ಕೊರೊನಾ ಹೊಡೆತಕ್ಕೆ ಸಿಲುಕಿದ ಚೀನಾದ ಆರ್ಥಿಕತೆ ಚೇತರಿಕೆ ಹಾದಿಯಲ್ಲಿ

ಈ ವರ್ಷದ ಎರಡನೇ ತ್ರೈ ಮಾಸಿಕದಲ್ಲಿ ಚೀನಾದ ಆರ್ಥಿಕತೆ ಮತ್ತೆ ಬೆಳವಣಿಗೆ ಹಾದಿಗೆ ಮರಳಿದೆ. ಜಾಗತಿಕ ಮಟ್ಟದಲ್ಲಿಯೇ ಎಲ್ಲ ದೇಶಗಳು ಚೇತರಿಕೆಗಾಗಿ ಹೆಣಗಾಡುತ್ತಿರುವಾಗ ಕಳೆದ ವರ್ಷದ ಏಪ್ರಿಲ್- ಜೂನ್ ಅವಧಿಗೆ ಹೋಲಿಸಿದರೆ ಈ ವರ್ಷದ ಅದೇ ಅವಧಿಗೆ 3.2% ಜಿಡಿಪಿ ಹಿಗ್ಗಿದೆ. ಆದರೆ 2019ರ ಮೊದಲಾರ್ಧಕ್ಕೆ ಹೋಲಿಸಿದರೆ ಈಗಲೂ 1.6 ಪರ್ಸೆಂಟ್ ಕಡಿಮೆ ಇದೆ.

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಚೀನಾದ ಆರ್ಥಿಕತೆ ಚಲನೆಯೇ ಕಳೆದುಕೊಂಡಿತ್ತು. ಕೊರೊನಾ ವೈರಾಣು ಹಬ್ಬುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿತ್ತು. ಕೊರೊನಾ ವಿರುದ್ಧ ಹೋರಾಟದಲ್ಲಿ ಜಾಗತಿಕ ಮಟ್ಟದ ನಾಯಕತ್ವ ಚೀನಾ ವಹಿಸಿತ್ತು. ಆದರೂ ಬಾಹ್ಯ ಬೇಡಿಕೆಯಲ್ಲಿ ದೊಡ್ಡ ಮಟ್ಟದಲ್ಲಿ ಚೇತರಿಕೆ ಕಾಣದೆ ಬೇರೆಲ್ಲ ಕಡೆಯೂ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದ್ದರ ಪರಿಣಾಮ ಎದುರಿಸುತ್ತಿತ್ತು.

ಚೀನಾ ಗುರುವಾರ ಬಿಡುಗಡೆ ಮಾಡಿರುವ ದತ್ತಾಂಶ

ಚೀನಾ ಗುರುವಾರ ಬಿಡುಗಡೆ ಮಾಡಿರುವ ದತ್ತಾಂಶ

* ಈ ಹಿಂದಿನ ವರ್ಷಕ್ಕಿಂತ ಕೈಗಾರಿಕೆ ಉತ್ಪಾದನೆ 4.8%ಗೆ ಏರಿಕೆ ಆಗಿದೆ. ಮಧ್ಯಮ ಹಂತದ ನಿರೀಕ್ಷೆಯನ್ನು ತಲುಪಿದೆ.

* ರೀಟೇಲ್ ಮಾರಾಟ 1.8% ಕುಗ್ಗಿದ್ದು, 0.5% ಹೆಚ್ಚಳ ಆಗಬಹುದು ಎಂದುಕೊಂಡಿದ್ದಕ್ಕಿಂತ ದುರ್ಬಲವಾಗಿದೆ.

* ವರ್ಷದ ಮೊದಲಾರ್ಧದಲ್ಲಿ ಸ್ಥಿರಾಸ್ತಿ ಹೂಡಿಕೆ 3.1% ಕುಗ್ಗಿದೆ. ನಿರೀಕ್ಷೆ ಮಾಡಿದ್ದಕ್ಕಿಂತಲೂ 3.3% ಕಡಿಮೆ ಆಗಿದೆ.

* ಮೊದಲಾರ್ಧದಲ್ಲಿ ಕೈಗಾರಿಕೆ ಉತ್ಪಾದನೆ 1.3% ಕಡಿಮೆ, ರೀಟೇಲ್ ಮಾರಾಟ 11.4% ಕುಗ್ಗಿದೆ.

* ಸಮೀಕ್ಷೆ ಮಾಡಿದ ನಗರ ಪ್ರದೇಶ ನಿರುದ್ಯೋಗ ಪ್ರಮಾಣ 5.7%ಗೆ ಕುಸಿದಿದೆ.

ಅಮೆರಿಕದಿಂದ ಒತ್ತಡ

ಅಮೆರಿಕದಿಂದ ಒತ್ತಡ

ತಜ್ಞರು ಹೇಳುವಂತೆ, ಚೀನಾದ ಆರ್ಥಿಕತೆಯು ಎರಡನೇ ತ್ರೈಮಾಸಿಕದಲ್ಲಿ ಅದ್ಭುತವಾಗಿ ಪುಟಿದೆದ್ದಿದೆ. ಆದರೆ ಇದೇ ಮಟ್ಟವನ್ನು ಕಾಪಾಡಿಕೊಳ್ಳುವುದು ಸವಾಲು. ಈ ಮಧ್ಯೆ ಚೀನಾವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿ ಮಾಡುವ ಸಲುವಾಗಿ ಅಮೆರಿಕ ಎಲ್ಲ ಪ್ರಯತ್ನ ಮಾಡುತ್ತಿದೆ. ಚೀನಾದಲ್ಲಿ ವ್ಯಾಪಾರ- ವ್ಯವಹಾರ ನಡೆಸುತ್ತಿರುವ ಕಂಪೆನಿಗಳಿಗೆ ಅಲ್ಲಿಂದ ಹೊರಬರುವುದಕ್ಕೆ ಒತ್ತಡ ಹೇರಲಾಗುತ್ತಿದೆ. ಆದರೆ ಚೀನಾ ಅಧ್ಯಕ್ಷ ಅದೇ ದೇಶದಲ್ಲೇ ಮುಂದುವರಿಯುವಂತೆ ಮನವಿ ಮಾಡಿದ್ದಾರೆ.

ವಿಶ್ವದ ಉಳಿದ ರಾಷ್ಟ್ರಗಳಿಗಿಂತ ಬೇಗ ಚೇತರಿಕೆ

ವಿಶ್ವದ ಉಳಿದ ರಾಷ್ಟ್ರಗಳಿಗಿಂತ ಬೇಗ ಚೇತರಿಕೆ

ಆದರೆ, ವಿಶ್ವದ ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ಚೀನಾದ ಚೇತರಿಕೆ ಪ್ರಬಲವಾಗಿದೆ. ಇದು ಚೀನಾದಲ್ಲಿನ ಅಧಿಕಾರಿಗಳೇ ಹೇಳುತ್ತಿರುವ ಮಾತು. ಕೊರೊನಾವನ್ನು ನಿಯಂತ್ರಿಸುವುದಕ್ಕೆ ಚೀನಾ ತೆಗೆದುಕೊಂಡ ಪರಿಣಾಮಕಾರಿ ಕ್ರಮಗಳ ಫಲಿತಾಂಶ ಇದು ಎನ್ನುತ್ತಾರೆ. ಆದರೂ ವರ್ಷದ ದ್ವಿತೀಯಾರ್ಧದಲ್ಲಿ ಏನಾಗಬಹುದು ಎಂಬ ಬಗ್ಗೆ ಕುತೂಹಲ ಇದ್ದೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+