2021-22ರಲ್ಲಿ ದೆಹಲಿಯಲ್ಲಿ ಅತಿಹೆಚ್ಚು ಸದ್ದು ಮಾಡಿದ ಸುದ್ದಿ ಎಂದರೆ, ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಸುದ್ದಿ.. ಇದೀಗ ಈ ಸುದ್ದಿಯಲ್ಲಿ ಬೆಚ್ಚಿ ಬೀಳಿಸುವ ಸಂಗತಿಯೊಂದು ಹೊರಗೆ ಬಿದ್ದಿದೆ ಅದೇನೆಂದರೆ, CAG ವರದಿ ಮಾಡಿದ್ದು ದೆಹಲಿಗೆ ಸುಮಾರು ₹2,000 ಕೋಟಿ ನಷ್ಟವಾಗಿದೆ ಎಂಬುದು. ಆಗ ದೆಹಲಿಯಲ್ಲಿ ಆಡಳಿತ ನಡೆಸುತ್ತಿದ್ದ ಆಮ್ ಆದ್ಮಿ ಪಾರ್ಟಿ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಅಂದರೆ ಹಿಂದಿನ ಆಡಳಿತದಲ್ಲಿದ್ದ ಆಪ್ ಪಾರ್ಟಿಯ ದೋಷಗಳಿಂದಲೇ ಇಷ್ಟೆಲ್ಲಾ ನಷ್ಟವಾಗಿದೆ ಎಂದು, ಈ ವರದಿ ಸಾರಿ ಸಾರಿ ಹೇಳುತ್ತಿದೆ.

ಇನ್ನು ಈಗ ಬಹಿರಂಗವಾಗಿರುವ ಈ ವರದಿ ಎಎಪಿ ಸರ್ಕಾರದ 14 ಕಾರ್ಯಕ್ಷಮತಾ ವಿಮರ್ಶೆಗಳಲ್ಲಿ ಒಂದಾಗಿದೆ. ಹಾಗೂ ಗಂಭೀರ ವೈಫಲ್ಯಗಳು, ವಿಧಾನಾತ್ಮಕ ಉಲ್ಲಂಘನೆಗಳು ಮತ್ತು ತಜ್ಞರ ಶಿಫಾರಸುಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ.
ಆದಾಯದಲ್ಲಿ ನಷ್ಟ ಉಂಟಾಗಿದ್ದೇಗೆ..?
ಕಾನೂನಿನ ಅಡಿಯಲ್ಲಿ ಗುರುತಿಸಲಾದ ಪ್ರದೇಶದಲ್ಲಿ ಮದ್ಯದಂಗಡಿಗಳನ್ನು ತೆರೆಯಲು, ಸಕಾಲಿಕ ಅನುಮತಿ ಪಡೆಯಲು ವಿಫಲಗೊಂಡಿದ್ದರಿಂದ ಸಿಎಜಿ ವರದಿಯು 941.53 ಕೋಟಿ ರೂ.ಗಳ ಆದಾಯ ನಷ್ಟವನ್ನು ಅಂದಾಜಿಸಿದೆ. ಇದು ದೆಹಲಿ ಸರ್ಕಾರದ ಗಳಿಕೆಯ ಮೇಲೆ ಗಮನಾರ್ಹವಾಗಿ ಆರ್ಥಿಕ ಪರಿಣಾಮ ಬೀರಿತು ಎನ್ನಲಾಗಿದೆ. ಅಲ್ಲದೇ ಹೆಚ್ಚುವರಿಯಾಗಿ ಲೈಸೆನ್ಸ್‌ಗಳು ಶರಣಾಗತಿಯಾಗಿದ್ದರಿಂದ ಮತ್ತು ಮದ್ಯ ವಲಯಗಳನ್ನು ಮರು ಟೆಂಡರ್ ಮಾಡುವಲ್ಲಿ ಇಲಾಖೆ ವಿಫಲವಾದ ಕಾರಣ ಅಬಕಾರಿ ಇಲಾಖೆಗೆ 890.15 ಕೋಟಿ ರೂ. ನಷ್ಟ ನೋಡಿತು ಎನ್ನಲಾಗಿದೆ.
ಇನ್ನು ಕೊರೊನಾ ನಿರ್ಬಂಧಗಳನ್ನು ಉಲ್ಲೇಖಿಸಿ ಲೈಸೆನ್ಸ್ ಹೊಂದಿರುವವರಿಗೆ ನೀಡಲಾದ, 144 ಕೋಟಿ ರೂಪಾಯಿಗಳನ್ನು ಮನ್ನ ಮಾಡಿದ್ದು ಕೂಡ ನಷ್ಟಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಅಬಕಾರಿ ಅನುಷ್ಠಾನದಲ್ಲಾದ ಉಲ್ಲಂಘನೆಗಳು:
2021ರಲ್ಲಿ ನಿಯಮಗಳಿಗೆ ಅನುಸಾರವಾಗಿರದ ಪ್ರದೇಶಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಅದರಂತೆ ಅಂತಹ ಪ್ರದೇಶಗಳಲ್ಲಿ ಮದ್ಯದಂಗಡಿಗಳನ್ನು ಸ್ಥಾಪಿಸಬಾರದು ಎಂದು ಟೆಂಡರ್ ದಾಖಲೆಗಳು ಸ್ಪಷ್ಟವಾಗಿ ಹೇಳಿದ್ದವು. ಆದರೂ ಅಂತಹ ವಲಯದ ಸಮಸ್ಯೆಗಳನ್ನು ಪರಿಹರಿಸುವ ಮೊದಲು ಮದ್ಯದಂಗಡಿ ತೆರೆಯಲು ಲೈಸೆನ್ಸ್ ನೀಡಲಾಯಿತು.
