ಗಾರ್ಡನ್ ಸಿಟಿ ಬೆಂಗಳೂರಿಗೆ ಮತ್ತೊಂದು ಕಬ್ಬನ್ ಪಾರ್ಕ್‌ನಂತಹ ದೊಡ್ಡ ಉದ್ಯಾನ ಸಿಗಲಿದೆ. ಉತ್ತರ ಬೆಂಗಳೂರಿನಲ್ಲಿ ಬರೋಬ್ಬರಿ 153 ಎಕರೆ ವಿಸ್ತೀರ್ಣದಲ್ಲಿ ಕಬ್ಬನ್ ಪಾರ್ಕ್ ಮಾದರಿಯ ಉದ್ಯಾನ ನಿರ್ಮಾಣಕ್ಕೆ ಸರ್ಕಾರ ತೀರ್ಮಾನ ಮಾಡಿದ್ದು, ಸೋಮವಾರ ಬೆಂಗಳೂರಿನ ಅರಣ್ಯ ಭವನದಲ್ಲಿ ನಡೆದ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಈ ವಿಚಾರ ತಿಳಿಸಿದ್ದಾರೆ.
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಿಂದ (ಕೆಎಫ್‌ಡಿಸಿ) ವಶಪಡಿಸಿಕೊಂಡ ಭೂಮಿಯನ್ನು ಪರಿಸರವಾದಿ 'ಸಾಲುಮರದ ತಿಮ್ಮಕ್ಕ' ಹೆಸರಿನಲ್ಲಿ ಸಸ್ಯೋದ್ಯಾನವಾಗಿ ಪರಿವರ್ತಿಸಲು ಅರಣ್ಯ ಇಲಾಖೆ ಯೋಜಿಸಿದ್ದು, ಈ ಯೋಜನೆಯ ಭಾಗವಾಗಿ ಉತ್ತರ ಬೆಂಗಳೂರಿನಲ್ಲಿ ಶೀಘ್ರದಲ್ಲೇ 153 ಎಕರೆ ವಿಸ್ತೀರ್ಣದ ಬೃಹತ್ ಉದ್ಯಾನ ಸಿಗಲಿದೆ.

