ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ ಫೆ.೧ ರಂದು ಕೇಂದ್ರ ಸರ್ಕಾರದ 2025 ರ ಮುಂಗಡ ಪತ್ರವನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದೆ. ಇನ್ನೇನು ಬಜೆಟ್ ಮಂಡನೆಗೆ ಒಂದು ದಿನ ಬಾಕಿ ಇದ್ದು ನಿರೀಕ್ಷೆಗಳು ಗರಿಕೆದರಿವೆ. ಹೀಗಿರುವಾಗ ಸರ್ಕಾರವು ತೆರಿಗೆ ಮತ್ತು ವಿವಿಧ ಕ್ಷೇತ್ರಗಳಿಗೆ ಹೇಗೆ ಹಣವನ್ನು ಹಂಚಿಕೆ ಮಾಡುತ್ತದೆ ಎಂಬುದರ ಕುರಿತು ಜನಸಾಮಾನ್ಯರು ಚರ್ಚೆ ಮಾಡುತ್ತಿದ್ದಾರೆ.
ಮಧ್ಯಮ ವರ್ಗದವರಿಗೆ ತೆರಿಗೆ ಹೆಚ್ಚಳವು ಒಂದು ದೊಡ್ಡ ಹೊರೆಯಾಗಿರಬಹುದು ಮತ್ತು ಸಾಮಾನ್ಯವಾಗಿ ಜನರು ಅದನ್ನು ಇಷ್ಟಪಡುವುದಿಲ್ಲ. ಆದ್ರೂ ಒಂದು ವಿಶೇಷ ತೆರಿಗೆ ಇದೆ, ಅದು ಹೆಚ್ಚಾದಾಗ ಅದರ ಬೆಂಬಲಿಗರು ಸಂತೋಷಪಡುತ್ತಾರೆ ಮತ್ತು ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೌದು ಈ ರೀತಿಯ ತೆರಿಗೆ ಒಂದಿದೆ. ಅದೇ ಸಿನ್ ಟ್ಯಾಕ್ಸ್ (Sin tax) ಅಥವಾ ಪಾಪ ತೆರಿಗೆ.! ಹೌದು ನಿಮಗೆ ತಿಳಿದಿರದ ಅನೇಕ ತೆರಿಗೆಗಳಲ್ಲಿ ಒಂದು ಪಾಪ ತೆರಿಗೆ.

ಸರ್ಕಾರವು ತೆರಿಗೆಯನ್ನು ಹೆಚ್ಚಿಸುವಾಗ ಜನಸಾಮಾನ್ಯರಿಗೆ ಹೊರೆಯಾಗದಂತೆ ಮತ್ತು ಆರ್ಥಿಕ ಬೆಳವಣಿಗೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಆದ್ದರಿಂದ, ಸರ್ಕಾರವು ಬಹಳ ಎಚ್ಚರಿಕೆಯಿಂದ ತೆರಿಗೆಯನ್ನು ಹೆಚ್ಚಿಸುತ್ತದೆ ಅಥವಾ ಕಡಿಮೆ ಮಾಡುತ್ತದೆ. ಆದರೆ, ಕೆಲವು ವಸ್ತುಗಳು ಮತ್ತು ಸೇವೆಗಳ ಮೇಲೆ ಸರ್ಕಾರವು ಹೆಚ್ಚು ತೆರಿಗೆಯನ್ನು ವಿಧಿಸುತ್ತದೆ. ಉದಾಹರಣೆಗೆ, ಸಿಗರೇಟು ಮತ್ತು ಮದ್ಯದಂತಹ ವಸ್ತುಗಳ ಮೇಲೆ ತೆರಿಗೆಯನ್ನು ಹೆಚ್ಚಿಸಿದರೆ ಜನರು ಹೆಚ್ಚು ವಿರೋಧಿಸುವುದಿಲ್ಲ ಇದನ್ನು ಸಾಮಾನ್ಯವಾಗಿ ಸಿನ್ ಟ್ಯಾಕ್ಸ್ ಅಡಿ ಸೇರಿಸಲಾಗುತ್ತದೆ.
ಪಾಪ ತೆರಿಗೆ ಎಂದರೇನು?
ಪಾಪ ತೆರಿಗೆಯು ಒಂದು ರೀತಿಯ ತೆರಿಗೆಯಾಗಿದ್ದು, ಇದು ಜನರ ಆರೋಗ್ಯ ಮತ್ತು ಸಮಾಜಕ್ಕೆ ಹಾನಿಕಾರಕವಾದ ಉತ್ಪನ್ನಗಳ ಮೇಲೆ ವಿಧಿಸಲಾಗುತ್ತದೆ.ವ್ಯಕ್ತಿಗಳಿಗೆ ಮತ್ತು ಸಮಾಜಕ್ಕೆ ಹಾನಿಕಾರಕ ವಸ್ತುಗಳನ್ನು ಮಾರಾಟ ಮಾಡುವುದು ಒಂದು ರೀತಿ ಪಾಪದ ಕೆಲಸವೇ ತಾನೆ . ಅದಕ್ಕೆ ಹೆಚ್ಚಿನ ತೆರಿಗೆ ವಿಧಿಸುವುದು ನೈತಿಕತೆಯ ಕ್ರಮ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಸಿನ್ ಟ್ಯಾಕ್ಸ್ ಅಥವಾ ಪಾಪ ತೆರಿಗೆ ಎಂದು ಕರೆಯಲಾಗುತ್ತದೆ. ಬಳಕೆಯನ್ನು ನಿಯಂತ್ರಿಸುವುದು ಈ ಪಾಪ ತೆರಿಗೆ ಆಧ್ಯತೆ ಎನ್ನಬಹುದು.
