ಭಾರತೀಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್‌ಗೆ (Shikhar Dhawan) ದೆಹಲಿ ಕೋರ್ಟ್ ಸಿಹಿಸುದ್ದಿ ಕೊಟ್ಟಿದೆ. ಅಂತೂ ಕ್ರಿಕೆಟ್ ಆಟಗಾರನಿಗೆ ಕೌಟುಂಬಿಕ ಕಲಹದಲ್ಲೂ ಕೋರ್ಟ್‌ನಿಂದ ದೊಡ್ಡ ಗೆಲುವು ಸಿಕ್ಕಿದೆ. ಶಿಖರ್ ಧವನ್ ಮೂರು ದಿನಗಳ ಹಿಂದಷ್ಟೇ ತಮ್ಮ ಗೆಳತಿ ಸೋಫಿ ಶೈನ್ (Sophie Shine) ಜೊತೆ ಎರಡನೇ ವಿವಾಹವಾಗಿದ್ದರು. ಇದೀಗ ಮದುವೆಯಾದ ಮೂರೇ ದಿನದಲ್ಲಿ ಶಿಖರ್ ಧವನ್ ಅವರಿಗೆ, ದೆಹಲಿಯ ಪಟಿಯಾಲ ಹೌಸ್ ಫ್ಯಾಮಿಲಿ ಕೋರ್ಟ್‌ನಿಂದ ಪರಿಹಾರ ಸಿಕ್ಕಿದೆ. ದೆಹಲಿ ಫ್ಯಾಮಿಲಿ ಕೋರ್ಟ್‌ನ ನ್ಯಾಯಾಧೀಶ ದೇವೇಂದರ್ ಕುಮಾರ್ ಗರ್ಗ್ ಅವರು ನೀಡಿದ ತೀರ್ಪಿನಲ್ಲಿ, ಧವನ್ ಅವರ ಮಾಜಿ ಪತ್ನಿ ಆಯೆಷಾ ಮುಖರ್ಜಿ (Ayesha Mukherji) ಅವರನ್ನು ಸುಮಾರು 5.7 ಕೋಟಿ ರೂ. ಹಣವನ್ನು ಹಿಂದಿರುಗಿಸುವಂತೆ ಆದೇಶಿಸಿದ್ದಾರೆ.

ಕೌಟುಂಬಿಕ ಕಲಹದಲ್ಲಿ ಶಿಖರ್ ಧವನ್!
ಶಿಖರ್ ಧವನ್ ಮತ್ತು ಆಸ್ಟ್ರೇಲಿಯನ್ ಮೂಲದ ಆಯೆಷಾ ಮುಖರ್ಜಿ ದಂಪತಿ 2012 ರಲ್ಲಿ ಮದುವೆಯಾಗಿದ್ದರು. ಅಲ್ಲದೇ ಮೊದಲ ಪತ್ನಿಗೆ ಜೋರಾವರ್ ಧವನ್ ಎಂಬ ಒಬ್ಬ ಮಗನಿದ್ದು, ರಿಯಾ ಮತ್ತು ಆಲಿಯಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೆ 2023ರ ಅಕ್ಟೋಬರ್‌ನಲ್ಲಿ ದೆಹಲಿ ಕೋರ್ಟ್ ಇವರಿಬ್ಬರಿಗೆ ವಿಚ್ಛೇದನ ನೀಡಿತ್ತು.
ವಿಚ್ಛೇದನದ ನಂತರ ಆಸ್ಟ್ರೇಲಿಯಾ ಕೋರ್ಟ್ 2024ರ ಫೆಬ್ರವರಿಯಲ್ಲಿ "ಇಂಟರಿಮ್ ಪ್ರಾಪರ್ಟಿ ಸೆಟಲ್‌ಮೆಂಟ್" ಆದೇಶ ನೀಡಿ. ಆಸ್ಟ್ರೇಲಿಯಾದಲ್ಲಿ ಮಾರಾಟವಾದ ಆಸ್ತಿಗಳಿಂದ ಬಂದ ಹಣದಲ್ಲಿ ಒಂದಿಷ್ಟು ಹಣವನ್ನು ಆಯೆಷಾ ಅವರಿಗೆ ನೀಡಬೇಕೆಂದು ಧವನ್‌ಗೆ ಆದೇಶ ನೀಡಿತ್ತು. ಆದೇಶದ ಅನುಸಾರವಾಗಿ ಧವನ್ ಹಣವನ್ನು ನೀಡಿದ್ದಾರೆ ಅಂತಾನೂ ಹೇಳಲಾಗಿದೆ.
ದೆಹಲಿ ನ್ಯಾಯಾಲಯದಲ್ಲಿ ಧವನ್‌ಗೆ ಸಿಕ್ತು ಗೆಲುವು!
ಆಸ್ಟ್ರೇಲಿಯಾ ಕೋರ್ಟ್ ನೀಡಿದ ಆದೇಶ, ಧವನ್ ಕೌಟುಂಬಿಕ ಕಲಹಕ್ಕೆ ಮತ್ತೆ ಕಿಚ್ಚು ಹಚ್ಚಿದಂತಾಗಿತ್ತು. ಶಿಖರ್ ಧವನ್ ಅವರ ಮಾಜಿ ಪತ್ನಿ ಆಯೆಷಾ ಅವರು ಮೂಲತಃ ಆಸ್ಟ್ರೇಲಿಯಾದವರು. ಆದ್ದರಿಂದ ಆಸ್ತಿ ಇತ್ಯರ್ಥ ಸಂಬಂಧಿಸಿ ಆಯೆಷಾ ಕೋರ್ಟ್ ಮೆಟ್ಟಿಲೇರಿದ್ದರು. ಅದೇ ಕಾರಣದಿಂದ ಧವನ್ ಆಯೆಷಾ ಅವರಿಗೆ ಹಣವನ್ನು ಪಾವತಿ ಮಾಡಿದ್ದರು. ಆದ್ರೆ ಇದೀಗ ಆಸ್ಟ್ರೇಲಿಯಾದ ಕೋರ್ಟ್ ನೀಡಿದ ಆಸ್ತಿ ವಿತರಣಾ ಆದೇಶು ಭಾರತೀಯ ಕಾನೂನಿನಡಿಯಲ್ಲಿ ಅಮಾನ್ಯ ಎಂದು ಪರಿಗಣಿಸಲಾಗಿದೆ. ಈ ಮೂಲಕ ಆಯೆಷಾ ಅವರಲ್ಲಿ 5.72 ಕೋಟಿ ಹಣವನ್ನು ಹಿಂದಿರುಗಿಸುವಂತೆ ಆದೇಶ ನೀಡಿದೆ.
ದೆಹಲಿ ಕೋರ್ಟ್‌ನಿಂದ ಮಹತ್ವದ ತೀರ್ಪು
ಇನ್ನು ಧವನ್ ಅರ್ಜಿಯನ್ನು ಎತ್ತಿ ಹಿಡಿದ ದೆಹಲಿಯ ಪಟಿಯಾಲ ಹೌಸ್ ಫ್ಯಾಮಿಲಿ ಕೋರ್ಟ್, ಆಸ್ಟ್ರೇಲಿಯಾ ಫ್ಯಾಮಿಲಿ ಲಾ ಆಕ್ಟ್ 1975ರಡಿ 'ಪ್ರಾಪರ್ಟಿ ಸೆಟಲ್‌ಮೆಂಟ್' ಪರಿಕಲ್ಪನೆ, ಭಾರತೀಯ ಹಿದೂ ಮದುವೆ ಕಾಯ್ದೆ 1955 ರಲ್ಲಿ ಅನ್ವಯವಾಗುವುದಿಲ್ಲ. ಆಸ್ಟ್ರೇಲಿಯಾದಲ್ಲಿ ಗಂಡನ ಎಲ್ಲಾ ಆಸ್ತಿಗಳನ್ನು ಮ್ಯಾರಿಟಲ್ ಪೂಲ್‌ಗೆ ಸೇರಿಸಿ 60% ವರೆಗೆ ಹೆಂಡತಿಗೆ ನೀಡಬಹುದು ಎಂಬ ನಿಯಮ ಭಾರತದಲ್ಲಿ ಇಲ್ಲ. ಆದ್ದರಿಂದ ಆಸ್ಟ್ರೇಲಿಯಾ ಕೋರ್ಟ್‌ನ ಆದೇಶದಡಿ, ಭಾರತದಲ್ಲಿ ಧವನ್ ಅವರ ಆಸ್ತಿಗಳು ಅಥವಾ ಹಣಕಾಸಿನ ಮೇಲೆ ಯಾವುದೇ ಹಕ್ಕು ಕೇಳಬಾರದು ಎಂದು ಆದೇಶ ಹೊರಡಿಸಿದೆ.


Click it and Unblock the Notifications