Beer price: ಮದ್ಯ ಪ್ರಿಯರ ಜೇಬಿನ ಮೇಲೆ ಸಿದ್ದು ಕಣ್ಣು: ಮತ್ತೆ ಹೆಚ್ಚಾಯಿತು ಬಿಯರ್ ದರ

ನಿರೀಕ್ಷೆಯಂತೆ ರಾಜ್ಯ ಸರ್ಕಾರ ಮಧ್ಯ ಪ್ರೀಯರಿಗೆ ಶಾಕ್‌ ನೀಡಿದೆ. ಶುಕ್ರವಾರ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೇಟ್‌ನಲ್ಲಿ ಬಿಯರ್‌ ದರವನ್ನು ಮತ್ತೆ ಹೆಚ್ಚಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ.

ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇಕಡ 10 ರಷ್ಟು ಹೆಚ್ಚಿಸಲು ಸರ್ಕಾರ ಮುಂದಾಗಿದೆ. 650 ಎಂಎಲ್ ಬಿಯರ್ ಬಾಟಲಿಗೆ 8 ರಿಂದ 10 ರೂಪಾಯಿ ವರೆಗೆ ಹೆಚ್ಚಳವಾಗಲಿದೆ. ಬಿಯರ್‌ ಮೇಲಿನ ಅಬಕಾರಿ ತೆರಿಗೆಯನ್ನು ಹೆಚ್ಚಿಸಿದ್ದರಿಂದ ಮಧ್ಯ ಪ್ರೀಯರ ಜೇಬಿಗೆ ಹೊರೆ ಬೀದ್ದಿದೆ. ಈ ಸಂಬಂಧ ರಾಜ್ಯ ಸರ್ಕಾರ ಜನವರಿ 20, 2024 ರಂದು ಅಧಿಸೂಚನೆ ಹೊರಡಿಸಿತ್ತು. ಅದರಂತೆ ಬೀಯರ್‌ ಮೇಲಿನ ದರವನ್ನು ಹೆಚ್ಚಿಸಲು ಸರ್ಕಾರ ಮಂದಾಗಿದೆ.

ಮಧ್ಯ ಪ್ರೀಯರಿಗೆ ಶಾಕ್‌ ನೀಡಿದ ಸಿದ್ದರಾಮಯ್ಯ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೂರನೇ ಬಾರಿಗೆ ಬಿಯರ್‌ ದರವನ್ನು ಹೆಚ್ಚಿಸಿದೆ. 2023ರ ಜುಲೈ 7 ರಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಬಿಯರ್‌ ಮೇಲಿನ ಅಬಕಾರಿ ಸುಕಂವನ್ನು ಶೇಕಡಾ 20 ರಷ್ಟು ಹೆಚ್ಚಳ ಮಾಡಲಾಗಿತ್ತು. ಈಗ ಈ ಬಾರಿಯ ಬಜೆಟ್‌ನಲ್ಲೂ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿ ಮಧ್ಯ ಪ್ರೀಯರಿಗೆ ಶಾಕ್‌ ನೀಡಿದೆ.

ರಾಜ್ಯದಲ್ಲಿ ಬಿಯರ್‌ ಮಾರಾದಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡು ಬಂದಿದ್ದರಿಂದ, ರಾಜ್ಯ ಸರ್ಕಾರ ಅಬಕಾರಿ ಸುಂಕವನ್ನು ಹೆಚ್ಚಿಸಲು ನಿರ್ಧರಿಸಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೊಮ್ಮೆ ಮದ್ಯ ಪ್ರಿಯರಿಗೆ ಶಾಕ್ ನೀಡಲು ಸರ್ಕಾರ ಮುಂದಾಗಿದೆ. ಎಣ್ಣೆ ಮೇಲಿನ ಅಬಕಾರಿ ತೆರಿಗೆ ಹೆಚ್ಚಳ ಮಾಡುವ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿದೆ.

ಬೇರೆ ರಾಜ್ಯಗಳಲ್ಲಿರುವಂತೆ ಅಲ್ಲಿನ ಬೆಲೆಗಳ ಅನುಗುಣವಾಗಿ ಕರ್ನಾಟಕದಲ್ಲಿ ಸಹ ಎಲ್ಲ ವಿಧದ ಮದ್ಯಗಳ ಬೆಲೆ ಏರಿಕೆ ಮಾಡಲಾಗುವುದು ಎಂದು ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಯ್ಯ ತಿಳಿಸಿದ್ದಾರೆ.

ಇದೀಗ ಮತ್ತೆ ಮದ್ಯದ ಬೆಲೆ ಏರಿಕೆ ಮಾಡುವುದಾಗಿ ಸರ್ಕಾರ ಹೇಳಿದೆ. ಈ ಮೂಲಕ ಅಬಕಾರಿ ಇಲಾಖೆಯಡಿ ಅತ್ಯಧಿಕ ಆದಾಯ ಸಂಗ್ರಹಿಸುವ ಗುರಿ ಹೊಂದಿದೆ. ಬಿಯರ್ ಗಳ ಸುಂಕ ಹೆಚ್ಚಾಗಲಿದೆ. ಈಗಾಗಲೇ 5-12 ರೂಪಾಯಿವರೆಗೆ ಹೆಚ್ಚಾಗಿರುವ ಬಿಯರ್ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಈ ಮೂಲಕ ಮದ್ಯಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಶಾಕ್ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+