2026ರ ಕೇಂದ್ರ ಬಜೆಟ್ (Union Budget 2026) ಮಂಡನೆಯಾಯ್ತು. ನಿರೀಕ್ಷೆಯಂತೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಅದರಲ್ಲೂ ಈ ಬಾರಿ ಟ್ಯಾಕ್ಸ್ ಸಂಬಂಧಿತ ವಿಶೇಷ ನಿರ್ಧಾರವೊಂದನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಈ ಬಾರಿಯ ಬಜೆಟ್‌ನಲ್ಲಿ ವೇತನದಾರರಿಗೆ ಹಲವು ಮಹತ್ವದ ಸುಧಾರಣೆಗಳನ್ನು ತಂದಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), ತೆರಿಗೆ ಪ್ರಕ್ರಿಯೆ ಸರಳಗೊಳಿಸುವುದು, ವ್ಯಾಜ್ಯ ಕಡಿತ (Litigation Reduction) ಮತ್ತು ವೈಯಕ್ತಿಕ ಪರಿಹಾರಕ್ಕೆ ಒತ್ತು ನೀಡಿದ್ದಾರೆ. ಆದಾಯ ತೆರಿಗೆ ಕಾಯ್ದೆ 2025ರ ಜಾರಿಯಾಗಿದ್ದು, ಇದು 1961ರ ಹಳೆಯ ಕಾಯ್ದೆ ಬದಲಿಗೆ ಏಪ್ರಿಲ್ 1, 2026 ರಿಂದ ಅನ್ವಯವಾಗಲಿದೆ. ಈ ಬಾರಿ ಬಜೆಟ್‌ನಲ್ಲಿ ನೇರವಾಗಿ ಟ್ಯಾಕ್ಸ್ ಸ್ಲ್ಯಾಬ್‌ಗಳಲ್ಲಿ (Tax Slab) ಬದಲಾವಣೆಗಳು ಇಲ್ಲದಿದ್ದರೂ, ಹಲವು ಸರಳೀಕರಗಳು, ಕಡಿತಗಳು ಮತ್ತು ಇತರ ಸಹಾಯ ಮಾಡುವ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ:
ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಯಲ್ಲಿ ಹಿಂದಿನ ವರ್ಷದಂತೆಯೇ ಸ್ಲ್ಯಾಬ್‌ಗಳು ಮುಂದುವರೆಯುತ್ತದೆ.
ಹೊಸ ತೆರಿಗೆ ವ್ಯವಸ್ಥೆ:
- 0 ರಿಂದ 4 ಲಕ್ಷದವರೆಗೆ: 0% ತೆರಿಗೆ
- 4 ಲಕ್ಷದಿಂದ 8 ಲಕ್ಷದವರೆಗೆ: 5%
- 8 ಲಕ್ಷದಿಂದ 12 ಲಕ್ಷದರೆಗೆ: 10%
- 12 ಲಕ್ಷದಿಂದ 16 ಲಕ್ಷದವರೆಗೆ: 15%
- 16 ಲಕ್ಷದಿಂದ 20 ಲಕ್ಷದವರೆಗೆ: 20%
- 20 ಲಕ್ಷದಿದ 24 ಲಕ್ಷದವರೆಗೆ: 25%
- 24 ಲಕ್ಷಕ್ಕಿಂತ ಮೇಲೆ: 30%
- ಇನ್ನು ವೇತನದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ 75,000 ಲಭ್ಯವಿದ್ದು, ಇದರಿಂದಾಗಿ 12.75 ಲಕ್ಷದವರೆಗೆ ಝೀರೋ ಟ್ಯಾಕ್ಸ್ ಸಿಗಲಿದೆ.
ಹಳೆಯ ತೆರಿಗೆ ವ್ಯವಸ್ಥೆ:
- 0 ದಿಂದ 2.5 ಲಕ್ಷದವರೆಗೆ: 0%
- 2.5 ಲಕ್ಷದಿಂದ 5 ಲಕ್ಷದವರೆಗೆ: 5%
- 5 ಲಕ್ಷದಿಂದ 10 ಲಕ್ಷದವರೆಗೆ: 20%
- 10 ಲಕ್ಷದ ಮೇಲೆ: 30%
- ಸ್ಟ್ಯಾಂಡರ್ಡ್ ಡಿಡಕ್ಷನ್ 50,000.
ವಿದೇಶಿ ಪ್ರವಾಸ ಮಾಡುವವರಿಗೆ ಗುಡ್ ನ್ಯೂಸ್
ವಿದೇಶಿ ಪಾವತಿದಾರರ ಹೊರಹರಿವು ತಗ್ಗಿಸಲು ಬಜೆಟ್ ಕ್ರಮ ಕೈಗೊಂಡಿದೆ. ವಿದೇಶಿ ಪ್ರವಾಸ ಪ್ಯಾಕೇಜ್‌ಗಳ ಮೇಲಿನ ಟಿಸಿಎಸ್ (ಮೂಲದಲ್ಲಿ ಸಂಗ್ರಹಿಸುವ ತೆರಿಗೆ) ದರವನ್ನು 5% ಮತ್ತು 20% ರಿಂದ 2% ಕ್ಕೆ ಇಳಿಸಲಾಗಿದ್ದು, ಕನಿಷ್ಠ ಮೊತ್ತದ ಅಗತ್ಯವಿಲ್ಲ. ಶಿಕ್ಷಣ ಮತ್ತು ವೈದ್ಯಕೀಯದಲ್ಲಿ ಟಿಸಿಎಸ್ ಕೂಡ 5% ರಿಂದ 2% ಕ್ಕೆ ಕುಸಿಯಲಿದೆ.
ವೇತನದರರಿಗೆ ಪರಿಹಾರ ಮತ್ತು ಬದಲಾವಣೆಗಳು:
- ಮೋಟಾರ್ ಆಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯೂನಲ್ ಬಡ್ಡಿ: ಇದು ಸಂಪೂರ್ಣ ತೆರಿಗೆ ಮುಕ್ತವಾಗಿರುತ್ತದೆ ಮತ್ತು ಟಿಡಿಎಸ್ ಒಳಪಡುವುದಿಲ್ಲ.
- ವಿದೇಶಿ ಪ್ರವಾಸ ಪ್ಯಾಕೇಜ್‌ಗ ಮೇಲಿನ ಟಿಡಿಎಸ್: ಹಿಂದಿನ 5% ಮತ್ತು 20% ರಿಂದ ಕಡಿಮೆಗೊಳಿಸಿ 2% ಇಳಿಸಲಾಗಿದೆ. ಇದರಿಂದ ಕನಿಷ್ಠ ಬುಕಿಂಗ್ ಮೊತ್ತದ ನಿಯಮವನ್ನು ತೆಗೆದುಹಾಕಲಾಗಿದೆ.
- ವಿದೇಶಿ ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಗೆ TCS: ಲಿಬರಲೈಸ್ಡ್ ರೆಮಿಟೆನ್ಸ್ ಸ್ಕೀಮ್ ಅಡಿ 5% ದಿಂದ 2% ಕ್ಕೆ ಇಳಿಸಲಾಗಿದೆ.
- ಐಟಿಆರ್ ಸರಳೀಕರಣ: ಹೊಸ ಆದಾಯ ತೆರಿಗೆ ಕಾಯಿದೆ 2025 ಅನ್ನು ಏಪ್ರಿಲ್ 1, 2026 ರಿಂದ ಜಾರಿಗೊಳಿಸಲಾಗುವುದು ಎಂದು ಹೇಳಲಾಗಿದೆ. ಇದು 1961ರ ಕಾಯಿದೆಯನ್ನು ಬದಲಾಯಿಸಿ ಸರಳ ವಿಧಾನ, ನಿಯಮಗಳನ್ನು ಜಾರಿಗೆ ತರುತ್ತದೆ.


Click it and Unblock the Notifications