ಇಂದಿನ ಡಿಜಿಟಲ್ ಯುಗದಲ್ಲಿ ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬ ಮಾತು ಅಕ್ಷರಶಃ ನಿಜವಾಗುತ್ತಿದ್ದು, ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ನಮಗೆ ಹಲವು ಉದಾಹರಣೆಗಳು ಕೂಡ ಲಭಿಸುತ್ತದೆ. ಸರಕಾರ, ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಷ್ಟೇ ಜಾಗೃತು ಮೂಡಿಸುವ ಕೆಲಸ ಮಾಡಿದರೂ ಅಂತರ್ಜಾಲದಲ್ಲಿ ಹಣ, ಗಿಫ್ಟ್, ಕೂಪನ್ ಆಸೆಗೆ ಹಣವನ್ನು ಕಳೆದುಕೊಳ್ಳುವವರ ಸಂಖ್ಯೆಗೆ ಲೆಕ್ಕವಿಲ್ಲ.
ಎಲ್ಲಕ್ಕಿಂತಲೂ ಮಿಗಿಲಾಗಿ ವಿದ್ಯಾವಂತರೇ ಮೋಸದ ಜಾಲಕ್ಕೆ ಬೀಳುತ್ತಿರುವುದು ಆತಂಕಕಾರಿ ಹಾಗೂ ಅಚ್ಚರಿಯ ಸಂಗತಿ. ಅದೂ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಕೂಡ ಇತ್ತೀಚಿಗೆ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಡಿಜಿಟಲ್ ಅರೆಸ್ಟ್ ಹಾಗೂ ಅಂತರ್ಜಾಲದಲ್ಲಿ ಮೋಸ ಮಾಡುವವರ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಜಾಗೃತಿ ಕೂಡ ಮೂಡಿಸಿದ್ದರು.

ಆದರೆ ಇಂದಿನ ಜನತೆ ಅದರಲ್ಲೂ ಯುವ ಸಮೂಹ ಹಣದಾಸೆಗೆ ವಂಚಕರ ಮೋಸದ ಜಾಲಕ್ಕೆ ಬೀಳುತ್ತಲೇ ಇದ್ದಾರೆ. ಇನ್ನು ಹೊಸ ಉದಾಹರಣೆ ಎಂಬಂತೆ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬ ಗಿಫ್ಟ್ ಕಾರ್ಡ್ ಆಸೆಗೆ ಬರೊಬ್ಬರಿ 4.5 ಕೋಟಿ ರೂ. ಹಣ ಕಳೆದುಕೊಂಡ ಘಟನೆ ನಡೆದಿದೆ.
ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣ
ಭಾರತದಾದ್ಯಂತ ಸೈಬರ್ ವಂಚನೆಯು ಹೆಚ್ಚಾಗುತ್ತಿದ್ದಂತೆ, ಲಕ್ಷಾಂತರ ಜನರು ಇದೇ ರೀತಿಯ ಡಿಜಿಟಲ್ ಟ್ರ್ಯಾಪ್‌ಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಬೆಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ವಾಟ್ಸಾಪ್ ಸಂದೇಶವನ್ನು ಸ್ವೀಕರಿಸಿದ ನಂತರ ಉಡುಗೊರೆ ಕಾರ್ಡ್ ವಂಚನೆ ಹಗರಣದಲ್ಲಿ 4.5 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆ ನಡೆದಿದೆ. ಅದರಲ್ಲೂ ಮುಖ್ಯವಾಗಿ ಈ ಸಂದೇಶವು ಸಾಫ್ಟ್‌ವೇರ್ ಇಂಜಿನಿಯರ್‌ಗೆ ತಮ್ಮ ಬಾಸ್‌ನಿಂದ ಪಡೆದುಕೊಂಡ ರೀತಿಯಲ್ಲಿ ಬಂದಿದ್ದು, ವಂಚಕರು ಎಷ್ಟು ಚಾಲಾಕಿತನ ಹೊಂದಿದ್ದಾರೆ ಎಂಬುದಕ್ಕೆ ನಿದರ್ಶನವಾಗಿದೆ.
ಏನಿದು ವಂಚನೆ ಪ್ರಕರಣ?
ದೀಪಾವಳಿಗೂ ಮುನ್ನ ಇಂಜಿನಿಯರ್‌ಗೆ ಸಂದೇಶ ಕಳುಹಿಸಿದ್ದು, ಶೀಘ್ರ ಟಾಸ್ಕ್ ಪೂರ್ಣಗೊಳಿಸುವಂತೆ ತಿಳಿಸಿದ್ದರಿಂದ ವಂಚಿಸಲಾಗಿದೆ. ಸಾಫ್ಟ್‌ವೇರ್ ಎಂಜಿನಿಯರ್‌ಗೆ ಬಾಸ್‌ನಿಂದ ಸಂದೇಶ ಬಂದಿದ್ದು, ಅದರಲ್ಲಿ ತಾನು ಕಾನ್ಫರೆನ್ಸ್ ಕರೆಯಲ್ಲಿದ್ದು, ಭಾರತದಲ್ಲಿನ ಗ್ರಾಹಕರಿಗೆ Apple ಉಡುಗೊರೆ ಕಾರ್ಡ್‌ಗಳನ್ನು ಖರೀದಿಸಬೇಕು ಎಂದು ಇಂಜಿನಿಯರ್‌ಗೆ ಟಾಸ್ಕ್ ನೀಡಲಾಗಿತ್ತು.
