ರಾಜ್ಯ ಸರ್ಕಾರ (Karnataka Govt) ಜನರ ಅನುಕೂಲಕ್ಕಾಗಿ ಒಂದಲ್ಲಾ ಒಂದು ಕ್ರಮಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಟ್ರಾಫಿಕ್ ಫೈನ್‌ನಲ್ಲಿ (Traffic Fine) ರಿಯಾಯಿತಿ ಘೋಷಣೆ ಮಾಡುವ ಮೂಲಕ ವಿಶೇಷ ಆಫರ್ ನೀಡಿತ್ತು. ಇದೀಗ ಬೆಂಗಳೂರು ಜನರಿಗೆ ರಾಜ್ಯ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಬೆಂಗಳೂರು ನಗರದಲ್ಲಿ ಬಾಕಿ ಇರುವ ನೀರಿನ ಬಿಲ್ (Water Bill) ಅನ್ನು ಕ್ಲಿಯರ್ ಮಾಡುವ ಉದ್ದೇಶದಿಂದ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ.

ಹೌದು, ಬೆಂಗಳೂರು ನಗರದಲ್ಲಿ ಬಾಕಿ ಇರುವ ನೀರಿನ ಬಿಲ್‌ಗಳನ್ನು ಕ್ಲಿಯರ್ ಮಾಡುವ ಸಲುವಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) One-Time Settlement (OTS) ಯೋಜನೆಯನ್ನು ತಂದಿದೆ. ಬೆಂಗಳೂರು ಸಂಚಾರ ಪೊಲೀಸರ ದಂಡ ವಿನಾಯಿತಿ ಮಾದರಿಯಲ್ಲೇ, BWSSB ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ದಂಡ ಮತ್ತು ಬಡ್ಡಿದರದ ಮೇಲಿನ ವಿನಾಯಿತಿ ಮೂಲಕ ಗ್ರಾಹಕರು ತಮ್ಮ ಹಲವು ದಿನಗಳ ಬಾಕಿ ಹಣವನ್ನು ಕ್ಲಿಯರ್ ಮಾಡಬಹುದು.
ಏನಿದು ವಿಶೇಷ ರಿಯಾಯಿತಿ?
BWSSB ಪ್ರಸ್ತಾಪಿಸಿರುವ ಈ ಯೋಜನೆಯಡಿ, ನೀರಿನ ಗ್ರಾಹಕರು ತಮ್ಮ ಬಾಕಿ ಇರುವ ಕಾವೇರಿ ನೀರಿನ ಬಿಲ್‌ಗಳನ್ನು ಯಾವುದೇ ವಿಳಂಬದ ಶುಲ್ಕ ಅಥವಾ ಬಡ್ಡಿ ಪಾವತಿಸದೆ ಕ್ಲಿಯರ್ ಮಾಡಬಹುದು. ಅಂದರೆ ಮೂಲ ಬಿಲ್‌ನಲ್ಲಿ ತೋರಿಸಲಾದ ಸಂಪೂರ್ಣ ಮೊತ್ತವನ್ನು ಮಾತ್ರ ಪಾವತಿಸಬೇಕಾಗುತ್ತದೆ. ಸದ್ಯ ರಾಜ್ಯ ಸರ್ಕಾರ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಈ ಯೋಜನೆ ಜನವರಿ 2026 ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ.
ಒನ್ ಟೈಂ ಸೆಟಲ್‌ಮೆಂಟ್ ಯೋಜನೆಯು ಗ್ರಾಹಕರಿಗೆ ತಮ್ಮ ಬಾಕಿ ಇರುವ ನೀರಿನ ಬಿಲ್‌ಗಳನ್ನು ಪಾವತಿಸಲು ಮೂರು ತಿಂಗಳ ಅವಧಿಯನ್ನು ನೀಡುತ್ತದೆ. ಈ ಮನ್ನಾ ಕೇವಲ ಬಡ್ಡಿ ಮತ್ತು ವಿಳಂಬ ಪಾವತಿ ಶುಲ್ಕಗಳಿಗೆ ಮಾತ್ರ ಅನ್ವಯ ವಾಗುತ್ತದೆ ಎಂದು ವರದಿಯಾಗಿದೆ. ಆದರೆ ಮೂಲ ಬಿಲ್‌ಗೆ ಇದು ಅನ್ವಯಿಸುವುದಿಲ್ಲ. ಅಧಿಕಾರಿಗಳ ಪ್ರಕಾರ, ಗ್ರಾಹಕರು ತಮ್ಮ ಬಾಕಿ ನೀರಿನ ಬಿಲ್ ಅನ್ನು ಯಾವುದೇ ಆರ್ಥಿಕ ಹೊರೆಯಿಲ್ಲದೇ ಆರಾಮದಾಯಕವಾಗಿ ಈ ಹಣವನ್ನು ಪಾವತಿ ಮಾಡಬಹುದು.
ಪ್ರಸ್ತುತ, ಬೆಂಗಳೂರು ನಗರದಲ್ಲಿ ಸುಮಾರು 11.14 ಲಕ್ಷ ಕಾವೇರಿ ನೀರಿನ ಸಂಪರ್ಕಗಳಿದ್ದು, ಅಂದಾಜು 1.55 ಕೋಟಿ ಜನರಿಗೆ ನೀರು ಪೂರೈಸಲಾಗುತ್ತಿದೆ. ಸುಮಾರು 100 ಕಿ.ಮೀ ದೂರದಲ್ಲಿರುವ ಕಾವೇರಿ ನದಿಯಿಂದ ನೀರು ಪೂರೈಸುವ BWSSB ಗೆ, ನೀರು ಮತ್ತು ಒಳಚರಂಡಿ ಶುಲ್ಕಗಳೇ ಪ್ರಮುಖ ಆದಾಯವಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ವರ್ಷಗಳಲ್ಲಿ ಬಾಕಿ ಉಳಿದಿರುವ ನೀರಿನ ಬಿಲ್‌ಗಳ ಮೊತ್ತ ಸುಮಾರು ₹700 ಕೋಟಿ ತಲುಪಿದೆ ಎಂದು ಹೇಳಲಾಗಿದೆ. ಇದೀಗ ಈ ಬೃಹತ್ ಮೊತ್ತವನ್ನು ಇತ್ಯರ್ಥ ಪಡಿಸುವ ಉದ್ದೇಶದಿಂದ BWSSB ಈ ಯೋಜನೆಯನ್ನು ಜಾರಿಗೆ ತಂದಿದೆ.
BWSSB ಯ ಈ ನಿರ್ಧಾರವನ್ನು ಬೆಂಗಳೂರಿನ ಹಲವು ನಿವಾಸಿಗಳು ಸ್ವಾಗತಿಸಿದ್ದು, ಇದೊಂದು ಪ್ರಾಯೋಗಿಕ ಮತ್ತು ಅತ್ಯಗತ್ಯ ಹೆಜ್ಜೆ ಎಂದು ಕರೆದಿದ್ದಾರೆ. ಗ್ರಾಹಕರೊಬ್ಬರು ತಮ್ಮ ಕಚೇರಿಯ ನೀರಿನ ಬಿಲ್ ₹ 2.5 ಲಕ್ಷ ತಲುಪಿತ್ತು, ಅಲ್ಲದೇ ಇದರ ಜೊತೆಗೆ ದಂಡ ಮತ್ತು ಬಡ್ಡಿ ಸೇರಿ ಹಲವು ಮತ್ತಷ್ಟು ಹಣ ಪಾವತಿಸಬೇಕಿತ್ತು. ಆದರೆ ಈ ವಿನಾಯಿತಿಯಿಂದ ಬಾಕಿ ಮೊತ್ತವನ್ನು ಕ್ಲಿಯರ್ ಮಾಡಲು, ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.


Click it and Unblock the Notifications