ಬಹಳಷ್ಟು ಸಾರಿ ನಾವೆಲ್ಲರೂ ನಿಧಿ ಸಿಗಬೇಕು, ಸಿಕ್ಕ ಖಜಾನೆ ತುಂಬಾ ಹಣ, ಆಭರಣಗಳಿರಬೇಕು, ಒಮ್ಮಿಂದೊಮ್ಮೆಲೇ ಸಿರಿವಂತರಾಗಬೇಕು ಎಂದು ಅಂದುಕೊಳ್ಳುವುದು ಸಹಜ. ಆದರೆ ಚಂಡೀಗಢದ ವ್ಯಕ್ತಿಯೊಬ್ಬರಿಗೆ ನಿಧಿ ಬದಲು ಕೆಲವು ಕಾಗದ ಪತ್ರಗಳು ಲಭಿಸಿದ್ದು ಎಲ್ಲವೂ ಅಂದುಕೊಂಡಂತೆ ಆದರೆ ರಾತ್ರಿ ಬೆಳಗಾಗುವ ಮುನ್ನ ಸಿರಿವಂತಿಕೆ ಅವರ ಮನೆ ಬಾಗಿಲು ಬಡಿಯಲಿದೆ.
ಇಂತಹ ಕುತೂಹಲಕಾರಿ ಸಂಗತಿ ಚಂಡೀಗಢದಲ್ಲಿ ನಡೆದಿದ್ದು, ಈ ಕಾಗದ ಪತ್ರಗಳು ಅಂತಿಂಥ ಕಾಗದ ಪತ್ರಗಳಲ್ಲ. ಇವುಗಳು ಷೇರುಗಳ ಷೇರು ಪ್ರಮಾಣಪತ್ರಗಳಾಗಿದ್ದು ಆ ವ್ಯಕ್ತಿಯ ಅದೃಷ್ಟ ಖುಲಾಯಿಸಿದೆ ಎಂದು ನೆಟ್ಟಿಗರು ಭವಿಷ್ಯ ನುಡಿಯಲಾರಂಭಿಸಿದ್ದಾರೆ. ಹಾಗಿದ್ರೆ ಆ ವ್ಯಕ್ತಿ ಯಾರು, ಯಾವ ಕಂಪನಿಯ ಷೇರು ಎಂಬುವುದನ್ನು ನೋಡೋಣ.

ಚಂಡೀಗಢದ ರಟ್ಟನ್ ಧಿಲ್ಲೋನ್ ಅವರಿಗೆ ಕಾರುಗಳು ಎಂದರೆ ಪಂಚಪ್ರಾಣ. ಅವರು ಎಂದಿನಂತೆ ಮನೆ ಸ್ವಚ್ಚಗೊಳಿಸುವಾಗ ಕೆಲ ಕಾಗದಪತ್ರಗಳು ಲಭಿಸಿದ್ದು, ಅವುಗಳು ಷೇರು ಪತ್ರ ಅರಿವಾದರೂ ಷೇರು ಮಾರುಕಟ್ಟೆಯ ಬಗ್ಗೆ ಅವರು ಆಳವಾಗಿ ತಿಳಿದುಕೊಂಡವರಲ್ಲ. ಹೀಗಿರುವಾಗ ಅನಿರೀಕ್ಷಿತ ಸಿಕ್ಕ ಷೇರು ಪ್ರಮಾಣಪತ್ರವನ್ನು ಮುಂದೇನು ಮಾಡಬೇಕು ಎಂದು ತಿಳಿಯದೇ ಅವರು ಸಾಮಾಜಿಕ ಮಾಧ್ಯಮದ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದು ಈಗ ಸಿಕ್ಕಪಟ್ಟೆ ವೈರಲ್ ಆಗಿದೆ.
ಧಿಲ್ಲೋನ್ 1988 ರಲ್ಲಿ ಮೂಲತಃ ಪ್ರತಿ ಷೇರಿಗೆ ಕೇವಲ 10 ರೂ.ಗೆ ಖರೀದಿಸಲಾದ ಷೇರುಗಳ ಷೇರು ಪ್ರಮಾಣಪತ್ರಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಷೇರುಗಳು ದಿವಂಗತ ಕುಟುಂಬದ ಸದಸ್ಯರಿಗೆ ಸೇರಿವೆ ಮತ್ತು ಅವುಗಳ ಪ್ರಸ್ತುತ ಮೌಲ್ಯ ಅಥವಾ ಅವುಗಳನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಅವರಿಗೆ ತಿಳಿದಿರಲಿಲ್ಲ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಏನಿದೆ?
"ನಮ್ಮ ಮನೆಯಲ್ಲಿ ಕೆಲವು ಹಳೆಯ ಷೇರು ಪತ್ರಗಳು ಸಿಕ್ಕಿವೆ. ಆದರೆ ಷೇರು ಮಾರುಕಟ್ಟೆಯ ಬಗ್ಗೆ ನಮಗೆ ಹೆಚ್ಚಿನ ಜ್ಞಾನವಿಲ್ಲ. ಈ ಷೇರುಗಳು ಇನ್ನೂ ನಮ್ಮ ಹೆಸರಿನಲ್ಲಿವೆಯೇ ಮತ್ತು ಅವುಗಳನ್ನು ಹೇಗೆ ಪಡೆಯುವುದು ಎಂದು ನಮಗೆ ತಿಳಿಯುತ್ತಿಲ್ಲ. ಈ ಬಗ್ಗೆ ಪರಿಣತಿ ಹೊಂದಿರುವ ಯಾರಾದರೂ ನಮಗೆ ಸಹಾಯ ಮಾಡಬಹುದೇ?" ಎಂದಿದ್ದಾರೆ.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ ಪ್ರಾಧಿಕಾರ (IEPFA), ಹೆಚ್ಚಿನ ಸಹಾಯಕ್ಕಾಗಿ ಧಿಲ್ಲೋನ್ ಅವರ ಸಂಪರ್ಕ ವಿವರಗಳನ್ನು ಕಳುಹಿಸಲು ಕೇಳಿಕೊಂಡಿದೆ. ಏತನ್ಮಧ್ಯೆ, ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗವು ಆರ್ಥಿಕ ವಿಶ್ಲೇಷಣೆಯ ಕೇಂದ್ರವಾಗಿ ಮಾರ್ಪಟ್ಟಿತು. ಹಲವಾರು ಬಳಕೆದಾರರು ಷೇರುಗಳ ಪ್ರಸ್ತುತ ಮೌಲ್ಯವನ್ನು ಲೆಕ್ಕಹಾಕಿ, ಪ್ರಸ್ತುತ ಸಮಯದಲ್ಲಿ ಅದರ ಮೌಲ್ಯ 11 ಲಕ್ಷ ರೂ.ಗಳಿಗಿಂತ ಹೆಚ್ಚಾಗಿರುತ್ತದೆ ಎಂದು ಅಂದಾಜಿಸಿದ್ದಾರೆ.
ಈ ವಿಚಿತ್ರ ಘಟನೆಗೆ ಹಾಸ್ಯದ ತುಣುಕನ್ನು ಸೇರಿಸಲು ನೆಟ್ಟಿಗರು ಅವಕಾಶವನ್ನು ಬಳಸಿಕೊಂಡಿದ್ದು "ನೀವು ರಹಸ್ಯ ಮಿಲಿಯನೇರ್, ಕೆಲವು ವಿಂಟೇಜ್ ಷೇರುಗಳನ್ನು ಹೊಂದಿದ್ದೀರಿ" ಎಂದು ಒಬ್ಬ ಬಳಕೆದಾರರು ಹೇಳಿದ್ರೆ, ಮತ್ತೊಬ್ಬರು, "ರಟ್ಟನ್ ಭಾಯ್, ಮನೆಯನ್ನು ಸರಿಯಾಗಿ ಹುಡುಕಿ. ಯಾರಿಗೆ ಗೊತ್ತು, ನೀವು ಕೆಲವು MRF ಷೇರುಗಳನ್ನು ಅಡಗಿರಬಹುದು" ಹಾಸ್ಯಾತ್ಮಾಕ ಕಾಮೆಂಟ್ ಮಾಡಿದ್ದಾರೆ.
ಒಟ್ಟಾರೆ ಷೇರು ಮಾರುಕಟ್ಟೆಯು ಅನಿಯಂತ್ರಿತ ಮತ್ತು ಅನಿರೀಕ್ಷಿತವಾಗಿರುವಂತೆಯೇ ರಟ್ಟನ್ ಧಿಲ್ಲೋನ್ ಅವರ ಮನೆಯಲ್ಲಿ ಸಿಕ್ಕಿದ ಹಳೆಯ ಷೇರು ಪತ್ರಗಳ ಅನಿರೀಕ್ಷಿತ ಆವಿಷ್ಕಾರವು ಅವರ ಜೀವನದಲ್ಲಿ ಹೊಸ ಬದಲಾವಣೆ ತಂದಿದೆ.
More From GoodReturns

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications