ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಹಾರ ಸವಿಯುವವರಿಗೆ ಗುಡ್‌ನ್ಯೂಸ್ ಇದೆ. ಬೆಂಗಳೂರು ನಗರದಿಂದ ಸುಮಾರು 40 ಕಿ. ಮೀ. ದೂರದಲ್ಲಿರುವ ವಿಮಾನ ನಿಲ್ದಾಣವನ್ನು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ನಿರ್ವಹಣೆ ಮಾಡುತ್ತದೆ. ಪ್ರತಿನಿತ್ಯ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ದೇಶದ 3ನೇ ಬ್ಯುಸಿಯೆಸ್ಟ್ ಏರ್‌ಪೋರ್ಟ್‌ನಲ್ಲಿ ಹೊಸ ಫುಡ್‌ಕೋರ್ಟ್‌ಗಳ ಸ್ಥಾಪನೆಯಾಗಲಿದೆ.
ದಿನದ 24 ಗಂಟೆಯೂ ಬ್ಯುಸಿಯಾಗಿರುವ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಸೇರಿ ಅಗ್ಗದ ಮತ್ತು ದುಬಾರಿ ದರದ ಆಹಾರ ಪದಾರ್ಥಗಳು ಸಿಗುತ್ತವೆ. ಕರ್ನಾಟಕ ಸರ್ಕಾರ 2024ರ ಮಾರ್ಚ್‌ನಲ್ಲಿ ವಿಮಾನ ನಿಲ್ದಾಣದಲ್ಲಿ ಎರಡು 'ಇಂದಿರಾ ಕ್ಯಾಂಟೀನ್'ಗಳನ್ನು ಸಹ ತೆರೆದಿದೆ. ಈಗ ವಿಮಾನ ನಿಲ್ದಾಣದಲ್ಲಿ ಕಾಫಿ ಸವಿಯುವ, ದೋಸೆ ತಿನ್ನಲು ಬಯಸುವ ಪ್ರಯಾಣಿಕರಿಗೆ ಪ್ರಮುಖವಾದ ಮಾಹಿತಿಯೊಂದಿದೆ.

ಬೆಂಗಳೂರು ನಗರದ ಪ್ರಸಿದ್ಧ ಹೋಟೆಲ್‌ಗಳಾದ ಮಲ್ಲೇಶ್ವರದ ಸೆಂಟ್ರಲ್ ಟಿಫಿನ್ ರೂಮ್ (ಸಿಟಿಆರ್) ಮತ್ತು ರಾಮೇಶ್ವರಂ ಕೆಫೆಯ ಶಾಖೆಗಳು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆರಂಭವಾಗಲಿದೆ. ಈ ಹೋಟೆಲ್‌ಗಳ ದೋಸೆ, ಕಾಫಿಗೆ ದೇಶ, ವಿದೇಶದಲ್ಲಿ ಭಾರೀ ಅಭಿಮಾನಿ ಬಳಗವಿದ್ದು, ಈ ಹೋಟೆಲ್‌ಗಳು ವಿಮಾನ ನಿಲ್ದಾಣದಲ್ಲಿ ಜನರ ಸೇವೆಗೆ ತಯಾರಾಗಿವೆ.
ರಾಮೇಶ್ವರಂ ಕೆಫೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್-1 ಮತ್ತು ಸಿಟಿಆರ್ ಟರ್ಮಿನಲ್-2ನಲ್ಲಿ ಆರಂಭವಾಗಲಿದೆ. ಆದರೆ ಈ ಔಟ್‌ಲೆಟ್‌ಗಳಲ್ಲಿ ಯಾವ ಯಾವ ಪದಾರ್ಥಗಳು ಸಿಗಲಿವೆ, ದರ ಎಷ್ಟಿರಲಿದೆ? ಎಂಬ ಮಾಹಿತಿ ಇನ್ನೂ ಅಂತಿಮವಾಗಿಲ್ಲ. ಹೋಟೆಲ್‌ಗಳು ಕಾರ್ಯಾರಂಭ ಮಾಡುವ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಬೆಂಗಳೂರು ನಗರದ ಪುರಾತನ ಹೋಟೆಲ್‌ಗಳಲ್ಲಿ ಸೆಂಟ್ರಲ್ ಟಿಫಿನ್ ರೂಮ್ (ಸಿಟಿಆರ್) ಅಥವ ಶ್ರೀಸಾಗರ್ ಸಹ ಒಂದು. ನಗರದ ಮಲ್ಲೇಶ್ವರದಲ್ಲಿ ಇದು ಇದೆ. 1920ರಲ್ಲಿ ಆರಂಭವಾದ ಈ ಹೋಟೆಲ್‌ನ ದೋಸೆಯ ಘಮ ದೇಶ, ವಿದೇಶದಲ್ಲಿ ಹಬ್ಬಿದೆ. ರಾಜಕೀಯ ನಾಯಕರು, ಸಿನಿಮಾ ನಟರು ಸೇರಿದಂತೆ ಗಣ್ಯರನ್ನು ಇಲ್ಲಿನ ದೋಸೆಯ ರುಚಿ ಸೆಳೆದಿದೆ. ಸಿಟಿಆರ್‌ನ ಬೆಣ್ಣೆ ದೋಸೆ, ಬೆಣ್ಣೆ ಮಸಾಲೆ, ಫಿಲ್ಟರ್ ಕಾಫಿಗೆ ಅಭಿಮಾನಿಗಳಿದ್ದಾರೆ. ಇಂತಹ ಹೋಟೆಲ್ ಈಗ ವಿಮಾನ ನಿಲ್ದಾಣದಲ್ಲಿಯೇ ಜನರ ಹಸಿವು ನೀಗಿಸಲು ತಯಾರಾಗಿದೆ.
ಇನ್ನೂ ರಾಮೇಶ್ವರಂ ಕೆಫೆ 2021ರಲ್ಲಿ ಆರಂಭವಾಗಿದೆ. ಯಶವಂತಪುರ ಸೇರಿದಂತೆ ನಗರದಲ್ಲಿ ಹಲವು ಬ್ರಾಂಚ್‌ಗಳನ್ನು ಇದು ಹೊಂದಿದೆ. ನಗರದಲ್ಲಿ ಉದ್ಯಮ ಆರಂಭಿಸಿದ ಕೆಲವು ವರ್ಷಗಳಲ್ಲಿ ಜನಪ್ರಿಯವಾಗಿದೆ. ಇಲ್ಲಿ ಆಹಾರ ಪದಾರ್ಥಗಳಿಗೆ ತುಪ್ಪ ಬಳಕೆ ಮಾಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳಿವೆ. ದೋಸೆ, ಇಡ್ಲಿ ಸೇರಿದಂತೆ ರಾಮೇಶ್ವರಂ ಕೆಫೆಯ ಹಲವು ಖಾದ್ಯಗಳು ಜನಪ್ರಿಯ. ಈಗ ಇದು ವಿಮಾನ ನಿಲ್ದಾಣದಲ್ಲಿ ಆರಂಭವಾಗಲಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್, ಹಟ್ಟಿಕಾಫಿ, ಮಯ್ಯಾಸ್, ಊರು ಕ್ಯಾಂಟೀನ್ ಈಗಾಗಲೇ ಪ್ರಯಾಣಿಕರಿಗೆ ಆಹಾರವನ್ನು ಒದಗಿಸುತ್ತಿವೆ. ಆಹಾರದ ಗುಣಮಟ್ಟ ಉತ್ತಮವಾಗಿದ್ದು, ದರಗಳು ಸಹ ನಗರಕ್ಕಿಂತ ಹೆಚ್ಚಿದೆ. ಈಗ ಸಿಟಿಆರ್ ಮತ್ತು ರಾಮೇಶ್ವರಂ ಕೆಫೆ ಎರಡೂ ಉದ್ಯಮ ವಿಮಾನ ನಿಲ್ದಾಣದಲ್ಲಿ ಆರಂಭವಾಗಲಿದ್ದು, ದರ ಸಮರ ನಡೆಯವುದು ಖಾತ್ರಿಯಾಗಿದೆ.
ಬಿಐಎಎಲ್ ಅಧಿಕಾರಿಗಳು ನಗರಕ್ಕೆ ಆಗಮಿಸುವ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಶುಚಿ, ರುಚಿಯಾದ ಆಹಾರ ಒದಗಿಸುವುದು ನಮ್ಮ ಗುರಿ. ವಿಮಾನ ನಿಲ್ದಾಣದ ಆವರಣದಲ್ಲಿ ಸಿಟಿಆರ್ ಮತ್ತು ರಾಮೇಶ್ವರಂ ಕೆಫೆ ಆರಂಭಕ್ಕೆ ಅನುಮತಿ ನೀಡಲಾಗಿದೆ, ಶೀಘ್ರವೇ ಈ ಶಾಖೆಗಳು ಕಾರ್ಯಾರಂಭ ಮಾಡಲಿವೆ ಎಂದು ಹೇಳಿದ್ದಾರೆ.
ದೆಹಲಿ ಮತ್ತು ಮುಂಬೈ ಬಳಿಕ ದೇಶದ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ. 100ಕ್ಕೂ ಅಧಿಕ ನಗರಗಳಿಗೆ ಇಲ್ಲಿಂದ ನೇರ ವಿಮಾನ ಸೇವೆ ಇದೆ. ಪ್ರತಿದಿನ ಸಾವಿರಾರು ಪ್ರಯಾಣಿಕರು ಇಲ್ಲಿಗೆ ಆಗಮಿಸುತ್ತಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications