ನಾಲ್ಕೈದು ತಿಂಗಳ ಫ್ಲಾಟ್ ಬೆಲೆಗಳ ನಂತರ ಡಿಸೆಂಬರ್ ಆರಂಭದಿಂದ ಸಿಮೆಂಟ್ ಡೀಲರ್‌ಗಳು ಸಿಮೆಂಟ್ ಬೆಲೆಯನ್ನ ಹೆಚ್ಚಳ ಮಾಡಿದ್ದಾರೆ. ಇದು ಡೀಲರ್‌ಗಳ ಮಾರ್ಜಿನ್‌ಗಳನ್ನ ಕಡಿಮೆ ಮಾಡಿದ್ದು, ಸಿಮೆಂಟ್ ಕಂಪನಿಗಳ ಲಾಭದ ಮೇಲೆ ಪರಿಣಾಮ ಬೀರಿದೆ. ರಿಯಲ್ ಎಸ್ಟೇಟ್ ವಲಯದಿಂದ ಬೇಡಿಕೆ ಹೆಚ್ಚಾಗಿದ್ದಲ್ಲದೆ, ಹಬ್ಬದ ನಂತರದ ಉತ್ತಮ ಕಾರ್ಮಿಕರ ಲಭ್ಯವಾಗುತ್ತಿದ್ದು, ಹಾಗೆ ಮೂಲಸೌಕರ್ಯ ವಲಯದಿಂದ ಆರ್ಡರ್‌ಗಳು ಕೂಡ ಹೆಚ್ಚಳವಾಗಿರೋದ್ರಿಂದಾಗಿ ಡೀಲರ್‌ಗಳು ಬೆಲೆಯನ್ನ ಏರಿಕೆ ಮಾಡಿದ್ದಾರೆ.
ಸಿಮೆಂಟ್ ಬೆಲೆ ಏರಿಕೆ
ಪಶ್ಚಿಮ ಭಾರತದಲ್ಲಿ ಸಿಮೆಂಟ್ ಬೆಲೆ ಅತಿ ಹೆಚ್ಚು ಏರಿಕೆಯಾಗಿದ್ದು, 50 ಕೆಜಿ ಚೀಲಕ್ಕೆ ಸುಮಾರು 5-10 ರೂಗಳನ್ನ ಏರಿಕೆ ಮಾಡಿದ್ದಾರೆ. ಇನ್ನು ಭಾರತದ ಉಳಿದ ಭಾಗಗಳಲ್ಲಿ, ಅದರಲ್ಲೂ ವಿಶೇಷವಾಗಿ ದಕ್ಷಿಣ ಮತ್ತು ಪೂರ್ವ ಪ್ರದೇಶಗಳಲ್ಲಿ ವಿವಿಧ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಕೂಡ ಏರಿಕೆಯಾಗಿದೆ. ಆದ್ರೆ ಪಶ್ಚಿಮ ಮತ್ತು ಉತ್ತರ ಭಾರತಕ್ಕೆ ಹೋಲಿಸಿದರೆ ಈ ಪ್ರದೇಶಗಳಲ್ಲಿನ ಬೆಲೆಗಳು ಸಧ್ಯಕ್ಕೆ ಕಡಿಮೆ ಇವೆ.

ಇನ್ನು ವಿವಿಧ B2B ಪ್ಲಾಟ್‌ಫಾರ್ಮ್‌ಗಳ ಪಟ್ಟಿಗಳ ಪ್ರಕಾರ ನಾವು ಗಮನಿಸೋದಾದ್ರೆ ಪಶ್ಚಿಮ ಭಾರತದಲ್ಲಿ ಹೊಸ ಸಿಮೆಂಟ್ ಬೆಲೆಗಳು 50 ಕೆಜಿ ಚೀಲಕ್ಕೆ ಸುಮಾರು 350 ರಿಂದ 400 ರೂಪಾಯಿ ಇದೆ.
ದೆಹಲಿಯ ಸಿಮೆಂಟ್ ಡೀಲರ್‌ಗಳು ಹೇಳುವ ಪ್ರಕಾರ, ಎಲ್ಲಾ ಸಿಮೆಂಟ್ ಬ್ರಾಂಡ್‌ಗಳ ಬೆಲೆಗಳನ್ನ ಕೂಡ ಪ್ರತಿ ಚೀಲಕ್ಕೆ ಸುಮಾರು 20 ರೂ.ಗಳಷ್ಟು ಏರಿಕೆ ಮಾಡಲಾಗಿದೆ. ಇನ್ನು ಉತ್ತಮ ಗುಣಮಟ್ಟ ಹಾಗು ಬ್ರ್ಯಾಂಡ್ ಆಧಾರದ ಮೇಲೆ ಹೊಸ ಬೆಲೆಗಳು ಪ್ರತಿ ಚೀಲಕ್ಕೆ 340-395 ರೂಪಾಯಿ ಇದೆ. ದಕ್ಷಿಣ ಭಾರತದಲ್ಲಿ, ಸಿಮೆಂಟ್ ಬೆಲೆಗಳು ಅತ್ಯಂತ ಕಡಿಮೆ ಇದ್ದು, ಹೆಚ್ಚಿನ ಬ್ರಾಂಡ್‌ಗಳ ಬೆಲೆಯನ್ನು ಡೀಲರ್‌ಗಳು ಪ್ರತಿ ಚೀಲಕ್ಕೆ 40 ರೂಗಳಷ್ಟು ಹೆಚ್ಚಿಸಿದ್ದಾರೆ ಎನ್ನಲಾಗ್ತಿದೆ. ಹಾಗೆ ಚೆನ್ನೈನ ದೊಡ್ಡ ಸಿಮೆಂಟ್ ವಿತರಕರ ಪ್ರಕಾರ, 50 ಕೆಜಿ ಸಿಮೆಂಟ್ ಚೀಲಕ್ಕೆ ಸುಮಾರು 320 ರೂಪಾಯಿ ಇದೆ ಎನ್ನಲಾಗ್ತಿದೆ.
ಹಲವು ತಿಂಗಳ ನಂತರ ಈಸ್ಟರ್ನ್ ಇಂಡಿಯಾ ಬೆಲೆ ಏರಿಕೆಯ ಸುತ್ತನ್ನು ವರದಿ ಮಾಡಿದೆ. ಮೂಲ ಸೌಕರ್ಯ ಅಭಿವೃದ್ಧಿ ಮತ್ತು ರಿಯಲ್ ಎಸ್ಟೇಟ್ ನಿರ್ಮಾಣಗಳು ಹೆಚ್ಚುತ್ತಿರುವುದರಿಂದ, ಪ್ರತೀ ಚೀಲಕ್ಕೆ ಡೀಲರ್‌ಗಳು ಸುಮಾರು 30ರೂ ಏರಿಕೆ ಮಾಡಿದ್ದಾರೆ.
ಈ ಬಾರಿ ಸಿಮೆಂಟ್‌ಗೆ ಉತ್ತಮ ಬೇಡಿಕೆಯನ್ನ ನಾವು ನೋಡಬಹುದು. ಅಲ್ಟ್ರಾಟೆಕ್, ಅಂಬುಜಾ, ದಾಲ್ಮಿಯಾ ಮತ್ತು ಬಂಗೂರ್ ಸಿಮೆಂಟ್ ನಂತಹ ಎಲ್ಲಾ ಬ್ರಾಂಡ್‌ಗಳ ಮೇಲೆ ಬೆಲೆಗಳು ಕೂಡ ಈ ಬಾರಿ ಹೆಚ್ಚಳವಾಗಿವೆ.
ಇತ್ತ ಇನ್‌ಕ್ರೆಡ್ ಇಕ್ವಿಟೀಸ್ ವರದಿ ಪ್ರಕಾರ, ಡಿಸೆಂಬರ್‌ನಲ್ಲಿ ಎಲ್ಲಾ ಪ್ರದೇಶಗಳಲ್ಲಿ ಪ್ರತಿ ಚೀಲ ಸಿಮೆಂಟ್ ಬೆಲೆ ಸುಮಾರು 10-15 ರೂಪಾಯಿ ಏರಿಕೆಯಾಗಿದೆ. ಇನ್‌ಕ್ರೆಡ್ ತನ್ನ ಚಾನೆಲ್ ಚೆಕ್ ವರದಿ ಪ್ರಕಾರ ಬೆಲೆಗಳು ತುಂಬಾ ಕಡಿಮೆಯಾಗಿವೆ ಎಂದು ಡೀಲರ್‌ಗಳು ಹೇಳುತ್ತಾರೆ. ಹಾಗೆ ಚುನಾವಣೆ ಮತ್ತು ಮಾನ್ಸೂನ್-ಸಂಬಂಧಿತ ಅಡೆತಡೆಗಳ ನಂತರ FY25ರ ದ್ವಿತೀಯಾರ್ಧದಲ್ಲಿ ಸರ್ಕಾರದ ಬಂಡವಾಳ ವೆಚ್ಚವು ಸುಧಾರಿಸುವುದರಿಂದ ಸಣ್ಣ ಬೆಲೆ ಏರಿಕೆಗಳನ್ನ ಕೂಡ ನಾವು ಮುಂದೆ ಗುರುತಿಸಬಹುದು.
ಇನ್ನು ಬೇಡಿಕೆಯ ಹೊರತಾಗಿಯೂ ಕೂಡ ಹೊಸ ಸಾಮರ್ಥ್ಯಗಳು ಬರುವುದರಿಂದ ಬೇಲೆ ಏರಿಕೆಗಳನ್ನು ಕಾರ್ಯಗತಗೊಳಿಸುವುದು ಕಷ್ಟ ಎಂದು ವರದಿ ಹೇಳಿದೆ. ಇನ್ನು ದೊಡ್ಡ ಸಿಮೆಂಟ್ ಡೀಲರ್‌ಗಳು ಮಾರುಕಟ್ಟೆ ಪಾಳನ್ನ ಹೆಚ್ಚಿಸುವ ನಿಟ್ಟಿನಲ್ಲಿ ಈ ಬೆಲೆ ಕ್ರಮಗಳಿಂದ ದೂರವಿರಬಹುದು ಎಂದು ವರದಿ ಹೇಳಿದೆ.
ದೇಶದಲ್ಲಿ ದೀಪಾವಳಿ ಮತ್ತು ಛತ್ ಪೂಜೆಯಂತಹ ಪ್ರಮುಖ ಹಬ್ಬಗಳು ಮುಗಿದ ನಂತರ ದೊಡ್ಡ ನಗರಗಳಲ್ಲಿ ಕಾರ್ಮಿಕರ ಅತೀ ಹೆಚ್ಚಾಗಿ ಲಭ್ಯವಾಗಿರುವುದರಿಂದ ಸಿಮೆಂಟ್ ಬೇಡಿಕೆ ಕೂಡ ಹೆಚ್ಚಾಗಿದೆ. ಹಾಗೆ ಇದು ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಯೋಜನೆಗಳ ನಿರ್ಮಾಣದ ವೇಗವನ್ನು ಹೆಚ್ಚಿಸಲು ಸಹಾಯ ಮಾಡಿದೆ. ಡಿಸೆಂಬರ್‌ನಲ್ಲಿ ಬೆಲೆ ಏರಿಕೆಯನ್ನ ನಾವು ಗಮನಿಸಬಹುದು ಎಂದು ಮುಂಬೈ ಮೂಲದ ಸಿಮೆಂಟ್ ಡೀಲರ್‌ಗಳು ಅಭಿಪ್ರಾಯಪಟ್ಟಿದ್ದಾರೆ.
ಸಿಮೆಂಟ್ ತಯಾರಕರು ಮತ್ತು ಡೀಲರ್‌ಗಳು ಸೆಪ್ಟೆಂಬರ್‌ನಲ್ಲಿ ಬೆಲೆ ಏರಿಕೆಯ ಪ್ರಯತ್ನಗಳಲ್ಲಿ ವಿಫಲವಾದ್ದರು. ಆದಾಗ್ಯೂ, ಚುನಾವಣೆಯ ಸಂದರ್ಭದಲ್ಲಿ ಇದು ಸಾಧ್ಯವಾಗಿರಲಿಲ್ಲ ಹೀಗಾಗಿ ಡಿಸೆಂಬರ್‌ನಲ್ಲಿ ಒಂದೇ ಬಾರಿ ಸಿಂಮೆಂಟ್ ಏರಿಕೆಯಾಗಿದೆ ಎನ್ನಬಹುದು.


Click it and Unblock the Notifications