ಕೇಂದ್ರ ಬಜೆಟ್ 2026ಕ್ಕೆ (Union Budget 2026) ದಿನಗಣನೆ ಆರಂಭವಾಗಿದೆ. ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಬಜೆಟ್ 2026ಕ್ಕೆ ದೇಶದೆಲ್ಲೆಡೆ ಕುತೂಹಲದಿಂದ ಕಾಯುತ್ತಿದ್ದಾರೆ. ಇದೀಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಫೆಬ್ರವರಿ 1, 2026 ರಂದು ತಮ್ಮ ಒಂಬತ್ತನೇ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಅಂದು ಭಾನುವಾರವಾದರೂ, ಯಾವುದೇ ಬದಲಾವಣೆಯಾಗದೆ ಅಂದೇ ಬಜೆಟ್ ಮಂಡನೆಯಾಗಲಿದೆ.

ಬಜೆಟ್ ಮಂಡನೆಗೆ ಒಂದು ದಿನ ಮುನ್ನ ವಾರ್ಷಿಕ ಆರ್ಥಿಕ ಸಮೀಕ್ಷೆ ಪ್ರಸ್ತುತಪಡಿಸಲಾಗುತ್ತದೆ. ದೇಶದ ಆರ್ಥಿಕ ಸ್ಥಿತಿಯ ಅಧಿಕೃತ ವರದಿಯಾದ ಇದು, ಭವಿಷ್ಯದ ನೀತಿಗಳಿಗೆ ದಾರಿಯಾಗಲಿದೆ. ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರು ತಂಡದೊಂದಿಗೆ ಸೇರಿಕೊಂಡು ಇದನ್ನು ಸಿದ್ಧಪಡಿಸುತ್ತಾರೆ.
ಸಾಮಾನ್ಯವಾಗಿ ಎರಡು ರೀತಿಯ ಬಜೆಟ್ ಮಂಡನೆ ಮಾಡಲಾಗುತ್ತದೆ. ಒಂದು ಮಧ್ಯಂತರ ಬಜೆಟ್, ಮತ್ತೊಂದು ವಾರ್ಷಿಕ ಬಜೆಟ್ ಅಥವಾ ಪೂರ್ಣ ಬಜೆಟ್. ಹಾಗಿದ್ರೆ ಮಧ್ಯಂತರ ಬಜೆಟ್ ಮತ್ತು ಪೂರ್ಣ ಬಜೆಟ್ ನಡುವಿನ ವ್ಯತ್ಯಾಸ ಏನು ಗೊತ್ತಾ?
ಮಧ್ಯಂತರ ಬಜೆಟ್ ಎಂದರೇನು?
ಮಧ್ಯಂತರ ಬಜೆಟ್ ಎಂದರೆ ಚುನಾವಣಾ ವರ್ಷದಲ್ಲಿ ಸರ್ಕಾರ ಮಂಡಿಸುವ ತಾತ್ಕಾಲಿಕ ಆರ್ಥಿಕ ಮುಂಗಡಪತ್ರ. ಹೊಸ ಸರ್ಕಾರ ರಚನೆಯಾಗಿ ಪೂರ್ಣ ಬಜೆಟ್ ಮಂಡಿಸುವವರೆಗೆ, ಆಡಳಿತ ಮುಂದುವರಿಕೆಗಾಗಿ ಅಗತ್ಯ ವೆಚ್ಚಗಳಿಗೆ ಸಂಸತ್ತಿನ ಅನುಮೋದನೆ ಪಡೆದು, ಈ ಬಜೆಟ್ ಮಂಡಿಸಲಾಗುತ್ತದೆ. ಉದಾಹರಣೆಗೆ, ಫೆಬ್ರವರಿ 2024 ರಲ್ಲಿ ಮಧ್ಯಂತರ ಬಜೆಟ್ ಮಂಡಿಸಲಾಗಿತ್ತು, ಏಕೆಂದರೆ ಮುಂದಿನ ಕೆಲವು ತಿಂಗಳಲ್ಲಿ ಚುನಾವಣೆ ಇತ್ತು. ಒಂದು ವೇಳೆ ಚುನಾವಣೆಯಲ್ಲಿ ಬೇರೆ ಪಕ್ಷ ಗೆದ್ದರೆ ಹೊಸ ಸರ್ಕಾರ ರಚನೆಯಾಗುತ್ತದೆ. ಈ ವೇಳೆ ಅವರ ನೀತಿಗಳು ಬೇರೆಯೇ ಇರುತ್ತದೆ.
ಈ ಬಜೆಟ್‌ನಲ್ಲಿ, ಸರ್ಕಾರ ಪ್ರಮುಖ ನೀತಿ ಉಪಕ್ರಮಗಳು ಅಥವಾ ದೀರ್ಘಕಾಲೀನ ಸುಧಾರಣೆಗಳನ್ನು ಪ್ರಕಟಿಸುವುದಿಲ್ಲ. ಏಕೆಂದರೆ ಹೊಸ ಸರ್ಕಾರ ತನ್ನದೇ ನೀತಿ ಅನುಸರಿಸಲು ಮುಕ್ತವಾಗಿರುತ್ತದೆ, ಹಿಂದಿನ ನಿರ್ಧಾರಗಳಿಗೆ ಬದ್ಧವಾಗಿರಬೇಕಿಲ್ಲ. ಹಣಕಾಸು ವರ್ಷ ಮಾರ್ಚ್ 31ಕ್ಕೆ ಕೊನೆಗೊಳ್ಳುತ್ತದೆ, ಆದರೆ ಹೊಸ ಸರ್ಕಾರ ಮೇ ಅಂತ್ಯ ಅಥವಾ ಜೂನ್ ಆರಂಭದ ವೇಳೆಗೆ ಬರುತ್ತದೆ. ಈ ನಡುವಿನ ಅವಧಿಯಲ್ಲಿ ಸರ್ಕಾರದ ಆದಾಯ-ವೆಚ್ಚ ನಿರ್ವಹಣೆಗೆ ಮಧ್ಯಂತರ ಬಜೆಟ್ ಮಂಡಿಸಲಾಗುತ್ತದೆ.
ಸಂಪೂರ್ಣ ಬಜೆಟ್ ಎಂದರೇನು?
ಪೂರ್ಣ ಅಥವಾ ವಾರ್ಷಿಕ ಬಜೆಟ್, ಇಡೀ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಸರ್ಕಾರದ ಸಮಗ್ರ ಆರ್ಥಿಕ ದಾಖಲೆ ಇದಾಗಿರುತ್ತದೆ. ಇದು ಮಧ್ಯಂತರ ಬಜೆಟ್‌ಗಿಂತ ಭಿನ್ನವಾಗಿ, ಖರ್ಚಿನ ಪ್ಲಾನ್‌ಗಳು, ಆದಾಯ ಮೂಲಗಳು ಮತ್ತು ಹೊಸ ನೀತಿಗಳನ್ನು, ಜನರಿಗೆ ಸಂಬಂಧಿಸಿದ ಹೊಸ ಘೋಷಣೆಗಳನ್ನು ಸಂಪೂರ್ಣವಾಗಿ ವಿವರಿಸುತ್ತದೆ.
ಪೂರ್ಣ ಬಜೆಟ್ ಹಿಂದಿನ ಮತ್ತು ಮುಂಬರುವ ಹಣಕಾಸು ವರ್ಷಗಳ ಆದಾಯ-ವೆಚ್ಚಗಳನ್ನು ಒಳಗೊಂಡಿರುತ್ತದೆ. ಮಧ್ಯಂತರ ಬಜೆಟ್ ಹೊಸ ಸರ್ಕಾರ ಬರುವವರೆಗೆ, ಅಂದರೆ ಪೂರ್ಣ ಬಜೆಟ್ ಮಂಡಿಸುವವರೆಗಿನ ಅಂದಾಜುಗಳನ್ನು ನೀಡುತ್ತದೆ. ಅಲ್ಲದೆ, ಪೂರ್ಣ ಬಜೆಟ್‌ಗೆ ಸಂಸತ್ತಿನಲ್ಲಿ ವಿಸ್ತೃತ ಚರ್ಚೆ, ಪರಿಶೀಲನೆ ನಡೆಯುತ್ತದೆ, ಆದರೆ ಮಧ್ಯಂತರ ಬಜೆಟ್‌ಗೆ ಇದು ಇರುವುದಿಲ್ಲ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications