ರಾಯಲ್ ಎನ್‌ಫೀಲ್ಡ್ (Royal Enfield) ಅದೆಷ್ಟೋ ಯುವಕರ ಕನಸು. ರಾಯಲ್ ಎನ್‌ಫೀಲ್ಡ್ ಖರೀದಿಸಿ, ಅದನ್ನು ರೈಡ್ ಮಾಡುತ್ತಾ ಹೋಗೋ ಗತ್ತೇ ಬೇರೆ. ಆದ್ರೆ ಏನ್ ಮಾಡೋದು ದುಬಾರಿ ಬೆಲೆಯಿಂದಾಗಿ ರಾಯನ್ ಎನ್‌ಫೀಲ್ಡ್ ಖರೀದಿ ಮಾಡೋ ಕನಸು ಕನಸಾಗಿಯೇ ಉಳಿಯುತ್ತೆ. ಆದ್ರೆ ಇದೀಗ ರಾಯಲ್ ಎನ್‌ಫೀಲ್ಡ್ ಪ್ರಿಯರಿಗೆ ಗುಡ್ ನ್ಯೂಸ್ ಒಂದಿದೆ. ಶೂನ್ಯ ಹೂಡಿಕೆಯೊಂದಿಗೆ ನೀವು ಬುಲೆಟ್ ಬೈಕ್ (Bullet Bike) ಅನ್ನು ಮನೆಗೆ ತರಬಹುದು. ಹಾಗಿದ್ರೆ ಅದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ಓದಿ.

ವಿಶೇಷ ಫೀಚರ್ಸ್ ಮೂಲಕ ರಾಯಲ್ ಎನ್‌ಫೀಲ್ಡ್ , ಲಕ್ಷಗಟ್ಟಲೆ ಅಭಿಮಾನಿಗಳನ್ನ ಹೊಂದಿದೆ. ಇನ್ನು ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಬೈಕುಗಳಲ್ಲಿ ಈ ಬೈಕ್ ಮಾದರಿ ಕೂಡಾ ಅಗ್ರಸ್ಥಾನದಲ್ಲಿದೆ. ವಿಶೇಷ ವಿನ್ಯಾಸ, ಫೀಚರ್ಸ್, ಸೌಂಡ್ ಮೂಲಕ ಜನಮನ ಗೆದ್ದಿರುವ ಈ ಬೈಕ್ ಯುವಕರ ನೆಚ್ಚಿನ ಮೋಟಾರ್ ಬೈಕ್‌ಗಳೆಂದು ಗುರುತಿಸಿಕೊಂಡಿದೆ.
ಇತ್ತೀಚೆಗಷ್ಟೇ ರಾಯಲ್ ಎನ್‌ಫೀಲ್ಡ್ ತನ್ನ ಬ್ರಾಂಡ್‌ನಡಿಯಲ್ಲಿ ಹಂಟರ್ 350 ನಂತಹ ಕಡಿಮೆ ಬೆಲೆಯಲ್ಲಿ ಬೈಕ್ ಅನ್ನು ಲಾಂಚ್ ಮಾಡಿತ್ತು. ಇನ್ನು ಈ ರಾಯಲ್ ಎನ್‌ಫೀಲ್ಡ್ ಹಂಟರ್ 350 ಆರಂಭಿಕ ಬೆಲೆ ₹1.62 ಲಕ್ಷ ರೂ. ಇದ್ದರೂ, ಕ್ಲಾಸಿಕ್ 350 ಮಾತ್ರ ತನ್ನ ಛಾಪನ್ನು ಕಳೆದುಕೊಂಡಿಲ್ಲ. 2025 ರಲ್ಲಿಯೂ ಸಹ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಬೇಡಿಕೆ ಹೆಚ್ಚಾಗಿದ್ದು, ಪ್ರತಿ ತಿಂಗಳು ಸುಮಾರು 30,000 ಕ್ಲಾಸಿಕ್ 350 ಬೈಕ್‌ಗಳು ಸೇಲ್ ಆಗುತ್ತಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಹೊಸ J-ಪ್ಲಾಟ್‌ಫಾರ್ಮ್ ಎಂಜಿನ್ ಬೈಕಿನ ಕಾರ್ಯಕ್ಷಮತೆ ಮತ್ತು ಫೀಚರ್ಸ್ ಬೇಡಿಕೆ ಮತ್ತಷ್ಟು ಹೆಚ್ಚಿಸಿದೆ ಎಂದು ವರದಿಯಾಗಿದೆ. ಇದೇ ಕಾರಣದಿಂದ, ಕ್ಲಾಸಿಕ್ 350 ಭಾರತದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲಿಯೂ ಭಾರೀ ಬೇಡಿಕೆ ಪಡೆದುಕೊಂಡಿದೆ.
ಕ್ಲಾಸಿಕ್ 350 ಹೀಗೆ ಖರೀದಿಸಿ:
ಪ್ರಸ್ತುತ ಕ್ಲಾಸಿಕ್ 350 ಖರೀದಿಸಲು ಇದು ಬೆಸ್ಟ್ ಟೈಮ್ ಅಂತಾನೇ ಹೇಳ್ಬಹುದು. ಏಕೆಂದರೆ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ಬಂದ 'ಜಿಎಸ್‌ಟಿ 2.0' ನಿಯಮಗಳ ಪ್ರಕಾರ, 350cc ವರೆಗಿನ ಬೈಕ್‌ಗಳ ಮೇಲಿನ ಬಹಳಷ್ಟು ಕಡಿಮೆ ಮಾಡಲಾಗಿದೆ. ಸಾಮಾನ್ಯವಾಗಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಮೇಲೆ 28% ಜಿಎಸ್‌ಟಿ ಹಿಂದೆ ವಿಧಿಸಲಾಗುತ್ತಿತ್ತು, ಆದರೆ ಈಗ ಅದನ್ನು 18% ಕ್ಕೆ ಇಳಿಸಲಾಗಿದೆ. ಆದ್ದರಿಂದ ಸದ್ಯ ಈ ಬೈಕಿನ ಬೆಲೆ ಭಾರೀ ಕಡಿಮೆಯಾಗಿದೆ. ಅಲ್ಲದೇ ಹಬ್ಬದ ಸಮದಲ್ಲಿ ಬೈಕ್‌ಗಳ ಮೇಲೆ ವಿಶೇಷ ರಿಯಾಯಿತಿ ಕೂಡಾ ಲಭ್ಯವಿದ್ದು, ಜಿಎಸ್‌ಟಿ ಕಡಿತದ ಜೊತೆಗೆ ಭಾರೀ ಕಡಿಮೆ ಬೆಲೆಗೆ ಖರೀದಿ ಮಾಡಬಹುದು.
ಭಾರೀ ಕಡಿಮೆಯಲ್ಲಿ ರಾಯಲ್ ಎನ್‌ಫೀಲ್ಡ್!
ಜಿಎಸ್‌ಟಿ ಹೊಸ ನಿಯಮದ ಪ್ರಕಾರ, ಸದ್ಯ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೇಸ್ ಮಾಡೆಲ್ ಸರಿಸುಮಾರು ₹1.81 ಲಕ್ಷ ಎಕ್ಸ್-ಶೋರೂಮ್ ಬೆಲೆಯಲ್ಲಿ ಖರೀದಿ ಮಾಡಬಹುದು. ರಿಜಿಸ್ಟ್ರೇಶನ್ ಮತ್ತು ವಿಮೆಯೊಂದಿಗೆ, ಇದರ ಆನ್-ರೋಡ್ ಬೆಲೆ ಸುಮಾರು ₹2.09 ಲಕ್ಷ ರೂ.ನಷ್ಟು ಆಗುತ್ತದೆ. ನೋಡಲು ಒಮ್ಮೆ ಇದು ದೊಡ್ಡ ಮೊತ್ತದಂತೆ ಕಂಡರೂ, ಇದಕ್ಕಾಗಿ ಸಾಲ ಸೌಲಭ್ಯ ಕೂಡಾ ಇದೆ. ನಿಮಗೆ ಒಂದು ರೂಪಾಯಿ ಕೂಡ ಡೌನ್ ಪೇಮೆಂಟ್ ಮಾಡದೇ, 100% ಸಾಲವನ್ನು ಅದಕ್ಕಾಗಿ ಪಡೆಯಬಹುದು. ನಿಮ್ಮ CIBIL ಸ್ಕೋರ್ ಉತ್ತಮವಾಗಿದ್ದರೆ, ಬ್ಯಾಂಕ್‌ಗಳು 8% ರಿಂದ 12% ಬಡ್ಡಿ ದರದಲ್ಲಿ ನಿಮಗೆ ಬೈಕ್ ಖರೀದಿಸಲು ಲೋನ್ ನೀಡುತ್ತದೆ.
ಇಎಂಐ ಮೂಲಕವೂ ನೀವು ಈ ಬೈಕ್ನು ಖರೀದಿ ಮಾಡಬಹುದು. ಒಂದು ವರ್ಷದ ಸಾಲ ತೆಗೆದುಕೊಂಡರೆ, ತಿಂಗಳಿಗೆ ₹18,181 ರೂ ಕಟ್ಟಬೇಕು. ಒಮ್ಮೆ ಈ ಬೆಲೆ ಜಾಸ್ತಿ ಅನಿಸಬಹುದು. ಆದ್ರೆ ಇದು ಬೆಸ್ಟ್ ಪ್ಲಾನ್. ಆದರೆ, ನೀವು 5 ವರ್ಷಗಳ ಅಂದರೆ 60 ತಿಂಗಳ ಸಾಲವನ್ನು ಆಯ್ಕೆ ಮಾಡಿದ್ರೆ, ಮಾಸಿಕ ಇಎಂಐ ಕೇವಲ ₹4,238 ಆಗುತ್ತದೆ. ಒಂದು ವೇಳೆ ಇದನ್ನು ದಿನಕ್ಕೆ ಲೆಕ್ಕ ಹಾಕಿದ್ರೆ ಕೇವಲ 143 ರೂ. ಮಾತ್ರ. ಅಂದರೆ ಕೇವಲ 143 ರೂ.ಗೆ ನೀವು ನಿಮ್ಮ ಕನಸನ್ನು ನನಸು ಮಾಡಬಹುದು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications