ದೀಪಾವಳಿ ಹಬ್ಬ ಆಚರಣೆಗೆ ಇನ್ನೇನು ಸಮಯ ದೂರವಿಲ್ಲ. ಈ ಸಮಯದಲ್ಲಿ ದೀಪಾವಳಿ ಸೇರಿದಂತೆ ಇತರ ಹಬ್ಬಗಳಿಗಾಗಿ ಮಾರುಕಟ್ಟೆಗಳನ್ನು ಅಲಂಕರಿಸಲಾಗುತ್ತದೆ. ಇದರೊಂದಿಗೆ ಕಚೇರಿಗಳಲ್ಲೂ ದೀಪಾವಳಿ ಹಬ್ಬದ ಆಚರಣೆಗೆ ಸಿದ್ಧತೆ ಆರಂಭವಾಗಿದೆ. ದೀಪಾವಳಿಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್ ನೀಡಲು ಪ್ರಾರಂಭಿಸಿವೆ. ಅದ್ರಲ್ಲೂ ವಿಶೇಷವಾಗಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ದೀಪವಳಿ ಬೋನಸ್ ಆಗಿ ಕಾರುಗಳನ್ನೇ ಉಡುಗೊರೆಯಾಗಿ ನೀಡಿದೆ.
ಹೌದು... ಒಂದೆಡೆ ಇತ್ತೀಚಿನ ದಿನಗಳಲ್ಲಿ ಅನೇಕ ಉದ್ಯೋಗಿಗಳು ಕಂಪನಿಗಳಲ್ಲಿನ ಕಳಪೆ ಕೆಲಸದ ಸಂಸ್ಕೃತಿಯ ಬಗ್ಗೆ ಧ್ವನಿಯೆತ್ತಿರುವುದು ಗೊತ್ತೇ ಇದೆ. ಈ ನಡುವೆ ಚೆನ್ನೈ ಮೂಲದ ಒಂದು ಸಂಸ್ಥೆಯು ತನ್ನ ಉದ್ಯೋಗಿಗಳ ಕೆಲಸದ ಮೇಲಿನ ಉತ್ಸಾಹ ಹಾಗೂ ಸ್ಥೈರ್ಯವನ್ನು ಹೆಚ್ಚಿಸಲು ದೀಪಾವಳಿ ಉಡುಗೊರೆಯಾಗಿ ಕಾರು ಹಾಗೂ ಬೈಕ್‌ಗಳನ್ನು ನೀಡಿದೆ.

ಅಚ್ಚರಿ ಅನಿಸಿದರೂ ಇದು ನಿಜ. ಸಾಮಾನ್ಯವಾಗಿ ಹಬ್ಬಗಳು ಬಂದರೆ ಕಂಪನಿಗಳು ಒಂದಿಷ್ಟು ಹಣ, ಅಥವಾ ಸಣ್ಣಪುಟ್ಟ ಉಡುಗೊರೆಗಳನ್ನು ನೀಡುವುದು ಇದೆ. ಆದರೆ ಚೆನ್ನೈ ಮೂಲದ ಸ್ಟ್ರಕ್ಚರಲ್ ಸ್ಟೀಲ್ ಡಿಸೈನ್ ಮತ್ತು ಡಿಟೇಲಿಂಗ್ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ 28 ಕಾರುಗಳು ಮತ್ತು 29 ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದೆ.
ಕಂಪನಿ ತನ್ನ ಉದ್ಯೋಗಿಗಳ ಶ್ರಮವನ್ನು ಶ್ಲಾಘಿಸಲು ಹ್ಯುಂಡೈ, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಮರ್ಸಿಡಿಸ್-ಬೆನ್ಜ್‌ನಂತಹ ( Hyundai, Maruti Suzuki, Tata Motors, and Mercedes-Benz) ಬ್ರಾಂಡ್ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. 2005 ರಲ್ಲಿ ಸ್ಥಾಪಿತವಾದ ಈ ಕಂಪನಿಯು ಸಾಧಾರಣ ಹಿನ್ನೆಲೆಯಿಂದ ಸುಮಾರು 180ಕ್ಕೂ ಹೆಚ್ಚು ನುರಿತ ಉದ್ಯೋಗಿಗಳನ್ನು ಹೊಂದಿದೆ.
ನಮ್ಮ ಉದ್ಯೋಗಿಗಳೇ ನಮ್ಮ ಆಸ್ತಿ...
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಕಣ್ಣನ್ ಮಾತನಾಡಿ, ಕಂಪನಿಯು ಉದ್ಯೋಗಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಅವರ ಕೊಡುಗೆಯನ್ನು ಅಳೆಯುತ್ತದೆ. "ಕಂಪನಿಯ ಯಶಸ್ಸಿನಲ್ಲಿ ಅವರ (ಉದ್ಯೋಗಿಗಳ) ದಣಿವರಿಯದ ಪ್ರಯತ್ನಗಳಿದೆ. ಅವರಿಗೆನಾವು ನಮ್ಮ ಮೆಚ್ಚುಗೆಯನ್ನು ತೋರಿಸಲು ಬಯಸುತ್ತೇವೆ. ನಮ್ಮ ಉದ್ಯೋಗಿಗಳು ನಮ್ಮ ದೊಡ್ಡ ಆಸ್ತಿ ಎಂದು ನಾವು ನಂಬುತ್ತೇವೆ. ನಮ್ಮ ಉದ್ಯೋಗಿಗಳು ಅಸಾಧಾರಣ ಬದ್ಧತೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ್ದಾರೆ. ಅವರ ಶ್ರಮವೇ ನಮ್ಮ ಬೆಳವಣಿಗೆಯಾಗಿದೆ. ಒಂದು ಕಂಪನಿಯ ಅಭಿವೃದ್ಧಿ ಪ್ರತಿಯೊಬ್ಬ ಉದ್ಯೋಗಿಗಳ ಸಾಧನೆಯಾಗಿದೆ ಎಂದು ಹೇಳಲು ನಾವು ಹೆಮ್ಮೆಪಡುತ್ತೇವೆ" ಎಂದು ಶ್ರೀಧರ್ ಕಣ್ಣನ್ ಹೇಳಿದ್ದಾರೆ.
ಕಂಪನಿಯು ತನ್ನ ಉದ್ಯೋಗಿಗಳಿಗೆ ಉಡುಗೊರೆ ನೀಡುವಲ್ಲಿ ಮಿತಿಯನ್ನು ದಾಟಿರುವುದು ಇದೇ ಮೊದಲಲ್ಲ. 2022 ರಲ್ಲಿ ಇದು ಇಬ್ಬರು ಹಿರಿಯ ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿತು. ಕಣ್ಣನ್ ಅವರು ಇನ್ನಷ್ಟು 'ವಾರ್ತಾ ಭಾರತಿ'ಗೆ ಮಾತನಾಡಿ, "ನಾವು ಹೆಚ್ಚು ಪ್ರೇರಣೆ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಅವರಿಗೆ ಕಾರು ಅಥವಾ ಬೈಕ್ ಖರೀದಿಸುವುದು ಕನಸಿದ್ದರೆ ನಾವು ಉದ್ಯೋಗಿಗಳಿಗೆ ಬೈಕುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ. 2022 ರಲ್ಲಿ ನಾವು ನಮ್ಮ ಇಬ್ಬರು ಹಿರಿಯ ಉದ್ಯೋಗಿಗಳಿಗೆ ಕಾರು ನೀಡಿದ್ದೇವೆ. ನಾವು ಇಂದು ಮಾರುತಿ ಸುಜುಕಿ, ಹ್ಯುಂಡೈ, ಮರ್ಸಿಡಿಸ್ ಬೆಂಜ್ ಸೇರಿ ಒಟ್ಟು 28 ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದೇವೆ ಎಂದರು.
ಇದಲ್ಲದೆ ಹೆಚ್ಚುವರಿಯಾಗಿ, ಕಂಪನಿಯು ಉದ್ಯೋಗಿಗಳ ಮದುವೆಗೆ ಆರ್ಥಿಕ ಸಹಾಯವನ್ನು ಸಹ ನೀಡುತ್ತದೆ. ಈ ವರ್ಷ ಅದನ್ನು 50,000 ರಿಂದ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಹಂತಗಳ ಹಿಂದಿನ ಉದ್ದೇಶವು ಉದ್ಯೋಗಿ ನೈತಿಕತೆ, ಪ್ರೇರಣೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದಾಗಿದೆ ಎಂದು ಕಣ್ಣನ್ ಹೇಳಿದ್ದಾರೆ.
More From GoodReturns

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications