ಶನಿವಾರ, ಭಾನುವಾರ ಅಲ್ಲದೇ ಯಾವುದೇ ಭಾರತೀಯ ರಜಾದಿನಗಳಿದ್ದಾಗ ಷೇರು ಮಾರುಕಟ್ಟೆ (Stock Market) ಮುಚ್ಚಿರುತ್ತದೆ. ಈ ಸಂದರ್ಭದಲ್ಲಿ ಹೂಡಿಕೆದಾರರಂತೂ ಯಾವಾಗ ರಜೆ ಕಳೆಯುತ್ತೆ ಎಂದು ಕಾಯುತ್ತಿರುತ್ತಾರೆ. ಅಲ್ಲದೇ ಈ ಬಾರಿ ಫೆಬ್ರವರಿ ಆರಂಭದಲ್ಲಿ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಗುಡ್ ನ್ಯೂಸ್ ಒಂದಿದೆ. ಅದೇನೆಂದರೆ, 2026ರ ಫೆಬ್ರವರಿ 1ರ ಭಾನುವಾರದಂದು ಷೇರು ಮಾರುಕಟ್ಟೆ ತೆರೆದಿರುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಡಿಸಲಿರುವ 2026-27ರ ಕೇಂದ್ರ ಬಜೆಟ್ ಹಿನ್ನೆಲೆ, ಷೇರು ಮಾರುಕಟ್ಟೆಯಲ್ಲಿ ಬಿಎಸ್‌ಇ ಮತ್ತು ಎನ್‌ಎಸ್‌ಇ (BSE-NSE) ಸಾಮಾನ್ಯ ದಿನದಂತೆಯೇ ವಹಿವಾಟು ನಡೆಸಲಿದೆ. ಇದು ಷೇರು ಮಾರುಕಟ್ಟೆಯ ರಜಾ ಕ್ಯಾಲೆಂಡರ್‌ನಲ್ಲಾದ ಅಪರೂಪದ ಬದಲಾವಣೆಯಾಗಿದೆ.

ಈ ಬಾರಿ ಫೆಬ್ರವರಿ 1 ಭಾನುವಾರ ಬಂದಿದೆ. ಆದರೆ ಪ್ರತೀ ವರ್ಷ ಆ ದಿನ ಬಜೆಟ್ ಮಂಡಿಸಲಾಗುತ್ತದೆ. ಆದ್ರೆ ಈ ಬಾರಿ ಬಜೆಟ್ ಮತ್ತು ಷೇರು ಮಾರುಕಟ್ಟೆ ಬಗ್ಗೆ ಭಾರೀ ಕುತೂಹಲ ಹುಟ್ಟಿಸಿತ್ತು. ಆದ್ರೆ ಇದೀಗ ಕೊನೆಗೂ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಅಂದರೆ ಬಜೆಟ್ ದಿನದಂದು ಪೂರ್ಣ ಪ್ರಮಾಣದ ವಹಿವಾಟು ಅವಧಿ ನಡೆಸುವುದಾಗಿ ಬಿಎಸ್‌ಇ ಮತ್ತು ಎನ್‌ಎಸ್‌ಇ ಸುತ್ತೋಲೆಗಳಲ್ಲಿ ಘೋಷಿಸಿವೆ ಎನ್ನಲಾಗಿದೆ.
ಸುತ್ತೋಲೆಗಳ ಪ್ರಕಾರ, ಪೂರ್ವಭಾವಿ ವಹಿವಾಟು ಬೆಳಗ್ಗೆ 9 ಗಂಟೆಗೆ ಆರಂಭವಾಗಿ 9:08ರವರೆಗೆ ನಡೆಯಲಿದೆ. ಇಕ್ವಿಟಿ ಮಾರುಕಟ್ಟೆಯಲ್ಲಿನ ಸಾಮಾನ್ಯ ವಹಿವಾಟು ಬೆಳಗ್ಗೆ 9:15 ರಿಂದ ಮಧ್ಯಾಹ್ನ 3:30 ರವರೆಗೆ ನಿಗದಿಪಡಿಸಲಾಗಿದೆ. ಇಕ್ವಿಟಿ, ಎಫ್&ಓ ಮತ್ತು ಸರಕು ಉತ್ಪನ್ನಗಳ ವಿಭಾಗಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಬಿಎಸ್‌ಇ ಸ್ಪಷ್ಟಪಡಿಸಿದೆ.
ಅಪರೂಪದಲ್ಲಿ ಅಪರೂಪದ ದಿನ
ಷೇರು ಮಾರುಕಟ್ಟೆಗಳು ಸಾಮಾನ್ಯವಾಗಿ ವಾರಾಂತ್ಯ ಮತ್ತು ಆಯ್ದ ರಜಾದಿನಗಳಲ್ಲಿ ಮುಚ್ಚುತ್ತವೆ. ಫೆಬ್ರವರಿ 1ರ ಭಾನುವಾರ ಅಪರೂಪದ ಭಾನುವಾರಗಳಲ್ಲಿ ಒಂದಾಗಿದೆ. 2000ರ ನಂತರ ಮೊದಲ ಬಾರಿಗೆ ಕೇಂದ್ರ ಬಜೆಟ್ ಭಾನುವಾರ ಮಂಡನೆಯಾಗುತ್ತಿದೆ. ಅಲ್ಲದೇ ಈ ದಿನ ಷೇರು ಮಾರುಕಟ್ಟೆಯೂ ತೆರೆದಿರಲಿದೆ.
ನಿರ್ಮಲಾ ಸೀತಾರಾಮನ್ 2025ರಲ್ಲಿ ಶನಿವಾರ ಬಜೆಟ್ ಮಂಡಿಸಿದ್ದರು. ಇದಕ್ಕೂ ಮೊದಲು, ಅರುಣ್ ಜೇಟ್ಲಿ 2015ರ ಫೆಬ್ರವರಿ 28ರ ಶನಿವಾರ ಬಜೆಟ್ ಅಧಿವೇಶನ ನಡೆಸಿದ್ದರು. ಆದರೆ ಇದೀಗ ಮತ್ತೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಬಜೆಟ್ ಮಂಡನೆ ಮಾಡಿ ಇತಿಹಾಸ ಬರೆಯಲಿದ್ದಾರೆ.
ಷೇರು ಮಾರುಕಟ್ಟೆಗೆ ರಜಾ ದಿನ
ವಾರಾಂತ್ಯ ಹೊರತುಪಡಿಸಿ, ಭಾರತೀಯ ಷೇರು ವಿನಿಮಯ ಕೇಂದ್ರಗಳು 2026ರಲ್ಲಿ 16 ಸಾರ್ವಜನಿಕ ರಜಾದಿನಗಳನ್ನು ಹೊಂದಿದೆ. ಜನವರಿ 26 ಈ ತಿಂಗಳ ಮುಂದಿನ ನಿಗದಿತ ಮಾರುಕಟ್ಟೆ ರಜಾದಿನವಾಗಿದೆ.
ಮೊದಲಾರ್ಧದ ಪ್ರಮುಖ ರಜಾದಿನಗಳೆಂದರೆ:
ಹೋಳಿ (ಮಾರ್ಚ್ 3), ರಾಮ ನವಮಿ (ಮಾರ್ಚ್ 26), ಮಹಾವೀರ ಜಯಂತಿ (ಮಾರ್ಚ್ 31), ಗುಡ್ ಫ್ರೈಡೇ (ಏಪ್ರಿಲ್ 3). ಅಂಬೇಡ್ಕರ್ ಜಯಂತಿ (ಏಪ್ರಿಲ್ 14), ಮಹಾರಾಷ್ಟ್ರ ದಿನ (ಮೇ 1) ಮತ್ತು ಬಕ್ರೀದ್ (ಮೇ 28) ರಂದು ಮಾರುಕಟ್ಟೆಗಳು ಮುಚ್ಚಲಿವೆ.
ವರ್ಷದ ದ್ವಿತೀಯಾರ್ಧದಲ್ಲಿ, ಮೊಹರಂ (ಜೂನ್ 26), ಗಣೇಶ ಚತುರ್ಥಿ (ಸೆಪ್ಟೆಂಬರ್ 14), ಗಾಂಧಿ ಜಯಂತಿ (ಅಕ್ಟೋಬರ್ 2), ದಸರಾ (ಅಕ್ಟೋಬರ್ 20), ದೀಪಾವಳಿ ಬಲಿಪ್ರತಿಪದ (ನವೆಂಬರ್ 10) ಮತ್ತು ಗುರುನಾನಕ್ ಜಯಂತಿ (ನವೆಂಬರ್ 24) ರಂದು ವಹಿವಾಟು ರದ್ದುಗೊಳ್ಳಲಿದೆ. ಡಿಸೆಂಬರ್ 25ರ ಕ್ರಿಸ್‌ಮಸ್ 2026ರ ಕೊನೆಯ ಮಾರುಕಟ್ಟೆ ರಜಾದಿನ.
2026ರ ಕೇಂದ್ರ ಬಜೆಟ್‌ಗಾಗಿ ಷೇರು ಮಾರುಕಟ್ಟೆಗಳು ಭಾನುವಾರ, ಫೆಬ್ರವರಿ 1ರಂದು ವಹಿವಾಟಿಗೆ ತೆರೆದಿರಲಿವೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (BSE) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE) ಸಾಮಾನ್ಯ ದಿನದಂತೆಯೇ ವಹಿವಾಟು ನಡೆಸಲಿವೆ ಎಂದು ಘೋಷಿಸಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ.
ವಹಿವಾಟಿನ ಸಮಯ ಬೆಳಿಗ್ಗೆ 9:15ರಿಂದ ಮಧ್ಯಾಹ್ನ 3:30ರವರೆಗೆ ಸಾಮಾನ್ಯ ವೇಳಾಪಟ್ಟಿಯಂತೆ ಇರಲಿದೆ. ಫೆಬ್ರವರಿ 1ರಂದು ಮಾರುಕಟ್ಟೆ ತೆರೆದಿರುತ್ತದೆ ಎಂದು ಬಿಎಸ್‌ಇ ಮತ್ತು ಎನ್‌ಎಸ್‌ಇ ಜನವರಿ 16ರಂದು ಪ್ರಕಟಣೆ ಹೊರಡಿಸಿದೆ.
More From GoodReturns

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications