೂರ್ವ-ಬಜೆಟ್ ಸಮಾಲೋಚನೆಯ ಅಧ್ಯಕ್ಷತೆ ವಹಿಸಿದ್ದಾರೆ " ಎಂದು ಹೇಳಿದೆ.
2025-26 ರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡಿಸುವ ಬಜೆಟ್ ಸೀತಾರಾಮನ್ ಅವರ ಎಂಟನೇ ಬಜೆಟ್ ಮಂಡನೆಯನ್ನು ಸೂಚಿಸುತ್ತದೆ. ಇದು ಎಂಎಸ್‌ಎಂಇಗಳು, ರೈತರ ಸಂಘಗಳು, ಅರ್ಥಶಾಸ್ತ್ರಜ್ಞರು ಮತ್ತು ಹಣಕಾಸು ಮತ್ತು ಬಂಡವಾಳ ಮಾರುಕಟ್ಟೆಗಳ ಪಾಲುದಾರರನ್ನು ಒಳಗೊಂಡಂತೆ ಪೂರ್ವ-ಬಜೆಟ್ ಸಮಾಲೋಚನೆಗಳ ಸರಣಿಯನ್ನು ಸಭೆಗಳ ಭಾಗವಾಗಿದೆ.
ಬಜೆಟ್ ತಯಾರಿಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ನೀತಿ ಆಯೋಗದ ಅರ್ಥಶಾಸ್ತ್ರಜ್ಞರು ಮತ್ತು ಚಿಂತಕರೊಂದಿಗೆ ಚರ್ಚೆ ನಡೆಸಿದ್ದರು. ಮೋದಿ ಸರ್ಕಾರವು ತನ್ನ ಮೂರನೇ ಅವಧಿಯಲ್ಲಿ, 2025-26 ರ ಬಜೆಟ್ ದೇಶದ ಆರ್ಥಿಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಆರ್ಥಿಕ ಮಾರ್ಗದರ್ಶನ ಮತ್ತು ಪ್ರಮುಖ ಘೋಷಣೆಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಒಟ್ಟಾರೆ 2025-26ನೇ ಸಾಲಿನ ಕೇಂದ್ರ ಆಯವ್ಯಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಜನಸಾಮಾನ್ಯರಿಂದ ಆರ್ಥಿಕ ತಜ್ಞರವರೆಗೆ ಅನೇಕ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ತೆರಿಗೆ ಸೌಲಭ್ಯಗಳಲ್ಲಿ ಬದಲಾವಣೆ ಮತ್ತು ಸುಧಾರಣೆಗಳನ್ನು ತರುವುದರಿಂದ ಸಾಮಾನ್ಯ ಜನರಿಗೆ ಸುಲಭವಾಗಲಿದೆ. ವೈಯಕ್ತಿಕ ಆದಾಯ ತೆರಿಗೆಯಲ್ಲಿ ವಿನಾಯಿತಿ, ಬೆಂಬಲ ಬೆಲೆ, ಹೋಮ್ ಹೋನ್ ತೆರಿಗೆ ವಿನಾಯಿತಿ ಇತ್ಯಾದಿಗಳು ಪ್ರಮುಖ ಬೇಡಿಕೆಗಳಾಗಿವೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications