ರಾಜ್ಯದಲ್ಲಿ ದಿನೇ ದಿನೇ ಚಳಿ (Cold) ಪ್ರಮಾಣ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿಯಲ್ಲಿ ಜನ ಜೀವನ ಸಾಗಿಸುತ್ತಿದ್ದಾರೆ. ಅತ್ತ ಮಂಜಿನ ವಾತಾವರಣದಿಂದ ಚಾಲಕರು ಸುಸ್ತಾಗಿದ್ದಾರೆ. ಇನ್ನು ಚಳಿ ನಡುವೆಯೂ ಅಲ್ಲಲ್ಲಿ ಮಳೆ ಕೂಡಾ ಬೀಳುತ್ತಿದೆ. ಇದೀಗ ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮುಂದಿನ 2 ದಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

ಅತ್ತ ಚಳಿಯನ್ನೇ ತಡೆಯೋಕೆ ಆಗುತ್ತಿಲ್ಲ, ಈ ಮಧ್ಯೆ ಎರಡು ದಿನ ಮಳೆಯಾಗಲಿದೆ ಎಂಬ ಸೂಚನೆಯನ್ನೂ ಹವಾಮಾನ ಇಲಾಖೆ ಹೊರಡಿಸಿದೆ. ಹಾಗಿದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂಬ ಮಾಹಿತಿ ಈ ಲೇಖನದಲ್ಲಿದೆ ಓದಿ.
ಎಷ್ಟು ದಿನ ಮಳೆ?
ರಾಜ್ಯದ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಮಾತ್ರ ಮೋಡಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಈ ಜಿಲ್ಲೆಗಳಲ್ಲಿ ಒಣಹವೆ:
ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ.
ಇಲ್ಲೆಲ್ಲಾ ಮಳೆ:
ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮೋಡ ಕವಿದ ವಾತಾವರಣ ಇರಲಿದೆ ಎಂದು ಐಎಂಡಿ ಸೂಚನೆ ನೀಡಿದೆ. ಆದ್ದರಿಂದ ನಗರದಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಆದ್ರೆ ತಕ್ಷಣ ಬರುವ ಸಾಧ್ಯತೆ ಇಲ್ಲ. ಆದ್ರೆ ಹವಾಮಾನ ಬದಲಾದರೆ, ವರುಣನ ಆಗಮನ ಪಕ್ಕಾ ಎಂದಿದ್ದಾರೆ ಹವಾಮಾನ ಇಲಾಖೆ.
ಕರಾವಳಿಯಲ್ಲಿ ಒಣ ಹವೆ:
ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ ಜಿಲ್ಲೆಗಳಲ್ಲೂ ಒಣ ಹವೆ ಮುಂದುವರೆಯುತ್ತದೆ. ಅಂದರೆ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಮತ್ತು 33 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ. ಇನ್ನು ರಾತ್ರಿಯ ತಾಪಮಾನ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಮತ್ತು 22 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ಹೇಳಲಾಗಿದೆ. ಇನ್ನು ಉತ್ತರ ಕರ್ನಾಟಕದ ಬೆಳಗಾವಿ, ಕಲಬುರ್ಗಿ ಜಿಲ್ಲೆಗಳಲ್ಲಿ ವಾತಾವರಣ ಸಾಮಾನ್ಯವಾಗಿದ್ದು, ರಾತ್ರಿ ವೇಳೆ ಹೆಚ್ಚು ತಂಪಾಗಿರುತ್ತದೆ ಎನ್ನಲಾಗಿದೆ. ಆದ್ದರಿಂದ ಈ ಜಿಲ್ಲೆಗಳಲ್ಲಿ ಯಾವುದೇ ಮಳೆಯ ಸೂಚನೆ ನೀಡಲಾಗಿಲ್ಲ.
ಆದರೆ ಧಾರವಾಡ, ಬೀದರ್, ಗದಗ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 11.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಆದ್ದರಿಂದ ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಒಂದು ವೇಳೆ ಮಳೆಯೂ ಬರಬಹುದು. ಇನ್ನೆರಡು ದಿನ ಇದೇ ವಾತಾವರಣ ಮುಂದುವರೆಯಲಿದ್ದು, ತಾಪಮಾನವೂ ಸ್ವಲ್ಪ ಕಡಿಮೆ ಇರಲಿದೆ ಎಂದು ತಿಳಿಸಿದೆ.
ಜನರಿಗೆ ಸಲಹೆ:
ಚಳಿ ವಿಪರೀತವಾಗಿರುವುದರಿಂದ ಜನರೂ ಕೂಡಾ ಎಚ್ಚರಿಕೆಯಿಂದ ಇರಬೇಕು. ತಾಪಮಾನ ಇಳಿಕೆಯಾದಂತೆ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅದಕ್ಕಾಗಿ ಆರೋಗ್ಯಕರ ಆಹಾರ ಸೇವನೆ, ಬಿಸಿ ನೀರು, ಬೆಚ್ಚಗಿನ ಬಟ್ಟೆ ಧರಿಸುವುದು, ಹೀಗೆ ಮುಂತಾದ ಮುನ್ನೆಚ್ಚರಿಕೆಗಳನ್ನು ವಹಿಸುವುದು ಮುಖ್ಯ.


Click it and Unblock the Notifications