ಪ್ರತೀ 10 ವರ್ಷಗಳಿಗೊಮ್ಮ ಕೇಂದ್ರ ನೌಕರರ ವೇತನ, ಪಿಂಚಣಿ ಪರಿಷ್ಕರಣೆಗಾಗಿ ಆಯೋಗ ರಚಿಸಲಾಗುತ್ತದೆ. ಆದ್ರೆ 8ನೇ ವೇತನ ಆಯೋಗಕ್ಕೆ (8th Pay Commission) ನೌಕರರ ಬೇಡಿಕೆ ಹೆಚ್ಚಾಗಿತ್ತು. ಇದೀಗ ದೀಪಾವಳಿ (Deepavali) ಮುಗಿಯುತ್ತಿದ್ದಂತೆ ಕೇಂದ್ರ ಸರ್ಕಾರ, ನೌಕರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಕೊನೆಗೂ 8ನೇ ವೇತನ ಆಯೋಗ ರಚಿಸಿ ಕೇಂದ್ರ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಮುಂದಿನ 18 ತಿಂಗಳಿನೊಳಗೆ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಿದೆ. ಇನ್ನು ಕೇಂದ್ರ ಸರ್ಕಾರದ (Central Government) ಈ ನಿರ್ಧಾರದಿಂದ 50 ಲಕ್ಷಕ್ಕೂ ಅಧಿಕ ನೌಕರರು ಮತ್ತು 69 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಪ್ರಯೋಜನ ಸಿಗಲಿದೆ.

8ನೇ ಕೇಂದ್ರ ವೇತನ ಆಯೋಗದ ಉಲ್ಲೇಖದ ನಿಯಮಾವಳಿಗಳಿಗೆ (ToR) ಕೇಂದ್ರದ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಮೂಲಕ ಕೆಲವೇ ತಿಂಗಳಲ್ಲಿ ಕೇಂದ್ರ ನೌಕರರು ಮತ್ತು ಪಿಂಚಣಿದಾರರ ವೇತನ, ಭತ್ಯೆಗಳು ಹಾಗೂ ಪಿಂಚಣಿ ಪರಿಷ್ಕರಣೆಯಾಗಲಿದೆ.
ಸಂಪುಟ ಸಭೆ ಬಳಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 8ನೇ ವೇತನ ಆಯೋಗದ ಅಧ್ಯಕ್ಷತೆಯನ್ನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ರಂಜನ್ ಪ್ರಕಾಶ್ ದೇಸಾಯಿ ವಹಿಸಲಿದ್ದಾರೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಆಯೋಗವು ಒಬ್ಬ ಅರೆಕಾಲಿಕ ಸದಸ್ಯ ಮತ್ತು ಒಬ್ಬ ಸದಸ್ಯ-ಕಾರ್ಯದರ್ಶಿಯನ್ನು ಒಳಗೊಂಡಿರಲಿದೆ ಎಂದು ಹೇಳಿದರು.
18 ತಿಂಗಳ ಗಡುವು
8ನೇ ವೇತನ ಆಯೋಗದ ರಚನೆ ಜೊತೆಗೆ, ಮುಂದಿನ 18 ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಬೇಕೆಂದು ಗಡುವು ನೀಡಲಾಗಿಚದೆ. ಇನ್ನು ಶಿಫಾರಸ್ಸುಗಳು ಜಾರಿಗೆ ಬರುವ ದಿನಾಂಕ ಜನವರಿ 1, 2026 ಎಂದು ಅಂದಾಜಿಸಲಾಗಿದ್ದು, ಆಯೋಗ ವರದಿ ಸಲ್ಲಿಸಿದ ನಂತರ, ಸರ್ಕಾರವೇ ಪರಿಷ್ಕರಣೆ ಜಾರಿ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದೆ.
ಸರ್ಕಾರವು ಜನವರಿ 2025 ರಲ್ಲಿ ಆಯೋಗದ ರಚನೆಗೆ ತಾತ್ವಿಕ ಅನುಮೋದನೆ ನೀಡಿತ್ತು ಮತ್ತು ಈಗ ಅದನ್ನು ಔಪಚಾರಿಕವಾಗಿ ಮುಂದುವರಿಸಿದೆ. ToR ಗೆ ಅನುಮೋದನೆ ಎಂದರೆ, ಆಯೋಗವು ತನ್ನ ಕೆಲಸವನ್ನು ಅಧಿಕೃತವಾಗಿ ಪ್ರಾರಂಭಿಸಲು ಅನುಮತಿ ಪಡೆದಿದೆ ಎಂದು ಅರ್ಥ. ಇದು ಮುಂದಿನ ಒಂದೂವರೆ ವರ್ಷದಲ್ಲಿ ನೌಕರರ ವೇತನ ಹೆಚ್ಚಳ, ಭತ್ಯೆಗಳು ಮತ್ತು ಪಿಂಚಣಿಯ ಬದಲಾವಣೆಗಳು ಹಾಗೂ ಸರ್ಕಾರದ ಆರ್ಥಿಕ ಸ್ಥಿತಿಯನ್ನು ಸಮತೋಲನಗೊಳಿಸುವ ಕುರಿತು ನಿರ್ಧರಿಸುತ್ತದೆ.
ಆಯೋಗವು ತನ್ನ ಶಿಫಾರಸುಗಳನ್ನು ಸಲ್ಲಿಸಿದ ನಂತರ, ಯಾವ ಸಲಹೆಗಳನ್ನು ಜಾರಿಗೊಳಿಸಬೇಕು ಮತ್ತು ಯಾವಾಗ ಜಾರಿಗೆ ತರಬೇಕು ಎಂಬುದರ ಕುರಿತು ಅಂತಿಮ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತದೆ.
10 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ
ಇನ್ನು ಪ್ರತೀ ಹತ್ತು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆಗೆ ಆಯೋಗವನ್ನು ರಚನೆ ಮಾಡಲಾಗುತ್ತದೆ. ಅದೇ ರೀತಿ 2014 ರಲ್ಲಿ 7ನೇ ವೇತನ ಆಯೋಗವನ್ನು ರಚಿಸಲಾಗಿತ್ತು. ಆದ್ರೆ 2016, ಜನವರಿ 1 ರಂದು ಈ ಆಯೋಗ ಸಲ್ಲಿಸಿದ ಶಿಫಾರಸ್ಸುಗಳನ್ನು ಜಾರಿಗೆ ತರಲಾಯಿತು.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications