Budget 2026: ದಾಖಲೆಯ ಬಜೆಟ್‌ ಮಂಡನೆಯತ್ತ ನಿರ್ಮಲಾ ಸೀತರಾಮನ್‌! ದಿನಗಣನೆ ಶುರು

ದೇಶದ ನಾಗರಿಕರ ಚಿತ್ತ, ಇದೀಗ ಕೇಂದ್ರ ಬಜೆಟ್‌ ಮಂಡನೆಯತ್ತ (Union Budget 2026) ನೆಟ್ಟಿದೆ. ಫೆಬ್ರವರಿ 1 ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ ಬಗ್ಗೆ ಈ ಬಾರಿ ಕುತೂಹಲ ಹುಟ್ಟಿಸಿದೆ. ಜನಸಾಮಾನ್ಯರಿಂದ ಹಿಡಿದು ಹೂಡಿಕೆದಾರರವರೆಗೂ ಯಾವೆಲ್ಲಾ ರೀತಿಯಲ್ಲಿ ಪ್ರಯೋಜನವಾಗಬಹುದು ಎಂದು ಕಾತುರದಲ್ಲಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಫೆಬ್ರವರಿ 1 ರಂದು ತಮ್ಮ ಸತತ ದಾಖಲೆಯ ಒಂಭತ್ತನೇ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದು ದೇಶ ಆರ್ಥಿಕ ಬೆಳವಣಿಗೆಗೆ ಸಾಕ್ಷಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಮೂಲಕ, ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ವಿವಿಧ ಅವಧಿಗಳಲ್ಲಿ ಮಂಡಿಸಿದ್ದ 10 ಬಜೆಟ್‌ಗಳ ದಾಖಲೆಯನ್ನು ಸೀತಾರಾಮನ್ ಸಮೀಪಿಸಲಿದ್ದಾರೆ. ಇದು ಭಾರತದ ಇತಿಹಾಸದಲ್ಲಿ (Indian History) ಯಾವುದೇ ಹಣಕಾಸು ಸಚಿವರಿಂದ ಸತತವಾಗಿ ಅತೀ ಹೆಚ್ಚು ಬಜೆಟ್‌ ಮಂಡಿಸಿ ದಾಖಲೆಯಾಗಿದೆ.

ದಾಖಲೆಯ ಬಜೆಟ್‌ ಮಂಡನೆಯತ್ತ ನಿರ್ಮಲಾ ಸೀತರಾಮನ್‌! ದಿನಗಣನೆ ಶುರು

ದಾಖಲೆಯತ್ತ ನಿರ್ಮಲಾ ಸೀತಾರಾಮನ್‌!
ಮೊರಾರ್ಜಿ ದೇಸಾಯಿ ಅವರು 1959-1964ರ ಅವಧಿಯಲ್ಲಿ ಹಣಕಾಸು ಸಚಿವರಾಗಿ 6 ಬಜೆಟ್‌ಗಳನ್ನು ಮಂಡಿಸಿದ್ದರು. ನಂತರ 1967-1969ರ ನಡುವೆ ನಾಲ್ಕು ಬಜೆಟ್‌ಗಳನ್ನು ಪ್ರಸ್ತುತಪಡಿಸಿ ಒಟ್ಟು 10 ಬಜೆಟ್‌ಗಳನ್ನು ಮಂಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಸತತ ಒಂಭತ್ತು ಬಜೆಟ್‌ಗಳನ್ನು ಮಂಡಿಸಿದ ದಾಖಲೆಯು ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿದೆ. ಮಾಜಿ ಹಣಕಾಸು ಸಚಿವರಾದ ಪಿ. ಚಿದಂಬರಂ ಮತ್ತು ಪ್ರಣಬ್ ಮುಖರ್ಜಿ ಅವರು ಕ್ರಮವಾಗಿ ಒಂಭತ್ತು ಮತ್ತು ಎಂಟು ಬಜೆಟ್‌ಗಳನ್ನು ಮಂಡಿಸಿದ್ದಾರೆ.

