ಇನ್ಶೂರೆನ್ಸ್ ಎನ್ನುವುದು ಎಲ್ಲರಿಗೂ ಒಂದಲ್ಲಾ ಒಂದು ಹಂತದಲ್ಲಿ ಸಹಾಯಕ್ಕೆ ಬರುವ ಉಳಿತಾಯ. ಇದು ಕಷ್ಟದ ಪರಿಸ್ಥಿತಿಯಲ್ಲಿ ಕೈ ಹಿಡಿಯುವ ಆದಾಯ. ಇದು ಒಂದು ಒಪ್ಪಂದವಾಗಿದ್ದು ಇನ್ಶುರೆನ್ಸ್ ಕಂಪನಿಯು ಪಾವತಿದಾರರ ನಿರ್ದಿಷ್ಟ ನಷ್ಟಗಳಿಗಾಗಿ ಪರಿಹಾರ ನೀಡುವ ಒಂದು ನಿಧಿಯಾಗಿದೆ. ಇದರಿಂದ ಆರ್ಥಿಕ ಪರಿಸ್ಥಿತಿಯೂ ಸಬಲವಾಗಿಯೇ ಇರುತ್ತದೆ. ಆದರೆ ಇನ್ಶುರೆನ್ಸ್ ಪಾವತಿಗಳಲ್ಲೂ ಕೆಲವೊಂದು ತಪ್ಪುಗಳಾಗಿಬಿಡುತ್ತವೆ. ಇದರಿಂದ ತಾವು ಆಯ್ಕೆ ಮಾಡಿರುವ ನಿಧಿ ನಮ್ಮ ಕೈಸೇರದೆಯೂ ಇರಬಹುದು. ಅಂತಹವುಗಳನ್ನು ಹೇಗೆ ತಡೆಗಟ್ಟುವುದು ಎಂಬುದರ ಕುರಿತೇ ಇಲ್ಲಿದೆ ಒಂದು ಮಾಹಿತಿ.
ಪ್ರಸ್ತುತವಾಗಿ ವಿವಿಧ ಪ್ರಕಾರದ ಇನ್ಶೂರೆನ್ಸ್‌ಗಳಿವೆ. ಅವುಗಳು ಅದರದ್ದೇ ಆದ ಅಗತ್ಯಗಳನ್ನು ಪೂರೈಸುತ್ತವೆ. ಅಂದರೆ ಜೀವ ವಿಮೆ, ಆರೋಗ್ಯ ವಿಮೆ, ವಾಹನ ವಿಮೆ, ಆಸ್ತಿ ವಿಮೆ ಮುಂತಾದವು. ಇವುಗಳ ಪೈಕಿ ಯಾವ ವಿಮೆ ಪಾವತಿಸುತ್ತೀರೋ ಅದರ ನಷ್ಟದ ಬದಲಾಗಿ ವಿಮೆಯ ಹಣ ಕ್ಲೈಮ್ ಆಗುತ್ತದೆ. ಆದರೆ ಈ ವಿಮೆ ಆಯ್ಕೆ ಪ್ರಕ್ರಿಯೆಯಲ್ಲೂ ಸ್ವಲ್ಪ ಗೊಂದಲ ಉಂಟಾಗಬಹುದಾಗಿದೆ. ಅಂದರೆ ಕೆಲವೊಂದು ತಾಂತ್ರಿಕ ಪದಗಳು ತಿಳಿಯದೇ ಕೆಲವರು ಇನ್ಶೂರೆನ್ಸ್ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ಮುಂದೆ ಆರ್ಥಿಕ ನಷ್ಟ ಸಂಭವಿಸಬಹುದು. ಆದ್ದರಿಂದ, ನಿಮ್ಮ ಅಗತ್ಯಗಳಿಗೆ ತಕ್ಕ ವಿಮೆಯನ್ನು ಆಯ್ಕೆ ಮಾಡುವುದು ಮತ್ತು ಅದರ ನಿಯಮ-ನಿಬಂಧನೆಗಳನ್ನು ಎಚ್ಚರಿಕೆಯಿಂದ ಓದುವುದು ಅತ್ಯಗತ್ಯ. ಹಾಗೂ ಸಾಮಾನ್ಯವಾಗಿ ಮಾಡುವ ಆ ತಪ್ಪುಗಳ್ಯಾವುವು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

1. ವಿಮಾ ಅಗತ್ಯವನ್ನು ತಿಳಿಯದೇ ಖರೀದಿ ಮಾಡುವುದು:
ಈ ವಿಚಾರದಲ್ಲಿ ಸಾಮಾನ್ಯವಾಗಿ ಆಗುವ ಒಂದು ದೊಡ್ಡ ತಪ್ಪೇನೆಂದರೆ, ವೈಯಕ್ತಿಕ ಅಗತ್ಯಗಳ ಬಗ್ಗೆ ಸರಿಯಾಗಿ ತಿಳಿಯದೇ ವಿಮೆ ಖರೀದಿಸುವುದು. ಅಂದರೆ ಒಮ್ಮೊಮ್ಮೆ ಆಗುವ ತಪ್ಪೇನೆಂದರೆ, ನಾವು ಕುಟುಂಬದ ಸುರಕ್ಷತೆಗಾಗಿ ₹5 ಲಕ್ಷದ ಆರೋಗ್ಯ ವಿಮೆ ತೆಗೆದುಕೊಂಡರೆ, ಆರೋಗ್ಯ ಸಮಸ್ಯೆ ಎದುರಾದಾಗ ಆಸ್ಪತ್ರೆ ಖರ್ಚು ಹೆಚ್ಚಾದರೆ ಈ ಮೊತ್ತ ಪೂರಕವಾಗುವುದಿಲ್ಲ. ಹಾಗಂತ ಅತಿಹೆಚ್ಚು ಮೊತ್ತದ ವಿಮೆ ತೆಗೆದುಕೊಂಡರೆ ಅಷ್ಟೊಂದು ಅವಶ್ಯಕತೆಯೂ ಇರುವುದಿಲ್ಲ. ಹೀಗಾಗಿ ಎಷ್ಟು ಅಗತ್ಯವಿದೆ ಎಂದು ಮೊದಲು ಅರಿತುಕೊಳ್ಳಬೇಕು. ಆದ್ದರಿಂದ, ವಿಮೆ ಖರೀದಿಸುವ ಮೊದಲು, ನಿಮ್ಮ ವೈಯಕ್ತಿಕ ಅಗತ್ಯಗಳು, ನಿಮ್ಮ ನಿವಾಸದ ಸ್ಥಳ ಮತ್ತು ಕುಟುಂಬದ ಗಾತ್ರವನ್ನು ಸೂಕ್ತವಾಗಿ ವಿಶ್ಲೇಷಿಸಿ.
2. ವಿಮೆ ಆಯ್ಕೆಯನ್ನು ಏಜೆಂಟ್ ಸುಪರ್ದಿಗೆ ಬಿಡುವುದು ತಪ್ಪು:
ತಾವು ಖರೀದಿಸುವ ವಿಮೆಯನ್ನು ಸ್ಥಳೀಯ ವಿಮಾ ಏಜೆಂಟ್‌ಗೆ ಒಪ್ಪಿಸುವುದೂ ಒಮ್ಮೊಮ್ಮೆ ತಪ್ಪಾಗಿಬಿಡುತ್ತದೆ. ಏಕೆಂದರೆ ವಿಮೆ ಏಜೆಂಟ್ ಎಷ್ಟು ಮೊತ್ತದ ಇನ್ಶೂರೆನ್ಸ್ ಕೊಡಿಸುತ್ತಾರೋ ಅದರ ಆಧಾರದ ಮೇಲೆ ಅವರಿಗೆ ಕಮಿಷನ್ ಸಿಗುತ್ತದೆ. ಹೀಗಾಗಿ ಎಲ್ಲಾ ಸಮಯದಲ್ಲೂ ಇನ್ಶೂರೆನ್ಸ್ ಏಜೆಂಟ್ ಮೇಲೆ ಆಯ್ಕೆ ಹೊರೆ ಹೊರಿಸಬಾರದು. ಒಂದುವೇಳೆ ಅವರು ದೊಡ್ಡ ಮೊತ್ತದ ಇನ್ಶೂರೆನ್ಸ್ ತೆಗೆದುಕೊಳ್ಳಿ ಎಂದರೆ, ಅದು ನಿಮಗೆ ನಷ್ಟವೂ ಆಗಬಹುದು. ಹೀಗಾಗಿ ನಿಮಗೆ ಎಷ್ಟು ಗಾತ್ರದ ಇನ್ಶೂರೆನ್ಸ್ ಬೇಕೆಂದು ನೀವೆ ಅರಿತುಕೊಳ್ಳಿ.
