ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಅಥವಾ ಕರ್ನಾಟಕ ಮಿಲ್ಕ್ ಫೆಡರೇಶನ್ (ಕೆಎಂಎಫ್) ಇಂದು (ಜುಲೈ 21) ಮುಖ್ಯಮಂತ್ರಿ ಸಿದ್ಧರಾಮಯ್ಯರ ಜೊತೆ ಸಭೆ ನಡೆಸಲಿದೆ. ಈ ಹಿಂದೆ ಹಲವಾರು ಬಾರಿ ನಂದಿನಿ ಹಾಲಿನ ದರವನ್ನು ಏರಿಕೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದ ಕೆಎಂಎಫ್ ಈಗ ಮುಖ್ಯಮಂತ್ರಿ ಮುಂದೆ ಹಾಲಿನ ದರ ಏರಿಕೆಯ ಪ್ರಸ್ತಾಪವನ್ನು ಮಾಡಲಿದೆ.
ಚೇರ್‌ಮನ್ ಬೀಮಾ ನಾಯ್ಕ್‌ರನ್ನು ಒಳಗೊಂಡ ಕೆಎಂಎಫ್‌ನ ನಿಯೋಗವು ಇಂದು ಸಂಜೆ ಸುಮಾರು 6 ಗಂಟೆಗೆ ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಭೇಟಿಯಾಗಲಿದೆ. ಈ ಸಂದರ್ಭದಲ್ಲಿ ನಂದಿನ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರೂಪಾಯಿಯಂತೆ ಏರಿಕೆ ಮಾಡುವ ಪ್ರಸ್ತಾಪವನ್ನು ಮುದಿಡಲಿದೆ. ಈ ಸಭೆಯು ಒಂದು ವಾರದ ಹಿಂದೆ ನಡೆಯಲಿತ್ತು, ಆದರೆ ಮುಖ್ಯಮಂತ್ರಿ ಅಸೌಖ್ಯ ಕಾರಣ ಸಭೆ ಮುಂದೂಡಲಾಗಿತ್ತು.

ನಂದಿನ ಹಾಲಿನ ದರ 5 ರೂಪಾಯಿ ಏರುತ್ತಾ?
ಕಳೆದ ಕೆಲವು ತಿಂಗಳುಗಳಿಂದ ಕೆಎಂಎಫ್ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಐದು ರೂಪಾಯಿಯಷ್ಟು ಏರಿಕೆ ಮಾಡಬೇಕು ಎಂಬ ಒತ್ತಾಯವನ್ನು ಮಾಡುತ್ತಾ ಬಂದಿದೆ. ಆದರೆ ಸರ್ಕಾರವು ಈ ಪ್ರಸ್ತಾಪವನ್ನು ತಳ್ಳಿಹಾಕುತ್ತಿದೆ. ಈ ನಡುವೆ ಈಗ ಕೆಎಂಎಫ್ ರಾಜ್ಯ ಸರ್ಕಾರದೊಂದಿಗೆ ನಡೆಸುತ್ತಿರುವ ಈ ಸಭೆಯು ಅತೀ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಹಾಲು ಉತ್ಪಾದನಾ ವೆಚ್ಚವು ಅತೀ ಅಧಿಕವಾಗಿದೆ. ಇದರಿಂದಾಗಿ ರಾಜ್ಯದಲ್ಲಿರುವ ಎಲ್ಲ 15 ಹಾಲಿನ ಘಟಕಗಳಲ್ಲಿ (ಡೈರಿ) ಪ್ರತಿ ದಿನ ಸುಮಾರು 15 ರಿಂದ 16 ಲಕ್ಷ ರೂಪಾಯಿ ನಷ್ಟ ಉಂಟಾಗುತ್ತಿದೆ ಎಂದು ಕೆಎಂಎಫ್ ಹೇಳಿಕೊಂಡಿದೆ. ಹಾಗೆಯೇ ನಮ್ಮ ನೆರೆಯ ರಾಜ್ಯಗಳಲ್ಲಿ ಹಾಲಿನ ದರವು ಪ್ರತಿ ಲೀಟರ್‌ಗೆ 51 ರೂಪಾಯಿ ಇದೆ. ಆದರೆ ನಮ್ಮ ಕರ್ನಾಟಕದಲ್ಲಿ ಮಾತ್ರ ಪ್ರತಿ ಲೀಟರ್ ಹಾಲಿನ ದರ 39 ರೂಪಾಯಿ ಆಗಿದೆ ಎಂದು ಕೆಎಂಎಫ್ ಹೋಲಿಕೆ ಮಾಡಿಕೊಂಡಿದೆ.
ಹಾಲು ಉತ್ಪಾದನೆಯ ವೆಚ್ಚ್ ಅಧಿಕವಾಗಿರುವ ಕಾರಣದಿಂದಾಗಿ ಹಾಲಿನ ದರ ಏರಿಕೆ ಮಾಡುವ ಕೆಎಂಎಫ್ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ಒಪ್ಪಿಗೆ ಸೂಚಿಸಬಹುದು ಎಮದು ಕಳೆದ ತಿಂಗಳಿನಲ್ಲಿ ಸಹಕಾರಿ ಸಚಿವ ಕೆಎನ್ ರಾಜಣ್ಣ ತಿಳಿಸಿದ್ದರು. ಕಳೆದ ತಿಂಗಳು ಕೆಎಂಎಫ್ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 1.5 ರೂಪಾಯಿಯಷ್ಟು ಇಳಿಕೆ ಮಾಡಲು ನಿರ್ಧಾರ ಮಾಡಿತ್ತು. ಆದರೆ ಸಿದ್ಧರಾಮಯ್ಯರ ಹಸ್ತಕ್ಷೇಪದ ಬಳಿಕ ಈ ನಿರ್ಧಾರಕ್ಕೆ ತಡೆಯೊಡ್ಡಲಾಗಿದೆ.
ಹಾಲಿನ ದರ ಎಷ್ಟಿದೆ?
ಟೋನ್ಡ್ ಹಾಲು: 39
ಹೋಮೋಜಿನೈಸ್ಡ್ ಹಾಲು: 40
ಹೋಮೋಜಿನೈಸ್ಡ್ ಹಸುವಿನ ಹಾಲು: 44
ಸ್ಪೆಷಲ್ ಹಾಲು: 45
ಶುಭಂ ಹಾಲು: 45
ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡ್ ಹಾಲು: 46
ಸಮೃದ್ಧಿ ಹಾಲು: 50
ಸಂತೃಪ್ತಿ ಹಾಲು: 52
ಡಬಲ್ಡ್ ಟೋನ್ಡ್ ಹಾಲು: 38
ಮೊಸರು ಪ್ರತಿ ಕೆ.ಜಿಗೆ: 47
5 ರೂಪಾಯಿ ಏರಿದರೆ ಹಾಲು/ ಮೊಸರು ಬೆಲೆ ಎಷ್ಟಾಗುತ್ತದೆ?
ಟೋನ್ಡ್ ಹಾಲು: 44
ಹೋಮೋಜಿನೈಸ್ಡ್ ಹಾಲು: 45
ಹೋಮೋಜಿನೈಸ್ಡ್ ಹಸುವಿನ ಹಾಲು: 49
ಸ್ಪೆಷಲ್ ಹಾಲು: 50
ಶುಭಂ ಹಾಲು: 50
ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡ್ ಹಾಲು: 41
ಸಮೃದ್ಧಿ ಹಾಲು: 55
ಸಂತೃಪ್ತಿ ಹಾಲು: 57
ಡಬಲ್ಡ್ ಟೋನ್ಡ್ ಹಾಲು: 43
ಮೊಸರು ಪ್ರತಿ ಕೆ.ಜಿಗೆ: 52
ಈ ಹಿಂದೆ 2 ರೂಪಾಯಿ ದರ ಏರಿಕೆ
ಈ ಹಿಂದೆ ನವೆಂಬರ್ 23ರಂದು ನಂದಿನಿ ಹಾಲಿನ ಹಾಗೂ ಮೊಸರಿನ ದರವನ್ನು ಕೆಎಂಎಫ್ ಹೆಚ್ಚಳ ಮಾಡಲಾಗಿದೆ. ಪ್ರತಿ ಲೀಟರ್ ಹಾಲಿಗೆ ಹಾಗೂ ಪ್ರತಿ ಲೀಟರ್ ಮೊಸರಿಗೆ ತಲಾ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ನವೆಂಬರ್ 14ರಂದು ಪ್ರತಿ ಲೀಟರ್ ಹಾಲಿಗೆ ಹಾಗೂ ಪ್ರತಿ ಲೀಟರ್ ಮೊಸರಿನ ಬೆಲೆಯಲ್ಲಿ 3 ರೂಪಾಯಿ ಏರಿಕೆ ಮಾಡಲಾಗಿತ್ತು. ಆದರೆ ನಿರ್ಧಾರ ಘೋಷಣೆ ಮಾಡಿದ ದಿನವೇ ಬೆಲೆ ಏರಿಕೆಯನ್ನು ಹಿಂಪಡೆಯಲಾಗಿತ್ತು.


Click it and Unblock the Notifications