ಅಲ್ಲದೇ 2021ರ ನವೆಂಬರ್ 16ರಲ್ಲಿ ಅನುರೂಪವಲ್ಲದ ವಲಯಗಳಲ್ಲಿ ಮದ್ಯ ಮಾರಾಟ ಮಾಡಲು, ದೆಹಲಿ ಅಭಿವೃದ್ಧಿ ಪ್ರಾಧಿಕಾರ ಅನುಮತಿಸಲಿಲ್ಲ. ಇದರಿಂದ ಬೇಸತ್ತ ಪರವಾನಗಿದಾರರು ದೆಹಲಿ ಕೋರ್ಟ್ ಮೆಟ್ಟಿಲೇರುವಂತಾಯಿತು. ನಂತರ ಅದು ತಿಂಗಳಿಗೆ 114.50 ಕೋಟಿ ರೂ. ಪರವಾನಗಿ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಿತು. ಇದು ಕೂಡ ಒಂದು ದೊಡ್ಡ ನಷ್ಟವಾಯಿತು.
ಅಬಕಾರಿ ನೀತಿಯ ವೈಫಲ್ಯಗಳೇನು..?
- ಆಗಸ್ಟ್ 2022ರಲ್ಲಿ ಪಾಲಿಸಿ ಅವಧಿ ಮುಗಿಯುವ ಮುನ್ನೆವೇ 19 ವಲಯ ಪರವಾನಗಿದಾರರು ತಮ್ಮ ಲೈಸೆನ್ಸ್ ಒಪ್ಪಿಸಿದ್ದಾರೆ.
- ಮರು ಟೆಂಡರ್ ಕರೆಯದೇ ಉಳಿದ ಕಾರಣ 19 ವಲಯಗಳಿಂದ ಸಂಪೂರ್ಣ ಆದಾಯ ನಷ್ಟ.
- ಹಣಕಾಸು ಇಲಾಖೆಯ ಶಿಫಾರಸಿನ ಹೊರತಾಗಿಯೂ ಪರವಾನಗಿ ಶುಲ್ಕ ವಿನಾಯಿತಿ ನೀಡಿದ್ದು.
- ಕ್ಯಾಬಿನೆಟ್ ಅಥವಾ ಲೆಫ್ಟಿನೆಂಟ್ ಗವರ್ನರ್ ಅನುಮೋದನೆಯಿಲ್ಲದೆ ಆರ್ಥಿಕ ಪರಿಣಾಮ ಬೀರುವ ನಿರ್ಧಾರಗಳನ್ನು ತೆಗದುಕೊಂಡಿದ್ದು.
ಇನ್ನು ಹಿಂದಿನ ದೆಹಲಿ ಸರ್ಕಾರದ ವಿರುದ್ಧ ಇದೇ ವಿಚಾರವಾಗಿ ಬಿಜೆಪಿಯು ಸಾಕಷ್ಟು ಬಾರಿ ಕೆಂಡ ಕಾರಿತ್ತು. ಅಬಕಾರಿ ನೀತಿಯಲ್ಲಿ ಹಗರಣ ನಡೆದಿದೆ ಎಂಬುದನ್ನು ಆರೋಪಿಸಿ, ಸಾಕಷ್ಟು ಬಾರಿ ಪ್ರತಿಭಟನೆಗಳನ್ನು ಮಾಡಿತ್ತು. ಜೊತೆಗೆ ಸ್ಟಿಂಗ್ ಆಪರೇಷನ್‌ಗಳೂ ನಡೆದವು. ಇದೀಗ ಸಿಎಜಿ ವರದಿಯಲ್ಲಿ ಆಪ್ ವೈಫಲ್ಯಗಳು ಕೇಳಿ ಬಂದಿದ್ದು, ಬಿಜೆಪಿ ಆರೋಪಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ಈ ಹಗರಣದ ಆರೋಪ ದೆಹಲಿಯಲ್ಲಿ ಆಪ್ ಪಕ್ಷಕ್ಕೆ ಮಸಿ ಬಳಿದಂತಾಗಿದ್ದು, ವರದಿಯು ಎತ್ತಿ ತೋರಿಸಿರುವ ವೈಫಲ್ಯಗಳು ಹೇಗೆ ಪ್ರಭಾವಿತಗೊಂಡು ಆಪ್‌ಗೆ ಸಂಕಷ್ಟ ತಂದೊಡ್ಡುತ್ತೋ ತಿಳಿಯದು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications