ಭಾರತದ ಪ್ರಮುಖ, ಜನಪ್ರಿಯ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಕಾನ್ಫಿಡೆಂಟ್ ಗ್ರೂಪ್‌ನ (Confident Group) ಸ್ಥಾಪಕ ಸಿಜೆ ರಾಯ್ (CJ Roy) ನಿಧನ ಇಡೀ ದೇಶವನ್ನೇ ಸಂಚಲನ ಸೃಷ್ಟಿಸಿದೆ. ಕೇರಳದ ಕೊಚ್ಚಿಯಲ್ಲಿ ಜನಿಸಿದ ರಾಯ್, ಬೆಂಗಳೂರಿನಲ್ಲಿ ಬೆಳೆದರು. ಆದರೆ ಬೆಂಗಳೂರಿನಿಂದ ದುಬೈವರೆಗೂ (Bengaluru-Dubai) ಸಂಪರ್ಕ ಹೊಂದಿದ್ದರು. ಆದ್ದರಿಂದ ಸಿಜೆರಾಯ್ ಕೇರಳ, ಬೆಂಗಳೂರು, ದುಬೈನಂತರ ಮಹಾ ನಗರಗಳಲ್ಲಿ ಭಾರೀ ಪ್ರಭಾವ ಬೀರಿದೆ. ಆದರೆ ಕೆಲ ದಿನಗಳ ಹಿಂದಷ್ಟೇ ಐಟಿ ದಾಳಿ ಸಮಯದಲ್ಲೇ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡರು.

ಐಟಿ ದಾಳಿಯ ನಂತರ, ಸಿ.ಜೆ. ರಾಯ್ ಎಂದೇ ಖ್ಯಾತರಾಗಿದ್ದ ಕಾನ್‌ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ರಾಯ್ ಚಿರಿಯಾಂಕಂದತ್ ಜೋಸೆಫ್ ಅವರ ನಿಧನ, ಹಲವು ನಗರಗಳಲ್ಲಿ ರೂಪುಗೊಂಡ ಅವರ ರಿಯಲ್ ಎಸ್ಟೇಟ್ ವೃತ್ತಿಜೀವನದ ಮೇಲೆ ಪ್ರಭಾವ ಬೀರಿದೆ. ಬೆಂಗಳೂರು, ದುಬೈ ಮತ್ತು ಕೊಚ್ಚಿಯಲ್ಲಿ ಅವರ ಕಾರ್ಯವೈಖರಿಯು ಏಕರೂಪದ ಬೆಳವಣಿಗೆಯ ಮಾದರಿಯನ್ನು ಹೊಂದಿರಲಿಲ್ಲ. ಇದು ನಗರಗಳ ವ್ಯವಸ್ಥೆ ಮತ್ತು ಅಭಿವೃದ್ಧಿಯ ಮೇಲೆ ಪ್ರಭಾವ ಬೀರಿತ್ತು.
1990ರ ದಶಕದಲ್ಲಿ, ಬೆಂಗಳೂರು ಬಹುರಾಷ್ಟ್ರೀಯ ಕಂಪನಿಗಳನ್ನು ಆಕರ್ಷಿಸಲು ಪ್ರಾರಂಭಿಸಿ, ಐಟಿ ಕ್ಷೇತ್ರದ ಬೆಳವಣಿಗೆಯೊಂದಿಗೆ ವೇಗವಾಗಿ ವಿಸ್ತರಿಸುತ್ತಿದ್ದಾಗ ರಾಯ್ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ನಗರದ ಪೂರ್ವ ಕಾರಿಡಾರ್‌ನಲ್ಲಿ ಕಚೇರಿ ಸ್ಥಳಗಳಿಗೆ ಬೇಡಿಕೆ ಹೆಚ್ಚಾದಂತೆ, ಈ ಪ್ರದೇಶಗಳಲ್ಲಿ ವಸತಿ ಸೌಕರ್ಯಗಳ ಬೇಡಿಕೆಯೂ ಬೆಳೆಯಿತು.
ವರದಿಗಳ ಪ್ರಕಾರ, ರಾಯ್ ತಮ್ಮ ಕೆಲವು ಮೊದಲ ರಿಯಲ್ ಎಸ್ಟೇಟ್ ಯೋಜನೆಗಳನ್ನು ಸರ್ಜಾಪುರ ರಸ್ತೆ ಮತ್ತು ಬೆಳ್ಳಂದೂರಿನಲ್ಲಿ ಪ್ರಾರಂಭಿಸಿದರು ಎನ್ನಲಾಗಿದೆ. ಆ ಸಮಯದಲ್ಲಿ ಈ ಎರಡೂ ಪ್ರದೇಶಗಳು ಇನ್ನೂ ಅಭಿವೃದ್ಧಿಯ ಹಂತದಲ್ಲಿದ್ದವು. ಸರ್ಜಾಪುರದಲ್ಲಿ ಎಕರೆಗೆ 3 ಲಕ್ಷಕ್ಕೆ ಭೂಮಿ ಖರೀದಿಸಿದರು, ಇದು ನಂತರ 8000-10,000 ಪ್ರತೀ ಸ್ಕ್ವೇರ್ ಫೀಟ್‌ಗೆ ಮೌಲ್ಯ ಹೆಚ್ಚಾಯ್ತು ಎನ್ನಲಾಗಿದೆ.
ಒಂದು ಹಳೆಯ ಸಂದರ್ಶನದಲ್ಲಿ, ರಾಯ್ ತಮ್ಮ ವೃತ್ತಿಜೀವನದ ಪಯಣವನ್ನು ಮೆಲುಕು ಹಾಕುತ್ತಾ, "ನಾನು ಆಯ್ಕೆಯಿಂದ ವ್ಯಾಪಾರಕ್ಕೆ ಬಂದೆ, ಆದರೆ ಉದ್ಯಮಶೀಲತೆ ಆಕಸ್ಮಿಕವಾಗಿ ನಡೆಯಿತು," ಎಂದು ಹೇಳಿದ್ದರು. ಇನ್ನು ವರದಿ ಪ್ರಕಾರ, ಬೆಂಗಳೂರಿನ ರಿಯಲ್ ಎಸ್ಟೇಟ್‌ನಲ್ಲಿ ಹೊಸ ಬದಲಾವಣೆ ತಂದವರು. ಉದಾಹರಣೆಗೆ, ನಾಲ್ಕು ಬೆಡ್‌ರೂಮ್ ಫ್ಲ್ಯಾಟ್‌ಗಳು ಮತ್ತು ಐಷಾರಾಮಿ ಸೌಲಭ್ಯಗಳನ್ನು ಅಳವಡಿಸಿದರು. ಇದೇ ಬೆಳವಣಿಗೆ ಸಿಜೆ ರಾಯ್ ಅವರ ಕಾನ್ಫಿಡೆಂಟ್ ಗ್ರೂಪನ್ನು 43 ಮಿಲಿಯನ್ ಸ್ಕ್ವೇರ್ ಫೀಟ್ ಸಾಮ್ರಾಜ್ಯವನ್ನಾಗಿ ಬೆಳೆಸಿತು.
ದುಬೈನಲ್ಲಿ ರಿಯಲ್ ಎಸ್ಟೇಟ್ ಪ್ರಭಾವ
ದುಬೈ, ರಾಯ್ ಅವರ ವ್ಯವಹಾರವನ್ನು ಭಾರತದ ಹೊರಗಿನ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಸ್ತರಿಸುವಲ್ಲಿ ಒಂದು ಮಹತ್ವದ ತಿರುವಾಗಿತ್ತು. ಅಲ್ಲಿ ಅವರು ಸ್ಪಷ್ಟ ವ್ಯವಸ್ಥೆಗಳ ಸಹಾಯದಿಂದ ದೊಡ್ಡ ವಸತಿ ಮತ್ತು ಐಷಾರಾಮಿ ಯೋಜನೆಗಳನ್ನು ಕಡಿಮೆ ಸಮಯದಲ್ಲಿ ಆರಂಭಿಸಿದರು. ಈ ಆರಂಭ ರಾಯ್ ಕಂಪನಿಗೆ ಅಂತರಾಷ್ಟ್ರೀಯ ಮಾನ್ಯತೆ, ಜನಪ್ರಿಯತೆಯ್ನು ನೀಡಿತು ಎನ್ನಲಾಗಿದೆ. ಇನ್ನು ದುಬೈನ ವ್ಯಾಪಾರ ಸ್ನೇಹಿ ನೀತಿಗಳು ರಾಯ್ ಅವರನ್ನು ರಿಯಲ್ ಎಸ್ಟೇಟ್ ಮಾತ್ರವಲ್ಲದೇ ವಿಮಾನಯಾನ, ಮನರಂಜನೆ, ಶಿಕ್ಷಣದ ಮೇಲೂ ಹೂಡಿಕೆ ಮಾಡುವಂತೆ ಪ್ರೇರೇಪಿಸಿದವು ಎನ್ನಲಾಗಿದೆ.
ಮತ್ತೊಂದೆಡೆ, ಕೇರಳದ ಕೊಚ್ಚಿ ರಾಯ್ ಅವರ ಜನ್ಮಸ್ಥಳಾಗಿತ್ತು. ಕೇರಳದ ಪ್ರಮುಖ ವಾಣಿಜ್ಯ ನಗರವೂ ಇದಾಗಿತ್ತು. ಆರಂಭದಲ್ಲಿ ರಾಯ್ ಅವರಿಗೆ ತನ್ನ ಹುಟ್ಟೂರಲ್ಲೇ ಹಲವು ಸವಾಲುಗಳು ಎದುರಾಯಿತು. ಆದರೆ ನಂತರ ತನ್ನ ವ್ಯವಹಾರವನ್ನೂ ಕೇರಳದಾದ್ಯಂತ ವಿಸ್ತರಿಸಲಾಯಿತು. ಈ ಮೂಲಕ ರಿಯಲ್ ಎಸ್ಟೇಟ್ ದಿಗ್ಗಜರಲ್ಲಿ ಸಿಜೆ ರಾಯ್ ಕೂಡಾ ಒಬ್ಬರಾದರು.
ಸಿಜೆ ರಾಯ್ ಅವರ ರಿಯಲ್ ಎಸ್ಟೇಟ್ ವೃತ್ತಿ ಬೆಂಗಳೂರಿನ ಐಟಿ ಹಬ್, ದುಬೈನ ಜಾಗತಿಕ ವ್ಯಾಪಾರ ಮಾದರಿ ಮತ್ತು ಕೊಚ್ಚಿಯ ಸ್ಥಳೀಯ ಮಾರುಕಟ್ಟೆ ಡೈನಾಮಿಕ್ಸ್‌ನಲ್ಲಿ ಹೊಸ ಛಾಪು ಮೂಡಿಸಿದೆ.
More From GoodReturns

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?



Click it and Unblock the Notifications