ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯನ್ನ ನೀಡಿದೆ. ನೌಕರರ ನಿವೃತ್ತಿ ಅಥವಾ ಮರಣದ ಸಮಯದಲ್ಲಿ ಅವರ ಕುಟುಂಬಗಳಿಗೆ ನೀಡುತ್ತಿದ್ದ ಗ್ರಾಚ್ಯೂಟಿಯನ್ನ ಸರ್ಕಾರ ಏರಿಕೆ ಮಾಡಿದೆ. ಈ ಹಿಂದೆಯಷ್ಟೇ ಸರ್ಕಾರಿ ನೌಕರರ ತುಟ್ಟಿ ಬತ್ಯೆಯನ್ನ ಏರಿಕೆ ಮಾಡಿತ್ತು. ಇದ ಜೊತೆ ಜೊತೆಗೆ ಈಗ ಗ್ರಾಚ್ಯುಟಿಯನ್ನ ಕೂಡ ಸರ್ಕಾರ ಏರಿಕೆ ಮಾಡಿದೆ. ಈ ಹಿಂದೆ 20 ಲಕ್ಷ ಇದ್ದ ಗ್ರಾಚ್ಯೂಟಿ ಭತ್ಯೆಯನ್ನ 5 ಲಕ್ಷ ಹೆಚ್ಚಳ ಮಾಡುವ ಮೂಲಕ 25 ಲಕ್ಷ ಮಾಡಿದೆ. ಏಳನೇ ವೇತನ ಆಯೋಗದ ಶಿಪಾರಸಿನ ಮೇರೆಗೆ ಸರ್ಕಾರ ಹೆಚ್ಚಳ ಮಾಡ್ತಿದೆ.
ಈ ಹೊಸ ಗ್ರಾಚ್ಯುಟಿ ಮಿತಿಯು ಜನವರಿ 1, 2024ರಿಂದ ಅನ್ವಯವಾಗುತ್ತದೆ. ಅಲ್ಲದೆ ವರ್ಷಗಳು ಕಳೆದಂತೆ ಉದ್ಯೋಗಿಗಳ ಗ್ರಾಚ್ಯುಟಿಯನ್ನ ಕೂಡ ಹೆಚ್ಚಳ ಮಾಡಬೇಕು ಎಂದು ಏಳನೇ ವೇತನ ಆಯೋಗದ ವರದಿ ಹೇಳುತ್ತದೆ. ಮೇ 30, 2024 ರಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ಅಡಿಯಲ್ಲಿ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಹೊರಡಿಸಿದ ಸುತ್ತೋಲೆಯಲ್ಲಿ ಈ ಬದಲಾವಣೆಯನ್ನ ಪ್ರಕಟಿಸಿದೆ.

ಇನ್ನು ಈ ಹಿಂದೆ ಈ ಗ್ರಾಚ್ಯುಟಿ ಮಿತಿಯನ್ನ 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ ಮಾಡಲಾಗಿತ್ತು. ನತರ ನೌಕರರ ತುಟ್ಟಿ ಭತ್ಯೆ(DA) 50% ಹೆಚ್ಚಳವಾಗುತ್ತಿದ್ದಂತೆ ಈ ಬಾರಿ ಗ್ರಾಚ್ಯುಟಿಯನ್ನ 20 ಲಕ್ಷದಿಂದ 25 ಲಕ್ಷದವರೆಗೆ ಏರಿಕೆಯಾಗಿದೆ.
ಗ್ರಾಚ್ಯುಟಿ ಅರ್ಹತೆಗೆ ಷರತ್ತುಗಳೇನು?
-ಓರ್ವ ನೌಕರ ಗ್ರಾಚ್ಯುಟಿಯನ್ನ ಪಡೆಯಲು ಸಂಸ್ಥೆಯಲ್ಲಿ ಪೂರ್ಣ ಸಮಯದ ಉದ್ಯೋಗಿಯಾಗಿರಬೇಕು.
-ಹಾಗೆ ಉದ್ಯೋಗಿಯು ಕನಿಷ್ಠ 5 ವರ್ಷಗಳ ಕಾಲ ಒಂದು ಸಂಸ್ಥೆಯಲ್ಲಿ ಸೇವೆಯನ್ನ ಸಲ್ಲಿಸಿರಬೇಕು.
-ಕಲವೊಮ್ಮೆ 5 ವರ್ಷದ ನಿಯಮಗಳನ್ನ ಪಾಲಿಸದಿದ್ದರೂ ಕೂಡ ಕೆಲವೊಮ್ಮೆ ಗ್ರಾಚ್ಯುಟಿ ನೀಡಲಾಗುತ್ತದೆ. 5 ವರ್ಷ ಪೂರ್ಣಗೊಂಡ ನಂತರ ರಾಜೀನಾಮೆ ನೀಡಿದರೆ ನೀವು ಗ್ರಾಚ್ಯೂಟಿಗೆ ಅರ್ಹರಾಗಿರುತ್ತೀರಿ. ಉದ್ಯೋಗದಾತರ ನೀತಿಯ ಪ್ರಕಾರ ನಿವೃತ್ತಿಯನ್ನ ಹೊಂದಿದರೆ ಗ್ರಾಚ್ಯುಟಿ ದೊರೆಯತ್ತದೆ.
-ಉದ್ಯೋಗಿಗೆ ಅಪಘಾತ ಅಥವಾ ಅನಾರೋಗ್ಯದ ಸಮಸ್ಯೆ ಉಂಟಾಗಿ ಅಂಗವೈಕಲ್ಯಲಾಗಿದ್ದರೆ, ಅಂತಹ ಅಮಯದಲ್ಲಿ ನೀವು ಗ್ರಾಚ್ಯುಟಿಯನ್ನ ಪಡೆಯಬಹುದು.
-ಇನ್ನು ಉದ್ಯೋಗಿಯ ಮರಣ ಹೊಂದಿದಾಗ ಆತನ ಕುಟುಂಬಕ್ಕೆ ಈ ಗ್ರಾಚ್ಯುಟಿ ಹಣ ದೊರೆಯುತ್ತದೆ.
ಸರ್ಕಾರಿ ನೌಕರರಿಗೆ ತೆರಿಗೆ ವಿನಾಯಿತಿ
ಆದಯ ತೆರಿಗೆ ಕಾಯಿದೆಯ ಸೆಕ್ಷನ್ 10(10)(ii) ಅಡಿ ಪ್ರಕಾರ ಕೇಂದ್ರ ಹಾಗು ರಾಜ್ಯ ಸರ್ಕಾರಿ ನೌಕರರ ಗ್ರಾಚ್ಯುಟಿಯ ಮೇಲೆ ಸಂಪುರ್ಣ ತೆರಿಗೆ ವಿನಾಯಿತಿ ನೀಡಲಾಗದೆ. ಅಂದರೆ ನೌಕರರು ಪಡೆದ ಗ್ರಾಚ್ಯುಟಿ ಮೊತ್ತದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಅವರು ನಿವೃತ್ತಿ ಹೊಂದಿದ ನಂತರ ಅರ ಸಂಪೂರ್ಣ ಗ್ರಾಚ್ಯುಟಿಯನ್ನ ಅವರು ಯಾವುದೇ ತೆರಿಗೆ ಇಲ್ಲದೆ ಪಡೆಯಬಹುದು. ಇದು ಕೇಂದ್ರ, ರಾಜ್ಯ ಹಾಗೆ ರಕ್ಷಣಾ ಸಿಬ್ಬಂದಿಗಳಿಗೆ ಅನ್ವಯವಾಗುತ್ತದೆ.
ಖಾಸಗಿ ವಲಯಗಳು
ಈ ಹಿಂದೆ ಸರ್ಕಾರಿ ನೌಕರರ ಗ್ರಾಚ್ಯುಟಿನ್ನ 10 ಲಕ್ಷದಿಂದ 20 ಲಕ್ಷ ಹೆಚ್ಚಿಸಿದಾಗ, ಗ್ರಾಚ್ಯುಟಿ ಕಾಯ್ದೆಯನ್ನ ತಿದ್ದುಪಡಿ ಮಾಡುವುದನ್ನು ಮುಂದುಡಲಾಗಿತ್ತು. 2018ರಲ್ಲಿ ಗ್ರಾಚ್ಯುಟಿ ಮತಿಯನ್ನ ಕಾಯ್ದಯನ್ನ ತಿದ್ದುಪಿ ಮಾಡಿದ ನಂತರ ಖಾಸಗಿ ವಲಯಗಳಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಕಾಯ್ದೆಯ ತಿದ್ದುಪಡಿಯನ್ನ 2019ರಲ್ಲಿ ಮಾಡಲಾಯಿತು. ಅಂದರ ಈ ಬದಲಾವಣೆಯಾಗಲು ಒಂದು ವರ್ಷ ಬೇಕಾಯ್ತು ಎಂದು ಸಂದೀಪ್ ಷಾ ಹೇಳಿದ್ದಾರೆ.
ಇನ್ನು ಈ ಬಾರಿ ಸರ್ಕಾರಿ ಉದ್ಯೋಗಿಗಳ ಗ್ರಾಚ್ಯುಟಿ ಮಿತಿ ಜನವರಿ 1, 2024 ರಿಂದ ಜಾರಿಯಾಗಿರುವುದರಿಂದ ಮುಂದನ ದಿಗಳಲ್ಲಿ ಖಾಸಗಿ ವಲಯಗಳಲ್ಲೂ ಕೂಡ ಈ ಬದಲಾವಣೆಯನ್ನ
ಸರ್ಕಾರ ತರುತ್ತದೆ, ಹಗೆ ಖಾಸಗಿ ಉದ್ಯೋಗಿಗಳು ಗ್ರಾಚ್ಯುಟಿ ಪವತಿ ತಿದ್ದುಪಡಿಯನ್ನ ನಿರೀಕ್ಷಿಸಬಹುದು ಎಂದು ಸಂದೀಪ್ ಷಾ ತಿಳಸಿದರು.
ಗ್ರಾಚ್ಯುಟಿಯನ್ನ ಕ್ಲೈಮ್ ಮಾಡುವುದು ಹೇಗೆ?
ಒಮ್ಮೆ ನೀವು ನಿಮ್ಮ ಅರ್ಹತೆಯನ್ನು ದೃಢೀಕರಿಸಿದ ನಂತರ, ನಿಮ್ಮ ಉದ್ಯೋಗದಾತರ HR ಅಥವಾ ಖಾತೆಗಳ ವಿಭಾಗಕ್ಕೆ ಔಪಚಾರಿಕ ಅರ್ಜಿಯನ್ನು ಸಲ್ಲಿಸುವ ಮೂಲಕ ನೀವು ಕ್ಲೈಮ್ ಮಾಡಬಹುದು. ಈ ಅಪ್ಲಿಕೇಶನ್ ನಿಮ್ಮ ಉದ್ಯೋಗದ ಅವಧಿ, ಕೊನೆಯದಾಗಿ ಪಡೆದ ಸಂಬಳ ಮತ್ತು ನಿಮ್ಮ ರಾಜೀನಾಮೆ ಪತ್ರ , ಪೇಸ್ಲಿಪ್‌ಗಳು ಅಥವಾ ಸೇವಾ ಪ್ರಮಾಣಪತ್ರದಂತಹ ಯಾವುದೇ ಇತರ ಪೋಷಕ ದಾಖಲೆಗಳಂತಹ ಅಗತ್ಯ ವಿವರಗಳನ್ನು ಒಳಗೊಂಡಿರಬೇಕು. ಕಂಪನಿಯನ್ನು ಅವಲಂಬಿಸಿ, ಪ್ರಕ್ರಿಯೆಯು ನಿರ್ದಿಷ್ಟ ಫಾರ್ಮ್ ಅನ್ನು ಭರ್ತಿ ಮಾಡುವುದು ಅಥವಾ ಗ್ರಾಚ್ಯುಟಿಗಾಗಿ ಲಿಖಿತ ವಿನಂತಿಯನ್ನು ಸಲ್ಲಿಸುವುದನ್ನು ಒಳಗೊಂಡಿರುತ್ತದೆ.
ಕ್ಲೈಮ್ ಸಲ್ಲಿಸಿದ ನಂತರ, ಉದ್ಯೋಗದಾತರು ನಿಮ್ಮ ವಿನಂತಿಯನ್ನು ಪರಿಶೀಲಿಸುತ್ತಾರೆ, ನಿಮ್ಮ ಅಧಿಕಾರಾವಧಿ ಮತ್ತು ಸಂಬಳದ ಆಧಾರದ ಮೇಲೆ ಗ್ರಾಚ್ಯುಟಿ ಮೊತ್ತವನ್ನು ಲೆಕ್ಕಾಚಾರ ಮಾಡುತ್ತಾರೆ ಮತ್ತು ಪಾವತಿಯನ್ನು ಪ್ರಕ್ರಿಯೆಗೊಳಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ, ಪಾವತಿಯನ್ನು ವಿತರಿಸಲು ಕೆಲವು ವಾರಗಳನ್ನು ತೆಗೆದುಕೊಳ್ಳಬಹುದು. ವಿಳಂಬಗಳಿದ್ದಲ್ಲಿ ಉದ್ಯೋಗದಾತರೊಂದಿಗೆ ಅನುಸರಿಸುವುದು ಅತ್ಯಗತ್ಯ. ನಿಮ್ಮ ದೇಶದ ಕಾನೂನುಗಳನ್ನು ಅವಲಂಬಿಸಿ ಗ್ರಾಚ್ಯುಟಿಯು ತೆರಿಗೆಗೆ ಒಳಪಟ್ಟಿರಬಹುದು ಮತ್ತು ಕೆಲವು ಸಂದರ್ಭಗಳಲ್ಲಿ, ಬಳಕೆಯಾಗದ ರಜೆ ದಿನಗಳನ್ನು ಸಹ ಅಂತಿಮ ಪರಿಹಾರದಲ್ಲಿ ಸೇರಿಸಿಕೊಳ್ಳಬಹುದು, ಇದು ನೀವು ಸ್ವೀಕರಿಸುವ ಒಟ್ಟು ಮೊತ್ತದ ಮೇಲೆ ಪರಿಣಾಮ ಬೀರುತ್ತದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?



Click it and Unblock the Notifications