ಡ್ಯಾನಿಶ್ ಬ್ರೂವರ್‍ನ ಅಂಗಸಂಸ್ಥೆಯಾದ ಕಾರ್ಲ್ಸ್‌ಬರ್ಗ್ ಇಂಡಿಯಾ ಕರ್ನಾಟಕದಲ್ಲಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಅದೇನೆಂದರೆ ತನ್ನ ಬ್ರೂವರಿ ವ್ಯಾಪ್ತಿಯನ್ನು ವಿಸ್ತರಿಸಲು ಮೈಸೂರಿನಲ್ಲಿ 350 ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದೆ. ಇದನ್ನು ಇನ್ವೆಸ್ಟ್ ಕರ್ನಾಟಕ 2025ರಲ್ಲಿ ಎಂಒಯು ಮೂಲಕ ರಾಜ್ಯ ಸರ್ಕಾರದೊಂದಿಗೆ ಈ ಹೂಡಿಕೆಯ ನಿರ್ಧಾರವನ್ನು ಘೋಷಣೆ ಮಾಡಿದೆ.

ಮೈಸೂರಿನಲ್ಲಿ ಹೂಡಿಕೆ ಮಾಡಲು ನಿರ್ಧರಿಸಿರುವ ಕಾರ್ಲ್ಸ್‌ಬರ್ಗ್ ಇಂಡಿಯಾದ ಒಟ್ಟು ಹೂಡಿಕೆಯ ಮೊತ್ತ, 600 ಕೋಟಿ ಎನ್ನಲಾಗಿದೆ. ಸದ್ಯ ಈಗಾಗಲೇ 250 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದು ಕಾರ್ಯ ಚಟುವಟಿಕೆಯಲ್ಲಿದೆ. ಈ ಬ್ರೂವರಿ ವಿಸ್ತರಣೆಯು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಕೈ ಜೋಡಿಸಿದೆ. ಅಲ್ಲದೇ ಆ ಪ್ರದೇಶದಲ್ಲಿರುವ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಶ್ರಮಿಸುತ್ತಿದೆ.
ಇನ್ನು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ 28 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಬ್ರೂವರಿ, ಸದ್ಯಕ್ಕೆ ವಾರ್ಷಿಕವಾಗಿ 80 ಮಿಲಿಯನ್ ಲೀಟರ್ ಕಾರ್ಲ್ಸ್‌ಬರ್ಗ್ ಮತ್ತು ಟ್ಯೂಬೋರ್ಗ್ ಉತ್ಪನ್ನಗಳನ್ನು ತಯಾರಿಸುತ್ತಿದೆ. ಅಲ್ಲದೇ ಈ ವಿಸ್ತರಣೆಯು ಹೊಸ ಕ್ಯಾನ್ ಲೈನ್‌ನ ಕೂಡ ಪರಿಚಯಿಸುತ್ತದೆ. ಇನ್ನು ಪ್ಯಾಕ್ ಮಾಡಲಾದ ಬಿಯರ್ ಉತ್ಪಾದನೆಯನ್ನು ಕೂಡ ಹೆಚ್ಚಿಸುವತ್ತ ಚಿತ್ತ ಹರಿಸಿದೆ. ಇದರ ಜೊತೆಗೆ ಬಾಟಲಿ ಬಿಯರ್ ಉತ್ಪಾದನೆಯನ್ನು ಹೆಚ್ಚಿಸಲು ಗ್ಲಾಸ್ ಲೈನ್ ಮಾದರಿಯನ್ನು ತರಲಿದೆ.
ಇನ್ನು ಈ ಬ್ರೂವರಿ ವಿಸ್ತರಣೆ ಬಗ್ಗೆ ಮಾತನಾಡಿದ, ಕಾರ್ಲ್ಸ್‌ಬರ್ಗ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ನೀಲೇಶ್ ಪಟೇಲ್ ಉದ್ಯೋಗಾವಕಾಶದ ಭರವಸೆಯನ್ನು ಕೂಡ ನೀಡಿದ್ದಾರೆ. ಅಂದರೆ ಅವರ ಪ್ರಕಾರ ಕರ್ನಾಟಕವು ಕಾರ್ಲ್ಸ್‌ಬರ್ಗ್ ಇಂಡಿಯಾಗೆ ಒಂದು ಪ್ರಮುಖವಾದ ಮಾರುಕಟ್ಟೆಯಾಗಿದೆ. ಮತ್ತು ಈ ಬ್ರೂವರಿ ವಿಸ್ತರಣೆಯ ಮೂಲಕ ಕರ್ನಾಟಕಕ್ಕೆ ದೀರ್ಘಾವಧಿ ಬದ್ಧತೆಯನ್ನೂ ನೀಡಲಾಗುತ್ತದೆ. ಅಲ್ಲದೇ ಹೂಡಿಕೆಯು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದಲ್ಲದೇ, ಮುಂಬರುವ ವರ್ಷಗಳಲ್ಲಿ ಈ ಮೂಲಕ ಉದ್ಯೋಗವಕಾಶಗಳನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ಈ ನೂತನ ಹೂಡಿಕೆಯ ಮುಖಾಂತರ ಕರ್ನಾಟಕ ಅಭಿವೃದ್ಧಿಗೆ ಕಾರ್ಲ್ಸ್‌ಬರ್ಗ್ ಇಂಡಿಯಾ ಕೂಡ ಕೈ ಜೋಡಿಸಿದೆ. ಆರ್ಥಿಕ ಅಭಿವೃದ್ಧಿಗಾಗಿ ಹೊಸ ಕೊಡುಗೆ ನೀಡಿ, ರಾಜ್ಯದಲ್ಲಿ ತನ್ನ ಸ್ಥಾನ ಗಟ್ಟಿಯಾಗಿಸಿಕೊಳ್ಳುತ್ತಿದೆ. ಇದಲ್ಲದೇ ಸುಸ್ಥಿರತೆಯನ್ನೇ ತನ್ನ ಕಾರ್ಯಾಚರಣೆಯ ಭಾಗವಾಗಿಸಿಕೊಂಡಿರುವ ಕಾರ್ಲ್ಸ್‌ಬರ್ಗ್ ಇಂಡಿಯಾ, ಶೇಕಡ 85ಕ್ಕೂ ಹೆಚ್ಚು ಹೆಚ್ಚು ವಿದ್ಯುತ್ ಪುನರುತ್ಪಾದನಶೀಲ ಇಂಧನದಿಂದ ಸರಬರಾಜು ಮಾಡಲಾಗುತ್ತದೆ.
ಕಾರ್ಲ್ಸ್‌ಬರ್ಗ್ ಇಂಡಿಯಾದ ಹಿನ್ನೆಲೆ:
ಭಾರತೀಯರಿಗೆ 178 ವರ್ಷದ ಬ್ರ್ಯೂವಿಂಗ್ ಪರಂಪರೆಯನ್ನು ಭಾರತೀಯ ಗ್ರಾಹಕರಿಗೆ ಪರಿಚಯಿಸುತ್ತಿರುವ ಕಾರ್ಲ್ಸ್‌ಬರ್ಗ್ ಇಂಡಿಯಾ, ಡೆನ್ಮಾರ್ಕ್ ನ ವಿಶ್ವವಿಖ್ಯಾತವಾಗಿರುವ ಕಾರ್ಲ್ಸ್‌ಬರ್ಗ್ ಗುಂಪಿನ ಒಂದು ಭಾಗ. ಇದು ಭಾರತದಲ್ಲಿ ತನ್ನ ವಿವಿಧ ಬ್ರ್ಯೂವ್‌ಗಳನ್ನು ಆಯ್ಕೆ ಮಾಡುತ್ತದೆ. ಪ್ರಮುಖವಾಗಿ ಕಾರ್ಲ್ಸ್‌ಬರ್ಗ್ ಸ್ಮೂತ್, ಕಾರ್ಲ್ಸ್‌ಬರ್ಗ್ ಎಲೆಫೆಂಟ್, ಟ್ಯೂಬೋರ್ಗ್ ಗ್ರೀನ್, ಟ್ಯೂಬೋರ್ಗ್ ಸ್ಟ್ರಾಂಗ್, ಟ್ಯೂಬೋರ್ಗ್ ಐಸ್ ಡ್ರಾಫ್ಟ್, ಟ್ಯೂಬೋರ್ಗ್ ಕ್ಲಾಸಿಕ್, ಮತ್ತು 1664 ಬ್ಲಾಂಕ್ ಒಳಗೊಂಡಿವೆ.
ಅಲ್ಲದೇ ಈ ಕಾರ್ಲ್ಸ್‌ಬರ್ಗ್ 155 ಬ್ರಾಂಡ್‌ಗಳ ಪೋರ್ಟ್‌ಫೋಲಿಯೊದಲ್ಲಿ ಪ್ರಮುಖವಾದ ಒಂದು ಬಿಯರ್ ಬ್ರಾಂಡ್ ಆಗಿದೆ. ಇದನ್ನು ಬೇರೆ ಬೇರೆ ಹೆಸರುಗಳಿಂದಲೂ ಕರೆಯಲಾಗುತ್ತದೆ. ಅಂದರೆ ಕಾರ್ಲ್ಸ್‌ಬರ್ಗ್ ಲಾಗರ್, ಕಾರ್ಲ್ಸ್‌ಬರ್ಗ್ ಬಿಯರ್ ಮತ್ತು ಕಾರ್ಲ್ಸ್‌ಬರ್ಗ್ ಪಿಲ್ಸ್‌ನರ್ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ. ಮೊದಲು ಇದನ್ನು 1904ರಲ್ಲಿ ತಯಾರಿಸಲಾಯಿತು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications