ಭಾರತದ ಜಿಡಿಪಿ ಕುಸಿತ FY21ಕ್ಕೆ 9 ಪರ್ಸೆಂಟ್; ಅಂದಾಜು ಹೆಚ್ಚಿಸಿದ ಕ್ರಿಸಿಲ್

ಭಾರತದ ಆರ್ಥಿಕತೆಯು 2020- 21ನೇ ಸಾಲಿನಲ್ಲಿ 9% ಇಳಿಕೆ ಆಗಲಿದೆ. ಕೊರೊನಾ ಸೋಂಕು ಇನ್ನೂ ಏರಿಕೆ ಆಗುವ ಸಾಧ್ಯತೆ ಇದ್ದು, ಸರ್ಕಾರದಿಂದ ಅಗತ್ಯ ಪ್ರಮಾಣದ ನೇರ ಆರ್ಥಿಕ ಬೆಂಬಲ ದೊರೆಯುತ್ತಿಲ್ಲ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ಗುರುವಾರ ಹೇಳಿದೆ. ಈ ವರ್ಷದ ಮೇ ತಿಂಗಳಲ್ಲಿ ಕ್ರಿಸಿಲ್ ಅಂದಾಜು ಮಾಡಿದ್ದು ಜಿಡಿಪಿಯ 5% ಕುಸಿತ.

ಆದರೆ, ಜೂನ್ ತ್ರೈಮಾಸಿಕದಲ್ಲಿ 23.9%ನಷ್ಟು ಜಿಡಿಪಿ ಕುಗ್ಗಿದ ಮೇಲೆ ಈಗ ಹೊಸದಾಗಿ ಅಂದಾಜು ಮಾಡಲಾಗಿದೆ. 1950ರಿಂದ ಈಚೆಗೆ 9%ನಷ್ಟು ಜಿಡಿಪಿ ಕುಸಿತ ಆಗುವುದು ಅತ್ಯಂತ ಗರಿಷ್ಠ ಮಟ್ಟ ಎನ್ನಲಾಗಿದೆ. ಸರ್ಕಾರದಿಂದ 20 ಲಕ್ಷ ಕೋಟಿ ರುಪಾಯಿ ಆರ್ಥಿಕ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದರೂ ಅದು ವಾಸ್ತವದಲ್ಲಿ ಹೊಸದಾಗಿ ಖರ್ಚು ಜಿಡಿಪಿಯ 2% ಕೂಡ ಕಡಿಮೆ ಆಗುತ್ತದೆ.

"ಕೊರೊನಾ ಬಿಕ್ಕಟ್ಟು ಇನ್ನೂ ಗರಿಷ್ಠ ಮಟ್ಟವನ್ನು ತಲುಪಿಲ್ಲ ಹಾಗೂ ಸರ್ಕಾರದಿಂದ ಅಗತ್ಯ ಪ್ರಮಾಣದ ನೇರ ಆರ್ಥಿಕ ಬೆಂಬಲ ದೊರೆತಿಲ್ಲ. ಈ ಹಿಂದೆ ಅಂದಾಜು ಮಾಡಿದ್ದ ಇಳಿಕೆ ಪ್ರಮಾಣ ನಿಜವಾಗಿದೆ" ಎಂದು ಕ್ರಿಸಿಲ್ ಹೇಳಿದೆ. "ಮಧ್ಯಮಾವಧಿಯಲ್ಲಿ ವಾಸ್ತವ ಜಿಡಿಪಿಯು ಶಾಶ್ವತವಾಗಿ 13% ನಷ್ಟವಾಗಲಿದೆ ಎಂದು ನಾವು ಅಂದಾಜು ಮಾಡಿದ್ದೇವೆ" ಎಂದು ತಿಳಿಸಲಾಗಿದೆ.

ಭಾರತದ GDP ಕುಸಿತ FY21ಕ್ಕೆ 9%; ಅಂದಾಜು ಹೆಚ್ಚಿಸಿದ ಕ್ರಿಸಿಲ್

ಈ ನಷ್ಟವನ್ನು ಹಣದ ಲೆಕ್ಕದಲ್ಲಿ ಹೇಳಬೇಕೆಂದರೆ, 30 ಲಕ್ಷ ಕೋಟಿ ರುಪಾಯಿ ಆಗುತ್ತದೆ. ಏಷ್ಯಾ ಪೆಸಿಫಿಕ್ ಭಾಗದ ಜಿಡಿಪಿ 3% ಶಾಶ್ವತವಾಗಿ ನಷ್ಟವಾಗುವುದಕ್ಕಿಂತ ಈ ಮೊತ್ತ ಹೆಚ್ಚಾಗುತ್ತದೆ ಎಂದು S&P ಅಂದಾಜು ಮಾಡಿದೆ. ಭಾರತದಲ್ಲಿನ ಕೊರೊನಾ ಸೋಂಕಿತರ ಸಂಖ್ಯೆ ಬ್ರೆಜಿಲ್ ಅನ್ನು ಮೀರಿ ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರ ದೇಶದ ಎರಡನೇ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+