ಬೆಂಗಳೂರಿನ ಅಗತ್ಯ ಸಾರಿಗೆ ವ್ಯವಸ್ಥೆಗಳಲ್ಲಿ ನಮ್ಮ ಮೆಟ್ರೋ (Namma Metro) ಕೂಡಾ ಒಂದು. ಆದರೆ ಇತ್ತೀಚೆಗೆ ಬೆಲೆ ಏರಿಕೆಯಿಂದಾಗಿ ನಮ್ಮ ಮೆಟ್ರೋ ಭಾರೀ ವಿವಾದಕ್ಕೆ ಗುರಿಯಾಗಿತ್ತು. ಆದ್ರೆ ತನ್ನ ಅತ್ಯುತ್ತಮ ಸೇವೆಯಿಂದಾಗಿ "ನಮ್ಮ ಮೆಟ್ರೋ" ತನ್ನ ಗ್ರಾಹಕರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ಕಂಡಿದೆ. ಟ್ರಾಫಿಕ್ ತಪ್ಪಿಸಲು, ತ್ವರಿತ ಪ್ರಯಾಣಕ್ಕಾಗಿ ಮೆಟ್ರೋ ಬಹಳಷ್ಟು ಅನುಕೂಲವಾಗಿದೆ. ಬೆಂಗಳೂರಿನಾದ್ಯಂತ ಮೆಟ್ರೋ ಸೇವೆಯನ್ನು ವಿಸ್ತರಿಸಲು ಬಿಎಂಆರ್‌ಸಿಎಲ್ (BMRCL) ಮುಂದಾಗಿದ್ದು, ಮುಂಬರುವ ವರ್ಷಗಳಲ್ಲಿ ಅದೂ ವ್ಯವಸ್ಥಿತವಾಗಿ ಜಾರಿಗೆ ಬರಲಿದೆ.

ಈಗಾಗಲೇ ಬೆಂಗಳೂರಿನಲ್ಲಿ ಯೆಲ್ಲೋ ಲೈನ್ ಮೆಟ್ರೋ ಕಾರ್ಯಾರಂಭ ಮಾಡಿದ್ದು, ಈ ತಿಂಗಳ ಆರಂಭದಲ್ಲಿ ಹೊಸ ರೈಲುಗಳು ಕೂಡಾ ಕಾರ್ಯಾರಂಭ ಮಾಡಿದೆ. ಈ ಮೂಲಕ ಪ್ರಸ್ತುತ 5 ರೈಲುಗಲು ಕಾರ್ಯಾಚರಣೆ ಮಾಡುತ್ತಿದೆ. ಇದೀಗ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಮತ್ತೊಂದು ಗುಡ್ ನ್ಯೂಸ್ ನೀಡಿದೆ.
ಯೆಲ್ಲೋ ಲೈನ್ ಪ್ರಯಾಣಿಕರಿಗೆ ಗುಡ್ ನ್ಯೂಸ್!
ಸಾಮಾನ್ಯವಾಗಿ ಬೆಂಗಳೂರು ದಿನವಿಡೀ ಟ್ರಾಫಿಕ್‌ನಿಂದ ತುಂಬಿ ತುಳುಕುತ್ತಿರುತ್ತದೆ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ವೇಳೆ ಮೆಟ್ರೋದಲ್ಲೂ ಸಂಚಾರ ಮಾಡೋದು ಕಷ್ಟ ಸಾಧ್ಯವಾಗಿದೆ. ಆದ್ರೆ ಇದೀಗ ಸಮಸ್ಯೆ ಯೆಲ್ಲೋ ಲೈನ್ ಮೆಟ್ರೋದಲ್ಲೂ ಶುರುವಾಗಿದೆ. ಈ ಜನದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಇದೀಗ ಬಿಎಂಆರ್‌ಸಿಎಲ್ ಹೊಸ ನಿರ್ಧಾರ ಕೈಗೊಂಡಿದ್ದು, ಯೆಲ್ಲೋ ಲೈನ್‌ಗೆ ಹೆಚ್ಚುವರಿ ರೈಲುಗಳನ್ನು ನಿಯೋಜಿಸಲು ಸಿದ್ಧವಾಗಿದೆ. ಇದರಿಂದ ಪ್ರಯಾಣಿಕರಿಗೆ ಸಂಚಾರದಲ್ಲಿ ಮತ್ತಷ್ಟು ಅನುಕೂಲವಾಗಲಿದೆ.
ಸೋಮವಾರ ಮಾತ್ರ...
ಬೆಂಗಳೂರಿನ ಯೆಲ್ಲೋ ಲೈನ್ ಮೆಟ್ರೋ ಮಾರ್ಗವು ಆರ್‌ವಿ ರೋಡ್ ಮತ್ತು ಬೊಮ್ಮಸಂದ್ರವನ್ನು ಸಂಪರ್ಕಿಸುತ್ತದೆ. ಆದ್ರೆ ಇತ್ತೀಚೆಗೆ ಯೆಲ್ಲೋ ಲೈನ್‌ನಲ್ಲೂ ಜನದಟ್ಟಣೆ ಹೆಚ್ಚಾಗುತ್ತಿದೆ. ಇದೇ ಕಾರಣದಿಂದ ಇದೀಗ ಹೆಚ್ಚುವರಿ ರೈಲು ನಿಯೋಜಿಸುವುದಾಗಿ ಹೇಳಲಾಗಿದೆ. ಆದ್ರೆ ಈ ಹೆಚ್ಚುವರಿ ರೈಲುಗಳು ಪ್ರತೀ ಸೋಮವಾರ ಮಾತ್ರ ಸಂಚಾರ ಮಾಡಲಿದೆ. ವಾರದ ಆರಂಭದಲ್ಲಿ ಮೆಟ್ರೋದಲ್ಲಿ ಪ್ರಯಾಣಿಕರ ದಂಡೇ ಹರಿದು ಬರುತ್ತದೆ. ಇದರಿಂದ ಮೆಟ್ರೋ ಸೇವೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಾಗಿದೆ.
ಮೆಟ್ರೋ ಸಮಯಲ್ಲೂ ಬದಲಾವಣೆ:
ಹೆಚ್ಚುವರಿ ಮೆಟ್ರೋ ಮಾತ್ರವಲ್ಲದೇ ಪ್ರತೀ ಸೋಮವಾರ ಮೆಟ್ರೋ ಆರಂಭದ ಸಮಯವೂ ಬದಲಾವಣೆಯಾಗಲಿದೆ. ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರದಿಂದ ಪ್ರತೀ ಸೋಮವಾರ ಬೆಳಿಗ್ಗೆ 5:05 ಮತ್ತು 5:35 ಗಂಟೆಗೆ ಮೆಟ್ರೋ ಆರಂಭವಾಗಲಿದೆ. ಬಾಕಿ ಉಳಿದ ದಿನಗಳಲ್ಲಿ 6 ಗಂಟೆಗೆ ಆರಂಭವಾಗಲಿದ್ದು, ಭಾನುವಾರ ಮಾತ್ರ 7 ಗಂಟೆಗೆ ಆರಂಭವಾಗಲಿದೆ.
ಬಿಎಂಆರ್‌ಸಿಎಲ್ ಕೈಗೊಂಡಿರುವ ಈ ಕ್ರಮ ಕೇವಲ ಸೋಮವಾರಕ್ಕೆ ಮಾತ್ರ ಅನ್ವಯವಾಗುತ್ತದೆ. ಈಗಾಗಲೇ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಸೋಮವಾರ ಮೆಟ್ರೋ ರೈಲುಗಳು ಬೇಗನೆ ಆರಂಭವಾಗುತ್ತದೆ. ಆದರೆ ಈ ಸೇವೆ ಹಳದಿ ಮಾರ್ಗದಲ್ಲಿ ಆರಂಭವಾಗಿರಲಿಲ್ಲ. ಆದರೆ ಇದೀಗ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಯೆಲ್ಲೋ ಲೈನ್‌ನಲ್ಲೂ ಈ ಸೇವೆ ಆರಂಭಿಸಲು ಮುಂದಾಗಿದೆ. ಪ್ರಯಾಣಿಕರ ಸಂಖ್ಯೆಯಲ್ಲಾಗುತ್ತಿರುವ ಹೆಚ್ಚಳವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.


Click it and Unblock the Notifications