ತೆರಿಗೆಗಳು ಸಾಮಾನ್ಯವಾಗಿ ಕೊಂಚ ಹೆಚ್ಚಿರುತ್ತದೆ. ಇದು ತಂಬಾಕು, ಆಲ್ಕೋಹಾಲ್, ಸಿಗರೇಟ್ ಲಾಟರಿಮತ್ತು ಜೂಜಾಟದಂತಹ ವಸ್ತುಗಳಿಗೆ ಅನ್ವಯಿಸುತ್ತವೆ. ಪಾಪ ತೆರಿಗೆಯ ಹಿಂದಿನ ಉದ್ದೇಶವು ಈ ಉತ್ಪನ್ನಗಳನ್ನು ಹೆಚ್ಚು ದುಬಾರಿಯಾಗಿಸುವುದು, ಇದರಿಂದ ಜನರು ಅವುಗಳನ್ನು ಬಳಸುವ ಸಾಧ್ಯತೆ ಕಡಿಮೆ ಮಾಡುವುದು. ಭಾರತದಲ್ಲಿ ಪಾಪ ತೆರಿಗೆಯ ಪರಿಕಲ್ಪನೆಯನ್ನು 2017 ರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ಭಾಗವಾಗಿ ಪರಿಚಯಿಸಲಾಯಿತು.
ಭಾರತದಲ್ಲಿ ಪಾಪ ತೆರಿಗೆ
ಭಾರತದಲ್ಲಿ, ತಂಬಾಕು, ಸಕ್ಕರೆ ಪಾನೀಯಗಳು ಮತ್ತು ಪಾನ್ ಮಸಾಲಾಗಳಂತಹ ಉತ್ಪನ್ನಗಳಿಗೆ ಪಾಪ ತೆರಿಗೆಯನ್ನುಹಾಕಲಾಗುತ್ತದೆ. ತೆರಿಗೆ ಬದಲಾವಣೆಗಳಿಂದ ಆದಾಯವನ್ನು ಕಳೆದುಕೊಳ್ಳುವ ರಾಜ್ಯಗಳಿಗೆ ಸಹಾಯ ಮಾಡಲು ಸರ್ಕಾರವು ಈ ತೆರಿಗೆಯಿಂದ ಹಣವನ್ನು ಬಳಸುತ್ತದೆ.
ತಂಬಾಕು ಸಿಗರೇಟ್ ಇತ್ಯಾದಿಗಳು ಆರೋಗ್ಯಕ್ಕೆ ತೀರಾ ಅಪಾಯಕಾರಿಯಾಗಿದೆ. ಇದು ಕ್ಯಾನ್ಸರ್ ನಂತಹ ಅನೇಕ ರೋಗಗಳಿಗೆ ಮತ್ತು ಸಾವಿಗೆ ಕಾರಣವಾಗುತ್ತದೆ. ಆದ್ದರಿಂದ, ಅದರ ಬಳಕೆ ಮೇಲೆ ಕಡಿವಾಣ ಹಾಕಲು, ಸರ್ಕಾರವು ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆಯನ್ನು ಹಾಕಿದೆ. ಉದಾಹರಣೆಗೆ, ಸಿಗರೇಟ್‌ಗಳು ಅವುಗಳ ಅಂತಿಮ ಬೆಲೆಯ ಸುಮಾರು 52.7 ಪ್ರತಿಶತದಷ್ಟು ತೆರಿಗೆಯನ್ನು ಹೊಂದಿವೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಏನು ಶಿಫಾರಸು ಮಾಡುತ್ತದೆ?
ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಗಳು ಅವುಗಳ ಚಿಲ್ಲರೆ ಬೆಲೆಯ ಕನಿಷ್ಠ 75 ಪ್ರತಿಶತದಷ್ಟು ಇರಬೇಕು ಎಂದು ಶಿಫಾರಸು ಮಾಡುತ್ತದೆ. ಆದರೆ, ಭಾರತದಲ್ಲಿ ತಂಬಾಕಿನ ಮೇಲಿನ ತೆರಿಗೆ ಇನ್ನೂ ಕಡಿಮೆಯಾಗಿದೆ. ಇದನ್ನು ಬದಲಾಯಿಸಲು, ಸರ್ಕಾರವು ಅಕ್ಟೋಬರ್‌ನಲ್ಲಿ ತಂಬಾಕು ಉತ್ಪನ್ನಗಳಿಗೆ ಹೊಸ ತೆರಿಗೆ ನೀತಿಯನ್ನು ರೂಪಿಸಲು ಒಂದು ಸಮಿತಿಯನ್ನು ರಚಿಸಿದೆ, ಅದು ಸಾರ್ವಜನಿಕ ಆರೋಗ್ಯದ ಮೇಲೆ ಗಮನಹರಿಸುತ್ತದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications