ಡಾಬರ್ ಸಂಸ್ಥೆಯ ಹೇರ್ ರಿಲ್ಯಾಕ್ಸ್ ಉತ್ಪನ್ನಗಳ ಬಳಕೆಯಿಂದಾಗಿ ಅಂಡಾಶಯದ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್ ಮತ್ತು ಇತರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂದು ಆರೋಪ ಮಾಡಲಾಗಿದೆ. ಯುಎಸ್ ಮತ್ತು ಕೆನಡಾದಲ್ಲಿ ಡಾಬರ್‌ನ ಅಂಗಸಂಸ್ಥೆಗಳ ವಿರುದ್ಧ ಈ ಬಗ್ಗೆ ಗ್ರಾಹಕರು ಮೊಕದ್ದಮೆ ಹೂಡಿದ್ದಾರೆ.
ಇದಾದ ನಂತರ ಡಾಬರ್ ಇಂಡಿಯಾ ಷೇರುಗಳು ಬಿಎಸ್‌ಇಯಲ್ಲಿ ಬೆಳಗಿನ ವಹಿವಾಟಿನಲ್ಲಿ ಸುಮಾರು ಶೇಕಡ 1.62 ರಷ್ಟು ಕುಸಿದು ಪ್ರತಿ ಷೇರಿಗೆ 525.50 ಕ್ಕೆ ತಲುಪಿದೆ. ಬಿಗ್ ಕ್ಯಾಪ್‌ನ ಎಫ್‌ಎಂಸಿಜಿ ಕಂಪನಿಯು ತನ್ನ ಅಂಗಸಂಸ್ಥೆಗಳಾದ ನಮಸ್ತೆ ಲ್ಯಾಬೊರೇಟರೀಸ್, ಡರ್ಮೊವಿವಾ ಸ್ಕಿನ್ ಎಸೆನ್ಷಿಯಲ್ಸ್ ಮತ್ತು ಡಾಬರ್ ಇಂಟರ್‌ನ್ಯಾಶನಲ್ ಸೇರಿದಂತೆ ಹಲವಾರು ಕಂಪನಿಗಳ ವಿರುದ್ಧ ಸರಿಸುಮಾರು 5,400 ಪ್ರಕರಣಗಳಿವೆ ಎಂದು ಹೇಳಿದೆ.

ಡಾಬರ್ ಉತ್ಪನ್ನಗಳಿಂದ ಕ್ಯಾನ್ಸರ್ ಬರುತ್ತದೆ ಎಂಬ ಆರೋಪದ ವರದಿಗಳ ಬಳಿಕ ಕಂಪನಿಯ ಷೇರುಗಳು ನಿರಂತರವಾಗಿ ಕುಸಿತ ಕಂಡಿದೆ. ಡಾಬರ್ ಇಂಡಿಯಾ ಷೇರುಗಳು ಕಳೆದ 2 ವಾರಗಳಲ್ಲಿ ಶೇಕಡ 4.59 ರಷ್ಟು ಕುಸಿತವನ್ನು ಕಂಡಿದೆ. ಕಳೆದ 1 ತಿಂಗಳ ಅವಧಿಯಲ್ಲಿ ಸುಮಾರು ಶೇಕಡ 7 ರಷ್ಟು ಕುಸಿತ ಕಂಡಿದೆ.
ಈ ವರ್ಷದ ಆರಂಭದಲ್ಲಿ ಆಗಸ್ಟ್‌ನಲ್ಲಿ, ಡಾಬರ್‌ನ ಜೇನು ಉತ್ಪನ್ನದಲ್ಲಿ ಕಾರ್ಸಿನೋಜೆನಿಕ್ ವಸ್ತುಗಳು ಇರುವ ವರದಿಯಾದಾಗ ಡಾಬರ್ ಷೇರುಗಳು ಕುಸಿತವನ್ನು ಕಂಡಿದೆ. ಆಗಸ್ಟ್‌ನಲ್ಲಿ ಝೀ ನ್ಯೂಸ್, ಪ್ರಸಿದ್ಧ ಬ್ರ್ಯಾಂಡ್ ಡಾಬರ್ ಹನಿಯಲ್ಲಿ (ಜೇನುತುಪ್ಪ) ಹೆಚ್ಚಿನ ಪ್ರಮಾಣದ ಕಾರ್ಸಿನೋಜೆನಿಕ್ ವಸ್ತು ಇರುವುದು ಕಂಡು ಬಂದಿದೆ ಎಂದು ವರದಿಯಾಗಿದೆ.
ಎಸ್&ಪಿ ಬಿಎಸ್‌ಇ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಶೇಕಡ 13.08 ರಷ್ಟು ಲಾಭವನ್ನು ನೀಡಿರುವಾಗ, ಡಾಬರ್ ಇಂಡಿಯಾ ಷೇರುಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ಕೇವಲ 1 ರಷ್ಟು ಲಾಭವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಡಾಬರ್ ಇಂಡಿಯಾ 93,120.42 ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ಸ್ಟಾಕ್‌ನ 52 ವಾರಗಳ ಗರಿಷ್ಠ ಬೆಲೆ 610.40 ರೂಪಾಯಿ ಆಗಿದೆ. ಹಾಗೆಯೇ ಸ್ಟಾಕ್‌ನ 52 ವಾರದ ಕನಿಷ್ಠ ಬೆಲೆಯು 504.00 ರೂಪಾಯಿ ಆಗಿದೆ. ಪ್ರಸ್ತುತ, ಡಾಬರ್ ಇಂಡಿಯಾ ಷೇರುಗಳ 52 ವಾರಗಳ ಕನಿಷ್ಠ ಬೆಲೆಯಿಂದ ಶೇಕಡ 4.3 ರಷ್ಟು ಕುಸಿದಿದೆ. ಈ ಸಮಯಕ್ಕೆ ಸರಿಯಾಗಿ ಡಾಬರ್ ಇಂಡಿಯಾ ಷೇರು ಸುಮಾರು ಶೇಕಡ 1.93 ರಷ್ಟು ಇಳಿಕೆಯಾಗಿ, 523.70 ರೂಪಾಯಿಯಂತೆ ವಹಿವಾಟು ನಡೆಸುತ್ತಿದೆ.


Click it and Unblock the Notifications