ದೆಹಲಿಯಲ್ಲಿ ವಿಷಕಾರಿ ವಾತಾವರಣ ಉಲ್ಬಣ..10,15 ವರ್ಷಗಳ ಹಳೆಯ ವಾಹನಗಳು ನಿಷೇಧ..!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಷ್ಟು ವಿಷಕಾರಿಯಾದ ವಾತಾವರಣವಿದೆ ಎಂದು ಎಲ್ಲರಿಗೂ ತಿಳಿದಿದೆ. ಅಲ್ಲಿನ ವಾಯುಮಾಲಿನ್ಯ ಪ್ರತಿವರ್ಷ ದಾಖಲೆ ಮಟ್ಟದಲ್ಲಿರುತ್ತದೆ. ಹೀಗಾಗಿ ದೆಹಲಿ ಸರ್ಕಾರ ಒಂದಲ್ಲಾ ಒಂದು ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಹಾಗೆಯೇ ವಾಯು ಮಾಲಿನ್ಯ ನಿಯಂತ್ರಣದ ಪ್ರಮುಖ ಹೆಜ್ಜೆಯಾಗಿ ಈಗ ಒಂದು ನಿಯಮವನ್ನು ಘೋಷಣೆ ಮಾಡಲಾಒಗಿದೆ. ಅದೇನೆಂದರೆ ಏಪ್ರಿಲ್ 1, 2025ರಿಂದ 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳು ಮತ್ತು 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳನ್ನು ಸಂಪೂರ್ಣ ನಿಷೇಧಿಸುವುದಾಗಿ ದೆಹಲಿ ಸರ್ಕಾರ ಘೋಷಣೆ ಮಾಡಿದೆ.

ದೆಹಲಿಯಲ್ಲಿ 10,15 ವರ್ಷಗಳ ಹಳೆಯ ವಾಹನಗಳು ನಿಷೇಧ..!

ಹೌದು, ರಾಷ್ಟ್ರ ರಾಜಧಾನಿ ದೆಹಲಿಯ ವಿಷಕಾರಿ ವಾತಾವರಣದಿಂದ ಜನರನ್ನು ಪಾರು ಮಾಡುವತ್ತ ಅಲ್ಲಿನ ಸರ್ಕಾರ, ಒಂದು ಹೆಜ್ಜೆ ಮುಂದಿಟ್ಟಿದೆ. ಅದರ ಭಾಗವಾಗಿ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಲು ಮುಂದಾಪಗಿದೆ. ಈ ನಿಯಮದ ಸಲುವಾಗಿ,500ಕ್ಕೂ ಹೆಚ್ಚು ಇಂಧನ ಪಂಪುಗಳಲ್ಲಿ ಉನ್ನತ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ. ಈ ಹೊಸ ವ್ಯವಸ್ಥೆ ನಿಯಮ ಪಾಲಿಸದ ವಾಹನಗಳಿಗೆ ಸ್ವಯಂಚಾಲಿತವಾಗಿ ಇಂಧನ ನೀಡುವುದನ್ನು ನಿರಾಕರಿಸುತ್ತದೆ.

ಈ ಹೊಸ ನಿಯಮದ ಪ್ರಕಾರ ಹಳೆಯ ವಾಹನಗಳನ್ನು ನಿಷೇಧ ಮಾಡಲಾಗುತ್ತಿದ್ದು, ವಾಹನ ಮಾಲೀಕರಿಗೆ ದೊಡ್ಡ ತಲೆನೋವಾಗಿದೆ. ಅಂದರೆ 2010ಕ್ಕಿಂತ ಹಿಂದೆ ನೋಂದಾಯಿಸಲಾದ ಪೆಟ್ರೋಲ್ ವಾಹನಗಳು ಮತ್ತು 2015ಕ್ಕಿಂತ ಹಳೆಯ ಡೀಸೆಲ್ ವಾಹನಗಳ ಮಾಲೀಕರಿಗೆ ಈ ಹೊಸ ನಿಯಮದ ಬಿಸಿ ತಟ್ಟಲಿದೆ. ನಿಯಮವನ್ನು ಜಾರಿಗೆ ತರಲು, ಇಂಧನ ಪಂಪುಗಳಲ್ಲಿ ಆಧುನಿಕ ಆಟೋಮೇಟೆಡ್ ನಂಬರ್ ಪ್ಲೇಟ್‌ ರೆಕಗ್ನಿಷನ್ ಕ್ಯಾಮೆರಾಗಳನ್ನು ಕೂಡ ಅಳವಡಿಸಲಾಗುತ್ತಿದೆ.

ಹೌದು, ಈ ನಂಬರ್ ಪ್ಲೇಟ್‌ಗಳನ್ನು ವಾಹನದ ನೋಂದಣಿ ಸ್ಕ್ಯಾನ್ ಮಾಡಿ, ಕೇಂದ್ರ ಸಾರಿಗೆ ಇಲಾಖೆಯ ಡೇಟಾಬೇಸ್‌ನೊಂದಿಗೆ ಪೂರಕವಾಗಿ ಪರಿಶೀಲಿಸುತ್ತದೆ. ಒಂದು ವೇಳೆ ನಿಯಮ ಉಲ್ಲಂಘನೆಯಾದರೆ ಇಂಧನ ಪೂರೈಕೆಯನ್ನು ತಕ್ಷಣವೇ ನಿರಾಕರಿಸಲಾಗುತ್ತದೆ. ಅಷ್ಟೇ ಅಲ್ಲ ಜೊತೆಗೆ ಮಾಲೀಕರಿಗೆ ₹10,000 ದಂಡ ವಿಧಿಸುವ ಸಾಧ್ಯತೆ ಕೂಡ ಇದೆ. ಹೆಚ್ಚಿನ ಗಂಭೀರ ಪ್ರಕರಣಗಳಲ್ಲಿ ವಾಹನವನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.

ಇನ್ನು ಈ ನಂಬರ್ ಪ್ಲೇಟ್‌ಗಳು ರಿಯಲ್‌ ಟೈಮ್ ಡೇಟಾ ಪರಿಶೀಲನೆ ಮಾಡುವ ಮೂಲಕ ಸಹಾಯ ಮಾಡುತ್ತದೆ. ಅಂದರೆ ವಾಹನವು ನಿಷೇಧಿತವೋ ಅಥವಾ ಮಾಲಿನ್ಯ ನಿಯಮಗಳನ್ನು ಪಾಲಿಸುತ್ತಿದೆಯೋ ಎಂಬುದನ್ನು ಪರಿಶೀಲಿಸಲು ಸಹಕರಿಸುತ್ತದೆ.

ಅಂದಹಾಗೆ ಈ ನಿಯಮಗಳ ಬಗ್ಗೆ ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಮಾತನಾಡಿದ್ದಾರೆ. ಹಳೆಯ ವಾಹನಗಳಿಗಿಂತ ಹೊಸ ವಾಹನಗಳು 10 ಪಟ್ಟು ಹೆಚ್ಚು ಮಾಲಿನ್ಯ ಉಂಟುಮಾಡುತ್ತವೆ ಎಂದು ಹೇಳಿದ್ದಾರೆ. ಹಾಗೆಯೇ ನಿಯಮವನ್ನು ಉಲ್ಲಂಘಿಸಿದ ಯಾವುದೇ ವಾಹನ ದೆಹಲಿಯಲ್ಲಿ ಓಡಲು ಅಥವಾ ಇಂಧನ ತುಂಬಿಸಲು ಸಾಧ್ಯವಾಗದು ಎಂದು ತಿಳಿಸಿದ್ದಾರೆ. ಈ ನಿಷೇಧದ ಅಗತ್ಯತೆ ಏಕಿದೆ ಎಂದರೆ, ದೆಹಲಿಯ ವಾಯು ಗುಣಮಟ್ಟವು ಜಾಗತಿಕವಾಗಿ ಅತ್ಯಂತ ಹೀನಾಯವಾಗಿದೆ. ವಾಹನಗಳ ಹೊರಸೂಸುವಿಕೆ PM2.5 ಮಾಲಿನ್ಯಕ್ಕೆ 20-30% ಶೇ. ಕೊಡುಗೆ ನೀಡುತ್ತದೆ ಎನ್ನಲಾಗಿದೆ.

ಇನ್ನು ದೆಹಲಿಯಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಹಳೆಯ ವಾಹನಗಳು ಸಂಚರಿಸುತ್ತಿವೆ ಎನ್ನಲಾಗುತ್ತಿದೆ. ಸುಮಾರು 5.5 ಮಿಲಿಯನ್ ವಾಹನಗಳು ಈಗಾಗಲೇ ಈ ನಿಯಮವನ್ನು ಮೀರಿ ಹಳೆಯದಾಗಿವೆ, ಇದರಲ್ಲಿ 66% ದ್ವಿಚಕ್ರ ವಾಹನಗಳೇ ಆಗಿವೆ. ಹಾಗೆಯೇ 2018-2021ರಲ್ಲಿ ಸರಕಾರದ ಸರ್ವೇ ಪ್ರಕಾರ, ನಿಯಮ ಮೀರಿ ಹಳೆಯದಾದ ವಾಹನಗಳಲ್ಲಿ ಕೇವಲ 6.27% vozಲೇ ಮಾತ್ರ ನಿಷ್ಕ್ರಿಯಗೊಳಿಸಲಾಗಿದೆ.

ಸದ್ಯ ದೆಹಲಿಯ ವಾಹನ ಮಾಲೀಕರಿಗೆ NOC ಪಡೆದು ದೆಹಲಿಯ ಹೊರಗೆ ಮಾರಾಟ ಮಾಡುವ ಅವಕಾಶವೂ ಇದೆ. ಅಲ್ಲದೇ ಸರಕಾರವು ಹೊಸ ಪರಿಸರ ಸ್ನೇಹಿ ವಾಹನಗಳಿಗೆ ಸಬ್ಸಿಡಿಗಳನ್ನು ನೀಡುತ್ತಿದ್ದು ಅದನ್ನು ಕೂಡ ಪಡೆಯಬಹುದು. ಇನ್ನು ನೀತಿ ಜಾರಿಗೆ 10 ದಿನಗಳಷ್ಟೇ ಬಾಕಿ ಇರುವಾಗ, ದೆಹಲಿ ಸರ್ಕಾರ ಇಂಧನ ಕೇಂದ್ರಗಳಲ್ಲಿ ANPR ತಂತ್ರಜ್ಞಾನ ಅಳವಡಿಸಲು ಸಕಲ ಸಿದ್ಧತೆಗಳನ್ನು ಮಾಡುತ್ತಿದೆ. ಏಪ್ರಿಲ್ 1ರಿಂದ, ವಾಹನಗಳ ತಪಾಸಣೆ ಮತ್ತು ದಂಡ ವಿಧಿಸುವ ಪ್ರಕ್ರಿಯೆಗಳು ಉಲ್ಬಣಗೊಳ್ಳಲಿವೆ.

ಏಪ್ರಿಲ್ 2025 ರಿಂದ, ದೆಹಲಿಯ ಬೀದಿಗಳು ಮತ್ತು ಇಂಧನ ಕೇಂದ್ರಗಳು ಕಠಿಣ ನಿಯಮಗಳನ್ನು ಅನುಸರಿಸಲಿವೆ. ಹಳೆಯ, ಹೆಚ್ಚಾಗಿ ಮಾಲಿನ್ಯ ಉಂಟುಮಾಡುವ ವಾಹನಗಳಿಗೆ ಇದೊಂದು ದೊಡ್ಡ ಎಚ್ಚರಿಕೆ! ದೆಹಲಿ ಮಾಲಿನ್ಯ ನಿಯಂತ್ರಣದ ಹೆಜ್ಜೆಯನ್ನು ಅನುಸರಿಸಲು ಇತರ ನಗರಗಳು ಸಹ ತಯಾರಾಗಬೇಕಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+