ದೇಶದ ಜನತೆ ಬಜೆಟ್ ಮಂಡನೆಯ ದಿನಕ್ಕಾಗಿ ಕಾತುರರಾಗಿದ್ದಾರೆ. 2025ರ ಬಜೆಟ್ ಮಂಡನೆಗೆ ಬರೀ ಒಂದು ತಿಂಗಳು ಉಳಿದಿದ್ದು, ಯಾವೆಲ್ಲಾ ಬದಲಾವಣೆಗಳಾಗಬಹುದು ಎಂಬ ನಿರೀಕ್ಷೆ ಕೂಡ ಹೆಚ್ಚಾಗ್ತಿದೆ. ಇದರ ಜೊತೆಗೆ 8 ನೇ ವೇತನ ಆಯೋಗದ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿದ್ದು, ಇದರ ಜೊತೆಗೆ ಸಾಕಷ್ಟು ಊಹಾಪೋಹಗಳು ಕೂಡ ಆರಂಭವಾಗಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಜನವರಿ 6 ರಂದು ನಡೆದ ಬಜೆಟ್ ಪೂರ್ವ ಸಭೆಯಲ್ಲಿ, ಕಾರ್ಮಿಕ ಸಂಘಟನೆಗಳು 8 ನೇ ವೇತನ ಆಯೋಗವನ್ನು ಜಾರಿ ಮಾಡುವಂತೆ ಒತ್ತಾಯಿಸಿದರು.
ಕಳೆದ 2024-25ರ ಕೇಂದ್ರ ಬಜೆಟ್‌ನಲ್ಲಿ ಹೊಸ ವೇತನ ಆಯೋಗವನ್ನು ರಚಿಸುವಂತೆ ನೌಕರರ ಸಂಘಗಳು ಬೇಡಿಕಗಳನ್ನ ಇಟ್ಟಿದ್ದರು. ಆದರೆ, 8ನೇ ವೇತನ ಆಯೋಗದ ಕುರಿತು ಕಳೆದ ಬಜೆಟ್‌ನಲ್ಲಿ ಯಾವುದೇ ಘೋಷಣೆ ಆಗಿರಲಿಲ್ಲ. ಅಲ್ಲದೆ ಕಳೆದ ತಿಂಗಳು ಕೂಡ ಹಣಕಾಸು ಸಚಿವಾಲಯ ತಕ್ಷಣವೇ 8 ನೇ ವೇತನ ಆಯೋಗವನ್ನು ರಚಿಸಲು ಕೇಂದ್ರ ಮುಂದಾಗುವುದಿಲ್ಲಎಂದು ಸ್ಪಷ್ಟನೆ ನೀಡಿದೆ. ಕೂತೂಹಲ ಏನಂದ್ರೆ, ಸೋಮವಾರ ನಡೆದ ಸಭೆ ನಂತರ, ಮುಂಬರುವ ಬಜೆಟ್ 2025 ರಲ್ಲಿ ಸರ್ಕಾರ ಈ ಹೊಸ ವೇತನ ಆಯೋಗವನ್ನು ಘೋಷಣೆ ಮಾಡುತ್ತದೆಯಾ ಎಂಬುದನ್ನು ಇಲ್ಲಿ ತಿಳಿಯಿರಿ.

ಬಜೆಟ್ 2025: 8ನೇ ವೇತನ ಆಯೋಗದ ನಿರೀಕ್ಷೆಗಳೇನು?
ಕೇಂದ್ರ ಬಜೆಟ್ 2025-26 ಅನ್ನು ಫೆಬ್ರವರಿ 1, 2025 ರಂದು ಮಂಡಿಸಲು ಕೇಂದ್ರ ನಿರ್ಧಾರ ಮಾಡಿದೆ. ಇನ್ನು ಬಜೆಟ್ 2025 ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಈ ಬಜೆಟ್ ಮೇಲೆ ಹಾಗು ಬದಲಾವಣೆಗಳ ಮೇಲೆ ಕೇಂದ್ರ ಸರ್ಕಾರಿ ನೌಕರರು ಕಣ್ಣಿಟ್ಟಿದ್ದಾರೆ.
ಈ ಮಧ್ಯೆ ಜನವರಿ 6 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಡೆಸಿದ ಬಜೆಟ್ ಪೂರ್ವ ಸಭೆಯಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರು 8 ನೇ ವೇತನ ಆಯೋಗವನ್ನು ತ್ವರಿತವಾಗಿ ಸಂವಿಧಾನವನ್ನಾಗಿ ಮಾಡಲು ಒತ್ತಾಯಿಸಿದರು.
ಹಾಗೆ ಈ ಕುರಿತು ಸಭೆಯಲ್ಲಿ ಭಾರತೀಯ ಮಜ್ದೂರ್ ಸಂಘದ ಸಂಘಟನಾ ಕಾರ್ಯದರ್ಶಿ ಪವನ್ ಕುಮಾರ್ ಮಾತನಾಡಿದ್ರು. ಸರ್ಕಾರಿ ನೌಕರರ ವೇತನ ರಚನೆಯನ್ನು ಪರಿಷ್ಕರಣೆ ಮಾಡಲು 8ನೇ ವೇತನ ಆಯೋಗವನ್ನು ತ್ವರಿತವಾಗಿ ರಚಿಸಬೇಕು ಎಂದು ಒತ್ತಾಯಿಸಿದರು.
2014ರ ಫೆಬ್ರುವರಿಯಲ್ಲಿ ರಚನೆ ಮಾಡಿದ 7ನೇ ವೇತನ ಆಯೋಗಕ್ಕೆ ಈಗಾಗಲೇ 10 ವರ್ಷಗಳು ತುಂಬಿದ್ದು, ಹೀಗಾಗಿ ತಕ್ಣವೇ 8ನೇ ವೇತನ ಆಯೋಗವನ್ನು ಕೂಡ ರಚಿಸಬೇಕು ಎಂದು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಸ್ವದೇಶ್ ದೇವ್ ರಾಯ್ ಹೇಳಿದ್ರು.
ಕೇಂದ್ರ ಸರ್ಕಾರಿ ನೌಕರರು ಮತ್ತು ಕಾರ್ಮಿಕರ ಒಕ್ಕೂಟ ಕಳೆದ ತಿಂಗಳು, ಡಿಸೆಂಬರ್ 12 ರಂದು, ಹೊಸ ವೇತನ ಆಯೋಗವನ್ನು ರಚಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಒತ್ತಾಯಿಸಿ ಪತ್ರವನ್ನ ಕೂಡ ಬರೆದಿದ್ರು.
ಹೆಚ್ಚಿನ ಹಣದ ಮೌಲ್ಯದಲ್ಲಿನ ಸವಕಳಿ ಮತ್ತು ಹಣದುಬ್ಬರ ಮಟ್ಟಗಳಿಂದಾಗಿ 8 ನೇ ಕೇಂದ್ರೀಯ ವೇತನ ಆಯೋಗವನ್ನು ವಿಳಂಬವಿಲ್ಲದೆ ತಕ್ಷಣವೇ ರಚಿಸುವುದು ಉತ್ತಮ ಎಂದು ಒಕ್ಕೂಟ ಆಗ್ರಹಿಸಿದೆ, ಎಂದು ನೌಕರರ ಸಂಸ್ಥೆ ಹೇಳಿದೆ.
ಹಣಕಾಸು ಸಚಿವಾಲಯದ ಅಭಿಪ್ರಾಯವೇನು?
ಕಳೆದ ತಿಂಗಳು ಡಿಸೆಂಬರ್‌ನಲ್ಲೇ ಈ 8ನೇ ವೇತನ ಆಯೋಗವನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ರಚಿಸಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಎಂಟನೇ ಕೇಂದ್ರೀಯ ವೇತನ ಆಯೋಗದ ಸಂವಿಧಾನಕ್ಕಾಗಿ ಈ ಕುರಿತು ಯಾವುದೇ ಪ್ರಸ್ತಾನೆ ಕೂಡ ಸರ್ಕಾರದ ಪರಿಗಣನೆಗೆ ಬಂದಿಲ್ಲ ಎಂದು ಹಣಕಾಸು ಸಚಿವಾಲಯ ಕೇಂದ್ರ ಸರ್ಕಾರಿ ನೌಕರರಿಗೆ ತಿಳಿಸಿದೆ.
ಅಲ್ಲದೆ ಈಗಾಗಲೇ 7ನೇ ವೇತನ ಆಯೋಗದ ಶಿಫಾರಸುಗಳು ಕೂಡ ಜಾರಿಯಲ್ಲಿದ್ದು, ಈ ವೇತನ ಆಯೋಗವನ್ನ 2014 ರಲ್ಲಿ ರಚಿಸಿ ಇದರ ಶಿಫಾರಸುಗಳನ್ನು 2016 ರಲ್ಲಿ ಜಾರಿ ಮಾಡಲಾಯಿತು. ಹಾಗೆ ಪ್ರತಿ 10 ವರ್ಷಕ್ಕೊಮ್ಮೆ ವೇತನ ಆಯೋಗವನ್ನ ರಚನೆ ಮಾಡಲಾಗುತ್ತದೆ.
8ನೇ ವೇತನ ಆಯೋಗ: ವೇತನ ಹೆಚ್ಚಳಕ್ಕೆ ಆಗ್ರಹ
ಈಗ ಸಧ್ಯಕ್ಕೆ 7ನೇ ವೇತನ ಆಯೋಗ ಜಾರಿಯಲ್ಲಿ ಇರುವುದರಿಂದ 8ನೇ ವೇತನ ಆಯೋಗವನ್ನು ಶೀಘ್ರದಲ್ಲೇ ರಚನೆ ಮಾಡುವ ಕುರಿತು ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೂ ಕೂಡ ನೌಕರರ ನಡುವೆ ಈ ಕುರಿತು ಹಲವು ಚರ್ಚೆಗಳು ನಡೆಯುತ್ತಿವೆ.
ಹೊಸ ವೇತನ ಆಯೋಗವನ್ನ ರಚಿಸುವ ಬದಲು ಈ ವೇತನ ಹೆಚ್ಚಳವನ್ನ ಮಾಡುವುದರಿಂದ ಇದು ಕಾರ್ಯಕ್ಷಮತೆ ಅಥವಾ ಹಣ ದುಬ್ಬರಕ್ಕೆ ಇದನ್ನ ಲಿಂಕ್ ಮಾಡಬಹುದು ಎಂದು ವರದಿಗಳು ಹೇಳಿವೆ.
ಸರ್ಕಾರ ಏನಾದ್ರು 2.86 ರ ಫಿಟ್‌ಮೆಂಟ್ ಅಂಶವನ್ನು ಅನುಮೋದನೆ ಮಾಡಿದ್ರೆ, ಸರ್ಕಾರಿ ಉದ್ಯೋಗಿಗಳ ಕನಿಷ್ಠ ವೇತನ 18,000 ರೂ.ಗೆ ಹೋಲಿಕೆ ಮಾಡಿದ್ರೆ, ಇದು ಶೇಕಡಾ 186 ರಷ್ಟು ಏರಿಕೆಯಾಗಿ 51,480 ರೂ.ಗೆ ತಲುಪಬಹುದು ಎಂದು ವರದಿ ಹೇಳಿದೆ.
ಅಲ್ಲದೆ ಈ ಎಲ್ಲಾ ಚರ್ಚೆಗಳು ಸಾಕಷ್ಟು ಊಹಾಪೋಹಗಳನ್ನ ಒಳಗೊಂಡಿದ್ದು, ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications