ಭಾರತವು ತತ್‌ಕ್ಷಣದ ಜಾರಿಗೆ ಬರುವಂತೆ ಕುಚಲಕ್ಕಿ ರಫ್ತಿನ ಮೇಲೆ ಶೇಕಡ 20 ರಷ್ಟು ಸುಂಕವನ್ನು ವಿಧಿಸಿದೆ. ಇದರಿಂದಾಗಿ ವಿಶ್ವದ ಅತಿದೊಡ್ಡ ರಫ್ತುದಾರ ದೇಶದಲ್ಲಿ ಸಾಗಣೆಯು ಮತ್ತಷ್ಟು ಕಡಿಮೆಯಾಗಲಿದೆ. ಈಗಾಗಲೇ ಜಾಗತಿಕವಾಗಿ ಅಕ್ಕಿ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಈಗಾಗಲೇ 12 ವರ್ಷಗಳಲ್ಲೇ ಅತ್ಯಧಿಕವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆಯು ಏರಿಕೆಯಾಗಿದೆ. ಕಳೆದ ತಿಂಗಳು ಬಾಸ್ಮತಿಯೇತರ ಬಿಳಿ ಅಕ್ಕಿಯ ರಫ್ತಿನ ಮೇಲೆ ನಿಷೇಧ ಹೇರಲಾಗಿತ್ತು. ಕಳೆದ ವರ್ಷ ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಲಾಗಿತ್ತು. ಈಗ ಜಾಗತಿಕವಾಗಿಯೇ ಅಕ್ಕಿ ಬೆಲೆಯು ಹೆಚ್ಚಳವಾಗಿದೆ.

ಬಾಸ್ಮತಿಯೇತರ ಬಿಳಿ ಅಕ್ಕಿಯನ್ನು ನಿಷೇಧಿಸುವ ಭಾರತದ ಕ್ರಮವು ಕೆಲವು ಖರೀದಿದಾರರು ಕುಚಲಕ್ಕಿಯನ್ನು ಖರೀದಿ ಮಾಡುವಂತೆ ಮಾಡಿತು. ಇದರಿಂದಾಗಿ ಜಾಗತಿಕವಾಗಿ ಕುಚಲಕ್ಕಿ ಬೇಡಿಕೆಯು ಅಧಿಕವಾಯಿತು. ಬೇಡಿಕೆ ಹೆಚ್ಚದಂತೆ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಮುಂಬೈ ಮೂಲದ ಡೀಲರ್ ಹೇಳಿದ್ದಾರೆ.
"ಈ ಸುಂಕದೊಂದಿಗೆ, ಥೈಲ್ಯಾಂಡ್ ಮತ್ತು ಪಾಕಿಸ್ತಾನದಿಂದ ಸರಬರಾಜಾಗುವ ಭಾರತೀಯ ಅಕ್ಕಿಯು ದುಬಾರಿಯಾಗಲಿದೆ. ಈಗ ಖರೀದಿದಾರರಿಗೆ ಯಾವುದೇ ಆಯ್ಕೆಗಳಿಲ್ಲ," ಎಂದು ಕೂಡಾ ಡೀಲರ್ ತಿಳಿಸಿದ್ದಾರೆ.
ಭಾರತವು 2022 ರಲ್ಲಿ 7.4 ಮಿಲಿಯನ್ ಟನ್ ಅಕ್ಕಿಯನ್ನು ರಫ್ತು ಮಾಡಿದೆ. ಜುಲೈನಲ್ಲಿ, ವಿಶ್ವಸಂಸ್ಥೆಯ ಆಹಾರ ಏಜೆನ್ಸಿಯ ಅಕ್ಕಿ ಬೆಲೆ ಸೂಚ್ಯಂಕವು ಸುಮಾರು 12 ವರ್ಷಗಳಲ್ಲಿ ಅತ್ಯಧಿಕ ಮಟ್ಟಕ್ಕೆ ಜಿಗಿದಿದೆ. ಪ್ರಮುಖವಾಗಿ ರಫ್ತು ಮಾಡುವ ದೇಶವಾದ ಭಾರತದಲ್ಲಿ ನಿರ್ಬಂಧ ಹೇರಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲ ಬಗೆಯ ಅಕ್ಕಿಯ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಭಾರತದ ಕುಸುಬಲಕ್ಕಿ ಮತ್ತು ಥಾಯ್ಲೆಂಡ್‌ನ ಬಿಳಿ ಅಕ್ಕಿ ಹೊರತುಪಡಿಸಿ ಉಳಿದೆಲ್ಲ ಅಕ್ಕಿ ಪ್ರತಿ ಟನ್‌ಗೆ 600 ಡಾಲರ್‌ಗಿಂತ ಅಧಿಕ ಬೆಲೆಯಲ್ಲಿ ಅಕ್ಕಿ ವ್ಯಾಪಾರವು ಜಾಗತಿಕ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಜುಲೈ 20 ರಂದು ಭಾರತವು ಬಾಸ್ಮತಿಯೇತರ ರಫ್ತಿನ ಮೇಲೆ ನಿಷೇಧವನ್ನು ಹೇರಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.
ಜಾಗತಿಕ ಗ್ರಾಹಕರಲ್ಲಿ ಆತಂಕ
ಜುಲೈ 20, 2023 ರಂದು ಭಾರತವು ಬಾಸ್ಮತಿ ಅಲ್ಲದ ಇತರೆ ಬಿಳಿ ಅಕ್ಕಿಯ ರಫ್ತಿನ ಮೇಲೆ ನಿಷೇಧವನ್ನು ವಿಧಿಸಿದೆ. ಇದರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ವೀಡಿಯೊಗಳು ವೈರಲ್ ಆಗಿದೆ. ಇದರಿಂದಾಗಿ ವಿದೇಶಿ ಖರೀದಿದಾರು ಆತಂಕದಲ್ಲಿ ಅಕ್ಕಿಯನ್ನು ಖರೀದಿ ಮಾಡಲು ಆರಂಭಿಸಿದರು.
ಬಾಸ್ಮತಿ ಹೊರತುಪಡಿಸಿ ಇತರೆ ಬಿಳಿ ಅಕ್ಕಿಯ ರಫ್ತಿನ ಮೇಲೆ ನಿಷೇಧದ ನಂತರ ಭಾರತೀಯ ಕುಸುಬಲಕ್ಕಿ ಬೇಡಿಕೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಇದರ ರಫ್ತುಗಳನ್ನು ನಿಗ್ರಹಿಸಲು ಭಾರತ ಸರ್ಕಾರವು ಮಧ್ಯಪ್ರವೇಶಿಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತದೆ. ನಿಷೇಧದ ನಂತರವೂ, ಜುಲೈ 21 ಮತ್ತು ಆಗಸ್ಟ್ 17 ರ ನಡುವೆ ಸರಿಸುಮಾರು 7 ಲಕ್ಷ ಟನ್ ಅಕ್ಕಿಯನ್ನು ಈಗಾಗಲೇ ರಫ್ತು ಮಾಡಲಾಗಿದೆ. ಅಂದರೆ ರಫ್ತು ಶೇಕಡ 25ರಷ್ಟು ಏರಿಕೆಯಾಗಿದೆ.


Click it and Unblock the Notifications