ಮೋದಿ ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್‌ ಸೇವೆ
ಪ್ರಧಾನಿ ಮೋದಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಾಗ, 2019ರಲ್ಲಿ ನಿರ್ಮಲಾ ಸೀತಾರಾಮನ್ ಭಾರತದ ಮೊದಲ ಪೂರ್ಣಕಾಲಿಕ ಮಹಿಳಾ ಹಣಕಾಸು ಸಚಿವರಾಗಿ ನೇಮಕಗೊಂಡರು. 2024ರಲ್ಲಿ ಮೋದಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರವೂ ನಿರ್ಮಲಾ ಸೀತಾರಾಮನ್‌ ತಮ್ಮ ಹಣಕಾಸು ಖಾತೆಯನ್ನು ಉಳಿಸಿಕೊಂಡರು. 2024ರ ಫೆಬ್ರವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ ಸೇರಿದಂತೆ ಅವರು ಇದುವರೆಗೆ ಸತತ ಎಂಟು ಬಜೆಟ್‌ಗಳನ್ನು ಮಂಡಿಸಿದ್ದಾರೆ. ಇದೀಗ 2026ರ ಬಜೆಟ್‌ 9ನೇ ಬಜೆಟ್‌ ಮಂಡನೆಯಾಗಲಿದೆ.

ಸ್ವತಂತ್ರ ಭಾರತದ ಕೇಂದ್ರ ಬಜೆಟ್ ಮಂಡನೆಯಲ್ಲಾದ ದಾಖಲೆಗಳು:

  • ಸ್ವತಂತ್ರ ಭಾರತದ ಮೊದಲ ಕೇಂದ್ರ ಬಜೆಟ್ ಅನ್ನು 1947ರ ನವೆಂಬರ್ 26 ರಂದು ದೇಶದ ಮೊದಲ ಹಣಕಾಸು ಸಚಿವ ಆರ್.ಕೆ. ಷಣ್ಮುಖಂ ಚೆಟ್ಟಿ ಮಂಡಿಸಿದ್ದರು.
  • ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಅತಿ ಹೆಚ್ಚು ಬಜೆಟ್‌ಗಳನ್ನು ಮಂಡಿಸಿದ ದಾಖಲೆ ಹೊಂದಿದ್ದಾರೆ. ಜವಾಹರ್‌ಲಾಲ್ ನೆಹರು ಮತ್ತು ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಅವಧಿಯಲ್ಲಿ ಹಣಕಾಸು ಸಚಿವರಾಗಿ ಅವರು ಒಟ್ಟು 10 ಬಜೆಟ್‌ಗಳನ್ನು ಮಂಡನೆ ಮಾಡಿದ್ದರು. ಅವರು ತಮ್ಮ ಮೊದಲ ಬಜೆಟ್ ಅನ್ನು 1959ರ ಫೆಬ್ರವರಿ 28 ರಂದು ಮಂಡಿಸಿದರು. ನಂತರ 1962 ರಲ್ಲಿ ಮಧ್ಯಂತರ ಬಜೆಟ್ ಮಂಡಿಸುವ ಮೊದಲು ಎರಡು ಪೂರ್ಣ ಪ್ರಮಾಣದ ಬಜೆಟ್‌ಗಳನ್ನು ಪ್ರಸ್ತುತಪಡಿಸಿದ್ದರು.
  • ನಾಲ್ಕು ವರ್ಷಗಳ ನಂತರ, ಅವರು 1967 ರಲ್ಲಿ ಮತ್ತೊಂದು ಮಧ್ಯಂತರ ಬಜೆಟ್ ಮಂಡಿಸಿದರು. ಅಲ್ಲದೇ 1967, 1968 ಮತ್ತು 1969 ರಲ್ಲಿ ಮೂರು ಪೂರ್ಣ ಪ್ರಮಾಣದ ಬಜೆಟ್‌ ಮಂಡನೆ ಮಾಡಲಾಯಿತು. ಹೀಗೆ ಒಟ್ಟು 10 ಬಜೆಟ್‌ಗಳನ್ನು ಮಂಡಿಸಿದ ದಾಖಲೆ ಮೊರಾರ್ಜಿ ದೇಸಾಯಿ ಅವರಿಗಿದೆ.
  • ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಒಂಭತ್ತು ಬಾರಿ ಬಜೆಟ್ ಮಂಡಿಸಿದ್ದಾರೆ. ಅವರು ಮೊದಲು 1996ರ ಮಾರ್ಚ್ 19 ರಂದು ಹೆಚ್.ಡಿ. ದೇವೇಗೌಡ ನೇತೃತ್ವದ ಯುನೈಟೆಡ್ ಫ್ರಂಟ್ ಸರ್ಕಾರದಲ್ಲಿ ಬಜೆಟ್ ಮಂಡನೆ ಮಾಡಿದ್ದರು. 1997 ರಲ್ಲಿಯೂ ಇದೇ ಸರ್ಕಾರದ ಅವಧಿಯಲ್ಲಿ ಮತ್ತೊಂದು ಬಜೆಟ್ ಮಂಡಿಸಿದರು. 2009 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂದಾಗ ಅವರು ಮತ್ತೆ ಪ್ರಮುಖ ಹಣಕಾಸು ಸಚಿವರಾಗಿ ಆಯ್ಕೆಯಾದರು. 2004 ಮತ್ತು 2008ರ ನಡುವೆ ಐದು ಬಜೆಟ್‌ಗಳನ್ನು ಮಂಡಿಸಿದರು. ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ನಂತರ, ಅವರು ಮತ್ತೆ ಹಣಕಾಸು ಸಚಿವಾಲಯಕ್ಕೆ ಮರಳಿದರು ಮತ್ತು 2013 ಹಾಗೂ 2014 ರಲ್ಲಿ ಬಜೆಟ್‌ಗಳನ್ನು ಮಂಡಿಸಿದರು.
  • ಪ್ರಣಬ್ ಮುಖರ್ಜಿ ಅವರು ಹಣಕಾಸು ಸಚಿವರಾಗಿ ತಮ್ಮ ಅಧಿಕಾರಾವಧಿಯಲ್ಲಿ ಎಂಟು ಬಜೆಟ್‌ಗಳನ್ನು ಮಂಡಿಸಿದ್ದಾರೆ. ಅವರು 1982, 1983 ಮತ್ತು 1984 ರಲ್ಲಿ ಬಜೆಟ್‌ಗಳನ್ನು ಮಂಡನೆ ಮಾಡಿದ್ದರು. ನಂತರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ 2009ರ ಫೆಬ್ರವರಿಯಿಂದ 2012ರ ಮಾರ್ಚ್ ನಡುವೆ ಸತತ ಐದು ಬಜೆಟ್‌ಗಳನ್ನು ಮಂಡಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಿ.ವಿ. ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗ 1991 ರಿಂದ 1995 ರ ನಡುವೆ ಸತತ ಐದು ಬಜೆಟ್‌ಗಳನ್ನು ಮಂಡಿಸಿದ್ದರು.

ಬಜೆಟ್‌ ಭಾಷಣದಲ್ಲೂ ಸೀತಾರಾಮನ್‌ ದಾಖಲೆ!
ಅತಿ ದೀರ್ಘ ಬಜೆಟ್ ಭಾಷಣದ ದಾಖಲೆ ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿದೆ. 2020ರ ಫೆಬ್ರವರಿ 1 ರಂದು ಅವರ ಬಜೆಟ್ ಭಾಷಣ 2 ಗಂಟೆ 40 ನಿಮಿಷಗಳ ಕಾಲ ನಡೆದಿತ್ತು. ಆಗ ಇನ್ನೂ ಎರಡು ಪುಟಗಳು ಬಾಕಿಯಿದ್ದರೂ ಅವರು ಭಾಷಣವನ್ನು ಕಡಿಮೆ ಮಾಡಿದರು. ಇನ್ನು, 1977 ರಲ್ಲಿ ಮಂಡಿಸಲಾದ ಹಿರುಭಾಯಿ ಮುಲ್ಲಜಿಭಾಯಿ ಪಟೇಲ್ ಅವರ ಮಧ್ಯಂತರ ಬಜೆಟ್ ಭಾಷಣವು ಕೇವಲ 800 ಪದಗಳನ್ನು ಒಳಗೊಂಡಿದ್ದು, ಇದುವರೆಗಿನ ಅತಿ ಚಿಕ್ಕ ಬಜೆಟ್ ಭಾಷಣವಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+