ವಿಶ್ವದ ಶ್ರೀಮಂತ ಖಂಡಗಳಲ್ಲಿ ಒಂದೆಂದು ಗುರುತಿಸಿಕೊಂಡಿರುವ ಯುರೋಪ್‌ನ ರೈತರಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಅನ್ನದಾತನ ಸ್ಥಿತಿ ದುಸ್ಥಿತಿಯಲ್ಲಿರುವುದು ಖೇದಕರ ಸಂಗತಿಯಾಗಿದೆ. ಭಾರತದಲ್ಲಿ ಮಳೆ ಅನಿಶ್ಚಿತತೆ ಸೇರಿದಂತೆ ಹಲವು ವಿಚಾರಗಳಲ್ಲಿ ರೈತರು ಸಮಸ್ಯೆ ಎದುರಿಸುತ್ತಿದ್ದು, ಇದೆಲ್ಲದರ ಪರಿಣಾಮ ಅವರು ತೆಗೆಯುತ್ತಿರುವ ಉತ್ಪನ್ನಗಳ ಮೇಲೆ ಕೂಡ ಬಿದ್ದಿದೆ. ಒಂದೆಡೆ ಭಾರೀ ಮಳೆಯಿಂದಾಗಿ ಬೆಳೆದ ಉತ್ಪನ್ನ ಮಳೆಗೆ ಆಹುತಿಯಾಗುತ್ತಿದ್ದರೆ ಮತ್ತೊಂದೆಡೆ ಮಳೆಯ ಅಭಾವದಿಂದ ಭೂಮಿಯೇ ಬಂಜರಾಗಿ ಮಾರ್ಪಾಡಾಗುತ್ತಿದೆ.
ಇನ್ನೂ ಕೆಲವೊಂದು ಭಾಗದಲ್ಲಿ ರೈತರು ಉತ್ತಮ ಬೆಳೆ ಪಡೆಯುತ್ತಿದ್ದರೂ ಸೂಕ್ತ ರೀತಿಯ ಮೌಲ್ಯವನ್ನು ಕಾಣದೆ ಸಮಸ್ಯೆ ಎದುರಿಸುತ್ತಿದ್ದಾರೆ. ಸದ್ಯ ಈ ಎಲ್ಲಾ ಸಮಸ್ಯೆಗಳನ್ನು ಮನಗಂಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇನ್ನು ಇದೇ ಹಿನ್ನೆಲೆಯಲ್ಲಿ ಸದ್ಯ ಸಂಕಷ್ಟದ ಸಂದರ್ಭಗಳಲ್ಲಿ ಮಾರಾಟ ಮಾಡುವ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರವು ಹೊಸದಾಗಿ ಸಾಲ ಖಾತರಿ ಯೋಜನೆಯನ್ನು (CGS) ಜಾರಿಗೆ ತಂದಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ನೂತನ ಯೋಜನೆಗೆ ಚಾಲನೆ ನೀಡಿದ್ದಾರೆ.

ವಿದ್ಯುನ್ಮಾನ ಗೋದಾಮಿನ ರಸೀದಿಗಳನ್ನು ಬಳಸಿಕೊಂಡು ಸುಗ್ಗಿಯ ನಂತರದ ಸಾಲಗಳನ್ನು ಸುಲಭವಾಗಿ ಪಡೆಯಲು ರೈತರಿಗೆ ಸಹಾಯ ಮಾಡಲು ಸಚಿವ ಪ್ರಲ್ಹಾದ್ ಜೋಶಿ ಸೋಮವಾರ ರೂ 1,000 ಕೋಟಿ ಕ್ರೆಡಿಟ್ ಗ್ಯಾರಂಟಿ ಯೋಜನೆಯನ್ನು ಅನಾವರಣಗೊಳಿಸಿದರು. ಅದರಲ್ಲೂ ವಿಶೇಷವಾಗಿ ಸಣ್ಣ ಮತ್ತು ಅಲ್ಪ- ಎಲೆಕ್ಟ್ರಾನಿಕ್ ವೇರ್ ಹೌಸ್ ರೆಸಿಪ್ಟ್ಸ್ ಗಳನ್ನು ಬಳಸಿಕೊಂಡು ಬೆಳೆಯ ನಂತರ ರೈತರಿಗೆ ಸಾಲ ನೀಡಲಾಗುತ್ತದೆ.
ಯೋಜನೆಯ ಉದ್ದೇಶವೇನು?
ಈ ಯೋಜನೆಯು ಕೃಷಿ ಹಣಕಾಸುಗಳನ್ನು ಹೆಚ್ಚು ಸುಲಭವಾಗಿಸಲು ಮತ್ತು ರೈತರ ಆರ್ಥಿಕ ಅಗತ್ಯಗಳನ್ನು ಬೆಂಬಲ ನೀಡುವ ನಿಟ್ಟಿನಲ್ಲಿ ಇದಕ್ಕೆ ಸಂಬಂಧಿಸಿದ ಗುರಿಯನ್ನು ಈಡೇರಿಸುವ ಯೋಜನೆಯಾಗಿದೆ. ವೇರ್‌ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ರೆಗ್ಯುಲೇಟರಿ ಅಥಾರಿಟಿ (ಡಬ್ಲ್ಯುಡಿಆರ್‌ಎ) ನೋಂದಾಯಿತ ರೆಪೊಸಿಟರಿಗಳು ನೀಡಿದ ಎಲೆಕ್ಟ್ರಾನಿಕ್ ನೆಗೋಶಬಲ್ ವೇರ್‌ಹೌಸ್ ರಸೀದಿಗಳ (ಇ-ಎನ್‌ಡಬ್ಲ್ಯೂಆರ್‌ಗಳು) ವಿರುದ್ಧ ಸಾಲ ನೀಡಲು ಬ್ಯಾಂಕ್‌ಗಳ ಹಿಂಜರಿಕೆಯನ್ನು ಕಡಿಮೆ ಮಾಡಲು ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಹ್ಲಾದ್ ಜೋಶಿ, "ನಾವು 1,000 ಕೋಟಿ ರೂಪಾಯಿಗಳ ಕಾರ್ಪಸ್ ನಿಧಿಯನ್ನು ಒದಗಿಸಿದ್ದೇವೆ. ಉದಾರವಾದ ವಿಧಾನದೊಂದಿಗೆ ಸಾಲ ನೀಡಲು ಬ್ಯಾಂಕ್‌ಗಳನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಅಗತ್ಯವಿರುವ ಸಾಲಗಳನ್ನು ನೀಡಲು ಬ್ಯಾಂಕ್‌ಗಳಿಗೆ ಇದು ಮೇಲಾಧಾರವಾಗಿ ಕಾರ್ಯನಿರ್ವಹಿಸುತ್ತದೆ. ಬೆಲೆ ಹೆಚ್ಚಾದಾಗ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು.
ಸಾಲದ ಮೊತ್ತ ಮತ್ತು ಇ-ಎನ್‌ಡಬ್ಲ್ಯೂಆರ್ ರಸೀದಿಗಳಂತಹ ಇತರ ಹಣಕಾಸುಗಳನ್ನು ಇತ್ಯರ್ಥಪಡಿಸುವಲ್ಲಿ ಬ್ಯಾಂಕ್‌ಗಳು ರೈತರ ಕಡೆಗೆ ಉದಾರವಾದ ವಿಧಾನ ಅಳವಡಿಸಿಕೊಳ್ಳಬೇಕು. ಮುಂದಿನ ವರ್ಷಗಳಲ್ಲಿ ಭಾರತವು ಇತರ ದೇಶಗಳಿಗೆ ಆಹಾರ ಭದ್ರತೆಯಾಗಿ ಕಾರ್ಯನಿರ್ವಹಿಸುವುದರಿಂದ ಭಾರತದ ಆಹಾರ ಭದ್ರತೆಯು ದೃಢವಾಗಿರಬೇಕು " ಎಂದು ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಹೇಳಿದರು. ಈ ಬಗ್ಗೆ ಹೆಚ್ಚಿನ ಮಾಹಿನಿ ನೀಡಿರುವ ಕೇಂದ್ರ ಆಹಾರ ಸಚಿವಾಲಯದ ಕಾರ್ಯದರ್ಶಿ ಸಂಜೀವ್ ಚೋಪ್ರಾ, ಯೋಜನೆಯ ವಿಸ್ತರಣೆಯ ಗಮನಾರ್ಹವಾದ ಸಾಧ್ಯತೆಯ ಬಗ್ಗೆ ಕೂಡ ತಿಳಿಸಿದ್ದಾರೆ.
ಒಟ್ಟು ಕೃಷಿ ಸಾಲ 21 ಲಕ್ಷ ಕೋಟಿ ರೂಪಾಯಿಗಳಲ್ಲಿ ಪ್ರಸ್ತುತ ಬೆಳೆಯ ನಂತರದ ಸಾಲವು ಸುಮಾರು 40,000 ಕೋಟಿ ರೂಪಾಯಿಗಳಾಗಿದೆ. ಪ್ರಸ್ತುತ, ಇ-ಎನ್‌ಡಬ್ಲ್ಯೂಆರ್‌ಗಳ ಸಾಲವು 5.5 ಲಕ್ಷ ಕೋಟಿ ರೂಪಾಯಿಗಳ ವಿರುದ್ಧ ಕೇವಲ 4,000 ಕೋಟಿ ರೂಪಾಯಿಯಾಗಿದೆ. ಮುಂದಿನ 10 ವರ್ಷಗಳಲ್ಲಿ ಸುಗ್ಗಿಯ ನಂತರದ ಸಾಲವು 5.5 ಲಕ್ಷ ಕೋಟಿ ರೂ.ಗೆ ಏರಿಕೆಯಾಗುತ್ತದೆ ಎಂದು ನಾವು ಭಾವಿಸಿದ್ದೇವೆ. ಬ್ಯಾಂಕಿಂಗ್ ಮತ್ತು ವೇರ್‌ಹೌಸಿಂಗ್ ಕ್ಷೇತ್ರಗಳ ಸಂಘಟಿತ ಪ್ರಯತ್ನಗಳಿಂದ ಗುರಿಯನ್ನು ಸಾಧಿಸಬಹುದು. ಇ-ಕಿಸಾನ್ ಉಪಜ್ ನಿಧಿ ಆನ್‌ಲೈನ್ ಪ್ಲಾಟ್‌ಫಾರ್ಮ್ ಅನ್ನು ಸರಳೀಕರಿಸುವ ಅಗತ್ಯವಿದೆ. ರೈತರಲ್ಲಿ ವಾಗ್ದಾನ ಹಣಕಾಸು, ಠೇವಣಿ ಶುಲ್ಕಗಳನ್ನು ಪರಿಶೀಲಿಸುವುದು ಮತ್ತು ಪ್ರಸ್ತುತ 5,800 ಕ್ಕಿಂತ ಹೆಚ್ಚಿನ ಗೋದಾಮಿನ ನೋಂದಣಿಗಳನ್ನು ಹೆಚ್ಚಿಸುವುದು ಕೂಡ ಸೇರಿದೆ ಎಂದು ಅವರು ತಿಳಿಸಿದರು.
ಈ ಯೋಜನೆಯು ಮುಖ್ಯವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು, ಮಹಿಳೆಯರು, ಎಸ್‌ಸಿ, ಎಸ್‌ಟಿ ಮತ್ತು ದಿವ್ಯಾಂಗ (ಪಿಡಬ್ಲ್ಯೂಡಿ) ರೈತರ ಮೇಲೆ ಕನಿಷ್ಠ ಗ್ಯಾರಂಟಿ ಶುಲ್ಕದೊಂದಿಗೆ ಕೇಂದ್ರೀಕರಿಸಿ ವ್ಯವಹರಿಸುತ್ತದೆ. ಇದಲ್ಲದೆ, ಸಣ್ಣ ವ್ಯಾಪಾರಿಗಳು ,ವ್ಯವಹಾರಿಕೋದ್ಯಮಿಗಳು, ಎಂ.ಎಸ್.ಎಂ.ಇ.ಗಳು, ಎಫ್.ಪಿ.ಒ.ಗಳು ಸಹ ಈ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆಯಲಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ರೂ. 75 ಲಕ್ಷಗಳ (80 ರಿಂದ 85% ) ವ್ಯಾಪ್ತಿಯ ಸಾಲವನ್ನು ಮತ್ತು ಎಂ.ಎಸ್.ಎಂ.ಇ.ಗಳು, ಎಫ್.ಪಿ.ಒ.ಗಳು/ವ್ಯಾಪಾರಿಗಳಿಗೆ ರೂ. 200 ಲಕ್ಷಗಳ (75%) ವ್ಯಾಪ್ತಿಯ ಸಾಲವನ್ನು ಈ ಯೋಜನೆಯಡಿಯಲ್ಲಿ ನೀಡಲಾಗುತ್ತದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications