ಹೆಸರಾಂತ ಆಹಾರ ಡೆಲಿವರಿ ಸ್ವಿಗ್ಗಿ ನಡೆಸುತ್ತಿರುವ ಸ್ವಿಗ್ಗಿ ಇಸ್ಟಾಮಾರ್ಟ್‌ನಿಂದ ಗ್ರಾಹಕರಿಗೆ ತರಕಾರಿಗಳ ತೂಕದ ವಿಚಾರದಲ್ಲಿ ಬಾರಿ ಹಗರಣವಾಗ್ತಿದೆ ಎಂಬ ಮಾತು ಕೇಳಿಬರ್ತಿದೆ. ಸ್ವಿಗ್ಗಿ ಇಸ್ಟಾಮಾರ್ಟ್‌ನಲ್ಲಿ ಗ್ರಾಹಕರು ಆರ್ಡರ್ ಮಾಡಿದಷ್ಟು ಪ್ರಮಾಣದಲ್ಲಿ ಆಹಾರ ಪದಾರ್ಥಗಳು ಬಂದು ತಲುಪುವುದಿಲ್ಲ ಎಂಬ ಆರೋಪ ಕೇಳಿಬರ್ತಿದೆ.
ಸ್ವಿಗ್ಗಿ ಇಸ್ಟಾಮಾರ್ಟ್‌ನಲ್ಲಿ ತರಕಾರಿಗಳ ತೂಕದ ವಿಚಾರದಲ್ಲಿ ಬಾರಿ ಮೋಸವನ್ನ ಎದುರಿಸುವಂತಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ರೆಡ್ಡಿಟ್ ಬಳಕೆದಾರರು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ತರಕಾರಿಗಳನ್ನು ಪಡೆದ ನಂತರ ತೂಕ ಮಾಡಿದಾಗ ಆರ್ಡರ್ ಮಾಡಿದ್ದಕ್ಕಿಂತ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಇನ್ನು ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಕೆಂಗಣ್ಣಗೆ ಗುರಿಯಾಗುವಂತಾಗಿದೆ.

ಗ್ರಾಹಕರು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ 400 ರಿಂದ 600 ಗ್ರಾಂ ತೂಕದ ಹೂಕೋಸನ್ನ ಆರ್ಡರ್ ಮಾಡಿದ್ದಾರೆ. ಆದ್ರೆ ಗ್ರಾಹಕರಿಗೆ ಬರೀ 145 ಗ್ರಾಂ ತೂಕವಿರುವ ಹೂಕೋಸು ಲಭ್ಯವಾಗಿದೆ. ಇದನ್ನ ಕಂಡ ಗ್ರಾಹಕರು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ತೂಕದ ವಿಚಾರದಲ್ಲಿ ನಮಗೆ ಮೋಸ ಮಾಡ್ತಿದೆ ಎಂದು ಆರೋಪ ಮಾಡಿದ್ದಾರೆ.
ಒಂದು ಹೂಕೋಸು, ನಾನು ಇತರ ಎಲ್ಲವುಗಳ ತೂಕವನ್ನು ಪರೀಕ್ಷಿಸುವಂತೆ ಮಾಡಿದೆ. ಅಲ್ಲದೆ ಹೆಚ್ಚಿನ ತರಕಾರಿಗಳು ತುಂಬಾ ಕಡಿಮೆ ತೂಕವನ್ನ ಹೊಂದಿದ್ದವಾಗಿವೆ ಎಂದು ಗ್ರಾಹಕರು ತಮ್ಮ ರೆಡ್ಡಿಟ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರೆ. ಅಲ್ಲದೆ ಕಡಿಮೆ ತೂಕದ ತರಕಾರಿಗಳನ್ನ ನೀಡುತ್ತಿರುವ ಸ್ವಿಗ್ಗಿಯ ಹಗರಣ ಇಂದು ಬೆಳಕಿಗೆ ಬಂದಿದೆ ಎಂದರು. ಹಾಗೆ ಅವರು ಆರ್ಡರ್ ಮಾಡಿದ ಎಲ್ಲಾ ತರಕಾರಿಗಳಲ್ಲಿ ತೂಕದ ವ್ಯತ್ಯಾಸವಿದೆ, ಅದನ್ನ ನಾವು ಗಮನಿಸಿದ್ದೇವೆ ಎಂದು ಹೇಳಿದರು.
ಗ್ರಾಹಕರು ಆರ್ಡರ್ ಮಾಡಿದ ಹೆಚ್ಚಿನ ತರಕಾರಿಗಳಲ್ಲಿ ತೂಕದ ವ್ಯತ್ಯಾಸ ಕಂಡುಬಂದಿದೆ. 1ಕೆಜಿ ಆಲೂಗಡ್ಡೆಯ ಬದಲಾಗಿ 965 ಗ್ರಾಂ ಆಲೂಗಡ್ಡೆಯನ್ನ ಗ್ರಾಹಕರಿಗ ನೀಡಿದ್ದಾರೆ. ಹಾಗೆ ಅವರು ಆರ್ಡರ್ ಮಾಡಿದ 250 ಗ್ರಾಂ ಬದಲಿಗೆ 170 ಗ್ರಾಂ ಕ್ಯಾಪ್ಸಿಕಂ ಡೆಲಿವರಿ ಆಗಿದೆ. ಒಟ್ಟಿನಲ್ಲಿ 1.8 ಕೆ.ಜಿ.ಗೆ ಪಾವತಿಸಿ ಗ್ರಾಹಕರು ಕೇವಲ 1.2 ಕೆಜಿ ತರಕಾರಿಯನ್ನ ಮಾತ್ರ ಪಡೆದಿದ್ದಾರೆ.
ಸ್ವಿಗ್ಗಿಯ ಗ್ರಾಹಕರ ಬೆಂಬಲದೊಂದಿಗೆ ಗ್ರಾಹಕರು ಸಮಸ್ಯೆಯನ್ನು ಕರಿತು ಧ್ವನಿ ಎತ್ತಿದಾಗ, ಅವರಿಗೆ ಸರಿಯಾದ ಪ್ರತಿಕ್ರಿಯೆ ದೊರೆಯಲಿಲ್ಲ ಎಂದು ಗ್ರಾಹಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ತರಕಾರಿ ತೂಕ ಮಾಡಿದ ಚಿತ್ರಗಳನ್ನು ಗ್ರಾಹಕರು ಸ್ವಿಗ್ಗಿಯ ಬೆಂಬಲ ತಂಡದೊಂದಿಗೆ ಹಂಚಿಕೊಂಡಿದ್ದಾರೆ. ಹಾಗೆ ತಾವು ತೆಗೆದುಕೊಂಡ ಈ ತರಕಾರಿಗಳ ಬದಲಿಗೆ ಬೇರೆ ತರಕಾರಿ ಅಥವಾ ತಾವು ಕಟ್ಟಂತ 177ರೂಗಳನ್ನ ಸಂಪೂರ್ಣ ಮರುಪಾವತಿಸಿ ಎಂದು ಕೇಳಿದ್ದಾರೆ. ಆದ್ರೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಪೂರ್ಣ ಮೊತ್ತವನ್ನು ಮರುಪಾವತಿಸಲು ನಿರಾಕರಿಸಿದೆ. ಅಲ್ಲದೆ ಗ್ರಾಹಕರು ಕೇಳಿದ 89 ರೂಪಾಯಿ ಪರಿಹಾರವನ್ನು ನೀಡಲು ಕೂಡ ಸ್ವಿಗ್ಗಿ ನಿರಾಕರಿಸಿದೆ. ಇನ್ನು ಈ ವಿಚಾರ ಗ್ರಾಹಕರು ಸ್ವಿಗ್ಗಿಯೊಂದಿಗೆ ಮಾಡಿದ ಚಾಟ್‌ಗಳ ಸ್ಕ್ರೀನ್‌ಶಾಟ್ ಮೂಲಕ ತಿಳಿದುಬಂದಿದೆ.
ಇನ್ನು ಇದರಿಂದ ಬೇಸರಗೊಂಡ ಗ್ರಾಹಕರು ಅಂತಿಮವಾಗಿ "ಸರ್ಕಾರದ ಇನ್‌ಗ್ರಾಮ್ ಗ್ರಾಹಕ ಸಹಾಯವಾಣಿಗೆ ಸಮಸ್ಯೆಯನ್ನು ವರದಿ ಮಾಡಿ, ಮೊತ್ತವನ್ನು ರಿವರ್ಸ್ ಕ್ರೆಡಿಟ್ ಮಾಡಲು ಅವರ ಬ್ಯಾಂಕ್‌ಗೆ ಮೇಲ್ ಮಾಡಿದ್ದಾರೆ.
ಸ್ವಿಗ್ಗಿಯ ಈ ನಡೆಯನ್ನು ನೋಡಿದ ಜನರು ಇದು ಅಕಸ್ಮಾತಾಗಿ ಆದಂತ ತಪ್ಪಲ್ಲ. ಹೊರತಾಗಿ ಸ್ವಿಗ್ಗಿ ಗೊತ್ತಿದ್ದು ಈ ತಪ್ಪನ್ನ ಮಾಡಿದೆ ಎಂದು ಗ್ರಾಹಕರು ರೆಡ್‌ಇಟ್ ಮೇಲೆ ಆರೋಪವನ್ನ ಮಾಡಿದ್ದಾರೆ.
ಅಲ್ಲದೆ ಸ್ವಿಗ್ಗಿ ದಿನದಲ್ಲಿ ನೂರಾರು ಜನರಿಗೆ ಆರ್ಡರ್‌ಗಳನ್ನ ನೀಡುತ್ತದೆ. ಹಾಗಾದ್ರೆ ಇಂತಹ ತಪ್ಪುಗಳು ಅದಷ್ಟು ಬಾರಿ ನಡೆದಿರಬಹುದು ಯೋಚನ ಮಾಡಿ ಎಂದು ರಡ್‌ಇಟ್ ಬಳಕೆದಾರರು ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಹಾಗೆ ಸ್ವಿಗ್ಗಿ ಇಂತಹ ಸಣ್ಣ ದೋಷಗಳಿಂದ ಪ್ರತಿ ದಿನವೂ ಕೋಟಿಗಳನ್ನು ಗಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications