1,435 ಕೋಟಿ ಮೌಲ್ಯದ ಪ್ಯಾನ್ 2.0 ಯೋಜನೆಗೆ ಸಚಿವ ಸಂಪುಟ ಅನುಮೋದನೆ!

ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಈ ವೇಳೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರು ಪ್ಯಾನ್‌ 2.0 ಯೋಜನೆಗೆ ಅನುಮೋದನೆ ನೀಡಿದ್ರು. ಸುಮಾರು 1,435 ಕೋಟಿ ರುಪಾಯಿ ಮೌಲ್ಯದ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿತು.

ಇನ್ನು ಈ ಯೋಜನೆ ಮೂಲಕ ಪಾನ್‌ ಕಾರ್ಡ್‌ಗಳಿಗೆ ಉಚಿತವಾಗಿ ಕ್ಯೂಆರ್‌ ಕೋಡ್‌ ಅಪಗ್ರೇಡ್‌ ಮಾಡಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ರು.

ಪ್ಯಾನ್ 2.0 ಯೋಜನೆಗೆ ಸಚಿವ ಸಂಪುಟ ಅನುಮೋದನೆ!

ಹಾಗೆ ಅಧಿಕೃತ ಹೇಳಿಕೆಯ ಪ್ರಕಾರ, ಆದಾಯ ತೆರಿಗೆ ಇಲಾಖೆಯ ಪ್ಯಾನ್ 2.0 ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA), ಅನುಮೋದನೆಯನ್ನು ನೀಡಿದೆ.

ಇನ್ನು ಈಯೋಜನೆಗೆ 1,435 ಕೋಟಿ ವೆಚ್ಚವನ್ನ ಹೂಡಿಕೆ ಮಾಡಿ ಮಹತ್ವಾಕಾಂಕ್ಷೆಯ ಯೋಜನೆಯನ್ನ ನಿರ್ಮಿಸಲಾಗುತ್ತಿದೆ. ಅಲ್ಲದೆ ಈಗಾಗಲೇ ಇರುವ ಈ ವ್ಯವಸ್ಥೆಯನ್ನು ಮತ್ತೆ ಅಪ್‌ಡೇಟ್‌ ಮಾಡಲಾಗುವುದು ಹಾಗೆ ಡಿಜಿಟಲೀಕರಣಗೊಳಿಸುವ ಮೂಲಕ ಹೊಸ ರೂಪದಲ್ಲಿ ತರಲಾಗುವುದು. ಇನ್ನು ಇದಕ್ಕಾಗಿ ಏಕಿಕೃತ ಪೋರ್ಟಲ್‌ ಇರುತ್ತದೆ. ಮತ್ತು ಇದು ಸಂಪೂರ್ಣ ಕಾಗದರಹಿತವಾಗಿದ್ದು, ಸಂಪೂರ್ಣ ಆನ್‌ಲೈನ್‌ ಆಗಿರುತ್ತದೆ. ಅಲ್ಲದೆ ಇದರ ಮೂಲಕ ಕುಂದುಕೊರತೆ ಪರಿಹಾರ ವ್ಯವಸ್ಥೇಗೆ ಗಮನಹರಿಸಲಾಗುವುದು ಎಂದು ಕೇಂದ್ರ ಸಚಿವ ವೈಷ್ಣವ್ ಸಚಿವ ಸಂಪುಟದಲ್ಲಿ ಹೇಳಿದ್ರು.

ಸಾಮಾನ್ಯ ವ್ಯಾಪಾರ ಗುರುತಿಸುವಿಕೆಯನ್ನು ನಿರ್ಮಿಸುವ ಸಲುವಾಗಿ ಪ್ಯಾನ್‌ ಟ್ಯಾನ್‌ ಸೇವೆಗಳನ್ನು ಸಂಯೋಂಜಿಸಲಾಗುವುದು, ಅಲ್ಲದೆ ಮುಂಬರುವ ದಿನಗಳಲ್ಲಿ ಇದು ಹೆಚ್ಚುಕಾಲ ಬೇಡಿಕೆಯಲ್ಲಿರುತ್ತದೆ. ಗ್ರಾಹಕರು ನೀಡುವ ಮಾಹಿತಿಯನ್ನ ಸುರಕ್ಷಿತವಾಗಿರಿಸುವ ಸಲುವಾಗಿ, ಪ್ಯಾನ್ ಮಾಹಿತಿಯನ್ನು ಬಳಸುವ ಎಲ್ಲಾ ಕೇಂದ್ರಗಳಿಗೆ ಪ್ಯಾನ್ ಡೇಟಾ ವಾಲ್ಟ್ ವ್ಯವಸ್ಥೆಯನ್ನು ಕಡ್ಡಾಯವಾಗಿ ನೀಡಲಾಗುವುದು ಎಂದು ಕೇಂದ್ರ ಸಚಿವ ಹೇಳಿದರು.

ಪ್ಯಾನ್ 2.0 ಯೋಜನೆ ಎಂದರೇನು?

PAN 2.0 ಯೋಜನೆಯು ತೆರಿಗೆದಾರರ ವರ್ಧಿತ ಡಿಜಿಟಲ್ ಅನುಭವಕ್ಕಾಗಿ PAN/TAN ಸೇವೆಗಳ ತಂತ್ರಜ್ಞಾನ-ಚಾಲಿತ ರೂಪಾಂತರದ ಮೂಲಕ ತೆರಿಗೆದಾರರ ನೋಂದಣಿ ಸೇವೆಗಳ ವ್ಯವಹಾರ ಪ್ರಕ್ರಿಯೆಗಳನ್ನು ಮರು-ಇಂಜಿನಿಯರಿಂಗ್ ಮಾಡಲು ಇ-ಆಡಳಿತ ಯೋಜನೆಯಾಗಿದೆ.

ಇದು ಪ್ರಸ್ತುತ PAN/TAN 1.0 ಪರಿಸರ ವ್ಯವಸ್ಥೆಯ ಅಪ್‌ಗ್ರೇಡ್ ಆಗಿದ್ದು, CCEA ಪ್ರಕಾರ, ಕೋರ್ ಮತ್ತು ನಾನ್-ಕೋರ್ PAN/TAN ಚಟುವಟಿಕೆಗಳು ಹಾಗೂ PAN ಮೌಲ್ಯೀಕರಣ ಸೇವೆಯನ್ನು ಏಕೀಕರಿಸುತ್ತದೆ.

ಈ ಯೋಜನೆಯು ತೆರಿಗೆದಾರರ ನೋಂದಣಿ ಸೇವೆಗಳ ತಂತ್ರಜ್ಞಾನ ಚಾಲಿತ ರೂಪಾಂತರವನ್ನು ಸಕ್ರೀಯಗೊಳಿಸುತ್ತದೆ ಇದರ ಜೊತೆಗೆ ಗಮನಾರ್ಹ ಪ್ರಯೋಜನಗಳನ್ನು ಕೂಡ ಇದು ಹೊಂದಿದೆ:

1. ಸುಧಾರಿತ ಗುಣಮಟ್ಟದ ಜೊತೆಗೆ ಪ್ರವೇಶದ ಸುಲಭ ಮತ್ತು ವೇಗದ ಸೇವೆ ವಿತರಣೆ
2. ಸತ್ಯದ ಏಕ ಮೂಲ ಮತ್ತು ಡೇಟಾ ಸ್ಥಿರತೆ
3. ಪರಿಸರ ಸ್ನೇಹಿ ಪ್ರಕ್ರಿಯೆಗಳು ಮತ್ತು ವೆಚ್ಚ ಆಪ್ಟಿಮೈಸೇಶನ್
4. ಹೆಚ್ಚಿನ ಚುರುಕುತನಕ್ಕಾಗಿ ಮೂಲಭೂತ ಸೌಕರ್ಯಗಳ ಭದ್ರತೆ ಮತ್ತು ಆಪ್ಟಿಮೈಸೇಶನ್

ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರು ಸ78 ಕೋಟಿ ಪ್ಯಾನ್‌ ಕಾರ್ಡ್‌ಗಳನ್ನ ಜನರಿಗೆ ಈಗಾಗಲೇ ವಿತರಿಸಲಾಗಿದೆ ಎಂದರು. ಅವರಲ್ಲಿ 98% ರಷ್ಟು ಜನರು ಒಳಗೊಂಡಿದ್ದಾರೆ ಎಂದರು. ಹಾಗೆ ಈ ಹೊಸ ಯೋಜನೆಯು ಈಗಾಗಲೇ ಅಸ್ತಿತ್ವದಲ್ಲಿರುವ ತೆರಿಗೆದಾರರು ಬಳಸುವ ವ್ಯವಸ್ಥೆಯನ್ನು ಅಪ್‌ಗ್ರೆಡ್‌ ಮಾಡುತ್ತದೆ ಎಂದರು. ಜೊತೆಗೆ ಈ ಯೋಜನೆಯು ಎಲ್ಲಾ ವ್ಯವಹಾರ-ಸಂಬಂಧಿತ ಎಲ್ಲಾ ಚಟುವಟಿಕೆಗಳಿಗೆ ಒಂದೇ ಪೋರ್ಟಲ್ ಅನ್ನು ಒಳಗೊಂಡಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+