ಕೇಂದ್ರ ಸರ್ಕಾರವು ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳು ಮತ್ತು ವೈಯಕ್ತಿಕ ಕಂಪ್ಯೂಟರ್‌ಗಳ ಆಮದಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಆಗಸ್ಟ್ 3ರಂದು ನಿರ್ಬಂಧವನ್ನು ವಿಧಿಸಿದೆ. ಆದರೆ ಈ ನಡುವೆ ಸಂಸ್ಥೆಗಳು ಏನು ಮಾಡುವುದು ಎಂಬ ಚರ್ಚೆ ನಡೆಯುತ್ತಿತ್ತು. ಸಂಸ್ಥೆಗಳು ಐಟಿ ಹಾರ್ಡ್‌ವೇರ್, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇತರ ವಸ್ತುಗಳನ್ನು ಆಮದು ಮಾಡಿಕೊಳ್ಳಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎಚ್‌ಎಸ್‌ಎನ್ 8741 ವರ್ಗದ ಅಡಿಯಲ್ಲಿ ಬರುವ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಪರ್ಸನಲ್ ಕಂಪ್ಯೂಟರ್‌ಗಳ ಆಮದು ಮೇಲೆ ತಕ್ಷಣವೇ ಮಿತಿಗಳನ್ನು ವಿಧಿಸುವುದಾಗಿ ಸರ್ಕಾರ ಗುರುವಾರ ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಐಟಿ ಹಾರ್ಡ್‌ವೇರ್‌ಗಾಗಿ ಹೊಸದಾಗಿ ನವೀಕರಿಸಲಾದ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯಡಿ, ಈ ಉತ್ಪನ್ನಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕ್ರಮವನ್ನು ಸರ್ಕಾರವು ಕೈಗೊಂಡಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಪ್ರಕಾರ, ಅಂತಹ ಆಮದುಗಳಿಗೆ ಅಗತ್ಯವಿರುವ ಪರವಾನಗಿಯನ್ನು 5 ನಿಮಿಷಗಳಲ್ಲಿ ನೀಡಲಾಗುತ್ತದೆ. ಡಿಜಿಎಫ್‌ಟಿ ಪರವಾನಗಿ ಪೋರ್ಟಲ್ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ ಮತ್ತು ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ.
ಸಂಸ್ಥೆಗಳಿಗಿಲ್ಲ ನಿರ್ಬಂಧ
ಸಂಸ್ಥೆಗಳಿಗೆ ಯಾವುದೇ ಆಮದು ನಿರ್ಬಂಧವಿಲ್ಲ. ಸಚಿವಾಲಯವು ಆಮದು ನಿರ್ಬಂಧಗಳನ್ನು ಘೋಷಣೆ ಮಾಡಿದ ಒಂದು ದಿನದ ನಂತರ ಹಿರಿಯ ಅಧಿಕಾರಿಯೊಬ್ಬರು ವ್ಯವಹಾರಗಳು ಮತ್ತು ವಿತರಕರು ಐಟಿ ಹಾರ್ಡ್‌ವೇರ್, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇತರ ವಸ್ತುಗಳನ್ನು ಆಮದು ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.
ಶುಕ್ರವಾರ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಟ್ವೀಟ್‌ನಲ್ಲಿ, "ಮಾನ್ಯ ಪರವಾನಗಿಯೊಂದಿಗೆ ಐಟಿ ಹಾರ್ಡ್‌ವೇರ್ ಸಾಧನಗಳ ಆಮದಿಗೆ ಅವಕಾಶವಿದೆ," ಎಂದು ಹೇಳಿದೆ. ಒಂದೇ ವ್ಯಾಪಾರಕ್ಕೆ ಅನೇಕ ಪರವಾನಗಿಗಳಿಗೆ ಅನ್ವಯವಾಗಬಹುದು ಎಂದು ತಿಳಿಸಿದ್ದಾರೆ.
ಕಾರಣವೇನು, ಆಮದುಗಳಿಗೆ ಈ ನಿರ್ಬಂಧ ಅನ್ವಯಿಸಲ್ಲ?
ಬ್ಯಾಗೇಜ್ ನಿಯಮಗಳ ಅಡಿಯಲ್ಲಿ ಮಾಡಲಾಗುವ ಆಮದುಗಳ ಮೇಲೆ ನಿರ್ಬಂಧಗಳು ಅನ್ವಯಿಸುವುದಿಲ್ಲ ಎಂದು ಸಚಿವಾಲಯ ಸೇರಿಸಿದೆ. ಬ್ಯಾಗೇಜ್ ನಿಯಮಗಳು ಭಾರತೀಯ ಗಡಿಯನ್ನು ಪ್ರವೇಶಿಸುವ ಅಥವಾ ಗಡಿಯಿಂದ ಹೊರಹೋಗುವ ಪ್ರತಿಯೊಬ್ಬ ಪ್ರಯಾಣಿಕರು ಕಸ್ಟಮ್ಸ್ ತಪಾಸಣೆಯ ನಿಯಮವನ್ನು ಒಳಗೊಂಡಿರುತ್ತದೆ. ಪ್ರಮುಖವಾಗಿ ಸ್ಥಳೀಯವಾಗಿ ಈ ವಸ್ತುಗಳ ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಮದಿನ ಮೇಲೆ ನಿರ್ಬಂಧ ಹೇರಲಾಗಿದೆ.
ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಆಲ್-ಇನ್-ಒನ್ ಪರ್ಸನಲ್ ಕಂಪ್ಯೂಟರ್ ಅಥವಾ ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್ ಆಮದು ಮಾಡಿಕೊಳ್ಳಲು ಇ-ಕಾಮರ್ಸ್ ಪೋರ್ಟಲ್‌ಗಳಿಂದ ಖರೀದಿಸಿದಂತಹ ಆಮದು ಪರವಾನಗಿ ಇದ್ದರೆ ವಿನಾಯಿತಿ ಇರುತ್ತದೆ. ಆದರೆ ಸುಂಕವನ್ನು ಪಾವತಿ ಮಾಡೆಬೇಕಾಗುತ್ತದೆ ಎಂದು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.
ಆರ್&ಡಿ, ಟೆಸ್ಟಿಂಗ್, ಚೆಂಚ್ ಮಾರ್ಕಿಂಗ್, ರಿಪೇರಿ ಮತ್ತು ಮರು-ರಫ್ತು, ಉತ್ಪನ್ನ ಅಭಿವೃದ್ಧಿ ಕಾರಣದಿಂದಾಗಿ ಆಮದು ಮಾಡಿಕೊಳ್ಳುವುದಾದರೆ 20 ವಸ್ತುಗಳನ್ನು ಆಮದು ಮಾಡಲು ಪರವಾನಗಿ ಇದ್ದಲ್ಲಿ ವಿನಾಯಿತಿ ಇದೆ. ಈ ಆಮದು ವಸ್ತುಗಳನ್ನು ತಿಳಿಸಲಾದ ಉದ್ದೇಶಗಳಿಗೆ ಮಾತ್ರ ಬಳಕೆ ಮಾಡಬೇಕು ಮತ್ತು ಮಾರಾಟ ಮಾಡಲಾಗದು ಎಂಬ ಷರತ್ತಿನ ಮೇಲೆ ಮಾತ್ರ ಅನುಮತಿ ನೀಡಲಾಗುತ್ತದೆ.
"ವಿದೇಶದಲ್ಲಿ ರಿಪೇರಿ ಮಾಡಲಾದ ಸರಕುಗಳ ಮರು-ಆಮದು ಮಾಡುವ ಸಂಬಂಧಿತ ನಿರ್ಬಂಧಿತ ಆಮದುಗಳಿಗೆ ಪರವಾನಗಿ ಅಗತ್ಯವಿಲ್ಲ," ಎಂದು ಅಧಿಸೂಚನೆಯು ಉಲ್ಲೇಖಿಸಿದೆ.


Click it and Unblock the Notifications