ಚೀನಾದ ಹೊಸ ಎಐವೊಂದು ಜಾಗತಿಕವಾಗಿ ಸಂಚಲ ಸೃಷ್ಟಿಸಿದ್ದು ಇದರ ಅಬ್ಬರಕ್ಕೆ ಅಮೇರಿಕಾದ ಷೇರುಮಾರುಕಟ್ಟೆ ತತ್ತರಿಸಿ ಹೋಗಿದೆ. ಕೃತಕ ಬುದ್ಧಿಮತ್ತೆಯ ನಿರ್ವಹಣೆಗೆ ಜೆನ್‌ಎಐಗೆ ಭಾರಿ ಸಾಮರ್ಥ್ಯದ ಚಿಪ್‌ಗಳು ಬೇಕು, ಬಹಳಷ್ಟು ಬಿಲಿಯನ್ ಡಾಲರ್ ಗಳು ಬೇಕು ಎನ್ನುತ್ತಿದ್ದ ಅಮೇರಿಕಾದ ಟೆಕ್ ಕಂಪನಿಗಳಿಗೆ ಡೀಪ್‌ಸೀಕ್ ಕಪಾಳಮೋಕ್ಷ ಮಾಡಿದೆ.!
ಇಷ್ಟು ದಿನ ಜೆನ್‌ಎಐ ಮಾರ್ಕೆಟ್ ಅನ್ನು ಆಳುತ್ತಿದ್ದ ಯುರೋಪ್ ದೇಶದ ಕಂಪನಿಗಳಿಗಿಂತ 10 ಪಟ್ಟು ಕಡಿಮೆ ಸಂಪನ್ಮೂಲವನ್ನು ಬಳಸಿಕೊಂಡು, ಚಾಟ್‌ಜಿಪಿಟಿಯಷ್ಟೇ ಸಾಮರ್ಥ್ಯದ, ಅಷ್ಟೇ ನಿಖರವಾದ LLM ಡೀಪ್‌ಸೀಕ್ ಅನ್ನು ಚೀನಾ ತಯಾರಿಸಿ ಉಚಿತವಾಗಿ ಬಳಕೆಗೆ ಬಿಡುಗಡೆ ಮಾಡಿದೆ.

ಇನ್ನೊಂದೆಡೇ DeepSeek ತನ್ನ ಹೊಸ ಎಐ ಮಾದರಿ R1 ಅನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಸೋಮವಾರ ಅಮೇರಿಕಾದ 'ಟೆಕ್' ಷೇರುಗಳು ಕುಸಿತ ಕಂಡವು. ಯುಎಸ್ ಷೇರುಪೇಟೆಯ ಅತ್ಯಂತ ಮೌಲ್ಯಯುತ ಕಂಪನಿಯಾದ ಎನ್ವಿಡಿಯಾ( NVIDIA) ಕಂಪನಿಯ ಷೇರುಗಳು ಬರೋಬ್ಬರಿ 17% ಕುಸಿದು $118.58ಕ್ಕೆ ತಲುಪಿದವು. ಅಂದರೆ ಜೆನ್‌ಎಐಗೆ ಭಾರಿ ಸಾಮರ್ಥ್ಯದ ಚಿಪ್‌ಗಳು ಬೇಕು ಎಂದು ಡಂಗುರ ಸಾರುತ್ತಾ ಚಿಪ್ ತಯಾರಿಕೆಯಲ್ಲಿ ಪಾರುಪತ್ಯ ಮಾಡುತ್ತಿದ್ದ ಎನ್‌ವಿಡಿಯಾ ಕಂಪನಿಯ ಷೇರು ಒಂದೇ ದಿನದಲ್ಲಿ17% ಕುಸಿದು ಸಾಮಾನ್ಯ ಸಂಗತಿಯಲ್ಲ. ಯಾಕೆಂದರೆ ಈ ಬೆಳವಣಿಗೆಯ ಬೆನ್ನಲ್ಲೇ ಗೂಗಲ್, ಮೈಕ್ರೋಸಾಫ್ಟ್ ಷೇರು ಕೂಡ ಇಳಿದಿದೆ. ಒಟ್ಟು ನ್ಯೂಯಾರ್ಕ್ ಷೇರು ಮಾರುಕಟ್ಟೆಯ ಟೆಕ್ ಕಂಪನಿಗಳ ಷೇರುಗಳು 10% ಕ್ಕಿಂತ ಹೆಚ್ಚು ಕುಸಿದಿವೆ. ಒಟ್ಟಾರೆ ಚೀನಾದ ಹೊಸ ಎಐ ಈ ಹಿಂದಿನ ಎಲ್ಲಾ ಎಐಯನ್ನು ತನ್ನ ಮುಂದೆ ಏನು ಇಲ್ಲ ಎಂಬಂತೆ ನಿವಾಳಿಸಿ ಎಸೆದು ಬಿಟ್ಟಿದೆ.
ಡೀಪ್‌ಸೀಕ್ ಹೈ-ಫ್ಲೈಯರ್ ಅಂತ ಒಂದು ಚೀನಾದ ಹಣಕಾಸು ಕಂಪನಿ ಇತ್ತು. ಅದರ ಒಂದು ಭಾಗವಾಗಿ ಫೈರ್-ಫ್ಲೈಯರ್ ಅಂತ ಒಂದು ಟೀಮ್ ಇತ್ತು, ಡಿಪ್‌ಲರ್ನಿಂಗ್ ಮೇಲೆ ಫೋಕಸ್ ಮಾಡುತ್ತಿದ್ದರು. ಈ ಟೀಮ್‌ನಿಂದಲೇ ದೀಪ್‌ಸೀಕ್ ಅಂತ ಒಂದು AI ರಿಸರ್ಚ್ ಲ್ಯಾಬ್ ಹುಟ್ಟಿಕೊಂಡಿತು. 2015ರಲ್ಲಿ ಸ್ಟಾರ್ಟ್ ಆದ ಹೈ-ಫ್ಲೈಯರ್, ಹಣಕಾಸು ಡೇಟಾವನ್ನು ಅದ್ಭುತವಾಗಿ ಅನಾಲೈಸ್ ಮಾಡೋಕೆ ಅದ್ವಾನ್ಸ್ ಕಂಪ್ಯೂಟರ್‌ಗಳನ್ನ ಬಳಸಿಕೊಂಡು ಫೇಮಸ್ ಆಯ್ತು. 2023ರಲ್ಲಿ, ಕಂಪನಿಯ ಸ್ಥಾಪಕ ಲಿಯಾಂಗ್ ವೆನ್‌ಫೆಂಗ್, ದೀಪ್‌ಸೀಕ್‌ಗೆ ಹೆಚ್ಚು ಫೋಕಸ್ ಕೊಟ್ಟು, ಸೂಪರ್ AI ಮಾಡೆಲ್‌ಗಳನ್ನ ಕ್ರಿಯೇಟ್ ಮಾಡೋಕೆ ಶುರು ಮಾಡಿದ್ರು.

DeepSeek ಹಿಂದಿರುವ ಚೀನಾದ ಉದ್ಯಮಿ ಲಿಯಾಂಗ್ ವೆನ್‌ಫೆಂಗ್ ಯಾರು?
ಲಿಯಾಂಗ್ ವೆನ್‌ಫೆಂಗ್ ಅವರು ಚೀನಾದ ಒಬ್ಬ ಯುವ ಮತ್ತು ಡೈನಾಮಿಕ್ ವ್ಯಾಪಾರೋದ್ಯಮಿ. ಅವರು ಹಣಕಾಸಿನ ವಿಚಾರದಲ್ಲಿ ತುಂಬಾ ಚುರುಕುಬುದ್ಧಿಯವರು. 40 ವರ್ಷದ ಲಿಯಾಂಗ್ ಝಿಜಿಯಾಂಗ್ ವಿಶ್ವವಿದ್ಯಾಲಯ(Zhejiang University)ದಿಂದ ಪದವಿಯನ್ನು ಪೂರ್ಣಗೊಳಿಸಿದ ನಂತರ ಪರಿಮಾಣಾತ್ಮಕ ಹೆಡ್ಜ್ ಫಂಡ್, ಹೈ-ಫ್ಲೈಯರ್ ಅನ್ನು ಸಹ-ಸ್ಥಾಪಿಸಿದರು.
ಹೈ-ಫ್ಲೈಯರ್ ಏನು ಮಾಡುತ್ತಿತ್ತು?
ಹೈ-ಫ್ಲೈಯರ್ ಕಂಪನಿ ಮಾರುಕಟ್ಟೆಯಲ್ಲಿ ಏನಾಗುತ್ತೆ ಅಂತ ಮುಂಚಿತವಾಗಿ ಊಹಿಸಿ ಹೂಡಿಕೆ ಮಾಡುವ ಕೆಲಸ ಮಾಡುತ್ತಿತ್ತು. ಅಂದರೆ, ಯಾವ ಷೇರು ಬೆಲೆ ಏರುತ್ತೆ, ಯಾವುದು ಇಳಿಯುತ್ತೆ ಅಂತ ತಿಳಿದುಕೊಂಡು ಹೂಡಿಕೆ ಮಾಡುವ ಮೂಲಕ ಲಾಭ ಮಾಡಿಕೊಳ್ಳುತ್ತಿತ್ತು. ಇದಕ್ಕೆ ಅವರು ಕೃತಕ ಬುದ್ಧಿಮತ್ತೆ ಅಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದರು. AI ಯ ಸಹಾಯದಿಂದ ಅವರು ದೊಡ್ಡ ಪ್ರಮಾಣದ ಮಾಹಿತಿಯನ್ನು ತುಂಬಾ ವೇಗವಾಗಿ ವಿಶ್ಲೇಷಿಸಿ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು.
2021 ರಲ್ಲಿ, ಅಮೆರಿಕದ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಅಮೆರಿಕ ಸರ್ಕಾರವು ಚೀನಾಕ್ಕೆ AI ಚಿಪ್‌ಗಳ ರಫ್ತನ್ನು ನಿರ್ಬಂಧಿಸುವ ಮೊದಲು, ಅವರು ತಮ್ಮ AI ಯೋಜನೆಗಾಗಿ ಸಾವಿರಾರು Nvidia ಗ್ರಾಫಿಕ್ಸ್ ಪ್ರೊಸೆಸರ್‌ಗಳನ್ನು ಖರೀದಿಸಲು ಪ್ರಾರಂಭಿಸಿದರು ಎಂದು ಫೈನಾನ್ಷಿಯಲ್ ಟೈಮ್ಸ್ (FT) ವರದಿ ಮಾಡಿದೆ.ಈ ಸಮಯದಲ್ಲಿ, ಲಿಯಾಂಗ್ ವೆನ್‌ಫೆಂಗ್ ಪರಿಚಯಸ್ಥರು ಈ AI ಯೋಜನೆಯನ್ನು ಯಾವುದೇ ಗುರಿಯಿಲ್ಲದ ವಿಚಿತ್ರ ಹವ್ಯಾಸವೆಂದು ಪರಿಗಣಿಸಿದ್ದರು .
"ನಾವು ಮೊದಲು ಅವರನ್ನು ಭೇಟಿಯಾದಾಗ, ಅವರು ತುಂಬಾ ವಿಚಿತ್ರ ವ್ಯಕ್ತಿಯಾಗಿ ಕಂಡಿದ್ದರು. ತಮ್ಮದೇ ಆದ ಮಾದರಿಗಳನ್ನು ತರಬೇತಿ ಮಾಡಲು 10,000 ಚಿಪ್‌ಗಳ ಗುಂಪನ್ನು ನಿರ್ಮಿಸುವ ಬಗ್ಗೆ ಮಾತನಾಡುತ್ತಿದ್ದರು. ನಾವು ಅವರನ್ನು ಗಂಭೀರವಾಗಿ ಪರಿಗಣಿಸಲಿಲ್ಲ" ಎಂದು ಲಿಯಾಂಗ್‌ರ ವ್ಯಾಪಾರ ಪಾಲುದಾರರಲ್ಲಿ ಒಬ್ಬರು FT ಗೆ ತಿಳಿಸಿದರು.
ಲಿಯಾಂಗ್ ವೆನ್‌ಫೆಂಗ್ ಗುರಿ
ಜಾಗತಿಕ AI ದೈತ್ಯರಿಗೆ ಪ್ರತಿಸ್ಪರ್ಧಿಯಾಗಬಲ್ಲ ಅತ್ಯಾಧುನಿಕ AI ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ವಿಶ್ವಾದ್ಯಂತ ಸಂಶೋಧಕರು ಮತ್ತು ವ್ಯವಹಾರಗಳಿಗೆ ಸುಧಾರಿತ AI ಮಾದರಿಗಳನ್ನು ಪ್ರವೇಶಿಸುವಂತೆ ಮಾಡುವುದು DeepSeek ಗಾಗಿ ಲಿಯಾಂಗ್ ಅವರ ದೃಷ್ಟಿಯಾಗಿದೆ. ಅವರ ನಾಯಕತ್ವವು ಕಂಪನಿಯ ಬೆಳವಣಿಗೆ ಮತ್ತು ತಾಂತ್ರಿಕ ಪ್ರಗತಿಗೆ ಕಾರಣವಾಗಿದೆ.
DeepSeek AI ಉಚಿತವೇ?
ಹೌದು, DeepSeek ತನ್ನ AI ಮಾದರಿಗಳನ್ನು ಉಚಿತವಾಗಿ ನೀಡುತ್ತದೆ, ಅದರಲ್ಲೂ ವಿಶೇಷವಾಗಿ ಅದರ ಮುಕ್ತ-ಮೂಲ ಮಾದರಿಗಳಾದ DeepSeek-R1. ದುಬಾರಿ ಚಂದಾದಾರಿಕೆಗಳ ಅಗತ್ಯವಿಲ್ಲದೆ ಈ ಮಾದರಿಗಳು ವಾಣಿಜ್ಯ ಮತ್ತು ಶೈಕ್ಷಣಿಕ ಬಳಕೆಗೆ ಲಭ್ಯವಿದೆ. ಈ ಮುಕ್ತ ವಿಧಾನವು ಕಂಪನಿಯ ಪ್ರಮುಖ ಭಿನ್ನತೆಗಳಲ್ಲಿ ಒಂದಾಗಿದೆ, ಏಕೆಂದರೆ ಇದು ಅಗತ್ಯವಾದ ತಾಂತ್ರಿಕ ಪರಿಣತಿಯನ್ನು ಹೊಂದಿರುವ ಯಾರಾದರೂ ತಮ್ಮ AI ಮಾದರಿಗಳನ್ನು ಬಳಸಲು ಮತ್ತು ನಿರ್ಮಿಸಲು ಅನುವು ಮಾಡಿಕೊಡುತ್ತದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ



Click it and Unblock the Notifications