ಉತ್ತರ ಬೆಂಗಳೂರಿನ ಯಲಹಂಕದ ಮಾದರಾಯಪ್ಪನಹಳ್ಳಿಯ ಆರ್‌ಟಿಒ ಸಮೀಪವಿರುವ ಜಾಗವನ್ನು ಕೆಎಫ್‌ಡಿಸಿಗೆ ಗುತ್ತಿಗೆ ನೀಡಲಾಗಿದ್ದು,ಕಬ್ಬನ್ ಪಾರ್ಕ್ ಮಾದರಿಯಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಲಾಗುವುದು ಎಂದು ಹೇಳಿದರು. ಯಲಹಂಕ ಸೇರಿದಂತ ಸುತ್ತಮುತ್ತಲಿನ ಪ್ರದೇಶಗಳು ಈಗಾಗಲೇ ವೇಗವಾಗಿ ಅಭಿವೃದ್ಧಿ ಹೊಂದಿವೆ. ಈ ಭಾಗದಲ್ಲಿ ಪರಿಸರ ಸಮತಲೋಲನ ಕಾಪಾಡುವಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾನ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸದ್ಯ 89 ಚದರ ಕಿಲೋ ಮೀಟರ್ ಗಿಂತ ಅಧಿಕ ಅರಣ್ಯ ಪ್ರದೇಶವಿದೆ. ಕಳೆದ 10 ವರ್ಷಗಳಲ್ಲಿ 5 ಚದರ ಕಿ.ಮೀ. ಅರಣ್ಯ ಪ್ರದೇಶ ಕಡಿಮೆಯಾಗಿದೆ ಎಂದು ಭಾರತೀಯ ಅರಣ್ಯ ಸಮೀಕ್ಷೆ ಹೇಳಿದೆ. ನಗರದ ಒಟ್ಟು ಪ್ರದೇಶದಲ್ಲಿ ಶೇ. 6.81 ರಷ್ಟು ಅರಣ್ಯ ಪ್ರದೇಶ ಇದೆ ಎಂದು ಸಚಿವರು ಹೇಳಿದರು. ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಸಲುವಾಗಿ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಅದರ ಭಾಗವಾಗಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಅತಿ ಹೆಚ್ಚು ಅರಣ್ಯ ಹೊಂದಿರುವ ನಗರ
ಕಳೆದ 10 ವರ್ಷಗಳಲ್ಲಿ ನಗರ ವ್ಯಾಪ್ತಿಯಲ್ಲಿ 5 ಚದರ ಕಿ.ಮೀ. ಅರಣ್ಯ ಪ್ರದೇಶ ಕಡಿಮೆಯಾಗಿದ್ದರೂ, ಭಾರತದಲ್ಲಿ ಅತಿ ಹೆಚ್ಚು ಅರಣ್ಯ ವ್ಯಾಪ್ತಿಯನ್ನು ಹೊಂದಿರುವ ನಗರ ಎನ್ನುವ ಹೆಗ್ಗಳಿಕೆ ಬೆಂಗಳೂರಿನದ್ದಾಗಿದೆ. ಬೆಂಗಳೂರಿನ ಪರಿಸರವನ್ನು ಸಮತೋಲನದಲ್ಲಿಡುವಲ್ಲಿ ಈ ಅರಣ್ಯದ ಪಾತ್ರ ಮಹತ್ವದ್ದಾಗಿದೆ. ಹೆಚ್ಚುತ್ತಿರುವ ನಗರೀಕರಣದಿಂದ ಅರಣ್ಯ ಪ್ರದೇಶಗಳು ಒತ್ತುವರಿಯಾಗದಂತೆ ತಡೆಯಲು, ಅರಣ್ಯ ಇಲಾಖೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಹೆಸರಘಟ್ಟ ಹುಲ್ಲುಗಾವಲು ರಕ್ಷಣೆ
ನಗರದ ಹೊರವಲಯದಲ್ಲಿರುವ ಹೆಸರಘಟ್ಟ ಹುಲ್ಲುಗಾವಲಿನ ಪ್ರದೇಶವನ್ನು 'ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ' ಎಂದು ಘೋಷಿಸಲು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆ ಅಂಗೀಕಾರ ನೀಡಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಹೆಸರಘಟ್ಟವನ್ನು ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಪರಿಸರ ಸಮತೋಲನ ಕಾಪಾಡುವಲ್ಲಿ ಈ ಹುಲ್ಲುಗಾವಲು ಪ್ರಮುಖ ಪಾತ್ರ ವಹಿಸುತ್ತಿದ್ದು, ಇದನ್ನು ರಕ್ಷಣೆ ಮಾಡುವ ಅಗತ್ಯದ ಬಗ್ಗೆ ಸಾಕಷ್ಟು ಹೋರಾಟ ಕೂಡ ನಡೆದಿತ್ತು. ಪರಿಸರವಾದಿಗಳ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಇದೀಗ ಮೀಸಲು ಪ್ರದೇಶ ಎಂದು ಘೋಷಿಸಿದೆ.
More From GoodReturns

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Mysore Road: ಮೈಸೂರು ರೋಡ್ ಟ್ರಾಫಿಕ್ಗೆ ಆದಷ್ಟು ಬೇಗ ಮುಕ್ತಿ; 810 ಕೋಟಿ ವೆಚ್ಚದಲ್ಲಿ ಬರಲಿದೆ ಈ ಯೋಜನೆ

Gold Price Bengaluru: ಯುಗಾದಿಗೂ ಮುನ್ನ ಚಿನ್ನದ ಬೆಲೆ ಇಳಿಕೆ; ನಿನ್ನೆಗಿಂತ 3,300 ರೂ. ಕುಸಿತ

Ugadi 2026 Wishes: ಈ ವರ್ಷದ ‘ಯುಗಾದಿ’ ಹೊಸ ಬೆಳಕು ತರಲಿ- ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ

Eid Ul-Fitr 2026: ಯುಎಇ, ಕುವೈತ್, ಕತಾರ್ನಲ್ಲಿ ಮೈದಾನ ಪ್ರಾರ್ಥನೆಗೆ ಬ್ರೇಕ್!

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ



Click it and Unblock the Notifications