SBI, ICICI, HDFC, PNB ಬ್ಯಾಂಕ್‌ಗಳ ಲಾಕರ್ ಶುಲ್ಕಗಳು: ಹೋಲಿಸಿ ನೋಡಿ ಆಯ್ಕೆ ಮಾಡಿ

ಬ್ಯಾಂಕ್ ಲಾಕರ್‌ಗಳು ನಮ್ಮ ಆಭರಣ, ಪ್ರಮುಖ ದಾಖಲೆಗಳು ಮತ್ತು ಇತರ ಮೌಲ್ಯಯುತ ವಸ್ತುಗಳನ್ನು ಸುರಕ್ಷಿತವಾಗಿ ಇಡಲು ಒಂದು ಸುರಕ್ಷಿತ ಮಾರ್ಗವಾಗಿದೆ. ಕಳ್ಳತನ, ಬೆಂಕಿ ಅಥವಾ ನೈಸರ್ಗಿಕ ವಿಪತ್ತುಗಳಂತಹ ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ, ಈ ವಸ್ತುಗಳು ಬ್ಯಾಂಕ್‌ನಲ್ಲಿ ಹೆಚ್ಚಿನ ಭದ್ರತೆಯಲ್ಲಿರುತ್ತದೆ.

ಸಾಮಾನ್ಯವಾಗಿ ಬ್ಯಾಂಕ್ ಲಾಕರ್ ಗಳು ವ್ಯಕ್ತಿಗಳು (ಒಬ್ಬರು ಅಥವಾ ಹಲವರು), ಪಾಲುದಾರಿಕೆ ಸಂಸ್ಥೆಗಳು, ಸೀಮಿತ ಕಂಪನಿಗಳು, ಸಂಘಗಳು ಮತ್ತು ಕ್ಲಬ್‌ಗಳಿಗೆ ಲಭ್ಯವಿರುವ ಒಂದು ಸುರಕ್ಷಿತ ಸಂಗ್ರಹ ಸೌಲಭ್ಯವಾಗಿದೆ. ಈ ಸೌಲಭ್ಯವನ್ನು ಅಪ್ರಾಪ್ತ ವಯಸ್ಕರು ಬಳಸಲು ಅನುಮತಿಸುವುದಿಲ್ಲ.

SBI, ICICI, HDFC, PNB ಬ್ಯಾಂಕ್‌ ಲಾಕರ್ ಶುಲ್ಕ

ಬ್ಯಾಂಕ್ ಲಾಕರ್, ಬ್ಯಾಂಕ್ ಮತ್ತು ಗ್ರಾಹಕರ ನಡುವಿನ ಈ ಸಂಬಂಧವು ಗುತ್ತಿಗೆ ಆಧಾರಿತವಾಗಿದ್ದು, ಪ್ರತಿ ವರ್ಷ ಲಾಕರ್ ಬಳಕೆಗೆ ಶುಲ್ಕ ಪಾವತಿಸಬೇಕು. ಸಾಮಾನ್ಯವಾಗಿ ಬ್ಯಾಂಕ್‌ನ ಲಾಕರ್ ನಲ್ಲಿಟ್ಟಿರುವ ಬೆಲೆಬಾಳುವ ವಸ್ತುಗಳು ನಿಮ್ಮ ವಾರ್ಷಿಕ ಲಾಕರ್ ಬಾಡಿಗೆಯ 100 ಪಟ್ಟು ಹೆಚ್ಚು ಸುರಕ್ಷಿತವಾಗಿರುತ್ತವೆ.

ನಾಮನಿರ್ದೇಶನದ ಪ್ರಯೋಜನಗಳು ಮತ್ತು ಸರ್ವೈವರ್‌ಶಿಪ್ ಷರತ್ತು

ನಾಮನಿರ್ದೇಶನ ಎಂದರೆ ಒಬ್ಬ ವ್ಯಕ್ತಿ ತನ್ನ ಮರಣದ ನಂತರ ತನ್ನ ಆಸ್ತಿಯನ್ನು ಯಾರಿಗೆ ವರ್ಗಾಯಿಸಬೇಕು ಎಂಬುದನ್ನು ಮುಂಚಿತವಾಗಿ ನಿರ್ಧರಿಸುವ ಕ್ರಿಯೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಲಾಕರ್ ಅಥವಾ ಸೇಫ್ ಡಿಪಾಸಿಟ್ ಬಾಕ್ಸ್ ತೆರೆದರೆ ನೀವು ಒಬ್ಬ ವ್ಯಕ್ತಿಯನ್ನು ನಾಮಿನಿಯನ್ನಾಗಿಸಬಹುದು.

ಅಂದರೆ, ಲಾಕರ್ ಒಡೆತನ ಹೊಂದಿದವರು ಮರಣ ಹೊಂದಿದ ನಂತರ ಆ ಲಾಕರ್‌ನಲ್ಲಿರುವ ವಸ್ತುಗಳು ಯಾರ ಬಳಿಗೆ ಹೋಗಬೇಕು ಎಂಬುದನ್ನು ಅವರು ಆಯ್ಕೆ ಮಾಡಬಹುದು. ಆದರೆ, ಒಂದಕ್ಕಿಂತ ಹೆಚ್ಚು ಜನರು ಒಂದು ಲಾಕರ್ ಅನ್ನು ಜಂಟಿಯಾಗಿ ಬಳಸುತ್ತಿದ್ದರೆ, ನಾಮನಿರ್ದೇಶನ ಮಾಡಲು ಸಾಧ್ಯವಿಲ್ಲ.

ಗ್ರಾಹಕರು ಬ್ಯಾಂಕ್ ಲಾಕರ್ ಬಳಕೆ ಮಾಡುವ ಶುಲ್ಕವು ಲಾಕರ್‌ನ ಗಾತ್ರ, ಮೆಟ್ರೋ ಮತ್ತು ಅರ್ಬನ್ ಅಥವಾ ಸೆಮಿ ಅರ್ಬನ್ ಮತ್ತು ರೂರಲ್‌ನಂತಹ ಶಾಖೆಗಳ ಸ್ಥಳದಂತಹ ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ. ಬ್ಯಾಂಕ್ ಗಳ ವೆಬ್‌ಸೈಟ್‌ಗಳ ಪ್ರಕಾರ HDFC ಬ್ಯಾಂಕ್, SBI, ICICI ಬ್ಯಾಂಕ್, PNB ಗಳ ಲಾಕರ್ ಶುಲ್ಕಗಳ ಹೋಲಿಕೆ ಇಲ್ಲಿದೆ.

SBI ಲಾಕರ್ ಶುಲ್ಕಗಳು:

ವಿವಿಧ ಗಾತ್ರಗಳಲ್ಲಿ ಲಾಕರ್‌ಗಳು ಲಭ್ಯವಿವೆ. ಸಣ್ಣ ಗಾತ್ರದ ಲಾಕರ್‌ಗಳಾದ A ಮತ್ತು B ಗಾತ್ರಗಳು ಮೆಟ್ರೋ ನಗರಗಳಲ್ಲಿ 2,000 ರೂ. ಮತ್ತು ಅರೆ ನಗರ/ಗ್ರಾಮೀಣ ಪ್ರದೇಶಗಳಲ್ಲಿ 1,500 ರೂಪಾಯಿಯಷ್ಟು ವಾರ್ಷಿಕ ಬಾಡಿಗೆಯನ್ನು ಹೊಂದಿವೆ. ಮಧ್ಯಮ ಗಾತ್ರದ ಲಾಕರ್‌ಗಳು (C, D, E, H1) ಮೆಟ್ರೋ ನಗರಗಳಲ್ಲಿ 4,000 ರೂಪಾಯಿ ಮತ್ತು ಅರೆ ನಗರ/ಗ್ರಾಮೀಣ ಪ್ರದೇಶಗಳಲ್ಲಿ 3,000 ರೂಪಾಯಿಯಷ್ಟು ವಾರ್ಷಿಕ ಬಾಡಿಗೆಯನ್ನು ಹೊಂದಿವೆ.

ದೊಡ್ಡ ಗಾತ್ರದ ಲಾಕರ್‌ಗಳು (F, G, H) ಮೆಟ್ರೋ ನಗರಗಳಲ್ಲಿ 8,000 ರೂಪಾಯಿ ಮತ್ತು ಅರೆ ನಗರ/ಗ್ರಾಮೀಣ ಪ್ರದೇಶಗಳಲ್ಲಿ 6,000 ರೂಪಾಯಿಯಷ್ಟು ವಾರ್ಷಿಕ ಬಾಡಿಗೆಯನ್ನು ಹೊಂದಿವೆ. ಹೆಚ್ಚುವರಿ ದೊಡ್ಡ ಗಾತ್ರದ ಲಾಕರ್‌ಗಳು (L ಮತ್ತು L1) ಮೆಟ್ರೋ ನಗರಗಳಲ್ಲಿ 12,000 ರೂಪಾಯಿ ಮತ್ತು ಅರೆ ನಗರ/ಗ್ರಾಮೀಣ ಪ್ರದೇಶಗಳಲ್ಲಿ 9,000 ರೂಪಾಯಿಯಷ್ಟು ವಾರ್ಷಿಕ ಬಾಡಿಗೆಯನ್ನು ಹೊಂದಿವೆ. ಲಾಕರ್‌ಗಳ ಗಾತ್ರವು ಇಂಚುಗಳಲ್ಲಿ ನೀಡಲಾಗಿದೆ ಮತ್ತು ಬೆಲೆಗಳು ವಾರ್ಷಿಕವಾಗಿ ಪಾವತಿಸಬೇಕಾದ ಬಾಡಿಗೆಯನ್ನು ಸೂಚಿಸುತ್ತವೆ.

ಲಾಕರ್ ಬಳಕೆಗೆ ಶುಲ್ಕ ವಿವರ:

ಲಾಕರ್ ತೆರೆಯುವಾಗ ಸಣ್ಣ ಅಥವಾ ಮಧ್ಯಮ ಗಾತ್ರದ ಲಾಕರ್ ರೂ. 500 + GST ಹಾಗೂ ದೊಡ್ಡ ಅಥವಾ ಹೆಚ್ಚುವರಿ ದೊಡ್ಡ ಗಾತ್ರದ ಲಾಕರ್: ರೂ. 1000 + GST ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಲಾಕರ್ ಹಾಳಾದರೆ, ಕೀ ಕಳೆದುಹೋದರೆ ಅಥವಾ ಬಾಡಿಗೆ ಕಟ್ಟದಿದ್ದರೆ: ರೂ. 1000 + GST + ರಿಪೇರಿ ವೆಚ್ಚ ಹೆಚ್ಚುವರಿ ಶುಲ್ಕವಾಗಿರುತ್ತದೆ. ಲಾಕರ್ ನ ಮೊದಲ 12 ಭೇಟಿಗಳು ಉಚಿತ, ಅದರ ನಂತರ ಪ್ರತಿ ಭೇಟಿಗೆ ರೂ. 100 + GST ತೆರಬೇಕಾಗುತ್ತದೆ.

ಐಸಿಐಸಿಐ ಬ್ಯಾಂಕ್ ಲಾಕರ್ ಶುಲ್ಕಗಳು

ಐಸಿಐಸಿಐ ಬ್ಯಾಂಕ್‌ನಲ್ಲಿ ಲಾಕರ್ ತೆರೆಯಲು ವಾರ್ಷಿಕ ಶುಲ್ಕವು ಲಾಕರ್‌ನ ಗಾತ್ರ ಮತ್ತು ನಗರದ ಪ್ರಕಾರ ಬದಲಾಗುತ್ತದೆ. ಸಣ್ಣ ಗಾತ್ರದ ಲಾಕರ್‌ಗೆ ಗ್ರಾಮೀಣ ಪ್ರದೇಶದಲ್ಲಿ ರೂ. 1,200 ರಿಂದ ಮೆಟ್ರೋ ಸಿಟಿಗಳಲ್ಲಿ ರೂ. 4,000 ವರೆಗೆ, ಮಧ್ಯಮ ಗಾತ್ರದ ಲಾಕರ್‌ಗೆ ರೂ. 2,500 ರಿಂದ ರೂ. 9,000 ವರೆಗೆ, ದೊಡ್ಡ ಗಾತ್ರದ ಲಾಕರ್‌ಗೆ ರೂ. 4,000 ರಿಂದ ರೂ. 15,000 ವರೆಗೆ ಮತ್ತು ಹೆಚ್ಚುವರಿ ದೊಡ್ಡ ಗಾತ್ರದ ಲಾಕರ್‌ಗೆ ರೂ. 10,000 ರಿಂದ ರೂ. 22,000 ವರೆಗೆ ವಾರ್ಷಿಕ ಶುಲ್ಕ ವಿಧಿಸಲಾಗುತ್ತದೆ. ಈ ಶುಲ್ಕಗಳಿಗೆ ಜಿಎಸ್‌ಟಿಯನ್ನು ಪ್ರತ್ಯೇಕವಾಗಿ ಪಾವತಿಸಬೇಕು.

ಲಾಕರ್ ಬಾಡಿಗೆಯನ್ನು ವಾರ್ಷಿಕವಾಗಿ ವಿಧಿಸಲಾಗುತ್ತಿದ್ದು ಇದನ್ನು ಗ್ರಾಹಕರು ಮುಂಚಿತವಾಗಿ ಪೇ ಮಾಡಬೇಕಾಗುತ್ತದೆ. ಜೊತೆಗೆ ಲಾಕರ್‌ನ ಹಂಚಿಕೆಯು ICICI ಬ್ಯಾಂಕ್‌ನ ಲಭ್ಯತೆ ಮತ್ತು ವಿವೇಚನೆಗೆ ಒಳಪಟ್ಟಿರುತ್ತದೆ. ಲಾಕರ್‌ಗಳಿಗೆ ಸಂಬಂಧಿಸಿದಂತೆ ಎಲ್ಲಾ ಇತರ ಅನ್ವಯವಾಗುವ ನಿಯಮಗಳು ಮತ್ತು ಷರತ್ತುಗಳನ್ನು ಲಾಕರ್ ಒಪ್ಪಂದದ ಮೂಲಕ ತಿಳಿಸಲಾಗುತ್ತದೆ

HDFC ಬ್ಯಾಂಕ್ ಲಾಕರ್ ಶುಲ್ಕಗಳು

ಐಸಿಐಸಿಐ ಬ್ಯಾಂಕ್‌ನಲ್ಲಿ ಲಾಕರ್ ತೆರೆಯಲು ವಾರ್ಷಿಕ ಶುಲ್ಕವು ಲಾಕರ್‌ನ ಗಾತ್ರ ಮತ್ತು ಗ್ರಾಮೀಣ ್/ನಗರ ಪ್ರದೇಶಗಳ ಪ್ರಕಾರ ಬದಲಾಗುತ್ತದೆ. ಉದಾಹರಣೆಗೆ, ಮೆಟ್ರೋ ನಗರದಲ್ಲಿ ಸಣ್ಣ ಗಾತ್ರದ ಲಾಕರ್‌ಗೆ ವಾರ್ಷಿಕವಾಗಿ ₹1350 ಪಾವತಿಸಬೇಕು. ಆದರೆ ಗ್ರಾಮೀಣ ಪ್ರದೇಶದಲ್ಲಿ ಅದೇ ಗಾತ್ರದ ಲಾಕರ್‌ಗೆ ₹550 ಮಾತ್ರ ಪಾವತಿಸಬೇಕು. ಹೆಚ್ಚುವರಿ ದೊಡ್ಡ ಗಾತ್ರದ ಲಾಕರ್‌ಗೆ ಮೆಟ್ರೋ ನಗರದಲ್ಲಿ ₹20,000 ಮತ್ತು ಗ್ರಾಮೀಣ ಪ್ರದೇಶದಲ್ಲಿ ₹9000 ಪಾವತಿಸಬೇಕಾಗುತ್ತದೆ. ಲಾಕರ್‌ನ ಗಾತ್ರ ಮತ್ತು ನೀವು ವಾಸಿಸುವ ಪ್ರದೇಶದ ಆಧಾರದ ಮೇಲೆ ಶುಲ್ಕಗಳು ಭಿನ್ನವಾಗಿರುತ್ತವೆ.

PNB ಲಾಕರ್ ಶುಲ್ಕಗಳು

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಅಂದಾಜು ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಗಾತ್ರದ ಲಾಕರ್‌ಗೆ ವಾರ್ಷಿಕವಾಗಿ ₹1250 ಪಾವತಿಸಬೇಕು. ಆದರೆ ಮೆಟ್ರೋ ನಗರದಲ್ಲಿ ಅದೇ ಗಾತ್ರದ ಲಾಕರ್‌ಗೆ ₹2000 ಪಾವತಿಸಬೇಕು. ಹೆಚ್ಚುವರಿ ದೊಡ್ಡ ಗಾತ್ರದ ಲಾಕರ್‌ಗೆ ಗ್ರಾಮೀಣ ಮತ್ತು ಮೆಟ್ರೋ ಎರಡೂ ಪ್ರದೇಶಗಳಲ್ಲಿ ₹10,000 ಪಾವತಿಸಬೇಕಾಗುತ್ತದೆ. ಲಾಕರ್‌ನ ಗಾತ್ರ ಮತ್ತು ನೀವು ವಾಸಿಸುವ ಪ್ರದೇಶದ ಆಧಾರದ ಮೇಲೆ ಶುಲ್ಕಗಳು ಭಿನ್ನವಾಗಿರುತ್ತವೆ.

ಸರಿಯಾದ ಮಾಹಿತಿಗಾಗಿ ನೀವು ಬ್ಯಾಂಕ್ ವೆಬ್ ಸೈಟ್ ಪರಿಶೀಲಿಸಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+