ಇನ್ನು ಇತ್ತೀಚಿಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದ ಸಾಫ್ಟ್‌ವೇರ್ ಎಂಜಿನಿಯರ್ ತನಗೆ ಬಾಸ್ ನೀಡಿದ ಟಾಸ್ಕ್ ಅನ್ನು ಕೂಡಲೇ ಪೂರೈಸಿ, ಎಲ್ಲರಿಂದಲೂ ಸೈ ಎನಿಸಿಕೊಳ್ಳುವ ಧನಾತ್ಮಕ ಚಿಂತನೆ ಕೂಡ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಎಂಜಿನಿಯರ್ ಕೂಡಲೇ ಸುಮಾರು 4.35 ಲಕ್ಷ ರೂಪಾಯಿ ವೆಚ್ಚದ Apple ವೋಚರ್ಗಳನ್ನು ಖರೀದಿಸಿದ್ದು, ನೀಡಿದ ಕೋಡ್‌ಗಳನ್ನು ಕೂಡ ಕಳುಹಿಸಿದ್ದರು.
ಈ ಎಲ್ಲಾ ಕಾರ್ಯ ನಡೆಸುವಾಗಲೂ ಎಂಜಿನಿಯರ್‌ಗೆ ಎಳ್ಳಷ್ಟೂ ಅನುಮಾನ ಬಂದಿರಲಿಲ್ಲ. ಕೊನೆಗೆ ಇಂಜಿನಿಯರ್ ಈ ವಿಚಾರವನ್ನು ತನ್ನ ಕಂಪೆನಿಯ ಹೆಚ್‌ಆರ್ ಬಳಿ ಚರ್ಚಿಸಿದಾಗ ಎಲ್ಲವೂ ಬಯಲಾಗಿದೆ. ಈ ಸಂದೇಶವನ್ನು ಬಾಸ್ ಕಳುಹಿಸಿಲ್ಲ ಎಂದು ಹೆಚ್‌ಆರ್ ಸ್ಪಷ್ಟನೆ ನೀಡಿದಾಗ ಎಂಜಿನಿಯರ್‌ಗೆ ತನ್ನನ್ನು ಮೋಸ ಮಾಡಿದ ವಿಚಾರ ಅರಿವಿಗೆ ಬಂದಿದೆ.
ಬೆಳ್ಳಂದೂರು ಠಾಣೆಗೆ ದೂರು
ಇಂಜಿನಿಯರ್ ಮರುದಿನ ಬೆಂಗಳೂರಿನ ಬೆಳ್ಳಂದೂರು ಸೈಬರ್ ಕ್ರೈಂ ಶಾಖೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಇದೇ ರೀತಿಯ ವಂಚನೆಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಕಾಲ ಆಗಲೇ ಮಿಂಚಿ ಹೋಗಿತ್ತು. ಇಂಥ ವಂಚಕರನ್ನು ಬಂಧಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ಒಮ್ಮೆ ಖಾತೆಯಿಂದ ಹಣ ಕಳೆದುಕೊಂಡರೆ ಅವರನ್ನು ಹುಡುಕಿ ಬಂಧಿಸುವುದು ಬಹಳ ಕಠಿಣದಾಯಕ ಕೂಡ ಆಗಿದೆ. ಇನ್ನು Apple ನ ಗ್ರಾಹಕ ಸೇವೆಯು ಸೋಮವಾರದಿಂದ ಶುಕ್ರವಾರದವರೆಗೆ 9 ರಿಂದ ಸಂಜೆ 6 ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಬಳಿಕ ಎಲ್ಲರ ಅರಿವಿಗೆ ಬಂದಿದೆ.
ಸೈಬರ್ ವಂಚನೆ ಪ್ರಕರಣದಲ್ಲಿ ಏರಿಕೆ
2024 ರ ಮೊದಲ ತ್ರೈಮಾಸಿಕದಲ್ಲಿ, ಇತ್ತೀಚಿನ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಭಾರತೀಯ ನಾಗರಿಕರು 'ಡಿಜಿಟಲ್ ಬಂಧನ' ವಂಚನೆಗಳಿಂದ ಸುಮಾರು 120.3 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿರುವುದು ಬಹಿರಂಗವಾಗಿದೆ. ಸರ್ಕಾರ ಹಾಗೂ ಇಲಾಖೆ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಮೋಸ ಹೋಗುವವರು ಹೋಗುತ್ತಲೇ ಇರುವುದು ಅತಂಕದ ಸಂಗತಿ.
ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಈ ವರ್ಷದ ಜನವರಿ 1 ಮತ್ತು ಏಪ್ರಿಲ್ 30 ರ ನಡುವೆ 0.74 ಮಿಲಿಯನ್ ದೂರುಗಳನ್ನು ದಾಖಲಿಸಿದೆ, 2023 ರಲ್ಲಿ ದಾಖಲಾದ 1.5 ಮಿಲಿಯನ್ ಪ್ರಕರಣಗಳು ಮತ್ತು 2022 ರಲ್ಲಿ 0.96 ಮಿಲಿಯನ್. ಈ ಅಂಕಿಅಂಶಗಳು ಕಳೆದ ಕೆಲವು ವರ್ಷಗಳಿಂದ ಸೈಬರ್ ವಂಚನೆ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆಯಾಗುತ್ತಿರುವುದನ್ನು ತೋರಿಸಿದೆ.
More From GoodReturns

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications