Budget 2025: ಈ ಬಾರಿ ಬಜೆಟ್‌ನಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ? ಇಲ್ಲಿದೆ ಮಾಹಿತಿ

2025ರ ಬಜೆಟ್‌ ಮಂಡನೆಗೆ ಕೇಂದ್ರ ಸಕಲ ಸಿದ್ಧತೆಗಳನ್ನ ಮಾಡಿಕೊಳ್ತಿದೆ. ಈ ಬಾರಿ ಬಜೆಟ್‌ನಲ್ಲಿ ಯಾವೆಲ್ಲಾ ಬದಲಾವಣೆಗಳಾಬಹುದು ಎಂದು ಎಲ್ಲರೂ ಕಾತುರರಾಗಿದ್ದಾರೆ. ಈ ಬಾರಿ ಮಂಡಿಸುವ ಬಜೆಟ್‌ನ ಮೇಲೆ ಎಲ್ಲರ ಗಮನ ಇದ್ದು, ದೇಶದ ಬೆಳವಣಿಗೆಗೆ ನೀಲನಕ್ಷೆಯನ್ನು ನೀಡುವ ಕೇಂದ್ರ ಬಜೆಟ್ 2025 ಗಾಗಿ ಭಾರತವು ಕುತೂಹಲದಿಂದ ಕಾಯುತ್ತಿದೆ. ಅಲ್ಲದೆ ಕಳೆದ ತ್ರೈಮಾಸಿಕದಲ್ಲಿ ಬೆಳವಣಿಗೆಯು ಸಮನಾಗಿದೆ. ಇದರ ಜೊತೆಗೆ ಆರ್ಥಿಕತೆಯನ್ನು ಸಕಾರಾತ್ಮಕ ದಿಕ್ಕಿನಲ್ಲಿ ನಡೆಸಲು ಕೆಲವು ದಿಟ್ಟ ಕ್ರಮಗಳ ಬೇಕಾಗಿರುವುದರಿಂದ ದೇಶವು ತನ್ನ ಬಳಕೆಯನ್ನು ಉತ್ತೇಜಿಸಲು ನೋಡುತ್ತಿದೆ. ಹೀಗಾಗಿ ಇಂತಹ ಸಮಯದಲ್ಲಿ ಬಜೆಟ್‌ ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎನ್ನಬಹುದು.

ಹಾಗೆ ಎರಡನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಹಠಾತ್ತನೆ 5.4% ಕ್ಕೆ ಕುಸಿಯಿತು. ಇದು ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು, ದುರ್ಬಲ ಬಂಡವಾಳ ರಚನೆ ಹಾಗೆ ಪೂರೈಕೆ ಸರಪಳಿಗಳ ನಡುವೆ ರಫ್ತು ಪ್ರದರ್ಶನವನ್ನ ಕೂಡ ಇದು ಕಡಿಮೆಗೊಳಿಸಿದೆ.

ಈ ಬಾರಿ ಬಜೆಟ್‌ನಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ? ಗಮನಿಸಿ

ಸತತವಾಗಿ ಚಿಲ್ಲರೆ ಹಣದುಬ್ಬರವು ಅಸ್ಥಿರವಾಗಿದ್ದು, ಆಹಾರದ ಬೆಲೆಯ ಏರಿಕೆಯಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಹಣ ದುಬ್ಬರ ಎದುರಿಸುವಂತಾಗಿದೆ. ಬರೀ ಎರಡು ತಿಂಗಳುಗಳನ್ನು ಹೊರತುಪಡಿಸಿ, ಪೂರ್ತಿ ವರ್ಷ ಭಾರತದ ರಿಸರ್ವ್ ಬ್ಯಾಂಕಿನ (RBI) 4%ಗಿಂತ ಅಧಿಕವಾಗಿ ಇರುತ್ತದೆ. 2024ರ ಅಕ್ಟೋಬರ್ ತಿಂಗಳಲ್ಲಿ, ಗ್ರಾಹಕ ಬೆಲೆ ಸೂಚ್ಯಂಕ (CPI) RBIನ ಮೇಲ್ಭಾಗದ ಸಹಿಷ್ಣುತೆ ಗಡಿ 6% ಅನ್ನು ದಾಟಿ, 6.21% ಅನ್ನು ತಲುಪಿದೆ.

2023ರ ಫೆಬ್ರವರಿಯಿಂದ ಆರಬ್‌ಐನ ನೀತಿ ಬಡ್ಡಿದರವನ್ನು 6.5% ಗೆ ಕಾಯ್ದುಕೊಂಡರೂ, ಹಣದುಬ್ಬರ ಸವಾಲಾಗಿ ಮಾರ್ಪಟ್ಟಿದೆ. ಹಾಗೆ ಕೆಲವೇ ಸಮಯಗಳಲ್ಲಿ ಮಾತ್ರ ಮಧ್ಯಂತರವನ್ನ ಕಾಲಾವಧಿಗಳು ಕಾಣಿಸಿಕೊಂಡಿವೆ.

ಈ ಸವಾಲುಗಳ ಮಧ್ಯದಲ್ಲಿ, 2025ರ ಬಜೆಟ್ ಆರ್ಥಿಕ ವೃದ್ಧಿಯನ್ನು ಉತ್ತೇಜಿಸಲು ಮತ್ತು ಹಣದುಬ್ಬರದಂತಹ ಸಮಸ್ಯೆಯನ್ನು ನಿಭಾಯಿಸುವಂತಹ ಕ್ರಮಗಳನ್ನ ತೆಗೆದುಕೊಳ್ಳುವ ನಿರೀಕ್ಷಿಸಲಾಗಿದೆ.

2025ರ ಬಜೆಟ್‌ನಿಂದ 5 ಪ್ರಮುಖ ನಿರೀಕ್ಷೆಗಳು

ವ್ಯಕ್ತಿಗಳಿಗೆ ತೆರಿಗೆ ರಿಯಾಯಿತಿ

ಹಲವರು ಉದ್ಯಮದ ಪ್ರಮುಖರು ಪ್ರತಿವರ್ಷ 20 ಲಕ್ಷ ರೂಪಾಯಿಯವರೆಗೆ ಆದಾಯ ತೆರಿಗೆ ರಿಯಾಯಿತಿಯನ್ನು ಒತ್ತಾಯಿಸಿದ್ದಾರೆ. ಇದರಿಂದಾಗಿ ಆದಾಯ ಹೆಚ್ಚಲಿದೆ ಮತ್ತು ಇದು ಪ್ರತಿಯಾಗಿ ಬಳಕೆಯನ್ನ ಕೂಡ ಪ್ರೇರೇಪಿಸಲಿದೆ.

FICCI ಉಪಾಧ್ಯಕ್ಷ ವಿಜಯ್ ಶಂಕರ್ ಅವರು ಮಧ್ಯಮ ವರ್ಗದವರ ಕುರಿತು ಒತ್ತಿ ಹೇಳಿದ್ದಾರೆ. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನೋಪಾಯ ವೆಚ್ಚಗಳು ಹೆಚ್ಚುತ್ತಿರುವುದರಿಂದ ಅವರಿಗೆ ರೀಯಾಯಿತಿಯನ್ನ ಒದಗಿಸುವ ಮಹತ್ವದ ಬಗ್ಗೆ ಹೇಳಿದ್ಧಾರೆ. ಹಾಗೆಯೇ, PHDCCI ಅಧ್ಯಕ್ಷ ಹೆಮಂತ್ ಜೈನ್ ಅವರು ಆದಾಯವನ್ನು ಹೆಚ್ಚಿಸುವುದರಿಂದ ಬೇಡಿಕೆಯನ್ನು ಕೂಡ ಪ್ರೇರೇಪಿಸಬಹದು ಮತ್ತು ಹಣದುಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು ಎಂದು ಒತ್ತಾಯಿಸಿದರು.

ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವುದು

ಈಗಂತು ಇಂಧನ ದರ ದಿನೇ ದಿನೇ ಹೆಚ್ಚುತ್ತಿರುವುದರಿಂದ ಎಲ್ಲರ ಗಮನ ಇಂಧನದ ಮೇಲಿನ ಸುಂಕಗಳ ಮೇಲಿದೆ. ಉದ್ಯಮ ನಾಯಕರಾದವರು ಜಾಗತಿಕ ಕ್ರೂಡ್ ಬೆಲೆಯ 40% ಇಳಿಕೆಯಾದರೂ, ಇಂಧನ ಬೆಲೆಯು ತೆರಿಗೆಗಳ ಕಾರಣದಿಂದ ಏರಿಕೆಯಾಗ್ತಾನೆ ಇದೆ ಎಂದು ಅವರು ಸೂಚಿಸಿದ್ದಾರೆ. ಉದ್ಯಮ ನಾಯಕರಾದವರು ತೆರಿಗೆ ಕಡಿತವು ಹಣದುಬ್ಬರವನ್ನು ತಡೆಯಲು, ಹಾಗೆ ಆದಾಯವನ್ನು ಹೆಚ್ಚಿಸಲು, ಮತ್ತು ಕಡಿಮೆ ಆದಾಯದ ಕುಟುಂಬಗಳಲ್ಲಿ ಬಳಕೆಯನ್ನು ಹೆಚ್ಚಳ ಮಾಡಲು ಸಹಾಯ ಮಾಡಬಹುದು ಎಂದು ನಂಬಿದ್ದಾರೆ.

ಉದ್ಯೋಗ-ತೀವ್ರ ವಲಯಗಳನ್ನು ಉತ್ತೇಜಿಸುವುದು

ಉದ್ಯೋಗ-ತೀವ್ರ ವಲಯಗಳನ್ನು ಉತ್ತೇಜಿಸಲು ಉದ್ಯಮದ ನಾಯಕರು ಗಾರ್ಮೆಂಟ್ಸ್, ಪಾದರಕ್ಷೆಗಳು, ಪ್ರವಾಸೋದ್ಯಮ, ಪೀಠೋಪಕರಣಗಳು ಮತ್ತು MSMEಗಳಂತಹ ಉದ್ಯೋಗ-ಭಾರೀ ವಲಯಗಳನ್ನು ಉತ್ತೇಜಿಸಲು ಉದ್ದೇಶಿತ ಕ್ರಮಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಉಪಕ್ರಮಗಳಿಂದಾಗಿ ಅತೀ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನ ಸರ್ಕಾರ ಹೊಂದಿದೆ ಮತ್ತು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಭಾರತವನ್ನು ಹೆಚ್ಚು ಪರಿಣಾಮಕಾರಿಯಾಗಿ ಇರಿಸಲಿದೆ.

ಗ್ರಾಮೀಣ ಬಳಕೆ ಮತ್ತು ಆಹಾರ ಭದ್ರತೆಯನ್ನು ಹೆಚ್ಚಿಸುವುದು

ಗ್ರಾಮೀಣ ಬಳಕೆಯನ್ನು ಹೆಚ್ಚಿಸುವ ಅಗತ್ಯದ ಬಗ್ಗೆ CII ಮಹಾನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಅವರು ಒತ್ತಿ ಹೇಳಿದರು.

-MGNREGS ಅಡಿಯಲ್ಲಿ ದೈನಂದಿನ ವೇತನವನ್ನು 267 ರಿಂದ 375 ರೂ.ಗೆ ಏರಿಕೆ ಮಾಡುವುದು.

-PM-KISAN ಪಾವತಿಗಳನ್ನು ವಾರ್ಷಿಕವಾಗಿ ರೂ 6,000 ರಿಂದ ರೂ 8,000 ಕ್ಕೆ ಏರಿಕೆ ಮಾಡುವುದು.

-ಕಡಿಮೆ ಆದಾಯದ ಕುಟುಂಬಗಳಿಗೆ ಬಳಕೆ ಚೀಟಿಗಳನ್ನು ನೀಡಲಾಗುವುದು.

-ಈ ಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಕೊಳ್ಳುವ ಶಕ್ತಿಯನ್ನು ಸುಧಾರಿಸಲು ಮತ್ತು ಬೇಡಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ.

ಚೀನಾ ದುಬಾರಿ ಮಾರಾಟವನ್ನು ಎದುರಿಸುವುದು

ಉದ್ಯಮ ಪಾಲುದಾರರ ನಡುವೆ ಪ್ರಮುಖ ಚಿಂತೆಯಾದದ್ದು ಚೀನಾ ಅದರ ಹೆಚ್ಚಿನ ಸ್ಟಾಕ್ ಅನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಮರುಮಾರಾಟ ಮಾಡುತ್ತಿರುವುದು, ಭಾರತೀಯ ಉದ್ಯಮಗಳಿಗೆ ಹಾನಿಯನ್ನು ಉಂಟುಮಾಡಿದೆ. ಉದ್ಯಮ ಸಂಸ್ಥೆಗಳು ಗೃಹಮಟ್ಟದ ವ್ಯಾಪಾರಗಳನ್ನು ರಕ್ಷಿಸಲು ಮತ್ತು ನ್ಯಾಯವಾದ ಸ್ಪರ್ಧೆಯನ್ನು ಉತ್ತೇಜಿಸಲು ರಕ್ಷಣಾತ್ಮಕ ಕ್ರಮಗಳ ಮೂಲಕ ಸರ್ಕಾರದ ಮದ್ಯಸ್ಥಿಕೆಗೆ ಕೈಗಾರಿಕಾ ಸಂಸ್ಥೆಗಳು ಕರೆ ನೀಡಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+