ಬೆಂಗಳೂರು, ಜುಲೈ 6: "ಗ್ರಾಹಕರ ದತ್ತಾಂಶ ಸೋರಿಕೆಯಾಗಿಲ್ಲ. ಈ ಕುರಿತ ಆರೋಪ ಸತ್ಯಕ್ಕೆ ದೂರವಾದುದು" ಎನ್ನುವ ಮೂಲಕ ಡೇಟಾ ಸೋರಿಕೆ ಕುರಿತ ವರದಿಗಳನ್ನು ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್ ತಳ್ಳಿಹಾಕಿದೆ. ಮಾತ್ರವಲ್ಲದೇ ಇಂತಹ ಆರೋಪಗಳ ಮೂಲಕ ತಮ್ಮ ಬ್ರ್ಯಾಂಡ್ ಇಮೇಜ್ ಅನ್ನು ಹಾಳುಕೆಡುವ ಹತಾಶ ಪ್ರಯತ್ನ ಎಂದು ಸಂಸ್ಥೆ ಹೇಳಿದೆ.
"ಏರ್ ಟೆಲ್ ನ ತನ್ನ 37.5 ಕೋಟಿಗೂ ಹೆಚ್ಚು ಬಳಕೆದಾರರ ದತ್ತಾಂಶವನ್ನು ಹ್ಯಾಕ್ ಮಾಡಲಾಗಿದೆ, ಡಾರ್ಕ್ ವೆಬ್ ವೇದಿಕೆಯಲ್ಲಿ ಕ್ಸೆನ್ ಜೆನ್( 'xenZen') ಹೆಸರಿನ ಖಾತೆಯಡಿ ಬಳಕೆದಾರರ ಮೊಬೈಲ್ ನಂಬರ್ , ಇ ಮೇಲ್ ವಿಳಾಸ , ಪೋಷಕರ ಹೆಸರು ಆಧಾರ್ ಸೇರಿ ಇತರ ಏರ್ ಟೆಲ್ ಇಂಡಿಯಾ ಗ್ರಾಹಕರ ಖಾಸಗಿ ಮಾಹಿತಿಯನ್ನು ಮಾರಾಟಕ್ಕೆ ಇಡಲಾಗಿದೆ" ಎಂದು ವರದಿಯಾದ ಬಳಿಕ ಈ ಹೇಳಿಕೆ ನೀಡಿದೆ.

"ಏರ್‌ಟೆಲ್ ಗ್ರಾಹಕರ ಡೇಟಾಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ವರದಿಯಾಗಿದೆ. ಇದು ಪಟ್ಟಭದ್ರ ಹಿತಾಸಕ್ತಿಗಳಿಂದ ಏರ್‌ಟೆಲ್‌ನ ಪ್ರತಿಷ್ಠೆಗೆ ಕಳಂಕ ತರುವ ಹತಾಶ ಪ್ರಯತ್ನಕ್ಕಿಂತ ಕಡಿಮೆ ಏನಲ್ಲ. ನಾವು ಸಂಪೂರ್ಣ ತನಿಖೆ ನಡೆಸಿದ್ದೇವೆ ಮತ್ತು ಏರ್‌ಟೆಲ್ ಸಿಸ್ಟಮ್‌ಗಳಿಂದ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ದೃಢೀಕರಿಸಬಹುದು" ಎಂದು ಟೆಲ್ಕೊ ಹೇಳಿಕೆಯಲ್ಲಿ ತಿಳಿಸಿದೆ.
ಗ್ರಾಹಕರಿಗೆ ಸಂಬಂಧಿಸಿದ ಮಾಹಿತಿ ಮಾರಾಟವಾಗಿದೆ ಎಂದು 'xenZen' ಎಂಬಸೈಬರ್ ಬೆದರಿಕೆಯೊಡ್ಡಿದ ವ್ಯಕ್ತಿಯು ಮಾಹಿತಿಗಾಗಿ 50000 ಡಾಲರ್‌ಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಡಾರ್ಕ್ ವೆಬ್ ಎಂಬುವುದು ಇಂಟರ್ನೆಟ್‌ನ ಒಂದು ಭಾಗವಾಗಿದ್ದು, ಇಲ್ಲಿ ಜನ ತಮ್ಮ ಗುರುತು ಮತ್ತು ಸ್ಥಳವನ್ನು, ಇತರಿಂದ ಹಾಗೂ ಕಾನೂನು ಜಾರಿ ಸಂಸ್ಥೆಗಳಿಂದ ಮರೆಮಾಚಿಕೊಳ್ಳಲು ಅನುಮತಿಸುತ್ತದೆ. ಅಂತೆಯೇ, ಕದ್ದ ವೈಯಕ್ತಿಕ ಡೇಟಾವನ್ನು ಅತಿಯಾದ ಮೊತ್ತಕ್ಕೆ ಮಾರಾಟ ಮಾಡಲು ಡಾರ್ಕ್ ವೆಬ್ ಅನ್ನು ದುರುಪಯೋಗಪಡಿಸಿಕೊಳ್ಳಬಹುದು.
2019ರಲ್ಲಿ ಏರ್ ಟೆಲ್ ನ ಮೂವತ್ತೆರಡು ಕೋಟಿ ಚಂದಾದಾರರ ದತ್ತಾಂಶ ಸೋರಿಕೆಯಾಗಿದೆ. ಮೊಬೈಲ್ ಅಪ್ಲಿಕೇಷನ್ ನಲ್ಲಿನ ಗಂಭೀರ ಸ್ವರೂಪದ ಭದ್ರತಾ ಲೋಪವಾಗಿದೆ ಎಂದು ಬೆಂಗಳೂರು ಮೂಲದ ಸಂಶೋಧಕ ಎಹ್ರಾಜ್ ಅಹ್ಮದ್ ಪ್ರಾತ್ಯಕ್ಷಿಕೆ ಸಹಿತ ಆರೋಪಿಸಿದ್ದರು. ಏರ್ ಟೆಲ್ ಎಪಿಐವೊಂದು (ಅಪ್ಲಿಕೇಷನ್ ಪ್ರೋಗ್ರಾಂ ಇಂಟರ್ ಫೇಸ್) ಏರ್ ಟೆಲ್ ಚಂದಾದಾರರ ಸೂಕ್ಷ್ಮ ಮಾಹಿತಿಗಳನ್ನು ಬಸಿದುಕೊಳ್ಳಲು ಅವಕಾಶ ನೀಡುತ್ತಿದೆ ಎಂದು ತಮ್ಮ ಬ್ಲಾಗ್ ನಲ್ಲಿ ಹೇಳಿಕೊಂಡಿದ್ದರು. ಏರ್ ಟೆಲ್ ಅಪ್ಲಿಕೇಷನ್ ನ ಈ ಮಾಹಿತಿ ಸೋರಿಕೆಯನ್ನು ಒಪ್ಪಿಕೊಂಡು ಭದ್ರತಾ ಲೋಪವನ್ನು ಸರಿಪಡಿಸಲಾಗಿದೆ ಎಂದು ಹೇಳಿಕೊಂಡಿತ್ತು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications