ಕೋ ವರ್ಕಿಂಗ್ ದೈತ್ಯ ವಿವರ್ಕ್ (WeWork) ಯುಎಸ್‌ನಲ್ಲಿ ದಿವಾಳಿತನಕ್ಕಾಗಿ ಅರ್ಜಿ ಸಲ್ಲಿಸಿದೆ. ಹಲವಾರು ವರ್ಷಗಳಿಂದ ಕಂಪನಿಯು ದಿವಾಳಿಯ ಸುಳಿಯಲ್ಲಿದ್ದು, ಈಗ ಅಂತಿಮವಾಗಿ ದಿವಾಳಿತನ ಘೋಷಿಸಿದೆ. ನ್ಯೂಜೆರ್ಸಿ ಫೆಡರಲ್ ನ್ಯಾಯಾಲಯದಲ್ಲಿ ದಿವಾಳಿತನದ ಫೈಲಿಂಗ್ ಘೋಷಿಸಿದೆ.
ಈ ಫೈಲಿಂಗ್ ಪ್ರಕಾರ ಸಂಸ್ಥೆಯು 10 ಬಿಲಿಯನ್ ಡಾಲರ್‌ನಿಂದ 50 ಬಿಲಿಯನ್ ಡಾಲರ್‌ವರೆಗೆ (£40.5 ಬಿಲಿಯನ್) ಸಾಲವನ್ನು ಹೊಂದಿದೆ. ಈಗ ಈ ದಿವಾಳಿತನ ಫೈಲಿಂಗ್ ವಿವರ್ಕ್ ತನ್ನ ಸಾಲಗಾರರಿಂದ ಕಾನೂನು ರಕ್ಷಣೆ ಮತ್ತು ಭೂಮಾಲೀಕರೊಂದಿಗೆ ಮಾತುಕತೆಗಾಗಿ ಹೆಚ್ಚಿನ ದಾರಿ ಕಂಡುಕೊಂಡಂತೆ ಆಗಿದೆ.

ವಿವರ್ಕ್ ಸ್ಟಾರ್ಟ್-ಅಪ್‌ಗಳು ಮತ್ತು ಇತರೆ ಸ್ವತಂತ್ರವಾಗಿ ಉದ್ಯೋಗ ಮಾಡುವವರಿಗೆ ನಿಯಮಗಳ ಮೇಲೆ ಬಾಡಿಗೆಗೆ ಸ್ಥಳವನ್ನು ನೀಡುವುದರಲ್ಲಿ ಹೆಸರುವಾಸಿಯಾಗಿದೆ. ಆದರೆ ಇದು ತ್ವರಿತ ಬೆಳವಣಿಗೆಯನ್ನು ಅವಲಂಬಿಸಿದೆ. "ವಿವರ್ಕ್ ಇಂಕ್ ಮತ್ತು ಅದರ ಕೆಲವು ಘಟಕಗಳು ಯುಎಸ್ ದಿವಾಳಿತನ ಸಂಹಿತೆಯ ಅಧ್ಯಾಯ 11 ರ ಅಡಿಯಲ್ಲಿ ರಕ್ಷಣೆಗಾಗಿ ಸಲ್ಲಿಸಿವೆ. ನಡಾದಲ್ಲಿ ಮಾನ್ಯತೆ ಪ್ರಕ್ರಿಯೆಗಳನ್ನು ಸಲ್ಲಿಸಲು ಉದ್ದೇಶಿಸಿದೆ," ಎಂದು ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.
ವಿವರ್ಕ್ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ಟೋಲಿ ಈ ಬಗ್ಗೆ ಮಾತನಾಡಿ, "ನಮ್ಮ ಬಂಡವಾಳದ ರಚನೆಯನ್ನು ಬಲಪಡಿಸಲು ಮತ್ತು ಪುನರ್‌ರಚನಾ ಬೆಂಬಲ ಒಪ್ಪಂದದ ಮೂಲಕ ಈ ಪ್ರಕ್ರಿಯೆಯನ್ನು ವೇಗಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡುವಾಗ ನಮ್ಮ ಹಣಕಾಸಿನ ಮಧ್ಯಸ್ಥಗಾರರ ಬೆಂಬಲಕ್ಕಾಗಿ ನಾವು ಆಳವಾಗಿ ಕೃತಜ್ಞರಾಗಿರುತ್ತೇನೆ," ಎಂದು ಹೇಳಿದರು.
"ನಮ್ಮ ಸಮುದಾಯವನ್ನು ಬೆಂಬಲಿಸಲು ನಮ್ಮ ಉತ್ಪನ್ನಗಳು, ಸೇವೆಗಳು ಮತ್ತು ವಿಶ್ವ ದರ್ಜೆಯ ಉದ್ಯೋಗಿಗಳ ತಂಡದಲ್ಲಿ ಹೂಡಿಕೆ ಮಾಡಲು ನಾವು ಬದ್ಧರಾಗಿದ್ದೇವೆ," ಎಂದು ತಿಳಿಸಿದರು. ಇನ್ನು 2019 ರಲ್ಲಿ ಪಬ್ಲಿಕ್ ಲೀಸ್ಟಿಂಗ್ ಮೂಲಕ ಹಣ ಸಂಗ್ರಹ ಮಾಡಲು ಮುಂದಾಗಿತ್ತು.
ಇದಾದ ನಂತರ ವಿವರ್ಕ್ ಕಚೇರಿ ಸ್ಥಳಗಳ ಬೇಡಿಕೆಗೂ ಪ್ರಭಾವ ಉಂಟಾಗಿದೆ. ಅದರ ಖ್ಯಾತಿಗೂ ಪ್ರಭಾವ ಬೀರಿದೆ. ಬಳಿಕ ಸಹ-ಸಂಸ್ಥಾಪಕ ಆಡಮ್ ನ್ಯೂಮನ್ ಅವರನ್ನು ಸಂಸ್ಥೆಯಿಂದಲೇ ಹೊರಹಾಕಲಾಗಿದೆ. ಪ್ರಮುಖವಾಗಿ ಕೋವಿಡ್ ಸಾಂಕ್ರಾಮಿಕವು ಪ್ರಭಾವ ಬೀರಿದೆ. ಇದರಿಂದಾಗಿ ಪ್ರಪಂಚದಾದ್ಯಂತ ಅನೇಕ ಕಚೇರಿಗಳನ್ನು ಮುಚ್ಚಲಾಗಿದೆ. ಜನರು ಮನೆಯಲ್ಲಿಯೇ ಕೆಲಸ ಮಾಡಬೇಕಾದ ಸ್ಥಿತಿ ಉಂಟಾಗಿದೆ.
ಈ ವರ್ಷದ ಮೊದಲಾರ್ಧದಲ್ಲಿ, ವಿವರ್ಕ್ 1 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಕಳೆದುಕೊಂಡಿದೆ. ಅದರ ಕಚೇರಿಗಳನ್ನು ನಿರ್ವಹಿಸುವ ವೆಚ್ಚ ಮತ್ತು ಇತರ ವೆಚ್ಚಗಳ ಹೊರೆಯು ಕೂಡಾ ಅಧಿಕವಾಗಿದೆ. ಕಂಪನಿಯು ತನ್ನ ವ್ಯವಹಾರದ ಒಂದು ಭಾಗಗಳನ್ನು ಮಾರಾಟ ಮಾಡಲು ಪರದಾಡುತ್ತಿದೆ.
ಕಳೆದ ತಿಂಗಳು, ಚರ್ಚೆಗಳು ತೀವ್ರಗೊಂಡಂತೆ, ವಿವರ್ಕ್ ಹೂಡಿಕೆದಾರರಿಗೆ ತನ್ನ ಸಾಲಗಳ ಪಾವತಿಯನ್ನು ಮಾಡಲಾಗುತ್ತಿಲ್ಲ ಎಂಬ ಮಾಹಿತಿ ನೀಡಿದೆ. 2010 ರಲ್ಲಿ ಸ್ಥಾಪನೆಯಾದ ವಿವರ್ಕ್ ಈ ವರ್ಷ ಜೂನ್‌ನಲ್ಲಿ ಪ್ರಪಂಚದಾದ್ಯಂತ 700 ಕ್ಕೂ ಹೆಚ್ಚು ಸ್ಥಳಗಳನ್ನು ಮತ್ತು ಸುಮಾರು 730,000 ಸದಸ್ಯರನ್ನು ಹೊಂದಿದೆ ಎಂದು ಹೇಳಿಕೊಂಡಿದೆ.


Click it and Unblock the Notifications