ಕೊರೊನಾವೈರಸ್ ಸದ್ಯಕ್ಕೆ ತೊಲಗುವ ಲಕ್ಷಣಗಳು ಕಾಣುತ್ತಿಲ್ಲ ಎಂದ WHO

ಕೊರೊನಾವೈರಸ್ ಸಾಂಕ್ರಾಮಿಕ ರೋಗವು ಸದ್ಯಕ್ಕೆ ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯಸ್ಥ ಟೆಡ್ರೊಸ್ ಘೆಬ್ರೆಯೆಸಸ್ ಹೇಳಿದ್ದಾರೆ.

ಮಾರಕ ಸೋಂಕಿಗೆ ಇನ್ನೂ ಅನೇಕ ಜನ ತುತ್ತಾಗಲಿದ್ದಾರೆ. ಇದರಿಂದ ಸಾಕಷ್ಟು ಅನಾಹುತಗಳನ್ನು ನೋಡಲಿದ್ದೇವೆ.ಹಲವು ದೇಶಗಳ ಆರ್ಥಿಕ ಪರಿಸ್ಥಿತಿ ಉಲ್ಟಾ ಆಗಲಿದೆ ಎಂದಿರುವುದು ಕೊರೊನಾವೈರಸ್ ಬಗ್ಗೆ ಮತ್ತಷ್ಟು ಆತಂಕ ಹುಟ್ಟುವಂತೆ ಮಾಡಿದೆ.

ಇದು ಮುಗಿಯಬೇಕೆಂದು ನಾವೆಲ್ಲರೂ ಬಯಸುತ್ತೇವೆ. ನಾವೆಲ್ಲರೂ ನಮ್ಮ ಜೀವನವನ್ನು ಸಾಮಾನ್ಯವಾಗಿ ನಡೆಸಲು ಬಯಸುತ್ತೇವೆ. ಆದರೆ, ಕಠಿಣ ಸತ್ಯವೆಂದರೆ ಕೊರೊನಾ ಹಾವಳಿ ಸದ್ಯಕ್ಕೆ ಮುಗಿಯುವುದಿಲ್ಲ. ಆರ್ಥಿಕವಾಗಿ ಅನೇಕ ದೇಶಗಳು ಜಾಗತಿಕವಾಗಿ ಸ್ವಲ್ಪ ಪ್ರಗತಿ ಸಾಧಿಸಿದ್ದರೂ, ಸಾಂಕ್ರಾಮಿಕ ರೋಗವು ಹರಡುವುದು ಮಾತ್ರ ನಿಲ್ಲುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಹೇಳಿದ್ದಾರೆ.

ಕೊರೊನಾವೈರಸ್ ಸದ್ಯಕ್ಕೆ ತೊಲಗುವ ಲಕ್ಷಣಗಳು ಕಾಣುತ್ತಿಲ್ಲ ಎಂದ WHO

ಸೋಂಕನ್ನು ತಡೆಗಟ್ಟಲು ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಕಂಡುಹಿಡಿಯುವಲ್ಲಿ ಮಹತ್ತರವಾದ ಪ್ರಗತಿಯನ್ನು ಸಾಧಿಸಲಾಗಿದೆ. ಆದರೆ, ಆ ಪ್ರಯತ್ನವು ಯಶಸ್ವಿಯಾಗಲಿದೆ ಎಂಬ ಭರವಸೆ ಇನ್ನೂ ನಮಗೆ ಸಿಕ್ಕಿಲ್ಲ ಎಂದು ಸಹ ಅವರು ಹೇಳಿದ್ದಾರೆ. ಕೊರೊನಾಕ್ಕೆ ಜಪಾನ್‌ ಮಾದರಿಯನ್ನು ಎಲ್ಲ ದೇಶಗಳು ಅನುಸರಿ, ಗಂಭೀರತೆಯಿಂದ ಸ್ವಲ್ಪ ದೂರ ಇರಬಹುದು ಎಂದಿದ್ದಾರೆ. ರೋಗದ ವಿರುದ್ಧ ಹೋರಾಡುವ ಸಂಶೋಧನೆಯ ಪ್ರಗತಿಯನ್ನು ನಿರ್ಣಯಿಸಲು ಈ ವಾರ ಸಭೆ ಕರೆಯಲು WHO ಯೋಜಿಸಿದೆ ಎಂದು ಟೆಡ್ರೊಸ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+