ಭಾರತ ಈಗಾಗಲೇ ಯುರೋಪಿಯನ್ ಒಕ್ಕೂಟ, ಯುಎಸ್ ಜೊತೆಗೆ ವ್ಯಾಪಾರ ಒಪ್ಪಂದಗಳನನು ಮಾಡಿಕೊಂಡಿದೆ. ಇದೀಗ ಈ ವಾರ ಮತ್ತೊದು ದ್ವಿಪಕ್ಷೀಯ ಒಪ್ಪಂದಕ್ಕೆ ಭಾರತ ಸಾಕ್ಷಿಯಾಗಲು ಸಜ್ಜಾಗಿದೆ. ಈ ಹಿನ್ನೆಲೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ (Mark Carney) ಈ ವಾರ ಭಾರತಕ್ಕೆ ಭೇಟಿ ನೀಡಲಿದ್ದು, ಇದರು ಎರಡು ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಅಲ್ಲದೇ ಹಲವು ಒಪ್ಪಂದಗಳ ಮೂಲಕ ಆರ್ಥಿಕತೆಯನ್ನು ವಿಸ್ತರಿಸುವ ಮಹತ್ವದ ಹೆಜ್ಜೆಯಾಗಿದೆ.

ಭಾರತಕ್ಕೆ ಕೆನಡಾ ಪ್ರಧಾನಿ ಆಗಮನ
2023 ರ ನಿಜ್ಜಾರ್ ಹತ್ಯೆಯ ವಿವಾದ ನಂತರ ಇದೀಗ ಕೆನಡಾ ಪ್ರಧಾನಿ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿದ್ದಾರೆ. ಕೆನಡಾ ಸರ್ಕಾರದ ಅಧಿಕೃತ ಘೋಷಣೆಯ ಪ್ರಕಾರ, ಕಾರ್ನಿ ಅವರು ಫೆಬ್ರವರಿ 26 ರಿಂದ ಮಾರ್ಚ್ 7 ರವರೆಗೆ ಭಾರತ, ಆಸ್ಟ್ರೇಲಿಯಾ, ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಇದರಲ್ಲಿ ಭಾರತ ಮೊದಲ ಭೇಟಿಯ ದೇಶವಾಗಲಿದ್ದು, ಮುಂಬೈನಲ್ಲಿ ಆರಂಭವಾಗಿ ನವದೆಹಲಿಯಲ್ಲಿ ಮುಗಿಯಲಿದೆ ಎಂದು ವರದಿಯಾಗಿದೆ.
ಕೆನಡಾದ ಪ್ರಧಾನಮಂತ್ರಿ ಮಾರ್ಕ್ ಕಾರ್ನಿ ಫೆಬ್ರವರಿ 26 ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಈ ವೇಳೆ ವ್ಯಾಪಾರ, ರಕ್ಷಣೆ ಮತ್ತು ತಂತ್ರಜ್ಞಾನ ವಲಯಗಳನ್ನು ಕೇಂದ್ರೀಕರಿಸಲಿದ್ದು, ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಇತ್ತೀಚಿನ ರಾಜತಾಂತ್ರಿಕ ಬಿಕ್ಕಟ್ಟಿನ ನಂತರ, ಈ ಭೇಟಿಯು ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ಬಲಪಡಿಸಲು ಮತ್ತು ಆರ್ಥಿಕ ಸಂಬಂಧಗಳನ್ನು ಉತ್ತೇಜಿಸುವ ಗುರಿ ಹೊಂದಿದೆ.
ಪ್ರಧಾನಿ ಮೋದಿ ಭೇಟಿ ಮಾಡಲಿರುವ ಕೆನಡಾ ಪ್ರಧಾನಿ
ಮಾರ್ಕ್ ಕಾರ್ನಿ ಅವರ ಈ ಭಾರತ ಭೇಟಿಯು ಫೆಬ್ರವರಿ 26 ರಂದು ನಿಗದಿಯಾಗಿದ್ದು, ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ವಿಸ್ತರಿಸುವ ಹಾಗೂ ರಕ್ಷಣೆ, ಇಂಧನ, ಮತ್ತು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕುವ ಗುರಿ ಹೊಂದಿದೆ. ಕೆನಡಾದ ಪ್ರಧಾನಿ ಮೊದಲು ಮುಂಬೈಗೆ ಭೇಟಿ ನೀಡಲಿದ್ದು, ನಂತರ ನವದೆಹಲಿಗೆ ತೆರಳಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಲಿದ್ದಾರೆ.
ತಮ್ಮ ಭೇಟಿಯ ಅವಧಿಯಲ್ಲಿ, ಪ್ರಧಾನಿ ಕಾರ್ನಿ ಪ್ರಮುಖ ವ್ಯಾಪಾರ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ. ಕೆನಡಾದಲ್ಲಿ ಹೊಸ ಹೂಡಿಕೆ ಅವಕಾಶಗಳನ್ನು ಗುರುತಿಸುವುದು ಮತ್ತು ಎರಡೂ ರಾಷ್ಟ್ರಗಳ ಉದ್ಯಮಗಳ ನಡುವಿನ ಅಭಿವೃದ್ಧಿಗೆ ಈ ಭೇಟಿ ಸಾಕ್ಷಿಯಾಗಲಿದೆ ಎನ್ನಲಾಗಿದೆ.
ಅಲ್ಲದೇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (Comprehensive Economic Partnership Agreement-CEPA) ಮೇಲಿನ ಚರ್ಚೆಗಳು, 2030ರ ವೇಳೆಗೆ ಎರಡು ದೇಶಗಳ ನಡುವಿನ ವ್ಯಾಪಾರವನ್ನು ಯುಎಸ್‌ಡಿ 70 ಬಿಲಿಯನ್‌ಗೆ ಹೆಚ್ಚಿಸುವ ಗುರಿ ಹೊಂದಿದೆ. ಅಷ್ಟೇ ಅಲ್ಲದೇ ಯುರೇನಿಯಂ, ಕಚ್ಚಾ ತೈಲ, ನ್ಯೂಕ್ಲಿಯರ್ ಶಕ್ತಿ ಕ್ಷೇತ್ರದಲ್ಲಿ ಒಪ್ಪಂದ ಮಾಡಿಕೊಳ್ಳಲಿದೆ.
ಅದೇ ರೀತಿ ತಂತ್ರಜ್ಞಾನ ಮತ್ತು ಎಐ ಕ್ಷೇತ್ರದಲ್ಲೂ ಒಪ್ಪಂದ ಮಾಡಿಕೊಳ್ಳಲಿದೆ. ಜೊತೆಗೆ ರಕ್ಷಣಾ ಸಹಯೋಗ, ಕ್ರಿಟಿಕಲ್ ಮಿನರಲ್ಸ್, ಆಹಾರ ಭದ್ರತೆ ವಿಷಯದಲ್ಲೂ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications