ಮದುವೆ ಅಂದರೆ ಕೇವಲ ಇಬ್ಬರು ವ್ಯಕ್ತಿಗಳಲ್ಲ ನಡುವೆ ನಡೆಯುವ ಒಪ್ಪಂದವಲ್ಲ, ಎರಡು ಕುಟುಂಬಗಳ ಮಿಲನ. ಬೇರೆ ಬೇರೆ ಆಲೋಚನೆಗಳು, ಬೇರೆ ಬೇರೆ ಸಂಸ್ಕೃತಿಗಳು, ಬೇರೆ ಬೇರೆ ಮನಸ್ಥಿತಿಗಳು ಒಂದಾಗುವ ಸಮಯವೇ ವಿವಾಹ. ಹಾಗಾಗಿ ಮದುವೆ ಯಶಸ್ವಿಯಾಗಲು ಎರಡೂ ಕುಟುಂಬಗಳು ಒಂದೇ ವೇದಿಕೆಯಲ್ಲಿ ಒಟ್ಟಿಗೆ ಬರಬೇಕು.
ಈ ಹಿಂದೆ ಹೆಣ್ಣು - ಗಂಡು ಜೋಡಿಯಾಗಬೇಕು ಎಂದರೆ ಮೊದಲು ಹಿರಿಯರು ಜಾತಕ, ಗೋತ್ರಾ, ಕುಂಡಲಿ ನೋಡಿ ಬಳಿಕ ಒಪ್ಪುವುದೋ ಬಿಡುವುದೋ ಎಂದು ನಿರ್ಧರಿಸುತ್ತಿದ್ದರು. ಇದರೊಂದಿಗೆ ವರದಕ್ಷಿಣೆ ಪಾಲು ಇತ್ತು . ಆದರೆ ಇಲ್ಲೊಂದು ಮದುವೆ ಮುರಿದುಬಿದ್ದಿರುವುದು ಜಾತಕದಿಂದ ಅಲ್ಲ, ಸಿಬಿಲ್ ಸ್ಕೋರಿನಿಂದ ಎಂಬ ಅಘಾತಕಾರಿ ವಿಚಾರ ನೀವು ನಂಬಲೇಬೇಕು.

ಹೇಳಿ ಕೇಳಿ ಇದು ತಂತ್ರಜ್ಞಾನ ಯುಗ, ಇಂದಿನ ತಂತ್ರಜ್ಞಾನ ಯುಗದಲ್ಲಿ, ಹುಡುಗಿಯ ಮನೆಯವರು ಒಬ್ಬ ಯುವಕನನ್ನು ಸಿಬಿಲ್ ಸ್ಕೋರ್ ಎಂಬ ವಿಶೇಷ ಕಾರಣಕ್ಕೆ ತಿರಸ್ಕರಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಮಾತುಕತೆ ನಡೆದು ಮದುವೆ ಹಂತಕ್ಕೆ ಬಂದು , ನಂತರ ಮಹಾರಾಷ್ಟ್ರದ ಮುರ್ತಿಜಾಪುರದಲ್ಲಿ ಹುಡುಗಿ ಕಡೆಯವರು ಹುಡುಗನನ್ನು ಕಡಿಮೆ CIBIL ಸ್ಕೋರ್ ಇರೋ ಕಾರಣಕ್ಕೆ ಬೇಡ ಎಂದು ಹೇಳಿದ್ದಾರೆ. ಈ ಘಟನೆಯು ಅರೇಂಜ್ಡ್ ಮ್ಯಾರೇಜ್‌ಗಳಲ್ಲಿ ಆರ್ಥಿಕ ಸ್ಥಿರತೆಯ ಪ್ರಾಮುಖ್ಯತೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.
ಏನಿದು ಪ್ರಕರಣ?
ಮುರ್ತಿಜಾಪುರದಲ್ಲಿ ಎರಡು ಕುಟುಂಬಗಳ ನಡುವೆ ಮದುವೆ ಮಾತುಕತೆ ನಡೆಯುತ್ತಿತ್ತು. ಹುಡುಗ- ಹುಡುಗಿಗೂ ಮದುವೆ ಬಗ್ಗೆ ಒಪ್ಪಿಗೆ ಇತ್ತು. ಇನ್ನೇನು ಎಲ್ಲವು ಸರಿಯಾಗಿಯೇ ಇದೆ ಎಂದು ವಿವಾಹಕ್ಕೆ ಬೇಕಾದ ಮಾತುಕತೆ ಚರ್ಚೆ ನಡೆಸಿ ಎರಡೂ ಕಡೆಯವರು ಪರಸ್ಪರ ಒಪ್ಪಿಗೆ ಸೂಚಿಸಿ ವಿವಾಹ ನಿಶ್ವಯ ಮಾಡಿ ಮುಂದುವರಿಯುವುದರಲ್ಲಿದ್ದರು. ಆದರೆ ಹುಡುಗಿಯ ಮಾವ ಎಲ್ಲವೂ ಸರಿಯಾಗಿರುವಲೇ ಹುಡುಗನ ಸಿಬಿಲ್ ಸ್ಕೋರ್ ನೋಡುವಂತೆ ಒತ್ತಾಯಿಸಿದ್ದಾರೆ. ಸರಿ ಇದೂ ಅಗಿಬಿಡಲಿ ಎಂದು ಮನೆಯವರು ಸೇರಿ ವರನ ಸಿಬಿಲ್ ಸ್ಕೋರ್ ಪರಿಶೀಲಿಸಿದಾಗ ಹೆಣ್ಣಿನ ಸಂಬಂಧಿಕರು ಆಶ್ಚರ್ಯಕ್ಕೊಳಗಾಗಿದ್ದಾರೆ. ಆತನ ಆರ್ಥಿಕ ಸ್ಥಿತಿಯ ಜಾತಕ ಬಯಲಾಗಿತ್ತು.!
CIBIL ಸ್ಕೋರ್ ಕಳಪೆ ಕ್ರೆಡಿಟ್ ಇತಿಹಾಸವನ್ನು ಸೂಚಿಸುತ್ತದೆ. ಇದು ಸಾಮಾನ್ಯವಾಗಿ ಅನಿಯಮಿತ ಪಾವತಿಗಳು, ಲೋಡ್ ಡೀಫಾಲ್ಟ್ ಮತ್ತು ಆರ್ಥಿಕ ಅಸ್ಥಿರತೆಯನ್ನು ಸೂಚಿಸುತ್ತದೆ. ಹೀಗಾಗಿ ತೀರಾ ಕಳಪೆಯಾಗಿದ ಸಿಬಿಲ್ ಸ್ಕೋರ್ ಮೂಲಕ ಆತ ಹಲವು ಬ್ಯಾಂಕ್ ಗಳಿಂದ ಸಾಲ ಪಡೆದಿರುವುದು, ಹಾಗೂ ಆರ್ಥಿಕವಾಗಿ ಸದೃಡವಾಗದಿರುವುದು ಅರಿವಾಗಿತ್ತು. ಇದನ್ನು ನೋಡಿದ ಹುಡುಗಿಯ ಮಾವ ಮತ್ತು ಹುಡುಗಿಯ ಮನೆಯವರು ವರನು ಈಗಾಗಲೇ ಮೈ ತುಂಬಾ ಸಾಲ ಹೊಂದಿದ್ದು , ಹೀಗಿದ್ರೆ ನಮ್ಮ ಮಗಳ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದಂತೆ ಎಂದು ಅರಿವಾಗಿದೆ. ಹುಡಿಯ ಮಾವನಿಗೂ ತನ್ನ ಸೊಸೆಗೆ ಆ ವ್ಯಕ್ತಿ ಸೂಕ್ತ ಜೋಡಿಯಾಗುವುದಿಲ್ಲಎಂದು ನಿರ್ಧರಿಸಿ ಮದುವೆಗೆ ನಿರಾಕರಿಸಿದ್ದಾರೆ.
CIBIL ಸ್ಕೋರ್ ಎಂದರೇನು?
CIBIL ಸ್ಕೋರ್ ಒಂದು ರೀತಿಯ ಅಳತೆಗೋಲು. ಇದು ನಿಮ್ಮ ಹಣಕಾಸಿನ ಸ್ಥಿತಿ, ಆರ್ಥಿಕ ಶಿಸ್ತು ಬಗ್ಗೆ ರಿಪೋರ್ಟ್ ಕಾರ್ಡ್ ಇದ್ದಂತೆ. ಇದು 300 ರಿಂದ 900 ರವರೆಗೆ ಅಂಕಗಳು ಇರುತ್ತವೆ. ಹೆಚ್ಚು ಅಂಕಗಳು ಎಂದರೆ ನೀವು ಚೆನ್ನಾಗಿ ಹಣಕಾಸು ನಿರ್ವಹಿಸುತ್ತಿದ್ದೀರಿ ಎಂದು ಅರ್ಥ. ಕಡಿಮೆ ಅಂಕಗಳು ಎಂದರೆ ನೀವು ಸಾಲ ಮರುಪಾವತಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದೀರಿ ಎಂದು ಅರ್ಥ. ಸಾಲ ನೀಡುವವರು ಇದನ್ನು ನಿಮ್ಮನ್ನು ನಂಬಬಹುದೇ ಎಂದು ತಿಳಿಯಲು ಬಳಸುತ್ತಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications