ಬೆಂಗಳೂರು, ಮಾರ್ಚ್ 20: ಕಾರ್..ಕಾರ್..ಕಾರ್..ಎಲ್ನೋಡಿ ಕಾರ್ ಎಂಬಂತಾಗಿದೆ ಸದ್ಯದ ಪರಿಸ್ಥಿತಿ. ಎಲ್ಲಿ ನೋಡಿದ್ರೂ ಕಾರ್‌ಗಳು. ಈ ಮೊದಲೆಲ್ಲಾ ಕಾರ್‌ಗಳು ಅಂದ್ರೆ ಅದು ಕೇವಲ ಶ್ರೀಮಂತರ ಪಾಲಿನ ಗಂಟಾಗಿತ್ತು. ಮಧ್ಯಮ ವರ್ಗ ಮತ್ತು ಬಡವರು ಕಾರ್ ಕೊಂಡುಕೊಳ್ಳುವ ಯೋನೆ ಮಾಡೋದು ಕೂಡ ಕಷ್ಟವಾಗಿತ್ತು.
ಯಾಕಂದ್ರೆ ಯಾರ ಬಳಿಯೂ ಲಕ್ಷಾಂತರ ರೂ ಬಂಡವಾಳ ಇರುತ್ತಿರಲಿಲ್ಲ. ಆದ್ರೆ ಈಗ ಕಾಲ ಬದಲಾಗಿದೆ. EMI ಪದ್ಧತಿ ಜಾರಿಗೆ ಬಂದಿದ್ದೇ ಬಂದಿದ್ದು ನೋಡಿ, ಯಾರು ಬೇಕಾದ್ರೂ ಕಾರ್ ಕೊಂಡುಕೊಳ್ಳಬಹುದು ಎಂಬ ಸನ್ನಿವೇಷ ಸೃಷ್ಟಿಯಾಗಿದೆ.

80 ಸಾವಿರದಿಂದ 1 ಲಕ್ಷದ ವೆರಗೆ ಮಿನಿಮಮ್ ಡೌನ್ಪೇಮೆಂಟ್ ಮಾಡಿದ್ರೆ ಸಾಕು , ಮಿಕ್ಕ ಹಣ ಬ್ಯಾಂಕ್ನಿಂದ ಕಾರ್ ಲೋನ್ ರೂಪದಲ್ಲಿ ಸಿಗುತ್ತದೆ. 3 ವರ್ಷಕ್ಕೋ 5 ರ್ಷಕ್ಕೋ ಅಥವಾ 7 ವರ್ಷಕ್ಕೋ EMI ಹಾಕಿಸಿಕೊಂಡು ತಿಂಗಳಿಗೆ ಇಂತಿಷ್ಟು ಅಂತ ಕಟ್ಟಿಕೊಂಡು ಹೋಗಬಹುದು. ಹೀಗಾಗಿ ಈಗ ಸಾಧಾರಣ ಮಧ್ಯಮ ಕುಟುಂಬದವರು ಕೂಡ ಕಾರ್ ಕೊಳ್ಳುವ ಕನಸನ್ನ ನೆನಸಾಗಿಸಿಕೊಳ್ತಿದ್ದಾರೆ. ಆದ್ರೆ ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಇನ್ಮುಂದೆ ಕೆಲಚರಿಗೆ ಈ ರೀತಿ ಕಾರ್ ಲೋನ್ ಸಿಗೋದು ಕಷ್ಟವಾಗಬಹುದು.
ಏನಿದು ಸಿಬಿಲ್ ಸ್ಕೋರ್?
ನಿಮಗೆ ಬ್ಯಾಂಕ್ನಿಂದ ಯಾವುದೇ ಲೋನ್ ಬೇಕು ಅಂದ್ರೂ ಕೂಡ ನಿಮ್ಮ ಸಿಬಿಲ್ ಸ್ಕೋರ್ ಬಹಳ ಮುಖ್ಯವಾಗುತ್ತೆ. ಈ ಸಿಬಿಲ್ ಸ್ಕೋರ್ ಅಂದ್ರೆ, ಸಿಬಿಲ್ ಎಂಬ ಒಂದು ಖಾಸಗಿ ಕಂಪೆನಿ ನಿಮ್ಮ ಇಡೀ ಹಣಕಾಸಿನ ವ್ಯವಹಾರವನ್ನ ಗಮನದಲ್ಲಿಟ್ಟುಕೊಂಡು ನಿಮಗೆ ನೀಡುವ ಅಂಕ. ಈ ಹಿಂದೆ ಯಾವುದಾದ್ರೂ ಲೋನ್ ತೆಗೆದುಕೊಂಡಿದ್ದೀರಾ ?? ಅದನ್ನು ಸರಿಯಾಗಿ ಮರುಪಾವತಿ ಮಾಡಿದ್ದೀರೋ ಇಲ್ಲವೋ ? ಸಮಅಯಕ್ಕೆ ಸರಿಯಾಗಿ EMI ಹೊಂದಿಸಿದ್ದೀರೋ ಇಲ್ವೋ ಇದೆಲ್ಲಾ ಡೇಟಾಗಳನ್ನೂ ಗಮನಿಸಿ 300 ರಿಂದ 900ರವರೆಗೆ ನಿಮ್ಮ ಪ್ರೊಫೈಲ್ ಗೆ ಅಂಕವನ್ನ ನೀಡುತ್ತದೆ.
ಇದರ ಆಧಾರದ ಮೇಲೆ ಬ್ಯಾಂಕ್ಗಳು ನಿಮಗೆ ಸಾಲ ನೀಡಬೇಕೋ ಬೇಡ್ವೋ ಅನ್ನೋದನ್ನ ನಿರ್ಧಾರ ಮಾಡುತ್ವೆ . ಒಂದು ವೇಳೆ ನಿಮ್ಮ ಸ್ಕೋರ್ ತುಂಬಾ ಜಾಸ್ತಿ ಇದ್ದಲ್ಲಿ ನಿಮಗೆ ನಿರಾಯಾಸವಾಗಿ ಲೋಕ್ ಸಿಕ್ಕಿಬಿಡುತ್ತೆ. ಆದ್ರೆ ಸಿಬಿಲ್ ಸ್ಕೋರ್ ಕಡಿಮೆ ಇದ್ದಲ್ಲಿ ನಿಮಗೆ ಲೋನ್ ನೀಡೋದು ರಿಸ್ಕ್ ಎಂದು ಬ್ಯಾಂಕ್ ಭಾವಿಸುತ್ತೆ. ಹಾಗಂತ ಸಿಬಿಲ್ ಕಡಿಮೆ ಇದ್ದರೆ ಲೋಗ್ ಸಿಗೋದೆ ಇಲ್ಲ ಅಂತೇನಿಲ್ಲ. ಆದ್ರೆ ನಿಮ್ಮ ಸಿಬಿಲ್ ಕಡಿಮೆ ಇದ್ದಲ್ಲಿ ಬ್ಯಾಂಕ್ಗಳು ನಿಮಗೆ ಹೆಚ್ಚಿನ ಬಡ್ಡಿ ದರವನಮ್ನ ವಿಧಿಸಿತ್ತವೆ.
ಇದೀಗ ಕಾರ್ಲೋನ್ಗಳಿಗೆ ಹೊಸ ನಿಯಮ ಬಂದಿದ್ದು, ನೀವೇನಾದ್ರೂ ಕಾರ್ ಲೋನ್ ಪಡೆಯಲು ಅರ್ಹರಾಗಿರಬೇಕು ಅಂದ್ರೆ ಕನಿಷ್ಠ 700 ಅಥವಾ ಅದಕ್ಕಿಂತಲೂ ಸಿಬಿಲ್ ಸ್ಕೋರ್ ಹೊಂದಿರಬೇಕು. ಒಂದು ವೇಳೆ ನೀವು 700ಕ್ಕಿಂತ ಕಡಿಮೆ ಸ್ಕೋರ್ ಹೊಂದಿದ್ದರೆ ಆಗ ಕಾರ್ ಲೋನ್ ಸಿಗೋದು ಸ್ವಲ್ಪ ಕಷ್ಟವಾಗಬಹುದು.
ಹಾಗಂತ ಸಿಗೋದೇ ಇಲ್ಲ ಅಂತೇನಲ್ಲ. ಆದರೆ ಹೆಚ್ಚಿಗೆ ಬಡ್ಡಿಯನ್ನ ಪಾವತಿ ಮಾಡಬೇಕಾಗುತ್ತೆ. ಸೋ ನೀವೇನಾದ್ರೂ ಲೋನ್ನಲ್ಲಿ ಕಾರ್ ಕೊಂಡುವವರಿದ್ರೆ ಉತ್ತಮ ಸಿಬಿಲ್ ಸ್ಕೋರ್ ಅಂದ್ರೆ 700 ಮಅತತು ಅದಕ್ಕಿಂತ ಹೆಚ್ಚು ಸ್ಕೋರ್ ಇಟ್ಕೊಳ್ಳೋದು ಉತ್ತಮ.


Click it and Unblock the Notifications