ಸರ್ಕಾರದ ಸಹಕಾರ ಟ್ಯಾಕ್ಸಿ ಸೇವೆ: ಓಲಾ, ಉಬರ್‌ ಮಾದರಿಯಲ್ಲಿ ಸರ್ವೀಸ್, ಚಾಲಕರಿಗೆ ಲಾಭ

ಈಗ ಕಾರ್ಯನಿರ್ವಹಿಸುತ್ತಿರುವ ಒಲಾ ಮತ್ತು ಊಬರ್ ರೀತಿಯಲ್ಲಿ ಸಹಕಾರಿ ಟ್ಯಾಕ್ಸಿ ಸೇವೆ ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ತಿಳಿಸಿದ್ದಾರೆ.

ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ 2025 ರ ಕುರಿತ ಚರ್ಚೆ ಸಂದರ್ಭ ಉತ್ತರಿಸಿದ ಅವರು, ಸಹಕಾರಿ ವಿಶ್ವವಿದ್ಯಾಲಯವು ಸಹಕಾರದ ಮೂಲಕ ಅಡಿಪಾಯ ಹಾಕುತ್ತಿರುವ ಸಮೃದ್ಧ ಭಾರತದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ ಶೀಘ್ರದಲ್ಲೇ ಸಹಕಾರ ಸಂಸ್ಥೆಗಳು ಟ್ಯಾಕ್ಸಿ ಮತ್ತು ವಿಮಾ ಸೇವೆಗಳನ್ನು ಒದಗಿಸುತ್ತವೆ ಎಂದರು.

ಕ್ಯಾಬ್ ಸರ್ವೀಸ್: ಓಲಾ, ಉಬರ್‌ ಮಾದರಿಯಲ್ಲಿ ಸಹಕಾರಿ ಟ್ಯಾಕ್ಸಿ

ಸಹಕಾರದಿಂದ ಸಮೃದ್ದಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಕೇವಲ ಘೋಷಣೆಯಲ್ಲ, ಮುಂದಿನ ದಿನಗಳಲ್ಲಿ ಓಲಾ ಊಬರ್ ರೀತಿಯಲ್ಲಿ ಟ್ಯಾಕ್ಸಿ ಸೇವೆ ಆರಂಭವಾಗಲಿದೆ . ಈ ಸಹಕಾರಿ ಟ್ಯಾಕ್ಸಿ ವೇದಿಕೆಯಿಂದ ಬರುವ ಲಾಭವು ಮದ್ಯವರ್ತಿಗಳಿಗೆ ಹೋಗೋದಿಲ್ಲ. ಬದಲಾಗಿ ಇದರಲ್ಲಿ ದೊರಕಿದ ಲಾಭಂಶ ನೇರವಾಗಿ ಟ್ಯಾಕ್ಸಿ ಚಾಲಕರಿಗೆ ಹೋಗುತ್ತದೆ ಎಂದು ಸದನದಲ್ಲಿ ತಿಳಿಸಿದ್ರು. ಸಹಕಾರ ಸಚಿವಾಲಯ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸುಮಾರು ಮೂರುವರೆ ವರ್ಷಗಳಿಂದ ಶ್ರಮಿಸುತ್ತಿದೆ. ಇದರ ಫಲವಾಗಿ ಇನ್ನೇನು ಕೆಲ ದಿನಗಳಲ್ಲಿ ಈ ಸಹಕಾರಿ ಟ್ಯಾಕ್ಸಿ ಸೇವೆ ಆರಂಭವಾಗಲಿದೆ. ಈ ಯೋಜನೆಯಡಿ ದ್ವಿಚಕ್ರ ವಾಹನ, ಟ್ಯಾಕ್ಸಿ ಆಟೋ ಕೂಡಾ ನೋಂದಣಿ ಮಾಡಿಕೊಳ್ಳಬಹುದು. ಸಹಕಾರಿ ಚೌಕಟ್ಟನ್ನು ಬಳಸಿಕೊಳ್ಳುವ ಮೂಲಕ, ಈ ಸಂಸ್ಥೆಯು ಭಾರತದಾದ್ಯಂತ ಚಾಲಕರಿಗೆ ಹೆಚ್ಚಿನ ಆರ್ಥಿಕ ಸ್ಥಿರತೆ ಮತ್ತು ಕಲ್ಯಾಣವನ್ನು ಖಚಿತಪಡಿಸುತ್ತದೆ. ಸಹಕಾರಿ ವಲಯವನ್ನು ವಿವಿಧ ಅಗತ್ಯ ಸೇವೆಗಳಾಗಿ ವಿಸ್ತರಿಸುವ ಸರ್ಕಾರದ ಬದ್ಧತೆಯನ್ನು ಅಮಿತ್ ಶಾ ಒತ್ತಿ ಹೇಳಿದರು. ಇದರಲ್ಲಿ ಪೆಟ್ರೋಲ್ ಪಂಪ್‌ಗಳು, ಅನಿಲ ವಿತರಣೆ, ಪಡಿತರ ಅಂಗಡಿಗಳು, ಔಷಧ ಅಂಗಡಿಗಳು, ಗೋದಾಮುಗಳು, ನೀರಿನ ನಿರ್ವಹಣೆ, ಬೀಜ ಉತ್ಪಾದನೆ ಮತ್ತು ಸಾವಯವ ಕೃಷಿ ಸೇರಿವೆ.

ಸ್ವಾತಂತ್ರ್ಯದ 75 ವರ್ಷಗಳ ನಂತರ, ಇಂದು ದೇಶವು ತನ್ನ ಮೊದಲ ಸಹಕಾರಿ ವಿಶ್ವವಿದ್ಯಾಲಯವನ್ನು ಪಡೆಯುತ್ತಿದೆ. ಈ ಸಹಕಾರಿ ವಿಶ್ವವಿದ್ಯಾಲಯಕ್ಕೆ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಎಂದು ಹೆಸರಿಸಲು ನಿರ್ಧರಿಸಲಾಗಿದೆ ಯಾಕೆಂದರೆ ಸರ್ದಾರ್ ಪಟೇಲ್ ಅವರ ಮಾರ್ಗದರ್ಶನದಲ್ಲಿ ಭಾರತದಲ್ಲಿ ಸಹಕಾರಿ ಸಂಸ್ಥೆಗಳಿಗೆ ಅಡಿಪಾಯ ಹಾಕಿದ ಅನೇಕ ನಾಯಕರಲ್ಲಿ ತ್ರಿಭುವನ್ ದಾಸ್ ಪಟೇಲ್ ಕೂಡ ಒಬ್ಬರು. ಈ ಮಸೂದೆ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತದೆ, ಸ್ವಯಂ-ಉದ್ಯೋಗ ಮತ್ತು ಸಣ್ಣ ಉದ್ಯಮಶೀಲತೆಯ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ, ಸಾಮಾಜಿಕ ಸೇರ್ಪಡೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಇಂದು ಭಾರತದಲ್ಲಿ 8 ಲಕ್ಷ ಸಹಕಾರಿ ಸಂಘಗಳಿವೆ ಮತ್ತು 30 ಕೋಟಿ ಜನರು ಅವುಗಳ ಸದಸ್ಯರಾಗಿದ್ದಾರೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಒಂದು ರೀತಿಯಲ್ಲಿ, ದೇಶದ ಪ್ರತಿ ಐದನೇ ವ್ಯಕ್ತಿ ಸಹಕಾರಿ ಸಂಘಗಳೊಂದಿಗೆ ಸಂಬಂಧ ಹೊಂದಿದ್ದಾರೆ, ಆದರೆ ಕಳೆದ 75 ವರ್ಷಗಳಲ್ಲಿ ಅದರ ಅಭಿವೃದ್ಧಿಗೆ ಯಾವುದೇ ಪ್ರಯತ್ನ ನಡೆಯಲಿಲ್ಲ. ದೇಶಾದ್ಯಂತ ಸಹಕಾರಿ ಸಂಸ್ಥೆಗಳು ಅಸಮಾನವಾಗಿ ನಡೆಯುತ್ತಿದ್ದವು ಮತ್ತು ಸಹಕಾರಿ ಚಳವಳಿಯಲ್ಲಿ ವೈಪರೀತ್ಯಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು ಎಂದು ಶ್ರೀ ಶಾ ಹೇಳಿದರು. ಸಹಕಾರ ಸಚಿವಾಲಯವನ್ನು ಸ್ಥಾಪಿಸಲು ಮೋದಿಯವರು ಕಾರಣ ಎಂದು ಅವರು ಹೇಳಿದರು. ಸಹಕಾರಿ ಸಚಿವಾಲಯ ಸ್ಥಾಪನೆಯಾದಾಗಿನಿಂದ, ಕಳೆದ ಮೂರುವರೆ ವರ್ಷಗಳಲ್ಲಿ ಬಹಳಷ್ಟು ಕೆಲಸ ಮಾಡಿದೆ ಎಂದು ಅವರು ಹೇಳಿದರು. ಸಹಕಾರಿ ಸಂಘಗಳನ್ನು ಅಭಿವೃದ್ಧಿಪಡಿಸಲು, ಎಲ್ಲಾ ರಾಜ್ಯಗಳೊಂದಿಗೆ ರಾಷ್ಟ್ರೀಯ ಸಹಕಾರಿ ದತ್ತಸಂಚಯವನ್ನು ಸಿದ್ಧಪಡಿಸಲಾಗಿದೆ ಮತ್ತು ಇಂದು ಪ್ರತಿಯೊಂದು ರಾಜ್ಯ, ಜಿಲ್ಲೆ ಮತ್ತು ಗ್ರಾಮದ ಸಹಕಾರಿ ಸಂಘಗಳ ಬಗ್ಗೆ ಮಾಹಿತಿ ಈ ದತ್ತಸಂಚಯದಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು.

ದೇಶದಲ್ಲಿ 2 ಲಕ್ಷ ಹೊಸ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು (ಪಿಎಸಿಎಸ್) ರಚನೆಯಾಗಲಿದ್ದು, ಪಿಎಸಿಎಸ್ ಇಲ್ಲದ ಒಂದೇ ಒಂದು ಪಂಚಾಯತ್ ಇರುವುದಿಲ್ಲ ಇದಕ್ಕಾಗಿ ಪಿಎಸಿಎಸ್ ನ ಬೈಲಾಗಳನ್ನು ಬದಲಾಯಿಸಲು ನಿರ್ಧರಿಸಿದೆ ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಈಶಾನ್ಯದಿಂದ ದ್ವಾರಕಾದವರೆಗೆ ಇಡೀ ದೇಶವು ಕೇಂದ್ರವು ಹೊರಡಿಸಿದ ಮಾದರಿ ಬೈಲಾಗಳನ್ನು ಒಪ್ಪಿಕೊಂಡಿದೆ . ಇದು 25 ಕ್ಕೂ ಹೆಚ್ಚು ಆರ್ಥಿಕ ಚಟುವಟಿಕೆಗಳನ್ನು ಪಿಎಸಿಎಸ್ ನೊಂದಿಗೆ ಜೋಡಿಸಲು, ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ತರಲು ಮತ್ತು ಎಲ್ಲರಿಗೂ ಪೂರೈಸಲು ಎಲ್ಲಾ ಭಾಷೆಗಳಲ್ಲಿ ಲಭ್ಯವಿರುವ ಸಾಮಾನ್ಯ ಲೆಕ್ಕಪತ್ರ ಸಾಫ್ಟ್‌ವೇರ್ ಅಭಿವೃದ್ಧಿಯನ್ನು ಸಾಧ್ಯವಾಗಿಸಿದೆ. ದೇಶದಲ್ಲಿ 43 ಸಾವಿರ ಪಿಎಸಿಎಸ್ ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿ ಎಸ್‌ ಸಿ) ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ 300 ಕ್ಕೂ ಹೆಚ್ಚು ಯೋಜನೆಗಳ ಪ್ರಯೋಜನಗಳು ಮತ್ತು ಸೌಲಭ್ಯಗಳು ಲಭ್ಯವಿವೆ. ಇಂದು ದೇಶದಲ್ಲಿ 36 ಸಾವಿರ ಪಿಎಸಿಎಸ್ ಗಳು ಪ್ರಧಾನ ಮಂತ್ರಿ ಸಮೃದ್ಧಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ, 4 ಸಾವಿರ ಪಿಎಸಿಎಸ್ ಗಳನ್ನು ಜನೌಷಧಿ ಕೇಂದ್ರಗಳಾಗಿ ಸ್ಥಾಪಿಸಲಾಗಿದೆ ಮತ್ತು 400 ಪಿಎಸಿಎಸ್ ಗಳು ಪೆಟ್ರೋಲ್ ಪಂಪ್‌ ಗಳನ್ನು ಸಹ ನಡೆಸುತ್ತಿವೆ.

ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಸಹಕಾರಿ ಕ್ಷೇತ್ರಕ್ಕೆ ಮೀಸಲಾದ ದೇಶದ ಮೊದಲ ವಿಶ್ವವಿದ್ಯಾನಿಲಯ ನಿರ್ಮಾಣವಾಗಲಿದ್ದು, ಪ್ರತಿ ವರ್ಷ ಸುಮಾರು 8 ಲಕ್ಷ ಅಭ್ಯರ್ಥಿಗಳಿಗೆ ಶಿಕ್ಷಣ ನೀಡುವ ಸಾಮರ್ಥ್ಯ ಹೊಂದಲಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಒಂದು ವರ್ಷದೊಳಗೆ ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳನ್ನು ಬಹುತೇಕ ಪ್ರತಿ ಜಿಲ್ಲೆಗಳಲ್ಲಿ ತೆರೆಯಲಾಗುವುದು. ಪ್ರತಿ ವರ್ಷ 8 ಲಕ್ಷ ಜನರು ಡಿಪ್ಲೊಮಾ, ಪದವಿ ಅಥವಾ ಪ್ರಮಾಣಪತ್ರದೊಂದಿಗೆ ಹೊರಬಂದಾಗ, ಸಹಕಾರ ಚಳುವಳಿಗೆ ಹೊಸ ರಕ್ತ ಹರಿಯುತ್ತದೆ ಎಂದು ಅವರು ಹೇಳಿದರು

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+