ಕಾಗ್ನಿಝೆಂಟ್ ಅಮೆರಿಕಾದ ನ್ಯೂಜೆರ್ಸಿಯ ಟೇನೆಕ್ ಮೂಲದ ಮಾಹಿತಿ ತಂತ್ರಜ್ಞಾನ ಹಾಗೂ ಕನ್ಸಲ್ಟಿಂಗ್ ಬಹುರಾಷ್ಟ್ರೀಯ ಕಂಪೆನಿಯಾಗಿದ್ದು, ಈಗಾಗಲೇ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಮೆರಿಕಾ ಷೇರು ಮಾರುಕಟ್ಟೆ ನಾಸ್ದಾಕ್ (Nasdaq)ನಲ್ಲಿ ಕೂಡ ಪಟ್ಟಿ ಮಾಡಲ್ಪಟ್ಟ ಕಂಪೆನಿಯಾಗಿದ್ದು, ಸಂಸ್ಥೆಯ ಹಿರಿಮೆಗೆ ಮತ್ತಷ್ಟು ಗರಿ ಮೂಡಿಸಿದಂತಿದೆ. ಇನ್ನು ಸದ್ಯ ಜಾಗತಿಕ ಮಟ್ಟದಲ್ಲಿ ಡಿಜಿಟಲ್ ಯುಗವಾಗಿರುವ ಹಿನ್ನೆಲೆಯಲ್ಲಿ ಐಟಿ ಕಂಪೆನಿಗಳು ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿದ್ದು, ಕಾಗ್ನಿಝೆಂಟ್ ಕೂಡ ಇದಕ್ಕೆ ಹೊರತಾಗಿಲ್ಲ. ಸದ್ಯ ಕಾಗ್ನಿಝೆಂಟ್ ತನ್ನ ಉತ್ತುಂಗಕ್ಕೆ ಮರಳಿದ್ದು. ಪರಿಣಾಮ 13,000 ಅಸೋಸಿಯೇಟ್‌ಗಳು ಕಂಪನಿಗೆ ಮರಳಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರವಿ ಕುಮಾರ್ ಹೇಳಿದ್ದಾರೆ. ಕಂಪನಿಯು ಬೆಳವಣಿಗೆ ಮತ್ತು ಸ್ಥಿರತೆಗೆ ಮರಳಿರುವ ಕಾರಣ ಇದು ಸಾಧ್ಯವಾಗಿದೆ ಎಂದು ರವಿ ಕುಮಾರ್ ತಿಳಿಸಿದ್ದಾರೆ.
ಮೂರನೇ ತ್ರೈಮಾಸಿಕದಲ್ಲಿ ಮತ್ತಷ್ಟು ನೌಕರರು!
ಸದ್ಯ ಕಾಗ್ನಿಝೆಂಟ್ ಕಂಪೆನಿಯು 2024ರ ಮೂರನೇ ತ್ರೈಮಾಸಿಕದಲ್ಲಿ ಹೆಚ್ಚಿನ ಧನಾತ್ಮಕ ಅಂಶಗಳನ್ನು ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕಂಪನಿಯು 3,800 ಉದ್ಯೋಗಿಗಳನ್ನು ಸೇರಿಸಿಕೊಂಡಿದೆ. ಇನ್ನು ಮೂರನೇ ತ್ರೈಮಾಸಿಕ ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕುಮಾರ್ ಅವರು, ಈ ಹಿಂದೆ ಕಂಪೆನಿ ಬಿಟ್ಟು ತೆರಳಿರುವ ಬಹುತೇಕ ಮಂದಿ ಸದ್ಯ ಮತ್ತೆ ಸಂಸ್ಥೆಯತ್ತ ಮುಖಮಾಡಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ಕಂಪೆನಿಯು ಹೆಚ್ಚಿನ ಸ್ಥಿರತೆ ಹಾಗೂ ಬೆಳವಣಿಗೆಯತ್ತ ಸಾಗಿದ್ದು, ಬಿಟ್ಟು ಹೋದ ಸಿಬ್ಬಂದಿ ಮರಳುತ್ತಿದ್ದಾರೆ. ಹಾಗಾಗಿ ಮುಂದಿನ ವರ್ಷದಿಂದ ನಾವು ನಾವು ಕ್ಯಾಂಪಸ್‌ಗಳಿಗೆ ದೊಡ್ಡ ಮಟ್ಟದಲ್ಲಿ ತೆರಳಲಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಮುಂದಿನ ಅವಧಿಗಳಲ್ಲಿ ಮತ್ತಷ್ಟು ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗುವುದು ಎಂಬುದನ್ನು ಕೂಡ ಬಹಿರಂಗಪಡಿಸಿದ್ದಾರೆ. ಇನ್ನು ಕಂಪೆನಿಯು ಮುಂದಿನ ವರ್ಷದ ನೇಮಕಾತಿ ಗುರಿಯ ಬಗ್ಗೆ ಅಧಿಕೃತವಾಗಿ ತಿಳಿಸಿಲ್ಲ.

ಬೆಳವಣಿಗೆ ಪಥ ಗಮನಿಸಿ ನೇಮಕಾತಿ ಪ್ರಕ್ರಿಯೆ
ಮುಂದಿನ ಅವಧಿಯಲ್ಲಿ ಬೆಳವಣಿಗೆಯ ಪಥವನ್ನು ಗಮನದಲ್ಲಿಟ್ಟುಕೊಂಡು ಕಂಪೆನಿಯು ಜನರನ್ನು ಸೇರಿಸುವ ಕುರಿತು ಚಿಂತನೆ ನಡೆಸಲಿದೆ ಎಂದು ಮುಖ್ಯ ಹಣಕಾಸು ಅಧಿಕಾರಿ ಜತಿನ್ ದಲಾಲ್ ಹೇಳಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಜತಿನ್ ದಲಾಲ್, ನೀವು ಈ ತ್ರೈಮಾಸಿಕದಲ್ಲಿ ಪರಿಮಾಣದ ಬೆಳವಣಿಗೆಯನ್ನು ನೋಡಿದರೆ ಇದು ನಿರಂತರ ಕರೆನ್ಸಿ ಬೆಳವಣಿಗೆಯಲ್ಲಿ 3.5 ಪ್ರತಿಶತವಾಗಿದೆ. ಇದರಲ್ಲಿ 150 ಬೇಸಿಸ್ ಪಾಯಿಂಟ್‌ಗಳು ಬೆಲ್ಕಾನ್‌ನಿಂದ ಬಂದವುದಾಗಿದೆ. ನಾವು ಪ್ರತಿ ತ್ರೈಮಾಸಿಕದಲ್ಲಿ ಹೆಚ್ಚುತ್ತಿರುವ ಆದಾಯವನ್ನು ಗಳಿಸುತ್ತಿದ್ದರೆ, ನಾವು ಮಾರುಕಟ್ಟೆಯಿಂದ ಉನ್ನತ ಪ್ರತಿಭೆಗಳತ್ತ ತಲುಪಬೇಕು ಮತ್ತು ನೇಮಿಸಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. ಇನ್ನು ಕೃತಕ ಬುದ್ದಿಮತೆಯು ಸಂಸ್ಥೆಯ ವ್ಯವಹಾರ ಪ್ರಕ್ರಿಯೆ ನಿರ್ವಹಣೆ (BPM) ವ್ಯವಹಾರದ ಮೇಲೆ ಹೇಗೆ ಪ್ರಭಾವ ಬೀರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಒಂದು ವಿಶಿಷ್ಟ ತಂತ್ರಜ್ಞಾನವಾಗಿದ್ದು, ವಿಭಾಗಗಳಾದ್ಯಂತ ಜ್ಞಾನ ಕಾರ್ಯಕರ್ತರ ಮೇಲೆ ಪರಿಣಾಮ ಬೀರಲಿದೆ ಎಂದು ಉತ್ತರ ಕೊಟ್ಟಿದ್ದಾರೆ. ಪಿರಮಿಡ್‌ನ ಕೆಳಭಾಗದಲ್ಲಿ ಕಾರ್ಯಗಳನ್ನು ಅಡ್ಡಿಪಡಿಸುವ ತಂತ್ರಜ್ಞಾನಗಳು ಯಾವಾಗಲೂ ಇವೆ. ಕೆಲವು ರೀತಿಯಲ್ಲಿ ಬಿಪಿಒ (ವ್ಯಾಪಾರ ಪ್ರಕ್ರಿಯೆ ಹೊರಗುತ್ತಿಗೆ) ಕೂಡ ಇದೆ. ಇದು ಪಿರಮಿಡ್ ಕಾರ್ಯದ ಕೆಳಭಾಗವನ್ನು ಮಾತ್ರವಲ್ಲದೆ ಜ್ಞಾನ ಕಾರ್ಯಕರ್ತರನ್ನೂ ಅಡ್ಡಿಪಡಿಸುವ ತಂತ್ರಜ್ಞಾನ ಎಂದು ನಾನು ನಂಬುತ್ತೇನೆ, "ಎಂದು ಅವರು ಹೇಳಿದರು. ಇನ್ನು ಕಾಗ್ನಿಜೆಂಟ್‌ನಲ್ಲಿ ವಾರ್ಷಿಕ ಆಧಾರದ ಮೇಲೆ 2 ಮಿಲಿಯನ್ ಲೈನ್‌ಗಳ ಕೋಡ್ ಅನ್ನು AI (ಕೃತಕ ಬುದ್ದಿಮತೆ) ಅಲ್ಗಾರಿದಮ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳಿಂದ ಬರೆಯಲಾಗುತ್ತದೆ.
ಡೆವಲಪರ್‌ಗಳ ಮೇಲೆ AI ಪರಿಣಾಮವೇನು?
ಕೃತಕ ಬುದ್ದಿಮತೆಯ ಬಗ್ಗೆ ಮಾತನಾಡಿರುವ ರವಿಕುಮಾರ್, ಸಮಸ್ಯೆಯು BPO ನಲ್ಲಿರುವ ಜನರಿಗೆ ಮಾತ್ರವಲ್ಲದೆ ಸಾಫ್ಟ್‌ವೇರ್ ಕೋಡಿಂಗ್, ಟೆಸ್ಟಿಂಗ್ ಮತ್ತು ಡಿಸೈನಿಂಗ್‌ನಲ್ಲಿರುವ ಜನರನ್ನೂ ಸಹ ಹೊಂದಿದೆ. ಆದರೆ ಜ್ಞಾನದ ಕೆಲಸಗಾರರು ಅಡ್ಡಿಪಡಿಸಿದಂತೆ ಹೆಚ್ಚಿನ ಸಾಫ್ಟ್‌ವೇರ್ ಬರೆಯಲಾಗುತ್ತದೆ. ಏಕೆಂದರೆ ಅದು ಹೆಚ್ಚಿನ ಜನರಿಗೆ ಹೆಚ್ಚಿನ ಪ್ರವೇಶ ನೀಡುತ್ತದೆ. ಜಗತ್ತಿನಲ್ಲಿ ಕೇವಲ 26 ಮಿಲಿಯನ್ ಸಾಫ್ಟ್‌ವೇರ್ ಡೆವಲಪರ್‌ಗಳಿದ್ದಾರೆ. ಇದು ಹೆಚ್ಚಿನ ಡೆವಲಪರ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಇದು ಮತ್ತಷ್ಟು ಹೆಚ್ಚಿನ ಉತ್ಪಾದಕತೆ, ಕಡಿಮೆ ವೆಚ್ಚಕ್ಕೆ ಕಾರಣವಾಗುತ್ತದೆ ಎಂಬುದು ಅವರ ಮಾತಾಗಿದೆ. ಇನ್ನು ಕೃತಕ ಬುದ್ದಿಮತೆಯಿಂದ ಬಿಪಿಒನಿಂದ ಕೆಲವರು ಉದ್ಯೋಗಗಳು ಕಡಿತಗೊಳ್ಳುತ್ತದೆ ಎಂಬುದನ್ನು ಒಪ್ಪಿಕೊಂಡಿರುವ ರವಿಕುಮಾರ್ ಅವರು, ಆದರೆ ಇದರಿಂದ ಹೊಸ ಅವಕಾಶಗಳು ಕೂಡ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು. ಪ್ರತಿಯೊಂದು ಪ್ರಕ್ರಿಯೆಯು AI ಏಜೆಂಟ್‌ಗಳನ್ನು ಹೊಂದಿರುತ್ತದೆ ಮತ್ತು ಆ ಏಜೆಂಟ್‌ಗಳು ಮಾನವ ಪ್ರಯತ್ನಗಳನ್ನು ಸ್ವಯಂಚಾಲಿತಗೊಳಿಸುವುದರಿಂದ ಉದ್ಯೋಗಗಳು ಇರುತ್ತವೆ. ಕಾಗ್ನಿಜೆಂಟ್ ಸ್ಥಳೀಯ ಜನರಿಗೆ ಹೆಚ್ಚಿನ ಮಾನ್ಯತೆ ನೀಡಿದೆ. ಅವರು BPO ಪ್ರಪಂಚದಲ್ಲಿ ಯಂತ್ರ ಕಲಿಕೆಯ ಕ್ರಮಾವಳಿಗಳನ್ನು ಬಲಪಡಿಸಲಿದ್ದಾರೆ. ಯಂತ್ರಗಳು ಹೆಚ್ಚು ಹೆಚ್ಚು ಸಾಫ್ಟ್‌ವೇರ್‌ಗಳನ್ನು ಬರೆಯುವುದರಿಂದ, ಈ ಯಂತ್ರಗಳೊಂದಿಗೆ ಸಂವಹನ ನಡೆಸಲು ನಿಮಗೆ ಉದಾರ ಕಲೆಗಳಂತಹ ವಿಭಿನ್ನ ಕೌಶಲ್ಯಗಳನ್ನು ಹೊಂದಿರುವ ಜನರು ಬೇಕಾಗುತ್ತಾರೆ ಎಂದು ರವಿಕುಮಾರ್ ಅವರು ಹೇಳಿದರು.


Click it and Unblock the Notifications