ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ಉಲ್ಲಂಘಣೆಯ ಆರೋಪದಲ್ಲಿ ಕೇಂದ್ರ ಸರ್ಕಾರವು ದೇಶದಲ್ಲಿ ಚಾಲ್ತಿಯಲ್ಲಿರುವ ಪ್ರಮುಖ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಕ್ರಮವನ್ನು ಕೈಗೊಂಡಿದೆ. ಪ್ಲಾಟ್‌ಫಾರ್ಮ್‌ನಲ್ಲಿನ ಕಾರಿನ ಸೀಟ್ ಬೆಲ್ಟ್ ಹಾಕಿದಿದ್ದರೆ ಬರುವ ಅಲರಾಂ ಅನ್ನು ನಿಲ್ಲಿಸುವ ಕ್ಲಿಪ್‌ಗಳನ್ನು ಮಾರಾಟ ಮಾಡುತ್ತಿರುವುದಕ್ಕೆ ಈ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಕೇಂದ್ರ ಸರ್ಕಾರವು ಕ್ರಮ ಕೈಗೊಂಡಿದೆ.
ಕಾರಿನಲ್ಲಿ ಪ್ರಯಾಣ ಮಾಡುವಾಗ ಬೆಲ್ಟ್ ಅನ್ನು ಹಾಕುವುದು ಸುರಕ್ಷತಾ ಕ್ರಮವಾಗಿದೆ. ಆದರೆ ಈ ಬೆಲ್ಟ್ ಹಾಕದೆ ಬರುವ ಅಲರಾಂ ಅನ್ನು ಕೂಡಾ ನಿಲ್ಲಿಸುವ ಕ್ಲಿಪ್ ಅನ್ನು ಮಾರಾಟ ಮಾಡುವ ಮೂಲಕ ಜನರ ಜೀವನ ಹಾಗೂ ಸುರಕ್ಷತೆಗೆ ಅಪಯಾ ತರಲಾಗುತ್ತಿದೆ ಎಂಬ ಆರೋಪ ಮಾಡಲಾಗಿದೆ. ಮುಖ್ಯ ಆಯುಕ್ತ ನಿಧಿ ಖರೆ ನೇತೃತ್ವದಲ್ಲಿ ಸಿಸಿಪಿಎ ಅಮೆಜಾನ್, ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್, ಶಾಪ್‌ಕ್ಲೂಸ್ ಮತ್ತು ಮೀಶೋ ವಿರುದ್ಧ ಗ್ರಾಹಕರ ಹಕ್ಕುಗಳ ಉಲ್ಲಂಘನೆ ಮತ್ತು ಅನ್ಯಾಯದ ವ್ಯಾಪಾರದ ಆದೇಶವನ್ನು ಜಾರಿಗೊಳಿಸಿದೆ.

ಕಾರು ಸೀಟ್ ಬೆಲ್ಟ್ ಅಲಾರಾಂ ಸ್ಟಾಪರ್ ಕ್ಲಿಪ್‌ಗಳ ಮಾರಾಟದ ವಿಷಯವು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ಪತ್ರದ ಮೂಲಕ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸಿಸಿಪಿಎ ಗಮನಕ್ಕೆ ಬಂದಿದೆ. ಪತ್ರವು ಕಾರು ಸೀಟ್ ಬೆಲ್ಟ್ ಅಲಾರ್ಮ್ ಸ್ಟಾಪರ್ ಕ್ಲಿಪ್‌ಗಳ ಅಸ್ಪಷ್ಟ ಮಾರಾಟದ ಸಮಸ್ಯೆಯನ್ನು ಒತ್ತಿ ಹೇಳಿದೆ. ಹಾಗೆಯೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಕ್ರಮ ಕೈಗೊಳ್ಳುವಂತೆ, ಸರಿಯಾದ ಸಲಹೆಯನ್ನು ನೀಡುವಂತೆ ವಿನಂತಿಸುದೆ.
"ಸೀಟ್ ಬೆಲ್ಟ್‌ಗಳನ್ನು ಧರಿಸದೇ ಇರುವಾಗ ಬರುವ ಎಚ್ಚರಿಕೆಯ ಬೀಪ್ ಅನ್ನು ನಿಲ್ಲಿಸುವ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ರಾಜಿ ಮಾಡಿಕೊಳ್ಳುವ ಅಂತಹ ವಸ್ತುಗಳ ಆನ್‌ಲೈನ್ ಮಾರಾಟಗಳು ಅಸುರಕ್ಷಿತ ಮತ್ತು ಗ್ರಾಹಕರ ಜೀವನ ಮತ್ತು ಸುರಕ್ಷತೆಗೆ ಅಪಾಯಕಾರಿ," ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಮೋಟಾರು ವಿಮೆಯನ್ನು ಕ್ಲೈಮ್ ಮಾಡುವಲ್ಲಿ ತೊಂದರೆ
ಕಾರಿನ ಸೀಟ್ ಸೀಟ್ ಬೆಲ್ಟ್ ಅಲಾರ್ಮ್ ಸ್ಟಾಪರ್ ಕ್ಲಿಪ್‌ಗಳನ್ನು ಬಳಸುವುದು ಮೋಟಾರು ವಿಮಾ ಪಾಲಿಸಿಗಳ ಪ್ರಕರಣಗಳಲ್ಲಿ ಕ್ಲೈಮ್ ಮೊತ್ತವನ್ನು ಬಯಸುವ ಗ್ರಾಹಕರಿಗೆ ಅಡಚಣೆಯಾಗಬಹುದು ಎಂದು ಕೂಡಾ ಹೇಳಲಾಗಿದೆ. ಇದರಲ್ಲಿ ವಿಮಾ ಕಂಪನಿಯು ಅಂತಹ ಕ್ಲಿಪ್‌ಗಳನ್ನು ಬಳಸುವುದಕ್ಕಾಗಿ ಹಕ್ಕುದಾರರ ನಿರ್ಲಕ್ಷ್ಯವನ್ನು ಉಲ್ಲೇಖಿಸಿ ಕ್ಲೈಮ್ ಅನ್ನು ನಿರಾಕರಿಸಬಹುದು.
ಇನ್ನೊಂದೆಡೆ ಸೀಟ್ ಬೆಲ್ಟ್ ಅನ್ನು ಬಳಸುವುದರಿಂದ ಏರ್‌ಬ್ಯಾಗ್ ಸರಿಯಾದ ಕುಶನ್ ಒದಗಿಸಲು ಮತ್ತು ಪ್ರಯಾಣಿಕರನ್ನು ಪೂರ್ಣ ಬಲದಿಂದ ಏಟು ಬೀಳದಂತೆ ತಡೆಯುವ ಕಾರ್ಯನಿರ್ವಹಿಸುತ್ತದೆ. ಇದು ಅಪಘಾತವಾದಾಗ ರಕ್ಷಣಾತ್ಮಕ ಕವಚವಾಗಿಯೂ ಕಾರ್ಯನಿರ್ವಹಿಸುತ್ತದೆ.
ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಿಂದ ಸೀಟ್ ಬೆಲ್ಟ್ ಅಲಾರ್ಮ್ ಸ್ಟಾಪರ್ ಮಾರಾಟ
ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು, ಉತ್ತೇಜಿಸಲು ಮತ್ತು ಜಾರಿಗೊಳಿಸಲು ಸಿಸಿಪಿಎ ಜವಾಬ್ದಾರಿಯಾಗಿದೆ. ಆದ್ದರಿಂದ, ಸಿಸಿಪಿಎ ಕಾರು ಸೀಟ್ ಬೆಲ್ಟ್ ಅಲಾರ್ಮ್ ಸ್ಟಾಪರ್ ಕ್ಲಿಪ್‌ಗಳ ಮಾರಾಟದ ಸಮಸ್ಯೆಯನ್ನು ಗಮನಿಸಿ ಅರ್ಥ ಮಾಡಿಕೊಂಡಿದೆ. ಹಲವಾರು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಲಭವಾಗಿ ಕ್ಲಿಪ್‌ಗಳನ್ನು ಪಡೆಯಲು ಸಾಧ್ಯವಾಗುತ್ತಿದೆ. ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬುವುದು ಸಿಸಿಪಿಎ ಗಮನಕ್ಕೆ ಬಂದಿದೆ.
ಇದು ಗ್ರಾಹಕ ಸಂರಕ್ಷಣಾ ಕಾಯಿದೆ, 2019ಯ ನೇರವಾದ ಉಲ್ಲಂಘನೆಯಾಗಿದೆ. ಹಾಗೆಯೇ ಇದರಿಂದಾಗಿ ಗ್ರಾಹಕರ ಅಮೂಲ್ಯ ಜೀವಕ್ಕೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತದೆ ಎಂದು ಸಿಸಿಪಿಎ ಹೇಳಿದೆ. ಕೆಲವು ಮಾರಾಟಗಾರರು ಕ್ಲಿಪ್‌ಗಳನ್ನು ಬಾಟಲಿ ಓಪನರ್, ಸಿಗರೇಟ್ ಲೈಟರ್ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ ಎಂಬುವುದು ಕೂಡಾ ವಿಚಾರಣೆಯ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ. ಇದರ ಆಧಾರದಲ್ಲಿ ಕಾರು ಸೀಟ್ ಬೆಲ್ಟ್ ಅಲಾರ್ಮ್ ಸ್ಟಾಪರ್ ಕ್ಲಿಪ್‌ಗಳ ಸರಿಸುಮಾರು 13,118 ಪಟ್ಟಿಗಳನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಲಾಗಿದೆ.
ರಸ್ತೆ ಅಪಘಾತಗಳ ಪ್ರಕರಣಗಳ ಹೆಚ್ಚಳ
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ಪ್ರಕಟಿಸಿದ ಇತ್ತೀಚಿನ ವರದಿಯ ಪ್ರಕಾರ 2021 ರಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣ ರಸ್ತೆ ಅಪಘಾತಗಳ ಪ್ರಮಾಣವು ಅಧಿಕವಾಗಿದೆ. ಈ ಅಪಘಾತದಲ್ಲಿ ಸುಮಾರು 16,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 8,438 ಚಾಲಕರಾಗಿದ್ದರೆ, ಉಳಿದವರು ಅಂದರೆ 7,959 ಪ್ರಯಾಣಿಕರು ಆಗಿದ್ದಾರೆ.
ಇದಲ್ಲದೆ, ಸರಿಸುಮಾರು 39,231 ಜನರು ಗಾಯಗೊಂಡಿದ್ದಾರೆ. ಅದರಲ್ಲಿ 16,416 ಚಾಲಕರು ಮತ್ತು 22,818 ಪ್ರಯಾಣಿಕರು ಆಗಿದ್ದಾರೆ. ರಸ್ತೆ ಅಪಘಾತ ಪ್ರಕರಣಗಳಲ್ಲಿ ಬಲಿಯಾದವರಲ್ಲಿ 18-45 ವರ್ಷ ವಯಸ್ಸಿನ ಯುವಕರು ಹೆಚ್ಚ, ಮೂರನೇ ಒಂದು ಭಾಗಕ್ಕಿಂತ ಹೆಚ್ಚಾಗಿದ್ದಾರೆ ಎಂದು ವರದಿಯು ಹೇಳಿದೆ.


Click it and Unblock the Notifications