ಭಾರತದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ಇದುವರೆಗೂ ತನ್ನ ಗ್ರಾಹಕರಿಗೆ ಅತ್ಯುತ್ತಮವಾದ ಸೇವೆ ಒದಗಿಸಿದೆ. ಈಗ ಈ ಬ್ಯಾಕ್ ತನ್ನ ಬಂಡವಾಳ ವೃದ್ಧಿಸಲು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟುಕೊಂಡು ಮುಂದೆ ಬಂದಿದೆ. ಅಂದರೆ ಕೆನರಾ ಬ್ಯಾಂಕ್ ತನ್ನ ಬಂಡವಾಳ ವೃದ್ಧಿಸಲು ವೃದ್ಧಿಸಲು 4 ಸಾವಿರ ಕೋಟಿ ರೂಪಾಯಿ ಸಂಗ್ರಹಿಸಲು ಯೋಜನೆ ರೂಪಿಸಿದೆ. ಇದರ ಅನುಸಾರವಾಗಿ ಟೈರ್ 2 ಬಾಂಡ್‌ಗಳ ವಿತರಣೆಗೆ ಸಂಬಂಧಿಸಿದ ಪ್ರಸ್ತಾವನೆಗೆ ಬ್ಯಾಂಕ್‌ನ ಆಡಳಿತ ಮಂಡಳಿ ಅನುಮೋದನೆ ನೀಡಿದೆ.

ಕೆನರಾ ಬ್ಯಾಂಕ್ 10,000 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು ಇದರ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ. ಅಲ್ಲದೇ ಇದು 50,000 ಕ್ಕೂ ಹೆಚ್ಚು ATM ಕೇಂದ್ರಗಳು ಹಾಗೂ 100 ಕ್ಕೂ ಹೆಚ್ಚು ದೇಶ ಮತ್ತು ವಿದೇಶೀಯ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಇದು ವ್ಯಕ್ತಿಗತ ಬ್ಯಾಂಕಿಂಗ್, ಕಾರ್ಪೊರೇಟ್ ಬ್ಯಾಂಕಿಂಗ್, ಎನ್‌ಆರ್‌ಐ ಸೇವೆಗಳು, ಡಿಜಿಟಲ್ ಬ್ಯಾಂಕಿಂಗ್, ಮ್ಯೂಚುವಲ್ ಫಂಡ್ಸ್, ಸಾಲ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಈಗ ಇದರ ವ್ಯಾಪ್ತಿಯನ್ನು ಹೆಚ್ಚಿಸಲು ದೊಡ್ಡ ಮೊತ್ತದ ಬಂಡವಾಳವನ್ನು ಹೊತ್ತು ತರುತ್ತಿದೆ.
ಬಂಡವಾಳ ವ್ಯಾಪ್ತಿಯನ್ನು ಹೆಚ್ಚಿಸಲು ನಾಲ್ಕು ಸಾವಿರ ಕೋಟಿ ಹೂಡಿಕೆ ಮಾಡಲು ಸಜ್ಜಾಗಿರುವ ಕೆನರಾ ಬ್ಯಾಂಕ್, ಟೈರ್ 2 ಬಾಂಡ್‌ಗಳ ವಿತರಣೆಗೆ ಸಂಬಂಧಿಸಿದ ಪ್ರಸ್ತಾವನೆಗೆ ಬ್ಯಾಂಕ್‌ನ ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಹಾಗಂದರೇನು ಎಂಬುದನ್ನು ಇಲ್ಲಿ ತಿಳಿಯಿರಿ.
ಬಂಡವಾಳ ಸಂಗ್ರಹದ ಹಿಂದಿನ ಕಾರಣ:
ಇನ್ನು ಇತ್ತೀಚೆಗೆ ಕೆನರಾ ಬ್ಯಾಂಕ್ ಟೈರ್ 1 ಬಾಂಡ್‌ಗಳ ಮೂಲಕ 2024ರ ಆಗಸ್ಟ್‌ನಲ್ಲಿ 3 ಸಾವಿರ ಕೋಟಿ ರೂಪಾಯಿ ಬಂಡವಾಳವನ್ನು ಸಂಗ್ರಹಿಸಿತ್ತು. ಈಗ ಈ ಬಾಂಡ್‌ಗಳ ಮೂಲಕ ಬ್ಯಾಂಕ್ ತನ್ನ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಟೈರ್ 1 ಬಾಂಡ್‌ಗಳ ಪ್ರಮುಖ ಗುರಿ ಮೂಲಭೂತ ಬಂಡವಾಳವನ್ನು ಬಲಪಡಿಸುವುದಾಗಿದೆ. ಅಲ್ಲದೇ ಟೈರ್ 2 ಬಾಂಡ್‌ಗಳು ಪೂರಕ ಬಂಡವಾಳವನ್ನು ಒದಗಿಸುತ್ತವೆ.
ಟೈರ್ 2 ಬಾಂಡ್‌ಗಳ ವಿಶೇಷತೆ ಏನು..?
ಟೈರ್ 2 ಬಾಂಡ್ ಎಂದರೆ ಅದು ಸಾಮಾನ್ಯವಾಗಿ ಬ್ಯಾಂಕುಗಳ, ಪೂರಕ ಬಂಡವಾಳವನ್ನು ಸಂಗ್ರಹಿಸಲು ಬಳಕೆಯಾಗುವ ಒಂದು ಆರ್ಥಿಕ ಸಾಧನ.. ಅಂದರೆ ಈ ಟೈರ್ 2 ಬಾಂಡ್‌ಗಳ ಅವಧಿ 10 ವರ್ಷಗಳಷ್ಟಾಗಿರುತ್ತದೆ. 5 ವರ್ಷಗಳ ಕಾಲ್ ಆಯ್ಕೆ ಹೊಂದಿದೆ. ಅಂದರೆ 5 ವರ್ಷಗಳ ಬಳಿಕ ಬ್ಯಾಂಕ್‌ಗೆ ಬಾಂಡ್ ಹಂಚಿಕೆ ಮರುಪಾವತಿ ಮಾಡುವ ಅವಕಾಶವಿರುತ್ತದೆ. ಬಾಂಡ್ ಹೋಲ್ಡರ್‌ಗಳು ತಮ್ಮ ಹೂಡಿಕೆಗೆ ಉತ್ತಮ ಲಾಭಗಳಿಸುವ ನಿರೀಕ್ಷೆಯಲ್ಲಿ ಇದನ್ನು ತೆಗೆದುಕೊಳ್ಳಬಹುದು. ಟೈರ್-II ಬಾಂಡ್‌ಗಳು ಮುಖ್ಯವಾಗಿ ಬ್ಯಾಂಕ್‌ನ ಒಟ್ಟಾರೆ ಬಂಡವಾಳ ಸಾಕ್ಷಮತೆ ಅನುಪಾತ ಹೆಚ್ಚಿಸಲು ಸಹಾಯ ಮಾಡುತ್ತವೆ. ಇದು ಬ್ಯಾಂಕ್‌ಗೆ ನಿರಂತರವಾಗಿ ಸಾಲ ನೀಡುವ ಸಾಮರ್ಥ್ಯ ಹೆಚ್ಚಿಸುವುದರ ಜೊತೆಗೆ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ.
Basel III ಅನುಸಾರ ಬಾಂಡ್‌ಗಳ ಉದ್ದೇಶ:
Basel III ಮಾನದಂಡಗಳನ್ನು ಅನುಸರಿಸುವ ಬಾಂಡ್‌ಗಳು ಬ್ಯಾಂಕಿನ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಮತ್ತು ಭವಿಷ್ಯದ ಆರ್ಥಿಕ ಒತ್ತಡಗಳನ್ನು ಎದುರಿಸಲು ಕೂಡ ಪೂರಕವಾಗಿರುತ್ತವೆ. ಈ Basel III ಬಾಂಡ್‌ಗಳ ಮೂಲಕ, ಬ್ಯಾಂಕ್‌ಗಳಿಗೆ ಸಾಕಷ್ಟು ಬಂಡವಾಳ ಮೀಸಲಿರಿಸಲು ಸಾಧ್ಯವಾಗುತ್ತದೆ. ಅಲ್ಲದೇ ಇದರಿಂದ ಬ್ಯಾಂಕ್ ಹೂಡಿಕೆದಾರರು ಮತ್ತು ಠೇವಣಿದಾರರಿಗೆ ಹೆಚ್ಚಿನ ಭದ್ರತೆ ಒದಗಿಸಬಹುದು.
ಕೆನರಾ ಬ್ಯಾಂಕ್ ಲಾಭದಲ್ಲಿ 12.25% ಏರಿಕೆ:
ಇನ್ನು ಕೆನರಾ ಬ್ಯಾಂಕ್ ತನ್ನ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ 12.25% ಲಾಭ ಹೆಚ್ಚಳವನ್ನು ದಾಖಲಿಸಿದೆ. ಬ್ಯಾಂಕಿನ ಸ್ವತಂತ್ರ ಶುದ್ಧ ಲಾಭ ರೂ. 4,104.20 ಕೋಟಿ ತಲುಪಿದೆ ಎಂಬುದನ್ನು ಗಮನಿಸಬಹುದಾಗಿದೆ. ಈ ಅವಧಿಯಲ್ಲಿ ಬ್ಯಾಂಕಿನ ಒಟ್ಟು ಆದಾಯ 36,113.77 ಕೋಟಿ ರೂಪಾಯಿ ಆಗಿದ್ದು, ಕಳೆದ ವರ್ಷ ಇದೇ ಅವಧಿಯ ಆದಾಯ 32,333.93 ಕೋಟಿ ರೂಪಾಯಿಂದ 12% ಹೆಚ್ಚಾಗಿದೆ.
ಬ್ಯಾಂಕಿನ ಬಡ್ಡಿ ಆದಾಯ ನೋಡುವುದಾದರೆ 28,038.83 ಕೋಟಿ ರೂ. ಆದಾಯದಿಂದ, 30,311.61 ಕೋಟಿ ರೂ.ಗೆ ಏರಿಕೆಯಾಗಿದೆ. ಆದರೆ ನಿವ್ವಳ ಬಡ್ಡಿ ಆದಾಯ ಬ್ಯಾಂಕ್ ಪಡೆದ ಬಡ್ಡಿ ಹಾಗೂ ನೀಡಿದ ಬಡ್ಡಿಯ ನಡುವಿನ ವ್ಯತ್ಯಾಸ, 2.85% ಕಡಿಮೆಯಾಗಿದೆ. ಇದರಿಂದ 9,417 ಕೋಟಿ ರೂಪಾಯಿಯಿಂದ 9,148.57 ಕೋಟಿ ರೂಪಾಯಿಗೆ ಇಳಿದಿದೆ. ಇದು ಬ್ಯಾಂಕಿನ ಲಾಭದಾರಿತ್ವದಲ್ಲಿ ಏರಿಕೆ ತೋರಿದರೂ, ಆದಾಯ ಮತ್ತು ವೆಚ್ಚದ ಬದಲಾವಣೆಗಳ ಪರಿಣಾಮವಾಗಿ ನಿವ್ವಳ ಬಡ್ಡಿ ಆದಾಯದಲ್ಲಿ ಸ್ವಲ್ಪ ಕುಸಿತವಿರುವುದನ್ನು ಸೂಚಿಸುತ್ತದೆ.
ಇನ್ನು ಕೆನರಾ ಬ್ಯಾಂಕ್ ಈ ಮಾರ್ಗಗಳ ಮೂಲಕ ಬಂಡವಾಳ ಸಂಗ್ರಹಣೆಗೆ ಮುಂದಾಗಿದೆ. ಇದು ತನ್ನ ಹಣಕಾಸು ಸ್ಥಿತಿಯನ್ನು ಮತ್ತಷ್ಟು ಬಲಪಡಿಸಲು ಮತ್ತು ಭವಿಷ್ಯದ ಬೆಳವಣಿಗೆ ಮಾರ್ಗವನ್ನು ಸುಸ್ಥಿರವಾಗಿ ಮುಂದುವರಿಸಲು ಉದ್ದೇಶಿಸಿದೆ.


Click it and Unblock the Notifications