ವಿಮಾ ಯೋಜನೆಗಳನ್ನು ಆನ್‌ಲೈನ್ ಮೂಲಕ ಹೋಲಿಸುವುದು ಉತ್ತಮ ಆಯ್ಕೆ. ತಟಸ್ಥ ವೇದಿಕೆಗಳ ಮೂಲಕ ವಿಭಿನ್ನ ವಿಮಾ ಕಂಪನಿಗಳ ಕವರೇಜ್ ಆಯ್ಕೆಗಳು, ಪ್ರಯೋಜನಗಳು ಮತ್ತು ಹೊರತಾಗಿರುವ ಅಂಶಗಳನ್ನು ಪರಿಶೀಲಿಸುವುದು ಒಳಿತು.
3.ಪ್ರಮುಖ ಮಾಹಿತಿಗಳನ್ನು ನಿರ್ಲಕ್ಷಿಸಬಾರದು:
ವಿಮಾ ನೀತಿಯ ಮೂಲ ತತ್ವವೇ ಪೂರ್ಣ ವಿಶ್ವಾಸ ಮತ್ತು ಪ್ರಾಮಾಣಿಕತೆ. ವಿಮಾ ಪದ್ದತಿಯು ಈ ತತ್ವದ ಮೇಲೆ ನೆಲೆಗೊಂಡಿದ್ದು, ವಿಮಾ ಕಂಪನಿಗೆ ಸತ್ಯ ಸಂಗತಿಗಳನ್ನು ಸರಿಯಾಗಿ ತಿಳಿಸುವುದು ಅತ್ಯಗತ್ಯ. ಅಂದರೆ ಕೆಲವೊಮ್ಮೆ ವ್ಯಕ್ತಿಗಳು ಧೂಮಪಾನಿಯಾಗಿದ್ದರೂ ವಿಮಾ ಪ್ರೀಮಿಯಂ ಕಡಿಮೆ ಮಾಡಲು, ಧೂಮಪಾನದ ಸತ್ಯ ತಿಳಿಸಿರುವುದಿಲ್ಲ. ಇದರಿಂದ ಮುಂದೊಂದು ದಿನ ಅವರಿಗೆ ದೊಡ್ಡ ಸಮಸ್ಯೆಯಾಗುತ್ತದೆ. ದಾವಿ ಮಾಡುವ ಸಂದರ್ಭದಲ್ಲಿಯೇ ವಿಮಾ ಕಂಪನಿಗೆ ಈ ಮಾಹಿತಿ ಗೊತ್ತಾದರೆ, ಅವರು ದಾವಿಯನ್ನು ತಿರಸ್ಕರಿಸಬಹುದು ಅಥವಾ ನೀತಿಯನ್ನು ರದ್ದುಗೊಳಿಸಬಹುದು. ಈ ಮೂಲಕ ಮುಂದಾಗುವ ನಷ್ಟಗಳನ್ನು ತಡೆಯಬಹುದು.
4. ವಿಮಾ ನಿಯಮ ತಿಳಿದಿರದೇ ನಿರ್ಧರಿಸುವುದು:
ಸಣ್ಣಕ್ಷರದಲ್ಲಿ ಬರೆದಿರುವ ವಿಮಾ ನಿಯಮಗಳು ಮತ್ತು ಷರತ್ತುಗಳನ್ನು ಅತಿಹೆಚ್ಚಾಗಿ ಯಾರೂ ಓದುವುದಿಲ್ಲ. ಇದು ಕೂಡ ಅವರಿಗೆ ದೊಡ್ಡ ಸಮಸ್ಯೆಗೆ ಸಿಲುಕಿಸುತ್ತದೆ. ಅಂದರೆ ದೊಡ್ಡ ನಷ್ಟಕ್ಕೆ ಗುರಿ ಮಾಡಿಕೊಡುತ್ತದೆ. ಅಂದರೆ ಒಬ್ಬ ವ್ಯಕ್ತಿ ಕಾರು ತೆಗೆದುಕೊಳ್ಳುತ್ತಾನೆ ಎಂದರೆ, ಆತನ ಕಾರು ಕಳವಾದಾಗ ಪರಿಹಾರ ನೀಡುವುದಿಲ್ಲ. ಇದು ಆತನ ವಾಸ್ತವ ಸ್ಥಿತಿಗೆ ಬಂದಾಗಲೇ ತಿಳಿಯುತ್ತದೆ. ಅಲ್ಲಿಯವರೆಗೂ ಆತ ಕಾರು ಕಳವಾದರೂ ಇನ್ಶೂರೆನ್ಸ್ ಸಿಗುತ್ತದೆ ಎಂದು ಭಾವಿಸಿರುತ್ತಾನೆ. ಹೀಗಾಗಿ ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ಓದಬೇಕು.
ಅದಕ್ಕೆ ಗ್ರಾಹಕರು ಮೊದಲು ವಿಮಾನಿಯ ಒಳಗೊಂಡಿರುವ ಮತ್ತು ಹೊರಗೊಂಡಿರುವ ಅಂಶಗಳನ್ನು ಖಚಿತಪಡಿಸಿಕೊಳ್ಳಿ. ಹಾಗೂ ನಷ್ಟದ ಮೊತ್ತ ಎಷ್ಟು ಮತ್ತು ಯಾವ ಸಂದರ್ಭಗಳಲ್ಲಿ ಅನ್ವಯವಾಗುತ್ತವೆ ಎಂಬುದನ್ನು ಓದಿ. ಬಳಿಕ ವಿಮಾನಿಯ ಲಾಭಗಳು ಮತ್ತು ವಿಶೇಷತೆಗಳ ಬಗ್ಗೆ ಪೂರ್ಣ ತಿಳಿದು ಖರೀದಿಸಿ.
5. ಹಣ ಉಳಿಸಲು ಕಡಿಮೆ ಬೆಲೆಯ ಇನ್ಶೂರೆನ್ಸ್ ಖರೀದಿಸುವುದೂ ತಪ್ಪು:
ಕೆಲವರು ವಿಮೆ ಖರೀದಿಸುವಾಗ ಯಾವುದು ಕಡಿಮೆ ಇರುತ್ತದೋ ಅದರ ಮೇಲೆ ಆಸಕ್ತಿ ನೀಡುತ್ತಾರೆ. ಆದರೆ ಆ ಕಡಿಮೆ ಬೆಲೆಯ ವಿಮೆ ಕೆಲವೊಮ್ಮೆ ಅವರ ರಕ್ಷಣೆಗೆ ಬರದೇ ಇರಬಹುದು. ದೊಡ್ಡ ವೈದ್ಯಕೀಯ ಖರ್ಚು ಎದುರಾದಾಗ, ಪಾಲಿಸಿಯ ನಿಜವಾದ ಪ್ರಮಾಣ ಗೊತ್ತಾಗಿ, ಅವರು ತಮ್ಮದೇ ಹಣದಿಂದ ಹೆಚ್ಚಿನ ವೆಚ್ಚವನ್ನು ಭರಿಸಲು ಮುಂದಾಗುತ್ತಾರೆ. ಹೀಗಾಗಿ ಉತ್ತಮ ವಿಮೆ ಆಯ್ಕೆ ಮಾಡಿಕೊಳ್ಳಬೇಕು. ಕೇವಲ ಕಡಿಮೆ ಪ್ರೀಮಿಯಂ ಇರುವ ವಿಮೆಯನ್ನು ನೋಡದೆ, ಅದರಲ್ಲಿ ಎಷ್ಟು ರಕ್ಷಣೆ ಇದೆ ಎಂಬುದನ್ನು ಗಮನಿಸಬೇಕು. ಹಾಗೂ ಅತ್ಯಗತ್ಯವಾದ ವೆಚ್ಚಗಳನ್ನು ಸಂಪೂರ್ಣವಾಗಿ ಕವಚ ನೀಡುವ ಪಾಲಿಸಿಯನ್ನು ಆಯ್ಕೆ ಮಾಡಬೇಕು.
ವಿಮಾ ಪಾಲಿಸಿಯನ್ನು ನಿಯಮಿತವಾಗಿ ಪರಿಶೀಲಿಸಿ:
ಜೀವನಶೈಲಿ ಮತ್ತು ಆಸ್ತಿ ಮೌಲ್ಯದಲ್ಲಿ ಬದಲಾವಣೆಗಳು ಸಹಜ.. ಆಗ ವಿಮಾ ಅಗತ್ಯಗಳು ಕೂಡ ಅಡಾಪ್ಟ್ ಆಗಬೇಕು. ಹೀಗಾಗಿ ನಿಮ್ಮ ಆಸ್ತಿ ಅಥವಾ ಜೀವನದ ಪ್ರಮುಖ ಬದಲಾವಣೆಗಳ ನಂತರ, ವಿಮಾ ಪಾಲಿಸಿಯನ್ನು ಅಪ್‌ಡೇಟ್ ಮಾಡುವುದು ಅವಶ್ಯಕ. ನಿಯಮಿತ ಅವಧಿಯಲ್ಲಿ ವಿಮಾ ನಿಯಮಗಳು ಮತ್ತು ಪಾಲಿಸಿಯ ಮೌಲ್ಯವನ್ನು ಪರಿಶೀಲಿಸಿದರೆ ಉತ್ತಮ.
ಇನ್ಶೂರೆನ್ಸ್ ಕ್ಲೈಮ್ ಮಾಡುವ ಪ್ರಕ್ರಿಯೆ ಕಡೆಗಣಿಸಬೇಡಿ:
ಇನ್ಶೂರೆನ್ಸ್‌ನ ಕ್ಲೈಮ್ ಸೆಟಲ್‌ಮೆಂಟ್ ಹೊಂದಿರುವ ವಿಮಾ ಕಂಪನಿಗಳನ್ನು ಆಯ್ಕೆ ಮಾಡಿದರೆ ಭವಿಷ್ಯದಲ್ಲಿ ಉತ್ತಮವಾಗಿರುತ್ತದೆ. ಸುಲಭ ಹಾಗೂ ವೇಗವಾದ ಕ್ಲೈಮ್ ಪ್ರಕ್ರಿಯೆಯ ಬಗ್ಗೆ ವಿಮಾ ಕಂಪನಿಯಿಂದ ಪೂರ್ಣ ಮಾಹಿತಿ ಪಡೆಯಬೇಕು. ಹಾಗೂ ತುರ್ತು ಸಂದರ್ಭಗಳಲ್ಲಿ ಯಾವುದೇ ಸಮಸ್ಯೆ ಬರದಂತೆ, ವಿಮಾ ಯೋಜನೆಯ ಎಲ್ಲಾ ನಿಯಮಗಳನ್ನು ಓದಿಕೊಳ್ಳಬೇಕು.
More From GoodReturns

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications