ಬೆಂಗಳೂರಿನಲ್ಲಿ ಹೆಬ್ಬಾಳ-ಸರ್ಜಾಪುರ ಮೆಟ್ರೋ ಮಾರ್ಗ ಉದ್ದಕ್ಕೂ ಡಿಪೋ ನಿರ್ಮಾಣಕ್ಕೆ ಈಗಾಗಲೇ ಭೂಮಿ ಗುರುತಿಸಲಾಗಿದೆ, ಸಧ್ಯದಲ್ಲೇ ಈ ಭುಮಿಯನ್ನ ಪ್ರಾಧಿಕಾರ ಸ್ವಾಧಿನಪಡಿಸಿಕೊಳ್ಳಿದೆ. ಬೆಂಗಳೂರಿನಲ್ಲಿ ಅತ್ಯಂತ ವಾಹನ ದಟ್ಟಣೆಯನ್ನ ಎದುರಿಸುತ್ತಿದ್ದ ನಗರಗಳೆಂದರೆ ಅವು ಹೆಬ್ಬಾಳ ಮತ್ತು ಸರ್ಜಾಪುರ ರಸ್ತೆಗಳು. ಈಗ ಈ ಭಾಗದಲ್ಲಿ ಮೆಟ್ರೋ ಸೇವೆಯನ್ನ ಹೆಚ್ಚಿಸುವ ಮೂಲಕ ಜನರಿಗೆ BMRCL ನೆರವಾಗಲಿದೆ. ಇನ್ನು ಈ ಡಿಪೋ ನಿರ್ಮಾಣಕ್ಕೆ ಎಷ್ಟು ಖರ್ಚಾಗಲಿದೆ ಗೊತ್ತಾ? ಇಲ್ಲಿ ತಿಳಿಯಿರಿ.
ಹೆಬ್ಬಾಳ- ಸರ್ಜಾಪುರ ಮಾರ್ಗದಲ್ಲಿ ಡಿಪೋ ನಿರ್ಮಾಣಕ್ಕಾಗಿ ಸರ್ಜಾಪುರ ವೃತ್ತದ ಹಿಂದೆ 55.69 ಎಕರೆ ಎಕರೆ ಖಾಸಗಿ ಜಮೀನನ್ನು ಈಗಾಗಲೇ ಗುರುತಿಸಲಾಗಿದೆ. ಹೀಗಾಗಿ ಯಾವುದೇ ವಿಳಂಬವಿಲ್ಲದೇ ನಮ್ಮ ಮೆಟ್ರೋಗೆ ಭೂಮಿಯನ್ನು ಹಸ್ತಾಂತರಿಸುವಂತೆ ಪ್ರಾಧಿಕಾರ ಸಿಎಂ ಸಿದ್ದರಾಮಯ್ಯ ಅವರನ್ನ ಒತ್ತಾಯಿಸಿದ್ದಾರೆ.

ಈ ಡಿಪೋ ನಿರ್ಮಾಣಕ್ಕೆ ಗುರುತಿಸಲಾದ ಈ ಖಾಸಗಿ ಭೂಮಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಸೇರಿದ್ದಾಗಿದೆ. ಇನ್ನು ಈ ಭೂಮಿಯಲ್ಲಿ ಮುಖ್ಯ ಭಾಗವನ್ನ ಬಳಸಿಕೊಂಡು ಡಿಪೋ ನಿರ್ಮಾಣ ಮಾಡಲಿದೆ ಎಂದು BMRCL ತಿಳಿಸಿದೆ. ಹಾಗೆ ಇನ್ನುಳಿದ ಸುಮಾರು 6.65 ಎಕರೆ ಭೂಮಿಯನ್ನು ಸಿಬ್ಬಂದಿಗಳಿಗಾಗಿ ವಸತಿ ಗೃಹಗಳನ್ನ ನಿರ್ಮಿಸಲು ಬಳಸಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.
ಈ ಡಿಪೋ ನಿರ್ಮಾಣಕ್ಕೆ ಎಷ್ಟು ಖರ್ಚಾಗಬಹುದು?
ಹೆಬ್ಬಾಳ- ಸರ್ಜಾರಪುರ ಮೆಟ್ರೋ ಮಾರ್ಗ 36 ಕಿ.ಮೀ ಉದ್ದವನ್ನ ಹೊಂದಿದ್ದು, ಈ ಮಾರ್ಗಗಳಿಗೆ ಸೇವೆ ಒದಗಿಸುವ ಸಲುವಾಗಿ ಈ ಡಿಪೋ ನಿರ್ಮಾಣಕ್ಕೆ ಪ್ರಾಧಿಕಾರ ಮುಂದಾಗಿದೆ. ಈ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಸೇರಿದ ಈ ಭೂಮಿಯನ್ನ ಸ್ವಾಧೀನಪಡಿಸಿಕೊಳ್ಳಲು ಸುಮಾರು 1,224 ಕೋಟಿ ರೂ. ವೆಚ್ಚವಾಗಲಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಇನ್ನು ಈ ಹೆಬ್ಬಾಳ-ಸರ್ಜಾಪುರ ಮಾರ್ಗ ಡಿಪೋ ನಿರ್ಮಾನ ಅಲ್ಲದೆ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಹೆಬ್ಬಾಳದಲ್ಲಿ 45 ಎಕರೆ ಭೂಮಿಯನ್ನು ಬಹು-ಮಾದರಿ ಸಾರಿಗೆ ಕೆಂದ್ರದ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಜಾನದಲ್ಲಿ ಒಂದು ಬಾಗವನ್ನ ಮೆಟ್ರೋದ ದೈನಂದಿನ ಕಾರ್ಯಾಚರಣೆಯನ್ನು ಬೆಂಬಲಿಸಲು ಸ್ಟೇಬ್ಲಿಂಗ್ ಯಾರ್ಡ್‌ಗಾಗಿ ಬಳಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಅಲ್ಲದೆ ಸಧ್ಯಕ್ಕೆ ಈ ಭೂಮಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಶದಲ್ಲಿದ್ದು, ಸಾರಿಗೆ ಸಂಸ್ಥೆಯು ಈ ಭುಮಿಯ ಪ್ರತಿ ಎಕರೆಗೆ 12.1 ಕೋಟಿ ರೂ. ಪಾವತಿಸಲು ಮುಂದಾಗಿದೆ. ಆದ್ರೆ ಈ ಭೂಮಿಯನ್ನ ಸುಮಾರು ಎರಡು ದಶಕಗಳ ಹಿಂದೆಯೇ ಸ್ವಾಧೀನಪಡಿಸಿಕೊಳ್ಳಲಾಗಿದೆ ಆದ್ರೂ ಕೂಡ ಅಲ್ಲಿನ ಭೂ ಮಾಲೀಕರಿಗೆ ಯಾವುದೇ ಪರಿಹಾರವನ್ನ ನೀಡಿಲ್ಲ.
ಈ ಹಿಂದೆ ಕೂಡ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಭೂಮಿ ನೀಡಿದ ಕಾಸಗಿ ಏಜೆನ್ಸುಗಳಿಗೆ ನೇರರವಾಗಿ ಹಣ ನೀಡುವಂತೆ ಸೂಚನೆಯನ್ನ ನೀಡಿದ್ದರು. ಇದದ ನಂತರ ಮತ್ತೆ ಸಂಸದೆ ಶೋಭಾ ಕರಂದ್ಲಾಜೆ ಅವರು ವಿಳಂಬ ಮಾಡದೆ ಕೆಐಎಡಿಬಿ ಭೂಮಿಯನ್ನ ನಮ್ಮ ಮೆಟ್ರೊಗೆ ಹಸ್ತಾಂತರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ತಿಳಿಸಿದ್ದರು.
ನಂತರ ಹೆಬ್ಬಾಳದಲ್ಲಿರುವ 45 ಎಕರೆ ಜಾಗವನ್ನು ಬಿಎಂಆರ್‌ಸಿಎಲ್‌ಗೆ ವರ್ಗಾಯಿಸುವಂತೆ ಆರಿನ್ ಕ್ಯಾಪಿಟಲ್ ಅಧ್ಯಕ್ಷ ಟಿ.ವಿ.ಮೋಹನ್ ದಾಸ್ ಪೈ ಅವರು ಮುಖ್ಯಮಂತ್ರಿಯವರನ್ನ ಒತ್ತಾಯಿಸಿದ್ದರು.
ಈ 45 ಎಕರೆ ಭೂಮಿಯನ್ನ ನಮ್ಮ ಮೆಟ್ರೋಗೆ ನೀಡುವ ಮೂಲಕ ಬೆಂಗಳೂರಿಗೆ ಅಂದರೆ ನಮಗೆಲ್ಲರಿಗೂ ಉತ್ತಮ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಸಹಾಯ ಮಾಡಿ. ಬೇರೆ ಯಾರಿಗೂ ಅಲ್ಲ. ಸಿದ್ದರಾಮಯ್ಯ ಅವರೇ ನಿಮ್ಮ ಪರಂಪರೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಒಟ್ನಲ್ಲಿ, ಈ 36-ಕಿಮೀ ಮೆಟ್ರೋ ಮಾರ್ಗ ನಿರ್ಮಾಣಕ್ಕೆ 28,405 ಕೋಟಿ ವೆಚ್ಚವಾಗಲಿದೆ ಎನ್ನಲಾಗ್ತಿದೆ. ಇದರಲ್ಲಿ ಜಮೀನು ಸ್ವಾಧೀನದ ವೆಚ್ಚ ಕೂಡ ಒಳಗೊಂಡಿದ್ದು, ಇದಕ್ಕೆ ಸುಮಾರು 8,080 ಕೋಟಿ ರೂ. ಖರ್ಚಾಗಲಿದೆ. ಅಲ್ಲದೆ ಈ ಯೋಜನೆಗಾಗಿ ಬಿಎಂಆರ್‌ಸಿಎಲ್‌ಗೆ ಸುಮಾರು 161.65 ಎಕರೆ ಭೂಮಿಯ ಅವಶ್ಯಕತೆಯಿದೆ ಎನ್ನಲಾಗ್ತಿದೆ. ಇನ್ನು ಈ ಯೋಜನೆಯ ಕುರಿತಾಗಿ ರಾಜ್ಯ ಸಚಿವ ಸಂಪುಟದ ನಿರ್ಧಾರದ ಬಗ್ಗೆ ಬಿಎಂಆರ್‌ಸಿಎಲ್ ಜೊತೆ ಅಧಿಕಾರಿಗಳೊಬ್ಬರು ಮಾತನಾಡಿದ್ದು, ಭೂಸ್ವಾಧೀನಕ್ಕಾಗಿ ಕೇಂದ್ರ ತನ್ನ ಅಂತಿಮ ತೀರ್ಮಾನ ತಿಳಿಸುವ ಮುನ್ನ ನಾವು ಈ ಮಾರ್ಗ ಮೆಟ್ರೋ ನಿರ್ಮಾನದ ಪೂರ್ವ ನಿರ್ಮಾಣ ಚಟುವಟಿಕೆಗಳನ್ನ ಆರಂಭ ಮಾಡಬಹುದು ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಹೆಬ್ಬಾಳ-ಸರ್ಜಾಪುರ ಮೆಟ್ರೋ ಮಾರ್ಗ
ಹೆಬ್ಬಾಳ-ಸರ್ಜಾಪುರ ಮೆಟ್ರೋ ಲೈನ್ ಭಾರತದಲ್ಲಿನ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲದ ಪ್ರಸ್ತಾವಿತ ವಿಸ್ತರಣೆಯಾಗಿದ್ದು, ನಗರದ ಪ್ರಮುಖ ಪ್ರದೇಶಗಳ ನಡುವೆ ಸಂಪರ್ಕವನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ. ಈ ಮಾರ್ಗವು 2 ನೇ ಹಂತದ ವಿಸ್ತರಣೆ ಯೋಜನೆಯ ಭಾಗವಾಗಿದೆ ಮತ್ತು ಬೆಂಗಳೂರಿನ ಉತ್ತರ ಮತ್ತು ಆಗ್ನೇಯ ಭಾಗಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ.
ಹೆಬ್ಬಾಳ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸರ್ಜಾಪುರದಂತಹ ನಿರ್ಣಾಯಕ ಸ್ಥಳಗಳನ್ನು ಒಳಗೊಂಡಿದೆ. ಇದು ಸಾರ್ವಜನಿಕ ಸಾರಿಗೆ ಆಯ್ಕೆಗಳನ್ನು ಹೆಚ್ಚಿಸುತ್ತದೆ, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಕರಿಗೆ ರಸ್ತೆ ಪ್ರಯಾಣಕ್ಕೆ ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿ ಪರ್ಯಾಯವನ್ನು ಒದಗಿಸುತ್ತದೆ. ಸುಸ್ಥಿರ ನಗರ ಚಲನಶೀಲತೆಯನ್ನು ಪ್ರೋತ್ಸಾಹಿಸುವ ಸಂದರ್ಭದಲ್ಲಿ ವಸತಿ ಮತ್ತು ವಾಣಿಜ್ಯ ಕೇಂದ್ರಗಳೆರಡಕ್ಕೂ ಉತ್ತಮ ಪ್ರವೇಶವನ್ನು ಒದಗಿಸುವ ಮೂಲಕ ನಗರದ ಮೂಲಸೌಕರ್ಯಕ್ಕೆ ಈ ಮಾರ್ಗವು ಮಹತ್ವದ ಬೆಳವಣಿಗೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?



Click it and Unblock the Notifications