ಚೋಳಮಂಡಲಂ ಹಣಕಾಸು ನಿರ್ವಹಣೆಗೆ ಕೈಜೋಡಿಸಿದ ಇನ್ಫೋಸಿಸ್ ಫಿನಾಕಲ್ ಟ್ರೆಜರಿ ಪ್ಲಾಟ್‌ಫಾರ್ಮ್‌..!

ತನ್ನ ಹಣಕಾಸು ವ್ಯವಸ್ಥೆಯನ್ನು ಮತ್ತಷ್ಟು ಪ್ರಬಲಗೊಳಿಸಲು, ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಮತ್ತು ಫೈನಾನ್ಸ್‌ ಲಿಮಿಟೆಡ್ (ಚೋಲಾ) ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಇನ್ಫೋಸಿಸ್ ಫಿನಾಕಲ್ ಟ್ರೆಜರಿ ಪ್ಲಾಟ್‌ಫಾರ್ಮ್ ಈಗ ಚೋಲಾದ ದೈನಂದಿನ ಕಾರ್ಯಾಚರಣೆಗೆ ಸೇರಿಕೊಂಡಿದೆ. ಅಂದರೆ ಇನ್ಫೋಸಿಸ್ ಫಿನಾಕಲ್ ಟ್ರೆಜರಿ ಪ್ಲಾಟ್‌ ಫಾರ್ಮ್‌ನ ಬಳಸಿಕೊಂಡು, ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಮತ್ತು ಫೈನಾನ್ಸ್ ಲಿಮಿಟೆಡ್ ತನ್ನ ಹಣಕಾಸು ನಿರ್ವಹಣೆಯನ್ನು ಸುಧಾರಿಸಲು ಮುಂದಾಗಿದೆ.

ಚೋಳಮಂಡಲಂ ಹಣಕಾಸು ನಿರ್ವಹಣೆಗೆ ಹೊಸ ಆಯಾಮ..!

ಈ ಪ್ಲಾಟ್‌ಫಾರ್ಮ್ ಚೋಲಾಗೆ ಹೇಗೆ ಸಹಾಯಕ..?

ಈ ಹೊಸ ಪ್ಲಾಟ್‌ಫಾರ್ಮ್ ಒಂದು ಏಕೀಕೃತ ವೆಬ್-ಆಧಾರಿತ ವ್ಯವಸ್ಥೆಯಾಗಿದೆ. ಹಾಗೂ ಇದು ಕ್ಲೌಡ್ ತಂತ್ರಜ್ಞಾನವನ್ನು ಬಳಸಿಕೊಂಡಿರುವುದರಿಂದ, ಎಲ್ಲಾ ಹಣಕಾಸಿನ ನಿರ್ವಹಣೆ ಕಾರ್ಯ ಸುಲಭ ಹಾಗೂ ಸಮರ್ಥವಾಗಿರುತ್ತದೆ. ಹೀಗಾಗಿ ಇದು ಚೋಲಾ ಸಂಸ್ಥೆಗೂ ಸಹಾಯಕಾರಿಯಾಗಲಿದೆ. ಇದರಿಂದ ಚೋಲಾ ಸಂಸ್ಥೆ ಚೋಲಾ ಸಂಸ್ಥೆ ತನ್ನ ಹಣಕಾಸು ವ್ಯವಸ್ಥೆಯನ್ನು ಸರಳಗೊಳಿಸಲು ಮತ್ತು ದೈನಂದಿನ ಕಾರ್ಯಗಳನ್ನು ಸುಗಮಗೊಳಿಸಲು ಸಾಧ್ಯವಾಗುತ್ತದೆ.

ಇದರ ಪ್ರಮುಖ ಪ್ರಯೋಜನಗಳೇನು..?

ಸಾಲ ಮತ್ತು ಹೂಡಿಕೆ ನಿರ್ವಹಣೆ:

ಚೋಳಮಂಡಲ ಇನ್ವೆಸ್ಟ್‌ಮೆಂಟ್ ಮತ್ತು ಫೈನಾನ್ಸ್ ಲಿಮಿಟೆಡ್ ಕಂಪನಿಯು ಇನ್ಫೋಸಿಸ್ ಫಿನಾಕಲ್ ಟ್ರೆಜರಿಯಿಂದ ತನ್ನ ಸಾಲಗಳು, ಬಾಂಡ್‌ಗಳು, ಮಾರುಕಟ್ಟೆ ಮೇಲಿನ ಸಾಲಗಳು ಮತ್ತು ಇತರೆ ಹಣಕಾಸು ಸಂಪತ್ತುಗಳನ್ನು ಸುಲಭವಾಗಿ ನಿರ್ವಹಿಸಬಹುದು. ಅನಗತ್ಯವಾಗಿ ಹೆಚ್ಚಿನ ಹೊರೆಯೂ ಬೀಳುವುದಿಲ್ಲ.

ಹಣಕಾಸು ವ್ಯವಹಾರಗಳ ಸರಳೀಕರಣ:

ಹಣಕಾಸು ವ್ಯವಸ್ಥೆಯನ್ನು ಸುಧಾರಿಸುವ ಹೊರೆ ಹೊತ್ತಿರುವ ಇನ್ಫೋಸಿಸ್ ಫಿನಾಕಲ್ ಟ್ರೆಜರಿಯ ಅನುಕೂಲದಿಂದದ, ಹಣ ವರ್ಗಾವಣೆ, ಲೋನ್ ಮರುಪಾವತಿ, ಬಡ್ಡಿ ಮತ್ತು ತೆರಿಗೆ ಸಂಬಂಧಿತ ಲೆಕ್ಕಪತ್ರಗಳನ್ನು ಸುಗಮವಾಗಿ ಸಾಗುತ್ತದೆ.

ಸ್ವಯಂಚಾಲಿತ ಲೆಕ್ಕಗಾರಿಕೆ:

ಈ ಹೊಸ ವ್ಯವಸ್ಥೆಯಿಂದ ಲೆಕ್ಕಪತ್ರಗಳಲ್ಲಿ ಎದುರಾಗುವ ಬದಲಾವಣೆಗಳನ್ನು, ಸರಾಗವಾಗಿ ಮಾಡಬಹುದು. ಇದು ಲೆಕ್ಕ ಪರಿಶೋಧನೆಯನ್ನ ಸುಲಭಗೊಳಿಸುತ್ತದೆ. ಅಲ್ಲದೇ ಇದರಿಂದ ಹಣಕಾಸು ಮೌಲ್ಯಮಾಪನ ಮತ್ತು ಅಪಾಯಗಳನ್ನು ಸರಳವಾಗಿ ವಿಶ್ಲೇಷಿಸಲು ಈ ಪ್ಲಾಟ್‌ಫಾರ್ಮ್ ಸಹಾಯ ಮಾಡುತ್ತದೆ.

ಇನ್ನು ಈ ಬಗ್ಗೆ ಮಾತನಾಡಿರುವ ಚೋಲಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕುಮಾರ್, ನಮ್ಮ ಸಂಸ್ಥೆಯ ಬೆಳವಣಿಗೆ ಬಹಳ ವೇಗವಾಗಿ ನಡೆಯುತ್ತಿದೆ. ಹಣಕಾಸು ಕಾರ್ಯಾಚರಣೆಗಳನ್ನು ಸಮರ್ಥವಾಗಿ ನಿರ್ವಹಿಸಲು, ನಾವು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಅಲ್ಲದೇ ಫಿನಾಕಲ್ ಟ್ರೆಜರಿ ಪ್ಲಾಟ್‌ಫಾರ್ಮ್ ನಮ್ಮ ಬ್ಯಾಂಕಿಂಗ್ ಮತ್ತು ಹೂಡಿಕೆ ನಿರ್ವಹಣೆಗೆ ಬಹಳ ಸಹಾಯ ಮಾಡುತ್ತಿದೆ. ಇದರ ಮೂಲಕ ಹಣಕಾಸು ವ್ಯವಹಾರಗಳ ವೇಗ ಹೆಚ್ಚಾಗಿದೆ ಮತ್ತು ಅಪಾಯ ನಿರ್ವಹಣೆಯಲ್ಲೂ ಉತ್ತಮತೆಯನ್ನು ಸಾಧಿಸುತ್ತಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಇನ್ಫೋಸಿಸ್ ಫಿನಾಕಲ್ ಮುಖ್ಯ ವ್ಯಾಪಾರಾಧಿಕಾರಿ ಸಚಿತ್ ವಿಜಯ್‌ಕುಮಾರ್ ಕೂಡ ಮಾತನಾಡಿದರು. ಭಾರತದಲ್ಲಿ NBFC ವಲಯವು ದೊಡ್ಡ ಬದಲಾವಣೆಯ ಹಂತದಲ್ಲಿದೆ. ಹಾಗೂ ಇಲ್ಲಿ ನಿಯಮಗಳು ಕಟ್ಟುನಿಟ್ಟಾಗುತ್ತಿರುವುದರಿಂದ ಹಣಕಾಸಿನ ಸವಾಲುಗಳು ಕೂಡ ಹೆಚ್ಚಾಗುತ್ತಿವೆ. ಇಂತಹ ಸಮಯದಲ್ಲಿ NBFCಗಳಿಗೆ ನವೀನ, ಸಮರ್ಥ ಮತ್ತು ಡಿಜಿಟಲ್ ಪರಿಹಾರಗಳು ಅಗತ್ಯ. ಫಿನಾಕಲ್ ಟ್ರೆಜರಿ ಪ್ಲಾಟ್‌ಫಾರ್ಮ್ NBFCಗಳಿಗೆ ಸುಧಾರಿತ ಟ್ರೆಜರಿ ನಿರ್ವಹಣೆ ನೀಡಲು ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ.

ಚೋಳಮಂಡಲಂ ಫೈನಾನ್ಸ್ ಕುರಿತು ಪರಿಚಯ:

1978ರಲ್ಲಿ ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಮತ್ತು ಫೈನಾನ್ಸ್ ಲಿಮಿಟೆಡ್, ಮರುಗಪ್ಪ ಗುಂಪಿನ ಹಣಕಾಸು ಸೇವಾ ವಿಭಾಗವಾಗಿ ಸ್ಥಾಪನೆಯಾಯಿತು. ಇದು ಮೊದಲಿನಿಂದಲೂ ಒಂದು ಪ್ರಮುಖ ಹಣಕಾಸು ಸಂಸ್ಥೆಯಾಗಿ ಬೆಳೆದುಕೊಂಡು ಬಂದಿದೆ. ಸದ್ಯ ಈ ಚೋಳಮಂಡಲಂ ಫೈನಾನ್ಸ್ ಲಿಮಿಟೆಡ್ 1577 ಶಾಖೆಗಳನ್ನು ಹೊಂದಿದೆ. ಹಾಗೂ 1,89,141 ಕೋಟಿ ರೂಪಾಯಿಗಿಂತ ಹೆಚ್ಚು ಆಸ್ತಿಗಳನ್ನು ನಿರ್ವಹಿಸುತ್ತಿದೆ. ಸಂಸ್ಥೆಯ ಉದ್ದೇಶ ಗ್ರಾಹಕರಿಗೆ ಉತ್ತಮ ಜೀವನ ನೀಡುವುದು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು.

ಇನ್ಫೋಸಿಸ್ ಫಿನಾಕಲ್:

ಇನ್ಫೋಸಿಸ್‌ನ ಅಂಗಸಂಸ್ಥೆಯಾದ ಇನ್ಫೋಸಿಸ್‌ ಫಿನಾಕಲ್ , NBFC ಮತ್ತು ಬ್ಯಾಂಕುಗಳಿಗೆ ಆಧುನಿಕ, ಡಿಜಿಟಲ್, ಕ್ಲೌಡ್-ಆಧಾರಿತ ಪರಿಹಾರಗಳನ್ನು ಒದಗಿಸುತ್ತದೆ. ಈ ಸಂಸ್ಥೆಯ ಕೋರ ಬ್ಯಾಂಕಿಂಗ್, ಸಾಲ ನಿರ್ವಹಣೆ, ಡಿಜಿಟಲ್ ಎಂಗೇಜ್ಮೆಂಟ್, ಪಾವತಿಗಳು, ಟ್ರೆಜರಿ, ಆನಾಲಿಟಿಕ್ಸ್, AI ಮತ್ತು ಬ್ಲಾಕ್‌ಚೈನ್ ಸೇವೆಗಳು ಪ್ರಮುಖವಾಗಿವೆ.

ಇನ್ನು ಚೋಳಮಂಡಲಂ ಫೈನಾನ್ಸ್ ತನ್ನ ಹಣಕಾಸು ಕಾರ್ಯಾಚರಣೆಗಳನ್ನು ಇನ್ನಷ್ಟು ಸುಧಾರಿಸಲು ಇನ್ಫೋಸಿಸ್ ಫಿನಾಕಲ್ ಟ್ರೆಜರಿ ಪ್ಲಾಟ್‌ಫಾರ್ಮ್ ಅನ್ನು ಅಳವಡಿಸಿಕೊಂಡಿದ್ದು, ಮತ್ತೊಂದು ಹಂತದ ಬೆಳವಣಿಗೆಯಾಗಲಿದೆ. ಇದರಿಂದ ಹಣಕಾಸು ವ್ಯವಸ್ಥೆಯಲ್ಲಿನ ಸರಳೀಕರಣ, ಅಪಾಯ ನಿರ್ವಹಣೆ ಮತ್ತು ವೇಗ ಹೆಚ್ಚಳ ಸಾಧ್ಯವಾಗಿದೆ. ಈ ಹೊಸ ತಂತ್ರಜ್ಞಾನ NBFC ಗಳಿಗೆ ಒಂದು ಉತ್ತಮ ಮಾರ್ಗದರ್ಶನ ನೀಡಲಿದೆ ಮತ್ತು ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿಗೆ ಕಾರಣವಾಗಲಿದೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+